` ಸೌಥ್ ಎಂಡ್ ರಸ್ತೆ.. ನಾಳೆಯಂದ ಪಾರ್ವತಮ್ಮ ರಾಜ್‍ಕುಮಾರ್ ರಸ್ತೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
parvathamma rajkumar image
Dr Parvathamma Rajkumar Image

ಕನ್ನಡ ಚಿತ್ರರಂಗದ ಅಭ್ಯುದಯಕ್ಕೆ ಶ್ರಮಿಸಿದ್ದ ನಿರ್ಮಾಪಕಿ ಪಾರ್ವತಮ್ಮ ರಾಜ್‍ಕುಮಾರ್ ಅವರ ಸೇವೆಯನ್ನು ಬಿಬಿಎಂಪಿ ಗೌರವಿಸಲು ನಿರ್ಧರಿಸಿದೆ. ಬೆಂಗಳೂರಿನ ಸೌತ್ ಎಂಡ್ ರಸ್ತೆಗೆ ಡಾ. ಪಾರ್ವತಮ್ಮ ರಾಜ್‍ಕುಮಾರ್ ರಸ್ತೆ ಎಂದು ನಾಮಕರಣ ಮಾಡಲು ಬಿಬಿಎಂಪಿ ಮುಂದಾಗಿದೆ.

ಕಾರ್ಪೊರೇಟರ್ ಪೂರ್ಣಿಮಾ ರಮೇಶ್ ಪ್ರಸ್ತಾವನೆಗೆ ಬಿಬಿಎಂಪಿ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ಕೊಟ್ಟಿರುವುದು ವಿಶೇಷ. ಯಡಿಯೂರು ವಾರ್ಡ್‍ನ ಮಾಧವನ್ ರಾವ್ ಸರ್ಕಲ್‍ನಿಂದ ನಾಗಸಂದ್ರವರೆಗಿನ ರಸ್ತೆಗೆ ಪಾರ್ವತಮ್ಮನವರ ಹೆಸರಿಡಲಾಗುತ್ತಿದೆ. ಅಷ್ಟೇ ಅಲ್ಲ, ವಿಳಂಬಕ್ಕೆ ಕೂಡಾ ಅವಕಾಶವಿಲ್ಲ. ಜುಲೈ 21ರಂದೇ ರಸ್ತೆಗೆ ನಾಮಕರಣವೂ ನಡೆಯಲಿದೆ. ನಾಳೆ ಬೆಳಗ್ಗೆ (ಜುಲೈ 21) 10.30ಕ್ಕೆ ರಸ್ತೆ ನಾಮಕರಣ ಕಾರ್ಯಕ್ರಮವೂ ನಡೆಯಲಿದೆ.

ಕೇಂದ್ರ ಸಚಿವ ಅನಂತ್ ಕುಮಾರ್, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಮೇಯರ್ ಪದ್ಮಾವತಿ, ಕಾರ್ಪೊರೇಟರ್ ಪೂರ್ಣಿಮಾ ರಮೇಶ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಸ್ತೆಗೆ ತಾಯಿಯ ಹೆಸರು ಇಡಲಿರುವ ಈ ಕಾರ್ಯಕ್ರಮಕ್ಕೆ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಮತ್ತು ಕುಟುಂಬ ಸಾಕ್ಷಿಯಾಗಲಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery