` ವಿಡಿಯೋ ಲೀಕ್ ಆದ ಮೇಲೆ ಸಂಜನಾ ಕೇಳುತ್ತಿರುವ ಪ್ರಶ್ನೆ ಇದೊಂದೇ.. - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
sanjana tweets
Sanjana's Tweet Regarding 2 Controversy

2 ಚಿತ್ರದ ನಗ್ನ ವಿಡಿಯೋ ಲೀಕ್ ಆದ ಮೇಲೆ ಸಂಜನಾ ಉತ್ತರ ಕೊಟ್ಟಿದ್ದಾಗಿದೆ. ಆದರೆ, ಅಷ್ಟೆಲ್ಲ ಉತ್ತರ ಕೊಟ್ಟ ಮೇಲೆ ವಿವಾದವೇನೂ ಬಗೆಹರಿದಿಲ್ಲ. ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ನೋಟಿಸ್ ಕೊಟ್ಟಿದೆ. ಚಿತ್ರತಂಡವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.

Nude scene when duty calls

 

ಆದರೆ, ಇಡೀ ವಿವಾದದ ಕೇಂದ್ರ ಬಿಂದುವೇ ಆಗಿಹೋದ ಸಂಜನಾಗೆ ಈಗಲೂ ಕಾಡುತ್ತಿರುವುದು ಅದೊಂದೊಂದೇ ಪ್ರಶ್ನೆ. ವಿಡಿಯೋ ಲೀಕ್ ಆಗಿದ್ದು ಹೇಗೆ..? ಟ್ವಿಟರ್ನಲ್ಲಿ ಬೆನ್ನು ಬೆನ್ನಿಗೇ 2 ಚಿತ್ರದ ಹಲವು ಫೋಟೋಗಳನ್ನು ಹಾಕಿರುವ ಸಂಜನಾ,

ನಾನು ನನಗಿದ್ದ ಕಡಿಮೆ ಕಾಲಾವಕಾಶದಲ್ಲಿ ಎಷ್ಟು ಹೇಳಬೇಕೋ..ಅದೆಲ್ಲವನ್ನೂ ವಿವರವಾಗಿ ಹೇಳಿದ್ದೇನೆ. ನನಗೆ ಅತಂಕವಾಗಿರುವುದು ಅದಕ್ಕಲ್ಲ. ಆ ವಿಡಿಯೋ ಲೀಕ್ ಆಗಿದ್ದು ಹೇಗೆ..? ನಿಮ್ಮ ಬೆಂಬಲ ನನಗಿರಲಿ ಎಂದು ಟ್ವೀಟಿಸಿದ್ದಾರೆ ಸಂಜನಾ.

Related Articles :-

ನಟಿಸಿದ್ದು ನಿಜ. ದೃಶ್ಯದಲ್ಲಿರುವುದೂ ನಾನೇ - ಲೀಕ್ ವಿಡಿಯೋಗೆ ಸಂಜನಾ ಇನ್ನೊಂದು ಸ್ಪಷ್ಟನೆ

ಬೆತ್ತಲಾಗಿದ್ದು ಬೆನ್ನು ಮಾತ್ರ..ಉಳಿದಂತೆ... ಬೆತ್ತಲೆ ವಿಡಿಯೋ ಸುದ್ದಿಗೆ ಸಂಜನಾ ಕೊಟ್ಟ ಉತ್ತರ

2ನಲ್ಲಿ ಬೆತ್ತಲಾದರಾ ನಟಿ ಸಂಜನಾ..? ಲೀಕ್ ಆಗಿದೆ ವಿಡಿಯೋ..!

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery