ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ ಕುರುಕ್ಷೇತ್ರ ಸಿನಿಮಾಕ್ಕೆ ಇಬ್ಬರು ನಾಯಕಿಯರ ಆಗಮನವಾಗಿದೆ..ಇದು ದರ್ಶನ್ಗೆ 50 ನೇ ಸಿನಿಮಾ, ಅದೂ ಮಹಾಭಾರತದ ಗದಾಯುದ್ಧ ದ ಕಥೆಯಿರುವ ಚಿತ್ರ. ದರ್ಶನ್ ದುರ್ಯೋಧನನಾಗಿದ್ದಾರೆ.
ಚಿತ್ರದ ಇಬ್ಬರು ನಾಯಕಿಯರಲ್ಲಿ ಒಬ್ಬರು ಹರಿಪ್ರಿಯ. ದರ್ಶನ್ ಜೊತೆಗೆ ಇದು ಹರಿಪ್ರಿಯಾಗೆ ಮೊತ್ತ ಮೊದಲ ಚಿತ್ರ. ಆದರೆ, ಚಿತ್ರದ ಪ್ರಮುಖ ಪಾತ್ರವಾದ ದ್ರೌಪದಿ ಪಾತ್ರ ಅಲ್ಲವಂತೆ. ನರ್ತಕಿಯ ಪಾತ್ರವಂತೆ. ಆದರೆ, ಪಾತ್ರದಲ್ಲಿ ಅಭಿನಯಕ್ಕೆ ಒಳ್ಳೆಯ ಅವಕಾಶ ಇರುವ ಒಪ್ಪಿಕೊಂಡಿದ್ದೇನೆ ಎನ್ನುತ್ತಾರೆ ಹರಿಪ್ರಿಯ. ಇನ್ನು ಕುರುಕ್ಷೇತ್ರ ಸಿನಿಮಾಗೆ ಸಿಕ್ಕ ಮತ್ತೊಬ್ಬ ನಟಿ ರೆಜಿನಾ..ತೆಲುಗು ನಟಿಯಾದ್ರೂ ಕನ್ನಡದ ಸುರ್ಯಕಾಂತಿ ಸಿನಿಮಾದಲ್ಲಿ ನಟಿಸಿದ ಅನುಭವವಿದೆ.
ಬಹುಶಃ ರೆಜಿನಾ ದರ್ಶನ್ಗೆ ಜೋಡಿಯಾಗಬಹುದು. ರೆಜಿನಾ ಭಾನುಮತಿ ಪಾತ್ರ ವಹಿಸಲಿದ್ದಾರೆ ಎನ್ನಲಾಗುತ್ತಿದೆ. ನಿರ್ದೇಶಕ ನಾಗಣ್ಣ ಪಾತ್ರಗಳಿಗೆ ಕಲಾವಿದರನ್ನು ಅಳೆದೂ ತೂಗಿ ಆಯ್ಕೆ ಮಾಡುತ್ತಿದ್ದಾರೆ. ಜುಲೈ 30ಕ್ಕೆ ಚಿತ್ರದ ಶೂಟಿಂಗ್ ಶುರುವಾಗುವ ಸಾಧ್ಯತೆ ಇದೆ.
ಆದರೆ, ದ್ರೌಪದಿ ಇನ್ನೂ ಸಿಕ್ಕಿಲ್ಲ.
Related Articles :-
Haripriya Confirmed For Kurukshetra
ವದಂತಿಗಳಿಗೆ ಕಿವಿಗೊಡಬೇಡಿ - ದರ್ಶನ್ ಕುರುಕ್ಷೇತ್ರದಲ್ಲಿ ನಟಿಸೋದು ಪಕ್ಕಾ