55ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದಿದ್ದ ಶಿವರಾಜ್ ಕುಮಾರ್ ಆಸೆ ಈಡೇರಲಿಲ್ಲ. ಪ್ರತಿವರ್ಷದಂತೆ ಈ ವರ್ಷವೂ ಅಭಿಮಾನಿಗಳ ದಂಡು ಶಿವಣ್ಣನ ಮನೆಗೆ ದಾಳಿಯಿಟ್ಟು, ಹುಟ್ಟುಹಬ್ಬ ಸಂಭ್ರಮಿಸಿತು.
ಹುಟ್ಟುಹಬ್ಬದ ದಿನ ತಂದೆ ಮತ್ತು ತಾಯಿಯ ಸಮಾಧಿಗೆ ತೆರಳಿದ ಶಿವರಾಜ್ ಕುಮಾರ್, ನಮನ ಸಲ್ಲಿಸಿದರು. ಇದೆಲ್ಲದರ ಮಧ್ಯೆ ಅಣ್ಣನಿಗೆ ಪುನೀತ್ ರಾಜ್ಕುಮಾರ್ ವಿಶೇಷ ಉಡುಗೊರೆಯೊಂದನ್ನು ಕೊಟ್ಟರು. ಅದು ಬಿಎಂಡಬ್ಲ್ಯು ಸೈಕಲ್. ಆ ಸೈಕಲ್ನ ಬೆಲೆಯೇ 2 ಲಕ್ಷ ರೂ.
ನೀಲಿ ಬಣ್ಣದ ಆ ಸೈಕಲ್ ನೋಡೋಕೆ ಸಖತ್ ಆಗಿದೆ. ಸೈಕಲ್ನ್ನೇ ಗಿಫ್ಟಾಗಿ ಕೊಡೋಕೆ ಕಾರಣವೂ ಇದೆ. ಶಿವರಾಜ್ ಕುಮಾರ್ ಪ್ರತಿದಿನ ಬೆಳಗ್ಗೆ ಸೈಕ್ಲಿಂಗ್ ಮಾಡ್ತಾರೆ. ಆರೋಗ್ಯ ಮತ್ತು ಫಿಟ್ನೆಸ್ಗೆ ಕಾಳಜಿ ವಹಿಸುವ ಅಣ್ಣನಿಗೆ ಸೈಕಲ್ನ್ನೇ ಉಡುಗೊರೆ ನೀಡಿ ಶುಭ ಹಾರೈಸಿದ್ದಾರೆ ತಮ್ಮ ಪುನೀತ್.