` ಅಣ್ಣನಿಗೆ ಅಪ್ಪು ಕೊಟ್ಟ ಹುಟ್ಟುಹಬ್ಬದ ಕಾಣಿಕೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
puneeth, shivarajkumar
Shivanna Gets Healthy Wealthy Gift From Puneeth

55ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದಿದ್ದ ಶಿವರಾಜ್ ಕುಮಾರ್ ಆಸೆ ಈಡೇರಲಿಲ್ಲ. ಪ್ರತಿವರ್ಷದಂತೆ ಈ ವರ್ಷವೂ ಅಭಿಮಾನಿಗಳ ದಂಡು ಶಿವಣ್ಣನ ಮನೆಗೆ ದಾಳಿಯಿಟ್ಟು, ಹುಟ್ಟುಹಬ್ಬ ಸಂಭ್ರಮಿಸಿತು.

ಹುಟ್ಟುಹಬ್ಬದ ದಿನ ತಂದೆ ಮತ್ತು ತಾಯಿಯ ಸಮಾಧಿಗೆ ತೆರಳಿದ ಶಿವರಾಜ್ ಕುಮಾರ್, ನಮನ ಸಲ್ಲಿಸಿದರು. ಇದೆಲ್ಲದರ ಮಧ್ಯೆ ಅಣ್ಣನಿಗೆ ಪುನೀತ್ ರಾಜ್‍ಕುಮಾರ್ ವಿಶೇಷ ಉಡುಗೊರೆಯೊಂದನ್ನು ಕೊಟ್ಟರು. ಅದು ಬಿಎಂಡಬ್ಲ್ಯು ಸೈಕಲ್. ಆ ಸೈಕಲ್‍ನ ಬೆಲೆಯೇ 2 ಲಕ್ಷ ರೂ.

ನೀಲಿ ಬಣ್ಣದ ಆ ಸೈಕಲ್ ನೋಡೋಕೆ ಸಖತ್ ಆಗಿದೆ. ಸೈಕಲ್‍ನ್ನೇ ಗಿಫ್ಟಾಗಿ ಕೊಡೋಕೆ ಕಾರಣವೂ ಇದೆ. ಶಿವರಾಜ್ ಕುಮಾರ್ ಪ್ರತಿದಿನ ಬೆಳಗ್ಗೆ ಸೈಕ್ಲಿಂಗ್ ಮಾಡ್ತಾರೆ. ಆರೋಗ್ಯ ಮತ್ತು ಫಿಟ್‍ನೆಸ್‍ಗೆ ಕಾಳಜಿ ವಹಿಸುವ ಅಣ್ಣನಿಗೆ ಸೈಕಲ್‍ನ್ನೇ ಉಡುಗೊರೆ ನೀಡಿ ಶುಭ ಹಾರೈಸಿದ್ದಾರೆ ತಮ್ಮ ಪುನೀತ್.

Padarasa Movie Gallery

Kumari 21 Movie Gallery