ಈ ರೀತಿ ಆಡಿಯೋ ಬಿಡುಗಡೆಯಾಗುವುದು ತೆಲುಗು, ತಮಿಳು ಚಿತ್ರರಂಗಗಳಲ್ಲಿ ಮಾಮೂಲು.
ಆದರೆ, ಕನ್ನಡದಲ್ಲಿ ಅಪರೂಪ. ಅಂತಹ ಅಪರೂಪದ ಹೆಜ್ಜೆಯಿಟ್ಟಿದೆ ಶಿವರಾಜ್ ಕುಮಾರ್ ಅಭಿನಯದ ಮಾಸ್ ಲೀಡರ್ ಚಿತ್ರ. ರಾಜಕುಮಾರ ಚಿತ್ರದ ಶತದಿನದ ಸಂಭ್ರಮದ ನಂತರ, ಮಾಸ್ ಲೀಡರ್ ಕೂಡಾ ಅದೇ ರೀತಿ ಸ್ಟಾರ್ಗಳ ಸಮಾಗಮಕ್ಕೆ ಸಾಕ್ಷಿಯಾಗಿದೆ. ತೆಲುಗು ಸೂಪರ್ ಸ್ಟಾರ್ ಬಾಲಕೃಷ್ಣ ಮಾಸ್ ಲೀಡರ್ ಆಡಿಯೋ ಬಿಡುಗಡೆಯ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದ್ದು ವಿಶೇಷ. ಕನ್ನಡದಲ್ಲೇ ಮಾತನಾಡಿ ಅಭಿನಂದಿಸಿದ್ದು, ಮತ್ತೊಂದು ವಿಶೇಷ.
ಆಡಿಯೋ ಬಿಡುಗಡೆಯಲ್ಲಿ ಪವರ್ ಸ್ಟಾರ್ ಪುನೀತ್, ನವರಸ ನಾಯಕ ಜಗ್ಗೇಶ್, ಲೂಸ್ ಮಾದ ಖ್ಯಾತಿಯ ಯೋಗಿ ಕೂಡಾ ವೇದಿಕೆಯ ರಂಗು ಹೆಚ್ಚಿಸಿದ್ದರು. ಶರ್ಮಿಳಾ ಮಾಂಡ್ರೆ, ಪ್ರಣಿತಾ ನೃತ್ಯ ಲಾಲಿತ್ಯವಿತ್ತು. ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ, ಶಿವರಾಜ್ ಕಾಮಿಡಿ ಕಿಕ್ಕೂ ಇತ್ತು. ನಿರ್ಮಾಪಕ ತರುಣ್ ಶಿವಪ್ಪ ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಿದ್ದರು. ಅಷ್ಟೇ ಅಚ್ಚುಕಟ್ಟಾಗಿ ಚಿತ್ರ ತೆರೆಗೆ ಬರಲು ಸಿದ್ಧವಾಗುತ್ತಿದೆ.