ಕಿಚ್ಚ ಸುದೀಪ್ಗೆ ಸಿಕ್ಕಿರುವುದು ರಾಷ್ಟ್ರಪ್ರಶಸ್ತಿಯಂತೂ ಅಲ್ಲ. ಆದರೆ, ಸುದೀಪ್ ಪಾಲಿಗೆ ಇದು ಅದಕ್ಕಿಂತ ದೊಡ್ಡ ಗೌರವ. ಈ ಗೌರವ ಉಡುಗೊರೆ ಕೊಟ್ಟಿರುವುದು ಸುದೀಪ್ರ ಮಗಳು ಸಾನ್ವಿ.
ಸುದೀಪ್ ಮಗಳು ಸಾನ್ವಿ, ತಾನು ಓದುತ್ತಿರುವ ಶಾಲೆಯಲ್ಲಿ ಶಾಲೆಯ ಲೀಡರ್ ಆಗಿದ್ದಾಳೆ. school perfect ಆಗಿ ಆಯ್ಕೆಯಾಗಿರುವ ಮಗಳಿಗೆ ಶಾಲೆಯ ಸಮಾರಂಭದಲ್ಲಿ ಬ್ಯಾಡ್ಜ್ ಹಾಕಿರುವುದು ಸ್ವತಃ ಸುದೀಪ್. ಆ ಖುಷಿಯನ್ನ ಸುದೀಪ್ ಮತ್ತು ಪತ್ನಿ ಪ್ರಿಯಾ ಟ್ವಿಟರ್ನಲ್ಲಿ ಸಂಭ್ರಮದಿಂದ ಹಂಚಿಕೊಂಡಿದ್ದಾರೆ.
ನಾವು ಹೆಮ್ಮೆ ಪಡುವಂತೆ ಮಾಡಿದ ನಿನಗೆ ಧನ್ಯವಾದಗಳು ಎಂದು ಹೇಳಿ ಖುಷಿಪಡುತ್ತಿದ್ದಾರೆ. ಸುದೀಪ್ ಅಂತೂ ಮಗಳಿಗೆ ಬ್ಯಾಡ್ಜ್ ಹಾಕಿದ್ದನ್ನು ಜೀವನದ 'ಅದ್ಭುತ ಕ್ಷಣ' ಎಂದು ಹೇಳಿಕೊಂಡಿದ್ದಾರೆ. ಮಗಳನ್ನು ಇನ್ನಿಲ್ಲದಷ್ಟು ಪ್ರೀತಿಸುವ ಸುದೀಪ್ಗೆ ಮಗಳ ಸಾಧನೆ ಎದೆಯುಬ್ಬಿಸುವಂತೆ ಮಾಡಿದೆ.