` ಅಲಮೇಲಮ್ಮನ ಹಿಂದಿನ ತರಲೆ ತುಂಟಾಟ ಕಥೆ, ತರಲೆ ತರಲೆಯಾಗಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
operation almelamm
Operation Almelamma Movie Image

ಬಹುಶಃ ಇಂಥಾದ್ದೊಂದು ತುಂಟಾಟವನ್ನು ಸುನಿ ಮಾತ್ರ ಮಾಡೋಕೆ ಸಾಧ್ಯ. ಅದೇ ಸಿಂಪಲ್ಲಾಗೊಂದ್ ಲವ್ ಸ್ಟೋರಿ ಡೈರೆಕ್ಟರ್ ಸುನಿ. ಅವರು ಚಿತ್ರದ ಪ್ರಿ ಪ್ರೊಡಕ್ಷನ್ ಬಗ್ಗೆ ಹೇಳಿಕೊಂಡಿದ್ದಾರೆ. ಅದೇ ತರಲೆ ತುಂಟತನದ ಜೊತೆ.

ಈ ಆಪರೇಷನ್ ಅಲಮೇಲಮ್ಮ ಕಥೆ ಮತ್ತು ಟೈಟಲ್ ಇಟ್ಟಿದ್ದೇ ಸಿಂಪಲ್ ಖ್ಯಾತಿಯಿಂದ ಹೊರಬರಬೇಕು ಅಂತಾ. ಅದನ್ನು ಒಂದಿಷ್ಟು ತಮಾಷೆಯಾಗಿ ಹೇಳಿಕೊಂಡಿರೋ ಸುನಿ, ಅದರ ವಿಡಿಯೋ ಹೊರಗೆ ಬಿಟ್ಟಿದ್ದಾರೆ. ಚಿತ್ರದ ಹೀರೋ, ಹೀರೋಯಿನ್ ಆಯ್ಕೆ ಕುರಿತು ಅವರು ಹೇಳಿರುವ ಮಾತು ಕೇಳಿದರೆ ತುಟಿಯಂಚಿನಲ್ಲಿ ನಗು ಮೂಡದೇ ಇರದು.

ಹೀರೋ ರಿಷಿಗೆ ಇಂಗ್ಲಿಷ್ ಬರಲ್ಲ. ಹೀರೋಯಿನ್ ಶ್ರದ್ಧಾಗೆ ಕನ್ನಡ ಬರಲ್ಲ ಎನ್ನುತ್ತಲೇ ಕಾಲೆಳೆಯುತ್ತಾರೆ ಸುನಿ. ಹಾಗಂತ ಶ್ರದ್ಧಾಗೆ ಕನ್ನಡ ಬರೋಲ್ಲ ಎಂದ್ಕೋಬೇಡಿ. ಕನ್ನಡವನ್ನು ಇಂಗ್ಲಿಷ್ನಲ್ಲೇ ಓದುವಷ್ಟು ಪ್ರತಿಭೆ ಅವರದ್ದಂತೆ. ರಿಷಿ ಒಂದೊಂದು ಸೀನ್ಗೂ ಮೂರ್ ಮೂರ್ ತರಾ ರಿಯಾಕ್ಷನ್ ಕೊಡ್ತಾರಂತೆ. ಇಷ್ಟಕ್ಕೂ ಶ್ರದ್ಧಾರನ್ನ ಹುಡುಕಿ ಹುಡುಕಿ ಸಿಗದೇ ಹೋದಾಗ, ರಸ್ತೆಯೊಂದರಲ್ಲಿ ಕಲ್ಲು ತೆಗೆದಿಟ್ಟು ಬಂದರಂತೆ. ಎಷ್ಟೇ ಅಂದ್ರೂ ಯು ಟರ್ನ್ ಚಿತ್ರದ ಹೀರೋಯಿನ್ ಆಗಿದ್ದವರಲ್ವಾ..?

ನೆಕ್ಸ್ಟ್ ದಿನಾನೇ ಹುಡುಕಿಕೊಂಡು ಬಂದ್ರಂತೆ. ಇಂತಹ ತರಲೆ ಕಥೆಗಳನ್ನು ಸೃಷ್ಟಿಸೋದ್ರಲ್ಲಿ ಸುನಿಗೆ ಸುನಿಯೇ ಸಾಟಿ. ಇಂಥ ತರಲೆ ಕಥೆಗಳನ್ನು ತಮಾಷೆಯಾಗಿ ಹೇಳುತ್ತಲೇ ಆಪರೇಷನ್ ಅಲಮೇಲಮ್ಮ ಚಿತ್ರದ ಬಿಡುಗಡೆಗೆ ವೇದಿಕೆ ಸೃಷ್ಟಿಸುತ್ತಿದ್ದಾರೆ ಸುನಿ. ಅಂದಂಗೆ ಚಿತ್ರ ಜುಲೈ 21ಕ್ಕೆ ರಿಲೀಸ್ ಆಗ್ತಿದೆ.

Related Articles :-

Operation Alamelamma Gets U Certificate

Operation Alamelamma Trailer Released

Hombale Films Take Up Operation Alamelamma

 

 

Ayushmanbhava Movie Gallery

Ellidhe Illitanaka Movie Gallery