ಇತ್ತಿಚೆಗೆ ಅಭಿಮಾನಿಗಳು ಕೆಲವು ನಟರ ನಡುವೆ ಬಿರುಕು ಮೂಡುವಂತೆ ವರ್ತಿಸುವುದುಹೊಸದೇನೂ ಅಲ್ಲ. ನಟರು ಚೆನ್ನಾಗಿಯೇ ಇದ್ದರೂ, ಅಭಿಮಾನಿಗಳೇ ಇಲ್ಲಸಲ್ಲದ್ದನ್ನೆಲ್ಲಕಲ್ಪನೆ ಮಾಡಿಕೊಂಡು ತಮಗಿಷ್ಟ ಬಂದಂತೆ ಮಾತು ಹರಿಯಬಿಟ್ಟು, ವಿವಾದವನ್ನೇ ಸೃಷ್ಟಿಸಿಬಿಡ್ತಾರೆ.
ಇಂತಹ ಅಭಿಮಾನಿಗಳಿಗೆ ನಟ ಜಗ್ಗೇಶ್ ಬುದ್ದಿವಾದ ಹೇಳಿದ್ದಾರೆ. ಅಭಿಮಾನಿಯೊಬ್ಬ ಟ್ವಿಟರ್ನಲ್ಲಿ ಕೇಳಿದ್ದ ಪ್ರಶ್ನೆಗೆ ಸಮಾಧಾನದ ಉತ್ತರ ಕೊಟ್ಟಿದ್ದಾರೆ.‘‘ನಾವು ಕನ್ನಡ ತಾಯಿಯ ಮಕ್ಕಳು. ನಮ್ಮಲ್ಲಿ ಬೇಧವಿಲ್ಲ. ಬೇಧ ಮಾಡಿ ಬದುಕುವುದುಕನ್ನಡಿಗನ ಗುಣವಲ್ಲ! ನಮ್ಮಲ್ಲಿ ಒಗ್ಗಟ್ಟಿದೆ. ನಿಮ್ಮಲ್ಲೂ ಇರಲಿ. ಕೂಡಿ ಬಾಳಿದರೆ ಸ್ವರ್ಗ, ನೆನಪಿರಲಿ. ಎಂದು ಉತ್ತರಿಸಿದ್ದಾರೆ. ಅಂದಹಾಗೆ ರಾಜಕುಮಾರ ಚಿತ್ರದ ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್ ಹಾಡಿನಲ್ಲೂ ಇಂಥಾದ್ದೊಂದು ಸಾಲು ಬರುತ್ತೆ. ಫಸ್ಟ್ ಡೇ ಫಸ್ಟ್ ಶೋ ಕನ್ನಡ ಸಿನಿಮಾ ನೋಡಿ, ಸ್ಟಾರು ವಾರು ಯಾಕೆ, ನಾವು ಒಂದೇ ಇಲ್ಲಿ ಎಂಬ ಸಾಲು ಬರುತ್ತೆ. ಆ ಸಾಲಿನಲ್ಲಿಯೇ ಎಲ್ಲ ಅರ್ಥವೂ ಇದೆ. ಅಭಿಮಾನಿಗಳು ಸಮಾಧಾನದಿಂದಿರಬೇಕಷ್ಟೆ