ಕಿರಿಕ್ ಜೋಡಿಯ ನಿಶ್ಚಿತಾರ್ಥಕ್ಕೆ ಕೊಡಗಿನಲ್ಲಿ ಅದ್ಧೂರಿ ವೇದಿಕೆ ಸಿದ್ಧಗೊಂಡಿದೆ. ದುಬೈನಿಂದ ಬರಲಿರುವ ರಕ್ಷಿತ್ ಮತ್ತು ರಶ್ಮಿಕಾ, ನೇರ ನಿಶ್ಚಿತಾರ್ಥ ಸಮಾರಂಭಕ್ಕೆ ಬರಲಿದ್ದಾರೆ. ಹಸಿರು ಮತ್ತು ಹೂವುಗಳ ಸ್ಟೇಜು ಸಿದ್ಧಗೊಂಡಿದೆ. ಪಾಶ್ಚಾತ್ಯ ಶೈಲಿಯಲ್ಲಿ ಉಂಗುರ ಬದಲಾವಣೆ ನಂತರ, ಕೇಕ್ ಕತ್ತರಿಸಿ ಸಂಭ್ರಮಿಸಲಿದ್ದಾರೆ. 18 ಕೆಜಿ ಕೇಕ್ ಕೂಡಾ ಸಿದ್ಧವಾಗಿದೆ.
ಇನ್ನು ಊಟದ ವಿಚಾರದಲ್ಲಂತೂ ಸಂಪೂರ್ಣ ವೆರೈಟಿ ಇದೆ. ಕೊಡಗಿನ ಹೆಸರಾಂತ ಬಾಣಸಿಗ ರಾಮ್ ದಾಸ್ ನೇತೃತ್ವದಲ್ಲಿ ಬಾಯಲ್ಲಿ ನೀರೂರಿಸುವ ಖಾದ್ಯಗಳು ಸಿದ್ಧಗೊಂಡಿವೆ. ಚಿಕನ್ ಲಾಲಿಪಪ್, ಪೋರ್ಕ್ ಡ್ರೈ, ಚಿಕನ್ ಡ್ರೈ, ಫಿಂಗರ್ ಚಿಪ್ಸ್, ಚಿಲ್ಲಿ ಮಟನ್, ಟೀತರ್ ಫ್ರೈ, ಕ್ಯಾಸಿವ್ ಮಸಾಲಾ, ಸಿಪಿ ಸಾಲಾಡ್, ಮ್ಯಾಂಗೋ ಮಸಾಲಾ ಪಾರ್ಟಿಗೆ ಸಿದ್ಧಗೊಂಡಿರುವ ಖಾದ್ಯಗಳು.
ಡಿನ್ನರ್ ಪಾರ್ಟಿಗೆ ಕೊಡಗು ಶೈಲಿಯ ನೂಪುಟ್ಟು ಕೋಳಿ ಕರಿ, ಕಡಂಬುಟ್ಟು ಪೋರ್ಕ್ ಕರಿ, ಮಟನ್ ಬಿರಿಯಾನಿ, ಆನಿಯನ್ ರೈತಾ, ವೈಟ್ ರೈಸ್, ರಸಂ, ಪೆಪ್ಪರ್ ಚಿಕನ್ ಮಸಾಲಾ, ಫೋರ್ಕ್ ಚಾಪ್ಸ್, ಫೋರ್ಕ್ ಡ್ರೈ, ಮಟನ್ ಮಸಾಲಾ, ಮಟನ್ ಚಾಪ್ಸ್, ಚೈನೀಸ್ ಐಟಂಗಳಾದ ವೆಜ್ ಫ್ರೈಡ್ ರೈಸ್, ಚಿಕನ್ ಫ್ರೈಡ್ ರೈಸ್, ನ್ಯೂಡಲ್ಸ್, ಚಿಕನ್ ನ್ಯೂಡಲ್, ಸ್ವೀಟ್ & ಸಾಲ್ಟ್ ಚಿಕನ್, ಬಟರ್ ನಾನ್, ಬಟರ್ ವ್ಯವಸ್ಥೆ ಕುಲ್ಚಾ, ಕಡಾಯ್ ಚಿಕನ್, ಪಾಲಾಕ್ ಪನ್ನೀರ್ , ಕಡಾಯ್ ವೆಜ್, ದಾಲ್ ಕರಿ.
50 ಜನರ ದೊಡ್ಡ ತಂಡವೇ ಅಡುಗೆ ಸಿದ್ಧ ಮಾಡಿದೆ. ವೆಜ್ಜು, ನಾನ್ವೆಜ್ಜುಗಳ ಮಿಶ್ರಣದ ಜೊತೆ, ಕೊಡಗಿನ ಸ್ಟೈಲು, ಫಾರಿನ್ ಸ್ಟೈಲು ಎರಡೂ ಮಿಕ್ಸ್ ಆಗಿದೆ.