ತಮಿಳುನಾಡಿನಲ್ಲಿ ಇಂದಿನಿಂದ ಯಾವುದೇ ಚಿತ್ರಗಳ ಪ್ರದರ್ಶನವಾಗುತ್ತಿಲ್ಲ. ರಾಜ್ಯದ 1000ಕ್ಕೂ ಹೆಚ್ಚು ಚಿತ್ರ ಮಂದಿರಗಳು ಚಿತ್ರಪ್ರದರ್ಶನವನ್ನೇ ನಿಲ್ಲಿಸಿವೆ.
ಇದು ಕೇವಲ ಜಿಎಸ್ಟಿ ಎಫೆಕ್ಟ್ ಎಂದುಕೊಂಡರೆ ತಪ್ಪಾದೀತು. ಜಿಎಸ್ಟಿಯಲ್ಲಿ ಮನರಂಜನಾ ತೆರಿಗೆ ಶೇ.28ರಷ್ಟಿದೆ. ಇದರ ಜೊತೆಗೆ ತಮಿಳುನಾಡು ಸರ್ಕಾರ, ಪ್ರತ್ಯೆಕವಾಗಿ ಶೇ.30ರಷ್ಟು ಮನರಂಜನಾ ತೆರಿಗೆ ವಿಧಿಸಿದೆ. ಶೇ.68ರಷ್ಟು ತೆರಿಗೆ ಕಟ್ಟೋದಾದರೂ ಹೇಗೆ..?
ಈ ಕುರಿತು ಚಿತ್ರರಂಗದ ನಿರ್ಮಾಪಕರು, ಕಲಾವಿದರು, ಚಿತ್ರಪ್ರದರ್ಶಕರು ಎಲ್ಲರೂ ಮಾತುಕತೆ ನಡೆಸಿದ್ದರೂ, ಅದು ಫಲಪ್ರದವಾಗಿಲ್ಲ. ಹೀಗಾಗಿ ಇಂದಿನಿಂದ ತಮಿಳುನಾಡಿನಲ್ಲಿ ಚಿತ್ರೋದ್ಯಮವೇ ಸಂಪೂರ್ಣ ಬಂದ್ ಆಗಿದೆ.
ಅಂದಹಾಗೆ ಮನರಂಜನಾ ತೆರಿಗೆ ವ್ಯಾಪ್ತಿಯಲ್ಲಿ ಪ್ರತ್ಯೇಕ ತೆರಿಗೆ ವಿಧಿಸಿರುವ ದೇಶದ ಏಕೈಕ ರಾಜ್ಯ ತಮಿಳುನಾಡು. ಕರ್ನಾಟಕದಲ್ಲಿ ಈ ಬಗ್ಗೆ ಇನ್ನೂ ಒಂದು ಸ್ಪಷ್ಟ ಚಿತ್ರಣ ಸಿಕ್ಕಿಲ್ಲ.