ಊಟಕ್ಕೆ ಟ್ಯಾಕ್ಸು.. ವಾಂತಿಗೂ ಟ್ಯಾಕ್ಸು, ಹುಟ್ಟು ಚಟ್ಟಕೆ ತೆರಿಗೆ ಫಿಕ್ಸು..ಹೊಡಿ ಒಂಭತ್ತ್...
ಇದು ಯೋಗರಾಜ್ ಭಟ್ಟರ ಗೀತೆ. ಮಗುಳು ನಗೆ ಸಿನಿಮಾದಲ್ಲಿ ಹೊಡಿ ಒಂಬತ್ತ್. ಅನ್ನೋ ಹಾಡಿದೆ. ಆ ಹಾಡಿನ ಸ್ಟೈಲಲ್ಲೇ ಜಿಎಸ್ಟಿ ಹಾಡು ಬರೆದಿದ್ದಾರೆ ಯೋಗರಾಜ್ ಭಟ್.
ಈ ಮೊದಲೂ ಪಂಚರಂಗಿ, ವಾಸ್ತುಪ್ರಕಾರ, ದನಕಾಯೋನು ಮೊದಲಾದ ಚಿತ್ರಗಳ ಹಾಡುಗಳಿಗೆ ಸಮಕಾಲೀನ ಘಟನೆಗಳನ್ನು ಹೊಂದಿಸಿ ಹಾಡು ಬರೆದಿದ್ದ ಯೋಗರಾಜ್ ಭಟ್, ಈಗ ಜಿಎಸ್ಟಿಗೆ ಬರೆದಿದ್ದಾರೆ.
ಹಾಡಿನ ಸಾಲುಗಳು ಹೀಗಿವೆ
ಊಟಕ್ಕೆ ಟ್ಯಾಕ್ಸು ವಾಂತಿಗೂ ಟ್ಯಾಕ್ಸು ಹುಟ್ಟು ಚಟ್ಟಕೆ ತೆರಿಗೆ ಫಿಕ್ಸು ಹೊಡಿ ಒಂಭತ್ತ್
ಸ್ನಾನಕೆ ನಿಂತ್ರೆ ಚೊಂಬಿಗೆ ಟ್ಯಾಕ್ಸು, ಬ್ಲೇಡಿನ ಟ್ಯಾಕ್ಸು, ಗಡ್ಡಕೆ ಸಿಗ್ಸು ಹೊಡಿ ಒಂಭತ್ತ್
ಜಿಎಸ್ಟಿ ಬಂತೋ..
ಜಿಎಸ್ಟಿ ಬಂದ್ಬಿಡ್ತೋ..
ಅದರರ್ಥ ಏನಂತ..
ಇಲ್ಯಾವನಿಗ್ ಗೊತ್ತೋ..
ಕಾಸಿದ್ದೋನೇ ಕಾಸ್ ಮಾಡೋದು ಹೊಡಿ ಒಂಭತ್ತ್..
ಕಾಸೇ ಇಲ್ದಿರವ್ನು ಏನ್ ಮಾಡೋದು.? ಹೊಡಿ ಒಂಭತ್ತ್..
ಹೊಡಿ ಒಂಭತ್ತ್..
ಇದ್ದವ್ನೊಬ್ಬ ಬ್ಯಾಂಕು ಬ್ಲಾಗಲ್ಲಿ ಹೇಳ್ಬಿಟ್ಟಾ ಗುಟ್ಟು..
ಇಲ್ಲಿದ್ದವ್ನು ಏಟಿಎಮ್ಮಿಗೆ ಒಯ್ದ ಬೆಡ್ಶೀಟು
ಡಿಮಾನಿಟೈಸೇಷನ್ನು..
ಅಂತ ಅಂದಕೂಡ್ಲೇ..
ಹೊರಬಂತು ನಗ್ತಾ ನಗ್ತಾ
ಜೇಬಲ್ಲಿದ್ದ ಚಿಲ್ರೆ
ಗಂಟು ಕಟ್ಟಿ ಇಟ್ಕಂಡವ್ರು ನೆಟ್ಗೇ ಇದಾರೆ
ಕಳ್ಳ ಕಾಸು
ಇದ್ದೋನೇ ಬಾಸು
ರಂಟೆ ಹೊಡೆವ ಬಡವ ಕೂಡಾ ಕಲಿತುಕೊಂಡ
ಎಕನಾಮಿಕ್ಸು..
ಅವ್ನು ಜಸ್ಟು ಪಾಸು
ಅವ್ನು ಬಿಕಾಮು ಪಾಸು
ಫೇಲಾದೋವ್ನೆ ಪಾಸಾಗೋದು ಹೊಡಿ ಒಂಭತ್ತ್..
ಇದನ್ನ ತಿಳಕಂಡವ್ರೆ ಮೇಷ್ಟ್ರಾಗೋದು ಹೊಡಿ ಒಂಭತ್ತ್..