` ಅಂಬರೀಷ್ ಕೂಡಾ ಮೆಚ್ಚಿದ ಆಕೆ ಚಿತ್ರದಲ್ಲಿ ಅಂಥಾದ್ದೇನಿದೆ? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ambareesh too likes aake movie trailer
Ambareesh watching Aake with Chiranjeevi Sarja

ಆಕೆ ಚಿತ್ರ ಇದೇ ಶುಕ್ರವಾರ, ಜೂನ್ 30ನೇ ತಾರೀಕು ಬರ್ತಾ ಇದೆ. ಚಿತ್ರದ ಟ್ರೇಲರ್ ಎಷ್ಟು ಕ್ರೇಜ್ ಸೃಷ್ಟಿಸಿದೆಯೆಂದರೆ, ಭಯ ಬೀಳೋಕೆ ಪ್ರೇಕ್ಷಕರು ಕಾದು ಕುಳಿತಿದ್ದಾರೆ. ದರ್ಶನ್, ಸುದೀಪ್, ಪುನೀತ್, ರಮ್ಯಾ ಮೊದಲಾದವರೆಲ್ಲ ಚಿತ್ರದ ಬಗ್ಗೆ ಕುತೂಹಲ ತಾಳಿರೋದು, ಪ್ರೇಕ್ಷಕರ ಕುತೂಹಲವನ್ನ ಇನ್ನಷ್ಟು ಹೆಚ್ಚಿಸಿದೆ. ಇದಕ್ಕೆಲ್ಲ ಕಳಶವಿಟ್ಟಂತೆ ಈಗ ಅಂಬರೀಷ್ ಕೂಡಾ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. 

ಹೀಗೆ ಅಂಬರೀಷ್ ಕೂಡಾ ಮೆಚ್ಚಿಕೊಂಡಂತಹ ಆಕೆ ಚಿತ್ರದಲ್ಲಿ ಅಂಥಾದ್ದೇನಿದೆ ಅನ್ನೋ ಪ್ರಶ್ನೆ ಬರೋದು ಸಹಜ. ಇಡೀ ಟ್ರೇಲರ್‍ನಲ್ಲಿರೋದು ಭಯ. ಪುಟ್ಟ ಟ್ರೇಲರ್‍ನಲ್ಲೇ ಇಷ್ಟು ಭಯ ಹುಟ್ಟುವಾಗ, ಇಡೀ ಸಿನಿಮಾ ಹೇಗಿರಬಹುದು ಅನ್ನೋ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದ್ದರೆ, ಅದರ ಕ್ರೆಡಿಟ್ ನಿರ್ದೇಶಕ ಚೈತನ್ಯಗೆ ಸಿಗಬೇಕು.

ಇನ್ನು ನಾಯಕ ಚಿರಂಜೀವಿ ಸರ್ಜಾ, ನಾಯಕಿ ಶರ್ಮಿಳಾ ಮಾಂಡ್ರೆ ಕೂಡಾ ಅಷ್ಟೆ. ಕಣ್ಣಲ್ಲೇ ಅಭಿನಯಿಸಿದ್ದಾರೆ ಎನ್ನುವಂತಿದೆ. ಚಿತ್ರದ ಬ್ಯಾಕ್‍ಗ್ರೌಂಡ್ ಮ್ಯೂಸಿಕ್, ದೃಶ್ಯಗಳ ತೀವ್ರತೆಯನ್ನು ಹೆಚ್ಚಿಸುತ್ತಿದೆ. ಹೀಗಾಗಿಯೇ ಚಿತ್ರದ ಟ್ರೇಲರ್ ನೋಡಿದ ಪ್ರತಿಯೊಬ್ಬರೂ, ಚಿತ್ರ ನೋಡಬೇಕು ಎಂಬ ಆಸೆ ಇಟ್ಟುಕೊಳ್ಳುತ್ತಿದ್ದಾರೆ. 

ಭಯ ಇರಲಿ..ಆಕೆ ಬರ್ತಾ ಇದ್ದಾಳೆ

Padarasa Movie Gallery

Kumari 21 Movie Gallery