` ಯಶ್ ಅಭಿಮಾನಿಗಳ ಆಕ್ರೋಶಕ್ಕೆ ಕ್ಷಮೆ ಕೇಳಿದ ರಶ್ಮಿಕಾ ಮಂದಣ್ಣ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
rashmika apologises
Rashmika Apologies To Yash and Yash Fans

ನಟ ಯಶ್​ರನ್ನು ಶೋ ಆಫ್ ಸ್ಟಾರ್ ಎಂದಿದ್ದ ನಟಿ ರಶ್ಮಿಕಾ ಮಂದಣ್ಣ ಕ್ಷಮೆಯಾಚಿಸಿದ್ದಾರೆ. ಫೇಸ್​ಬುಕ್​ನಲ್ಲಿ ವಿವರಣೆ ನೀಡಿರುವ ರಶ್ಮಿಕಾ, ತನಗೆ ಯಶ್​ ಬಗ್ಗೆ ಗೌರವವಿದೆ. ಅದು ಸ್ಟಾರ್ ಸುವರ್ಣ ವಾಹಿನಿಯಲ್ಲಿ 7 ತಿಂಗಳ ಹಿಂದೆ ಪ್ರಸಾರವಾಗಿದ್ದ ಸಂದರ್ಶನ. ಕಿರಿಕ್ ಪಾರ್ಟಿ ಚಿತ್ರದ ಸಕ್ಸಸ್ ಪಾರ್ಟಿ ವೇಳೆ ಅದನ್ನು ಮತ್ತೆ ಬಳಸಲಾಗಿತ್ತು. 

ಅದು ಸೀರಿಯಸ್ ವಿಷಯವೇ ಆಗಿರಲಿಲ್ಲ.  ತಮಾಷೆಯ ವಿಷಯವಾಗಿತ್ತು. ಕಾರ್ಯಕ್ರಮದಲ್ಲಿ  ಱಪಿಡ್ ಫೈರ್ ಎನ್ನುವ ಭಾಗದಲ್ಲಿ ಪಟಪಟನೆ ಉತ್ತರ ಹೇಳಬೇಕು. ಹಾಗೆ ಉತ್ತರ ಹೇಳುವಾಗ ಆಗಿರುವ ತಮಾಷೆಯ ವಿಷಯ ಇದು. 

ಯಶ್ ಸೇರಿದಂತೆ ಎಲ್ಲ ನಟರ  ಬಗ್ಗೆ ನನಗೆ ಗೌರವವಿದೆ. ಯಶ್ ಅವರ ಪ್ರತಿಭೆ ಮತ್ತು ಪರಿಶ್ರಮ ಪ್ರತಿಯೊಬ್ಬರಿಗೂ ಸ್ಫೂರ್ತಿ. ಅವರನ್ನು ನೋಯಿಸುವ, ಅವರಿಗೆ ಅವಮಾನ ಮಾಡುವ ಯಾವುದೇ ಉದ್ದೇಶ ನನಗಿಲ್ಲ. 

ಕಾರ್ಯಕ್ರಮದಲ್ಲಿನ ಎಡಿಟ್ ಆದ ಮಾತುಗಳನ್ನಷ್ಟೇ ವಿವಾದ ಮಾಡಬೇಡಿ. ನನ್ನ ಸಂದರ್ಶನವನ್ನು ಪೂರ್ತಿಯಾಗಿ ನೋಡಿ. ಕೇವಲ 2 ಲೈನ್ ಇಟ್ಟುಕೊಂಡು ವಿವಾದ ಸೃಷ್ಟಿಸುವುದು ಬೇಡ. 

ಇಷ್ಟಕ್ಕೂ ಅದನ್ನು ತಮಾಷೆಗಾಗಿ ಹೇಳಿದ್ದೆನೆಯೇ ಹೊರತು, ಯಶ್ ಅವರನ್ನಾಗಲೀ, ಬೇರೆ ಯಾರನ್ನೇ ಆಗಲಿ ನೋಯಿಸುವ ಉದ್ದೇಶ ಇರಲಿಲ್ಲ. ಆದರೂ, ಯಾರಿಗೇ ಬೇಸರವಾಗಿದ್ದರೂ  ಕ್ಷಮೆಯಿರಲಿ. 

ನನಗೆ ಮಾಧ್ಯಮಗಳು ಆರಂಭದಿಂದಲೂ ಬೆಂಬಲ ನೀಡಿವೆ. ನನ್ನ ಬೆಳವಣಿಗೆಯಲ್ಲಿ ಮಾಧ್ಯಮಗಳ ಪಾತ್ರ ಬಹಳ ದೊಡ್ಡದು. ಮಾಧ್ಯಮಗಳು ನನ್ನ ಈ ಮನವಿಗೆ ಸ್ಪಂದಿಸುತ್ತವೆ ಎಂಬ ನಂಬಿಕೆ ನನ್ನದು. 

ಇದನ್ನು ದೊಡ್ಡ ವಿವಾದವನ್ನಾಗಿಸುವುದು ಬೇಡ. ನಿಮ್ಮ ಆಶೀರ್ವಾದ ಸದಾ ಇರಲಿ 

ನಿಮ್ಮ ರಶ್ಮಿಕಾ

Related Articles :-

ಮಿ. ಶೋ ಆಫ್ ಎಂದಿದ್ದ ಕಿರಿಕ್ ರಶ್ಮಿಕಾಗೆ ಯಶ್ ಕೊಟ್ಟ ಉತ್ತರ