` ಮಿ. ಶೋ ಆಫ್ ಎಂದಿದ್ದ ಕಿರಿಕ್ ರಶ್ಮಿಕಾಗೆ ಯಶ್ ಕೊಟ್ಟ ಉತ್ತರ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
yash replies to rashmika's comment
Yash, Rashmika Image

ಇತ್ತೀಚೆಗೆ ಟಿವಿ ಚಾನೆಲ್‌ವೊಂದರಲ್ಲಿ 'ಕಿರಿಕ್‌ ಪಾರ್ಟಿ' ನಟಿ ರಶ್ಮಿಕಾ ಮಂದಣ್ಣ, ರಾಕಿಂಗ್‌ ಸ್ಟಾರ್‌ ಯಶ್‌ಗೆ ಮಿಸ್ಟರ್‌ ಷೋ ಆಫ್‌ ಎಂದು ಹೇಳಿದ್ದರು. ಅದು ಕಾರ್ಯಕ್ರಮದ ನಿರೂಪಕ ಕೇಳಿದ ಪ್ರಶ್ನೆಗೆ ನೀಡಿದ್ದ ಉತ್ತರವಾಗಿತ್ತು. ರಶ್ಮಿಕಾ ಹಾಗೆ ಹೇಳಿದ್ದು, ಯಶ್ ಅಭಿಮಾನಿಗಳು ಕೆರಳಿಸಿತ್ತು. ಟ್ವಿಟರ್, ಫೇಸ್​ಬುಕ್​ನಲ್ಲಿ ಯಶ್ ಅಭಿಮಾನಿಗಳು ರಶ್ಮಿಕಾರನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದೇನಾಗಿಹೋಯ್ತು ಎಂಬ ಟೆನ್ಷನ್​ನಲ್ಲಿದ್ದ ರಶ್ಮಿಕಾಗೆ ಈಗ ಯಶ್, ತಮ್ಮ ಫೇಸ್​ಬುಕ್​ನಲ್ಲಿ ಉತ್ತರ ಕೊಟ್ಟಿದ್ದಾರೆ. ಅಭಿಮಾನಿಗಳಿಗೂ ಸುಮ್ಮನಿರುವಂತೆ ಮನವಿ ಮಾಡಿದ್ದಾರೆ.

ರಾಕಿಂಗ್‌ ಸ್ಟಾರ್‌ ಯಶ್, ಫೇಸ್‌ಬುಕ್‌ನಲ್ಲಿ ತಮ್ಮ ಅಭಿಮಾನಿಗಳಿಗೆ ನೀಡಿದ ಸಂದೇಶ ಇದು.

'ಎಲ್ಲರಿಗೂ ನಮಸ್ಕಾರ..

ಒಬ್ಬ ನಟನಾಗಿ ನಿಮ್ಮೆಲ್ಲರ ಪ್ರೀತಿ ಮತ್ತು ಅಭಿಮಾನವನ್ನು ಸಂಪಾದಿಸುವುದನ್ನೇ ಗುರಿಯಾಗಿಟ್ಟುಕೊಂಡು ಕೆಲಸ ಮಾಡುವ ನಾನು, ಕೆಲವೊಮ್ಮೆ ಎದುರಾಗುವ ಅನಗತ್ಯ ಎನಿಸುವ ವಿಷಯಗಳನ್ನು ನಿರ್ಲ್ಯಕ್ಷಿಸುವ ಸ್ವಭಾವವನ್ನು ರೂಢಿಸಿಕೊಂಡಿದ್ದೇನೆ. ಆದರೆ ನನ್ನನ್ನು ಪ್ರೀತಿಸುವ ನಿಮ್ಮ ಮನಸಿಗೆ ನೋವಾದಾಗ ಪ್ರತಿಕ್ರಿಯೆ ನೀಡದೆ ಇರುವುದು ನನ್ನಿಂದ ಸಾಧ್ಯವಿಲ್ಲ. ನಿಮ್ಮ ಅಭಿಮಾನ ಪ್ರೀತಿಗೆ ಬೆಲೆಕಟ್ಟಲಾಗುವುದಿಲ್ಲ, ಅದಕ್ಕೆ ನಾನೆಂದು ಚಿರಋಣಿ.

ರಶ್ಮಿಕಾ ಅವರು ವೈಯಕ್ತಿಕವಾಗಿ ನನಗೆ ಪರಿಚಿತರಲ್ಲ, ಇದುವರೆಗೂ ಭೇಟಿಯು ಮಾಡಿಲ್ಲ...ಮಾತು ಸಹ ಆಡಿಲ್ಲ.ಹಾಗೆಂದು ಅವರಿಗೆ ನನ್ನ ಬಗ್ಗೆ ಯಾವುದೇ ರೀತಿಯ ಆಭಿಪ್ರಾಯ ಇರಬಾರದೆಂದೇನಿಲ್ಲ. ಅವರ ಅಭಿಪ್ರಾಯ ಅವರದು, ಅದನ್ನು ಹೀಗಳೆಯುವ ಕೆಲಸ ಯಾರೂ ಮಾಡಬಾರದು. ಎಲ್ಲರ ಅಭಿಪ್ರಾಯವನ್ನು ಗೌರವಿಸೋಣ.

ಒಬ್ಬರ ಅಭಿಪ್ರಾಯ ಇನ್ನೊಬ್ಬರ ವ್ಯಕ್ತಿತ್ವವನ್ನು ನಿರ್ಧರಿಸುವುದಿಲ್ಲ. ಈ ವಿಷಯ ಇಲ್ಲಿಗೆ ಬಿಟ್ಟುಬಿಡಿ, ಇಲ್ಲಿ ಚರ್ಚಿಸುವಂತದ್ದು ಏನೂ ಇಲ್ಲ.

ಕೆಲವೇ ದಿನಗಳಲ್ಲಿ 'ಕೆ.ಜಿ.ಎಫ್' ಚಿತ್ರದ ಮತ್ತೊಂದು ಸ್ಟಿಲ್ ಬರಲಿದೆ. ಅಲ್ಲಿಯವರೆಗೆ ಈದ್ ಮುಬಾರಕ್' ಎಂದು ಯಶ್‌ ಬರೆದುಕೊಂಡಿದ್ದಾರೆ.

ವಿವಾದ ಇಲ್ಲಿಗೇ ಮುಗಿಯುತ್ತಾ..? ಯಶ್ ಮಾತನ್ನು ಅಭಿಮಾನಿಗಳು ಒಪ್ಪಿ ಸುಮ್ಮನಾಗುತ್ತಾರಾ..?