ರಮ್ಯಾ ಪಾತ್ರ ಮಾಡೋಕೆ ನಾನ್ ರೆಡಿ ಅಂತಾ ಹೇಳಿಕೊಂಡಿರೋದು ಶರ್ಮಿಳಾ ಮಾಂಡ್ರೆ. ಅಂತಾದ್ದೊಂದು ಕನಸನ್ನ ಅಭಿಮಾನಿಗಳ ಜೊತೆಗಿನ ಮಾತುಕತೆಯಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಯೊಬ್ಬರ ಪ್ರಶ್ನೆಗೆ ಶರ್ಮಿಳಾ, ರಮ್ಯಾ ಜೀವನ, ಸಿನಿಮಾ ಆದರೆ, ನನಗೆ ರಮ್ಯಾ ಪಾತ್ರ ಮಾಡುವ ಆಸೆಯಿದೆ ಎಂದು ಹೇಳಿಕೊಂಡಿದ್ದಾರೆ.
ನಟಿ, ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ರಮ್ಯಾ ಜೀವನದಲ್ಲಿ ಒಂದು ಸಿನಿಮಾಗಿರುವ ಸಕಲ ಅಂಶಗಳೂ ಇವೆ. ಹಾಗೆಂದು ರಮ್ಯಾ ಲೈಫು ಸಿನಿಮಾ ಆಗುತ್ತಿಲ್ಲ.
ಶರ್ಮಿಳಾ ಮಾಂಡ್ರೆ ಕೂಡಾ ಅಷ್ಟೆ. ಸದ್ಯಕ್ಕೆ ಅವರ ನಟನೆಯ ಹಾರರರ್ ಚಿತ್ರ ಆಕೆ ಚಿತ್ರದ ಪ್ರಮೋಷನ್‍ನಲ್ಲಿ ಬ್ಯುಸಿ.