` ಸುಳ್ಳೇ ಸುಳ್ಳು..ಹುಚ್ಚ ವೆಂಕಟ್ ಫಿನಾಯಿಲ್ ಕುಡಿದದ್ದು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
did huccha venkat really drink pheynol
Huccha Venkat Image

ಇಂಥಾದ್ದೊಂದು ಅನುಮಾನ ಬಹುತೇಕರಲ್ಲಿ ಇತ್ತು. ಹುಚ್ಚ ವೆಂಕಟ್ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದರಂತೆ ಎನ್ನುವ ಸುದ್ದಿ ಬಂದಾಗ ಎಲ್ಲರೂ ಅಂದುಕೊಂಡಿದ್ದುದೇ ಇದು.

ಅದು ಈಗ ಸತ್ಯವಾಗಿದೆ. ಹುಚ್ಚ ವೆಂಕಟ್ ಭಗ್ನ ಪ್ರೇಮದ ಕಥೆ ಹೇಳಿ ಫಿನಾಯಿಲ್ ಕುಡಿದಿರುವುದೇ ಸುಳ್ಳು ಅನ್ನೋದು ಈಗ ವೈದ್ಯರಿಂದಲೇ ಬಹಿರಂಗವಾಗಿದೆ. ವೆಂಕಟ್​ಗೆ ಚಿಕಿತ್ಸೆ ನೀಡಿರುವುದು ನಿಜ. ಆದರೆ, ಆತ ಫಿನಾಯಿಲ್ ಕುಡಿದಿರಲಿಲ್ಲ. ಆತ ವಾಂತಿಯನ್ನೂ ಮಾಡಿಕೊಂಡಿರಲಿಲ್ಲ. ಆತನಿಗೆ ಒಂದು ಬಾಟಲ್ ಗ್ಲುಕೋಸ್ ಹಾಕಿ ಕಳಿಸಿದ್ದೇವೆ ಅಷ್ಟೆ ಎಂದಿದ್ದಾರೆ ಮಲ್ಲಿಗೆ ಆಸ್ಪತ್ರೆ ವೈದ್ಯರು.

ಅಲ್ಲಿಗೆ ಇದು ಹುಚ್ಚ ವೆಂಕಟನ ಇನ್ನೊಂದು ಡ್ರಾಮ ಅನ್ನೋದು ಸ್ಪಷ್ಟವಾಗಿದೆ ಆದರೆ ಹುಚ್ಚ ವೆಂಕಟ್ ಹೇಳೋದೇ ಬೇರೆ. ವೈದ್ಯರು ಸುಳ್ಳು ಹೇಳ್ತಿದ್ದಾರಂತೆ.

Related Articles :-

ಹುಚ್ಚ ವೆಂಕಟ್..ಏನಪ್ಪಾ ಇದು?

ಹುಚ್ಚ ವೆಂಕಟ್ ಆತ್ಮಹತ್ಯೆ ಯತ್ನ - ಪ್ರೀತಿಸಿದ್ದ ಹುಡುಗಿ ಹೇಳಿದ್ದೇನು?

ಹುಚ್ಚ ವೆಂಕಟ್ ಆತ್ಮಹತ್ಯೆ ಯತ್ನ

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery