ಚೌಕ ಚಿತ್ರದ ಯಶಸ್ಸಿನ ಸಂಭ್ರಮದಲ್ಲಿರುವ ನಟ ನೆನಪಿರಲಿ ಪ್ರೇಮ್, ರಾಧಿಕಾ ಕುಮಾರ ಸ್ವಾಮಿ ಜೊತೆಗೆ ಬರುತ್ತಿದ್ದಾರೆ. ಟಿವಿ ಶೋನಲ್ಲಿ. ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್ ಸೀಸನ್ 2ನಲ್ಲಿ ನೆನಪಿರಲಿ ಪ್ರೇಮ್ ಜಡ್ಜ್. ಅವರ ಜೊತೆಗೆ ಜಡ್ಜ್ ಆಗಿ ಕೂರುತ್ತಿರುವ ನಾಯಕಿ ರಾಧಿಕಾ ಕುಮಾರಸ್ವಾಮ
ನೆನಪಿರಲಿ ಪ್ರೇಮ್ಗೆ ಟಿವಿ ಶೋ ಹೊಸದಲ್ಲ. ಈ ಮೊದಲು ಪುಟಾಣಿ ಪಂಟ್ರು ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿದ್ದ ಪ್ರೇಮ್ಗೆ, ಕಿರುತೆರೆಯಲ್ಲಿ ಇದು 2ನೇ ಅನುಭವ. ಹೆಚ್ಚೂ ಕಡಿಮೆ ತೆರೆಮರೆಗೆ ಸರಿದವರಂತೆ ಇರುವ ರಾಧಿಕಾ ಕುಮಾರಸ್ವಾಮಿ, ಈ ಶೋ ಮೂಲಕ ಟಿವಿಯಲ್ಲಿ ಬರುತ್ತಿರುವುದು ಈ ರಿಯಾಲಿಟಿ ಶೋನ ವಿಶೇಷ.
ಇವರಿಬ್ಬರ ಜೊತೆ 3ನೇ ಜಡ್ಜ್ ಆಗಿರುವದು ಕೊರಿಯೋಗ್ರಾಫರ್ ಸಲ್ಮಾನ್. ಜೂನ್ 24ರಿಂದ ಸ್ಟಾರ್ ಸುವರ್ಣದಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ