ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ ಅಲ್ಜೈಮರ್ ಪೀಡಿತನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದ ಅನಂತ್ ನಾಗ್ ಗೆ ಬೆಸ್ಟ್ ನಟ ಅವಾರ್ಡ್ ಸಿಕ್ಕರೆ, ಯು ಟರ್ನ್ ಚಿತ್ರದಲ್ಲಿ ಕಣ್ಣಲ್ಲೇ ಭಯದ ಭಾವನೆ ಮೂಡಿಸಿದ್ದ ಶ್ರದ್ಧಾ ಶ್ರೀನಾಥ್ ಬೆಸ್ಟ್ ನಟಿಯಾಗಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ವಿಮರ್ಶಕರ ವಿಶೇಷ ಪ್ರಶಸ್ತಿ ರಕ್ಷತ್ ಶೆಟ್ಟಿ ಮತ್ತು ಶೃತಿ ಹರಿಹರನ್ ಗೆ ದಕ್ಕಿದೆ. ಶನಿವಾರ ಹೈದರಾಬಾದ್ ನಲ್ಲಿ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಕಿರಿಕ್ ಪಾರ್ಟಿ ಚಿತ್ರಕ್ಕೆ5 ಹಾಗೂ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರಕ್ಕೆ 3 ಪ್ರಶಸ್ತಿ ಬಂದಿರುವುದು ವಿಶೇಷ.
ಫಿಲ್ಮ್ ಫೇರ್ ಪ್ರಶಸ್ತಿ ವಿಜೇತರು
ಉತ್ತಮ ಚಿತ್ರ
ತಿಥಿ
ಉತ್ತಮ ನಿರ್ದೇಶಕ
ರಿಷಬ್ ಶೆಟ್ಟಿ (ಕಿರಿಕ್ ಪಾರ್ಟಿ)
ಉತ್ತಮ ನಟ
ಅನಂತ್ ನಾಗ್ (ಗೋಧಿ ಬಣ್ಣ ಸಾಧಾರಣ ಮೈಕಟ್ಟು)
ಅತ್ಯುತ್ತಮ ನಟಿ
ಶ್ರದ್ಧಾ ಶ್ರೀನಾಥ್ (ಯು ಟರ್ನ್)
ಅತ್ಯುತ್ತಮ ಪೋಷಕ ನಟ
ವಶಿಷ್ಟ ಸಿಂಹ (ಗೋಧಿ ಬಣ್ಣ ಸಾಧಾರಣ ಮೈಕಟ್ಟು)
ಅತ್ಯುತ್ತಮ ಪೋಷಕ ನಟಿ
ಸಂಯುಕ್ತ ಹೆಗ್ಡೆ (ಕಿರಿಕ್ ಪಾರ್ಟಿ)
ಅತ್ಯುತ್ತಮ ಸಂಗೀತ
ಅಜನೀಶ್ ಲೋಕನಾಥ್ (ಕಿರಿಕ್ ಪಾರ್ಟಿ)
ಅತ್ಯುತ್ತಮ ಹಿನ್ನೆಲೆ ಗಾಯಕ
ವಿಜಯ್ ಪ್ರಕಾಶ್ ( ಬೆಳಗೆದ್ದು ಯಾರ ಮುಖವ.. ಚಿತ್ರ - ಕಿರಿಕ್ ಪಾರ್ಟಿ)
ಅತ್ಯುತ್ತಮ ಹಿನ್ನೆಲೆ ಗಾಯಕಿ
ಅನನ್ಯಾ ಭಟ್ ( ಹಾಡು: ನಮ್ಮ ಕಾಯೋ ದೇವರೇ.. ಚಿತ್ರ-ರಾಮಾ ರಾಮ ರೇ)
ಅತ್ಯುತ್ತಮ ಸಾಹಿತ್ಯ
ಜಯಂತ್ ಕಾಯ್ಕಿಣಿ (ಸರಿಯಾಗಿ ನೆನಪಿದೆ ನನಗೆ. ಚಿತ್ರ: ಮುಂಗಾರು ಮಳೆ 2)
ವಿಮರ್ಶಕರ ವಿಶೇಷ ಪ್ರಶಸ್ತಿ
ಉತ್ತಮ ನಟ - ರಕ್ಷಿತ್ ಶೆಟ್ಟಿ (ಕಿರಿಕ್ ಪಾರ್ಟಿ)
ಉತ್ತಮ ನಟಿ - ಶೃತಿ ಹರಿಹರನ್ (ಗೋಧಿ ಬಣ್ಣ ಸಾಧಾರಣ ಮೈಕಟ್ಟು)