ಆಕೆ, ಚೈತನ್ಯ ನಿರ್ದೇಶನದ ಸಿನಿಮಾ. ಆ ದಿನಗಳು, ಆಟಗಾರ..ದಂತಹ ಯಶಸ್ವಿ ಚಿತ್ರಗಳನ್ನು ಕೊಟ್ಟಿರುವ ಚೈತನ್ಯ, ಈಗ ಹೊಸ ಹಾರರ್ ಚಿತ್ರದೊಂದಿಗೆ ಬರುತ್ತಿದ್ದಾರೆ. ಚಿತ್ರದ ವಿಶೇಷವೆಂದರೆ, ಇದು ಅರ್ಧ ಸ್ಯಾಂಡಲ್ವುಡ್, ಉಳಿದರ್ಧ ಹಾಲಿವುಡ್ ಚಿತ್ರ.
ಅರ್ಧ ಭಾಗ ಲಂಡನ್ನಲ್ಲೇ ಶೂಟಿಂಗ್ ಆಗಿದ್ದರೆ, ಉಳಿದರ್ಧ ಬೆಂಗಳೂರಿನಲ್ಲಿ ಚಿತ್ರೀಕರಣಗೊಂಡಿದೆ. ಚಿತ್ರಕ್ಕೆ ಕೆಲಸ ಮಾಡಿರುವವಱರೂ ಹೊಸಬರಲ್ಲ. ಆದರೆ, ಘಟಾನುಘಟಿಗಳು. ಆಕೆ ಚಿತ್ರದ ಛಾಯಾಗ್ರಾಹಕ ಇಯಾನ್ ಹಾವ್ಸ್. ಹ್ಯಾರಿ ಪಾಟರ್ ಚಿತ್ರಕ್ಕೆ ಕೆಲಸ ಮಾಡಿದ್ದವರು. ಲಂಡನ್ನಲ್ಲಿ ಶೂಟಿಂಗ್ ಆದ ಭಾಗದ ದೃಶ್ಯಗಳ ಛಾಯಾಗ್ರಹಣ ಮಾಡಿದ್ದಾರೆ. ಭಾರತದಲ್ಲಿ ನಡೆದಿರುವ ಶೂಟಿಂಗ್ನಲ್ಲಿ ಕ್ಯಾಮೆರಾ ಹಿಡಿದಿರೋದು ಮನೋಹರ್ ಜೋಷಿ.
ಕಲಾ ನಿರ್ದೇಶಕ ಪಾಲ್ ಬರ್ನ್ಸ್ ಕೂಡ ಹಾಲಿವುಡ್ ಚಿತ್ರ ‘ದ ನಾಟ್’ತಂಡದಲ್ಲಿ ಕೆಲಸ ಮಾಡಿದವರು. ಗೇಮ್ ಆಫ್ ದಿ ಥ್ರೋನ್ಸ್ ಚಿತ್ರದ ಪ್ರೊಡಕ್ಷನ್ ಮ್ಯಾನೇಜರ್ ಆಗಿದ್ದವರು. ಇಂಗ್ಲೆಂಡ್ನಲ್ಲಿ ನಡೆದ ಶೂಟಿಂಗ್ನಲ್ಲಂತೂ ಚೈತನ್ಯ ಜೊತೆಗಿದ್ದ ಇಬ್ಬರು ಅಸಿಸ್ಟೆಂಟ್ಗಳನ್ನು ಹೊರತುಪಡಿಸಿದರೆ, ಉಳಿದವರೆಲ್ಲ ಅಲ್ಲಿನವರೇ.
ಚೈತನ್ಯ ಅವರಿಗೇನೂ ಬ್ರಿಟನ್ ಹೊಸದಲ್ಲ. ಅಲ್ಲಿಯೇ ಸಾಕ್ಷ್ಯಚಿತ್ರ ತಯಾರಿಸಿದ ಅನುಭವವಿದೆ.
ಇರೋಸ್ ಇಂಟರ್ನ್ಯಾಷನಲ್ ನಿರ್ಮಿಸುತ್ತಿರುವ ಮೊದಲ ಕನ್ನಡ ಚಿತ್ರವೂ ಆಕೆ.
ಆಟಗಾರದಲ್ಲಿ ಚೈತನ್ಯ ಕೊಟ್ಟಿದ್ದ ಹಾರರ್ ಅನುಭವಕ್ಕೆ ಬೆಚ್ಚಿ ಬಿದ್ದಿದ್ದವರು, ಈಗ ಮತ್ತೊಮ್ಮೆ ಬೆಚ್ಚಿ ಬೀಳೋಕೆ ಸಿದ್ಧರಾಗಿದ್ದಾರೆ. ಚೈತನ್ಯ ಹೆದರಿಸೋದು ಗ್ಯಾರಂಟಿ ಅನ್ನೋ ನಂಬಿಕೆ ಪ್ರೇಕ್ಷಕರು.