` ರಾಜಕುಮಾರನಿಗೆ ಶರಣಾದ ಬಾಹುಬಲಿ 2 - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
baahubali 2 surrendered to raajkumara
Raajkumara, Baahubali 2 Movie Image

ಬಾಹುಬಲಿ ಎಲ್ಲ ಕಡೆ ದಾಖಲೆ ಬರೆದು ಮುನ್ನುಗ್ಗಿರಬಹುದು. ಆದರೆ, ಲಾಂಗ್ ರನ್ ವಿಚಾರಕ್ಕೆ ಬಂದರೆ, ಕರ್ನಾಟಕದಲಿ ಬಾಹುಬಲಿ ಕನ್ನಡದ ರಾಜಕುಮಾರನ ಎದುರು ಶರಣಾಗಿದೆ. 100ನೇ ದಿನ ಸಮೀಪಿಸಿದರೂ,  ರಾಜಕುಮಾರನ ಕ್ರೇಜ್ ಹಾಗೇ ಇದೆ. ಜನ ಥಿಯೇಟರುಗಳಿಗೆ ಬರುತ್ತಲೇ ಇದ್ದಾರೆ. ರಾಜಕುಮಾರನಿಗೆ ಹೋಲಿಸಿದರೆ, ಬಾಹುಬಲಿ ಕಡಿಮೆ ಇದೆ.

ಬಾಹುಬಲಿ ರಿಲೀಸ್ ಆಗಿ 50 ದಿನ ಕಳೆದಿದೆ. ಈಗ ಬೆಂಗಳೂರು ಒಂದನ್ನೇ ನೋಡೋದಾದ್ರೆ, ಬಾಹುಬಲಿ ಪ್ರದರ್ಶನವಾಗ್ತಾ ಇರೋ ಚಿತ್ರಮಂದಿರಗಳ ಸಂಖ್ಯೆ 21. ಆದರೆ, ರಾಜಕುಮಾರ ಚಿತ್ರ 35ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕಂಟಿನ್ಯೂ ಆಗ್ತಿದೆ.  

ಒಂದು ಚಿತ್ರ ಕಡಿಮೆ ಅವಧಿಯಲ್ಲಿ ಬಾಕ್ಸಾಫೀಸ್ ಗೆಲ್ಲುವುದು ಬೇರೆ. ಆದರೆ, ಚಿತ್ರವೊಂದು 100 ದಿನ ಸಮೀಪಿಸಿದರೂ ಪ್ರೇಕ್ಷಕರನ್ನು ಸೆಳೆಯುತ್ತಿದೆ ಎಂದರೆ, ಚಿತ್ರದಲ್ಲಿ, ಚಿತ್ರದ ಕಥೆಯಲ್ಲಿ ಅಂಥಾದ್ದೊಂದು ತಾಕತ್ ಇರಬೇಕು.

ಅಷ್ಟೇ ಅಲ್ಲ, ರಾಜಕುಮಾರ ಚಿತ್ರಕ್ಕೆ ಪೈರಸಿ ಕಾಟವೂ ಕಾಡಿದೆ. ಅದನ್ನು ಕೇಬಲ್ ಚಾನೆಲ್‍ನಲ್ಲಿ ಹಾಕಿ, ಪ್ರಸಾರವನ್ನೂ ಮಾಡಲಾಗಿದೆ. ಈ ಎಲ್ಲದರ ನಡುವೆಯೂ ಪ್ರೇಕ್ಷಕರು ಥಿಯೇಟರ್‍ಗೇ ಬಂದು ಚಿತ್ರವನ್ನು ಮೆಚ್ಚುತ್ತಿದ್ದಾರೆ. ಆ ದೃಷ್ಟಿಯಲ್ಲಿ ರಾಜಕುಮಾರನ ಗೆಲುವನ್ನು ಇಡೀ ಚಿತ್ರರಂಗ ಸಂಭ್ರಮಿಸಲೇಬೇಕು.