` ಮನಸು ಮಲ್ಲಿಗೆ ಹುಡುಗಿ 10ನೇ ಕ್ಲಾಸ್ ಪಾಸ್ ಆದ್ರಾ..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
rajaguru prerana mahadev
did manasu mallige actress cleared 10th exam

ರಾಜ್​ಗುರು ಪ್ರೇರಣಾ ಮಹಾದೇವ್. ಹಾಗಂದ್ರೆ ಯಾರು ಅಂತೀರೇನೋ? ರಿಂಕು ರಾಜ್​ಗುರು ಅಂದ್ರೆ, ಸೈರಾಟ್ ಚಿತ್ರ ನೆನಪಾಗುತ್ತೆ. ಜೊತೆಯಲ್ಲೇ ಕನ್ನಡದಲ್ಲಿ ಬಂದ ಮನಸು ಮಲ್ಲಿಗೆ ಚಿತ್ರ ನೆನಪಾಗುತ್ತೆ. ಆ ಚಿತ್ರದ ಹೀರೋಯಿನ್ ಇದೇ ರಾಜ್​ಗುರು ಪ್ರೇರಣಾ ಮಹಾದೇವ್. ಚಿತ್ರಕ್ಕಾಗಿ ರಿಂಕು ರಾಜ್​ಗುರು ಅನ್ನೋ ಹೆಸರಿಟ್ಟುಕೊಂಡಿದ್ದರು. 

ಈಗ ಆ ರಿಂಕು 10ನೇ ಕ್ಲಾಸ್ ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್​ನಲ್ಲಿ ಪಾಸ್ ಆಗಿದ್ದಾರೆ. ಮನಸು ಮಲ್ಲಿಗೆ ಚಿತ್ರೀಕರಣದ ವೇಳೆ 10ನೇ ಕ್ಲಾಸ್ ಓದುತ್ತಿದ್ದ ರಿಂಕು, ಶೂಟಿಂಗ್ ಮಧ್ಯೆಯೂ ಫಸ್ಟ್ ಕ್ಲಾಸ್ ಬಂದಿರುವುದೇ ಸಾಧನೆ. 9ನೇ ಕ್ಲಾಸ್​ನಲ್ಲಿ 81% ಸ್ಕೋರ್ ಮಾಡಿದ್ದ ರಿಂಕು, 10ನೇ ಕ್ಲಾಸ್​ನಲ್ಲಿ 66% ಸ್ಕೋರ್ ಮಾಡಿದ್ದಾರೆ. 

ಒಟ್ಟು 500 ಅಂಕಗಳಲ್ಲಿ ರಿಂಕು 332 ಅಂಕ ಪಡೆದಿದ್ದಾರೆ. ಅತೀ ಹೆಚ್ಚು ಸ್ಕೋರ್ ಮಾಡಿರೋದು ಮಾತೃಭಾಷೆ ಮರಾಠಿಯಲ್ಲಿ. ಕಡಿಮೆ ಸ್ಕೋರು ಮಾಡಿರೋದು ಸೋಷಿಯಲ್ ಸೈನ್ಸ್​ನಲ್ಲಿ. 

 

Ayushmanbhava Movie Gallery

Ellidhe Illitanaka Movie Gallery