` ಅಂತ್ಯಕ್ರಿಯೆ ಮುಗಿದ ಮೇಲೆ ಈಗೇಕೆ ವಿವಾದ - ಶಿವರಾಜ್ ಕುಮಾರ್ ಪ್ರಶ್ನೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shivarajkumar image
Shivarajkumar At Parvathamma Rajkumar Cremation Image

ಪಾರ್ವತಮ್ಮ ರಾಜ್​ಕುಮಾರ್ ನಿಧನರಾದ ಮೇಲೆ ರಾಜ್ ಮನೆಯಲ್ಲಿ, ಚಿತ್ರರಂಗದಲ್ಲಿ ಶೋಕ ಆವರಿಸಿದ್ದರೆ, ಇನ್ನೊಂದು ಕಡೆ ವಿವಾದವೂ ಉದ್ಭವವಾಗಿದೆ. ವಿಜಯರನಗರದ ವಕೀಲ ಚೇತನ್ ಎಂಬುವವರು ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರ ವಿರುದ್ಧ ನಗರದ 24ನೇ ಎಸಿಎಂಎಂ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯೂ ಆಗುತ್ತಿದೆ. 

ಈಗ ಅವುಗಳಿಗೆಲ್ಲ ಶಿವರಾಜ್ ಕುಮಾರ್ ಉತ್ತರ ಕೊಟ್ಟಿದ್ದಾರೆ. ಶಿವರಾಜ್ ಕುಮಾರ್ ಹೇಳಿರುವುದು ಇಷ್ಟು. 

ಪಾರ್ವತಮ್ಮ ಪಾರ್ಥಿವ ಶರೀರಕ್ಕೆ ರಾಷ್ಟ್ರಧ್ವಜದ ಗೌರವ ವಿವಾದ ಮುಗಿದ ಅಧ್ಯಾಯ. ನಾವ್ಯಾರೂ ಕೇಳಿರಲಿಲ್ಲ. ಆದರೂ ಸರ್ಕಾರ ಮಾಡಿದೆ. ಅಂತ್ಯಕ್ರಿಯೆ ಮುಗಿದ ಮೇಲೆ, ಈಗ ಚರ್ಚೆ ಸರಿಯಲ್ಲ ಎನ್ನುವುದು ಶಿವಣ್ಣನ ಮಾತು.

ಇನ್ನು ಕಂಠೀರವ ಸ್ಟುಡಿಯೋದಲ್ಲಿ ಸಮಾಧಿ ಮಾಡಿದ ವಿವಾದಗಳ ಬಗ್ಗೆಯೂ ಶಿವರಾಜ್ ಕುಮಾರ್ ಅವರ ಉತ್ತರ ನೇರ ಮತ್ತು ಸರಳ. ಪತಿ ರಾಜ್ ಕುಮಾರ್ ಸಮಾಧಿ ಪಕ್ಕವೇ ನನ್ನ ಸಮಾಧಿಯಾಗಬೇಕು ಎನ್ನುವುದು ಪಾರ್ವತಮ್ಮ ರಾಜ್​ಕುಮಾರ್ ಆಸೆಯಾಗಿತ್ತು. ಹೀಗಾಗಿ ಅಮ್ಮನ ಆಸೆ ಈಡೇರಿಸುವ ಸಲುವಾಗಿ ನಾವು ಕಂಠೀರವ ಸ್ಟುಡಿಯೋದಲ್ಲಿ ಸಮಾಧಿ ಮಾಡಲು ಸರ್ಕಾರವನ್ನು ಕೇಳಿಕೊಂಡೆವು. ಅವರು ಜಾಗ ಕೊಡದಿದ್ದರೆ, ಬೇರೆ ಜಾಗದಲ್ಲಿ ಅಂತ್ಯಕ್ರಿಯೆ ಮಾಡುತ್ತಿದ್ದೆವು ಎಂದಿದ್ದಾರೆ. 

ಅಂತ್ಯಕ್ರಿಯೆ ಮುಗಿದ ಮೇಲೆ ವಿವಾದ ಬೇಡ ಎನ್ನುವ ಮೂಲಕ, ವಿವಾದಗಳಿಗೆ ಇತಿಶ್ರೀ ಹಾಡಲು ಮನವಿ ಮಾಡಿದ್ದಾರೆರೆ.