ಎಂಗೇಜ್ಮೆಂಟ್ ಸುದ್ದಿ ರಶ್ಮಿಕಾ ಮಂದಣ್ಣ ಫೇಸ್ಬುಕ್ನಲ್ಲಿ ಹೊರಬಿತ್ತು. ಹೌದಾ ಅಂಥಾ ಕೇಳಿದಾಗ ರಕ್ಷಿತ್ ಶೆಟ್ಟಿ ಅದೆಷ್ಟು ನಾಚಿಕೊಂಡ್ರು ಅಂದ್ರೆ, ಹೂಂ ಅನ್ನೋದೇನೋ ಅಂದ್ರು. ಆದರೆ, ಫಸ್ಟ್ ಟೈಂ ಲವ್ವಲ್ಲಿ ಬಿದ್ದ ಹುಡುಗನ ರೋಮಾಂಚನ ಅವರ ಮಾತಿನಲ್ಲಿತ್ತು. ವಯಸ್ಸು 33 ಆದರೂ ಫಸ್ಟ್ ಲವ್, ಫಸ್ಟ್ ಲವ್ವೇ ಅಲ್ವಾ..?
ಮೊದ ಮೊದಲು ಇದು ಗಾಸಿಪ್ ಅಷ್ಟೇ ಆಗಿತ್ತು. ಆದರೆ, ಗಾಸಿಪ್ ಪತ್ರಿಕೆ, ಟಿವಿಗಳಲ್ಲಿ ಸುದ್ದಿಯಾದಾಗ ರಶ್ಮಿಕಾ ತಂದೆ ರಕ್ಷಿತ್ ಅವರನ್ನು ಕರೆದು ಏನಿದೆಲ್ಲ ಅಂದ್ರಂತೆ..ಅಷ್ಟೆ.
ಲವ್ ಹೇಗೆ ಶುರುವಾಯ್ತು ಅಂದ್ರೆ, ಅದನ್ನೆಲ್ಲ ಹೇಳೋಕೆ ಸ್ಪೆಷಲ್ಲಾಗಿ ಬರ್ತೀನಿ ಅಂತಿದ್ದ ರಕ್ಷಿತ್ ಶೆಟ್ಟಿ ಮಾತಿನಲ್ಲಿ ನಾಚಿಕೆ ತುಂಬಿ ತುಳುಕಾಡುತ್ತಿತ್ತು. ರಶ್ಮಿಕಾರಲ್ಲಿ ರಕ್ಷಿತ್ಗೆ ಇಷ್ಟವಾಗಿದ್ದು, ಅವರ ಇನ್ನೊಬ್ಬರ ಬಗ್ಗೆ ಹೊಟ್ಟೆಕಿಚ್ಚುಪಡದ ಗುಣ. ಅಹಂಕಾರವಿಲ್ಲದ ಗುಣ.
ಚಿತ್ರ ಹಿಟ್ ಆದ ಖುಷಿಯಲ್ಲಿ ಪ್ರಪೋಸ್ ಮಾಡಿದ್ದು ರಕ್ಷಿತ್ ಶೆಟ್ಟಿಯಂತೆ. ಆದರೆ, ನೋಡೋಣ ಎಂದಿದ್ದ ರಶ್ಮಿಕಾ, ಆಗ ಓಕೆ ಎಂದೇನೂ ಹೇಳಿರಲಿಲ್ಲ. ಆದರೆ, ರಶ್ಮಿಕಾ ತಂದೆಯ ಎದುರು ಫೈನಲ್ ಆಯ್ತು.
ಇನ್ನು ರಕ್ಷಿತ್ ಶೆಟ್ಟಿ ಕುಟುಂಬದ ಪಾಲಿಗೆ ರಶ್ಮಿಕಾ ಭಾಗ್ಯಲಕ್ಷ್ಮಿ. ಮೊದ ಮೊದಲು ತಮಾಷೆಯಾಗಿ ಹೇಳಿದ್ದು ಆಮೇಲೆ ನಿಜವಾಗಿ ಹೋಗಿದೆ. ರಕ್ಷಿತ್ ಅಮ್ಮನಿಗೆ ರಶ್ಮಿಕಾ ತುಂಬಾ ಇಷ್ಟವಾಗಿಬಿಟ್ಟಿದ್ದಾರೆ.
ರಶ್ಮಿಕಾ, ರಕ್ಷಿತ್ಗೆ ಒಂದು ಪುಟ್ಟ ಬ್ರೇಸ್ಲೆಟ್ನ್ನ ಒಲವಿನ ಉಡುಗೊರೆಯಾಗಿ ಕೊಟ್ಟಿದ್ದಾರೆ.
ಜುಲೈ 3ಕ್ಕೆ ಕೊಡಗಿನಲ್ಲೇ ಎಂಗೇಜ್ಮೆಂಟ್.
ರಶ್ಮಿಕಾಗಿನ್ನೂ 21 ವರ್ಷ. ಪುನೀತ್ ರಾಜ್ ಕುಮಾರ್ ಜೊತೆ ಅಂಜನಿಪುತ್ರ, ಗಣೇಶ್ ಜೊತೆ ಚಮಕ್, ತೆಲುಗಿನಲ್ಲಿ ಒಂದು ಸಿನಿಮಾದಲ್ಲಿ ನಟಿಸ್ತಿರೋ ರಶ್ಮಿಕಾ, ಕೊಡಗಿನ ಕುವರಿ.
ಸದ್ಯಕ್ಕೆ ಮದುವೆ ಇಲ್ಲ. ಮದುವೆಯೇನಿದ್ದರೂ ಎರಡು ವರ್ಷದ ನಂತರ ಎನ್ನುತ್ತಿದ್ದಾರೆ. ಅವರ ಬಾಳು ಬಂಗಾರವಾಗಲಿ.