` ಬಂಗಾರ S/O ಬಂಗಾರದ ಮನುಷ್ಯ ಸತ್ಯವಾದಾಗ.. - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
bangara becomes reality
shivarajkumar in bangara s/o bangaradha manushya

ಸತ್ಯಕಥೆಗಳನ್ನಿಟ್ಟುಕೊಂಡು ಸಿನಿಮಾ ಮಾಡುವವರಿಗೇನೂ ಕೊರತೆಯಿಲ್ಲ. ಆದರೆ, ಕಾಲ್ಪನಿಕ ಕಥೆಯನ್ನಿಟ್ಟುಕೊಂಡು ಮಾಡಿದ ಸಿನಿಮಾದ ಕಥೆ ಸತ್ಯವಾಗುವುದು ಅಪರೂಪ. ಅಂಥಾದ್ದೊಂದು ಅಪರೂಪ ಈಗ ಬಂಗಾರ S/O ಬಂಗಾರದ ಮನುಷ್ಯದ ಚಿತ್ರದಲ್ಲಾಗಿದೆ.

ಬಂಗಾರ S/O ಬಂಗಾರದ ಮನುಷ್ಯ ಚಿತ್ರದ ಕಥೆಯಲ್ಲಿ ರೈತರು ಶಿವರಾಜ್​ ಕುಮಾರ್ ನೇತೃತ್ವದಲ್ಲಿ ನಗರಕ್ಕೆ ತರಕಾರಿ ಸಾಗಾಟ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಾರೆ. ಹೋರಾಟದಲ್ಲಿ ಗೆಲ್ಲುತ್ತಾರೆ. ಇದು ಸಿನಿಮಾದ ಕಾಲ್ಪನಿಕ ಕಥೆ. 

ಅಂಥಾದ್ದೊಂದು ಮಾದರಿಯ ಹೋರಾಟ ಈಗ ನಿಜಕ್ಕೂ ಶುರುವಾಗಿದೆ. ಆದರೆ, ಕರ್ನಾಟಕದಲ್ಲಿ ಅಲ್ಲ. ಮಹಾರಾಷ್ಟ್ರದಲ್ಲಿ. ಎಲ್ಲರಿಗೂ ಗೊತ್ತಿರುವಂತೆ ಮಹಾರಾಷ್ಟ್ರ ಅತಿ ಹೆಚ್ಚು ರೈತರ ಆತ್ಮಹತ್ಯೆಗೆ ಸಾಕ್ಷಿಯಾದ ರಾಜ್ಯ. ಅವರು ಈಗ ತಮ್ಮ ಬೆಳೆಗಳಿಗೆ ಒಳ್ಳೆಯ ಬೆಲೆ ಕೊಡಿ ಎಂದು ಬೀದಿಗಿಳಿದಿದ್ದಾರೆ. ಅಷ್ಟೇ ಆಗಿದ್ದರೆ, ಇಲ್ಲಿ  ಬಂಗಾರ S/0 ಬಂಗಾರದ ಮನುಷ್ಯ ಚಿತ್ರದ ಪ್ರಸ್ತಾಪ ಅಗತ್ಯವಿರಲಿಲ್ಲ. ರೈತರು ಮುಂಬೈಗೆ ತರಕಾರಿ ಸಾಗಾಟ ಬಂದ್ ಮಾಡಿರುವುದೇ ವಿಶೇಷ. ಇದರ ಪರಿಣಾಮ, ಮುಂಬೈನಲ್ಲಿ ತರಕಾರಿಗಳ ಬೆಲೆ ಶೇ.40ರಷ್ಟು ಹೆಚ್ಚಾಗಿದೆಯಂತೆ. ಪ್ರತಿದಿನ ಮಾರುಕಟ್ಟೆಗೆ ಬರುತ್ತಿದ್ದ ತರಕಾರಿ ಲಾರಿಗಳಲ್ಲಿ ಶೇ.95ರಷ್ಟು ಲಾರಿಗಳು ಬರುತ್ತಿಲ್ಲ. ಮುಂಬೈನಲ್ಲೀಗ ತರಕಾರಿಗಳ ಬರ. ಹೋರಾಟಕ್ಕೆ ಅಣ್ಣಾ ಹಜಾರೆ ಕೂಡಾ ಧುಮುಕಿದ್ದಾರೆ.

ಈ ಹಿಂದೆ ಜೀವನ ಚೈತ್ರ ಸಿನಿಮಾ ಅಂಥಾದ್ದೊಂದು ಕ್ರಾಂತಿ ಮಾಡಿತ್ತು. ಆ ಸಿನಿಮಾ ನೋಡಿ, ಕರ್ನಾಟಕದ ಹಲವು ಗ್ರಾಮಗಳಲ್ಲಿ ಮದ್ಯಪಾನದ ವಿರುದ್ಧ ಆಂದೋಲನವೇ ನಡೆದಿತ್ತು. ಇನ್ನೂ ವಿಶೇಷವೆಂದರೆ, ಈಗ ಮಹಾರಾಷ್ಟ್ರದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಬಂಗಾರ S/O ಬಂಗಾರದ ಮನುಷ್ಯ ಚಿತ್ರವನ್ನು ನೋಡಿಲ್ಲ. ಆದರೆ, ಚಿತ್ರದ ಕಥೆ ಸತ್ಯವಂತೂ ಆಗಿದೆ.

 

 

Padarasa Movie Gallery

Kumari 21 Movie Gallery