` ಆಂಧ್ರ, ತೆಲಂಗಾಣ, ತಮಿಳುನಾಡಲ್ಲಿ ಪೈಲ್ವಾನ್ ಕ್ರೇಝ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
pailwan craze in andhra, telangana and tmil nadu
Pailwan Craze In Andhra, Telangana and Tamil Nadu

ಕಿಚ್ಚ ಸುದೀಪ್ ಅವರಿಗೆ ಕನ್ನಡದಲ್ಲಷ್ಟೇ ಅಲ್ಲ, ತೆಲುಗು, ತಮಿಳು, ಹಿಂದಿಯಲ್ಲೂ ಅಭಿಮಾನಿಗಳಿದ್ದಾರೆ. ಪೈಲ್ವಾನ್ ಸಿನಿಮಾ ಏಕಕಾಲಕ್ಕೆ 5 ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಅತ್ತ ಆಂಧ್ರಪ್ರದೇಶ, ತೆಲಂಗಾಣದಲ್ಲಿ ಪೈಲ್ವಾನನ ಕ್ರೇಝ್ ಶುರುವಾಗಿದೆ.

ನಿರ್ದೇಶಕ ಕೃಷ್ಣ, ನಿರ್ಮಾಪಕಿ ಸ್ವಪ್ನಾ ಕೃಷ್ಣ ಚಿತ್ರದ ಪ್ರಚಾರವನ್ನು ಆಗಲೇ ಶುರು ಮಾಡಿದ್ದಾರೆ. ಪೈಲ್ವಾನನ ವ್ಯಾನ್‍ಗಳು ಸುತ್ತಾಟ ಆರಂಭಿಸಿವೆ. ಹೋದೆಡೆಯಲ್ಲೆಲ್ಲ ಅಭಿಮಾನಿಗಳು ಕಿಚ್ಚನ ದರ್ಶನಕ್ಕೆ ಮುಗಿ ಬೀಳುತ್ತಿದ್ದಾರೆ. ಜೈಕಾರ ಜೋರಾಗಿದೆ.

ಸುದೀಪ್ ಜೊತೆ ಸುನಿಲ್ ಶೆಟ್ಟಿ ಕೂಡಾ ಪ್ರಮುಖ ಪಾತ್ರದಲ್ಲಿರುವ ಚಿತ್ರದಲ್ಲಿ ಆಕಾಂಕ್ಷಾ ಸಿಂಗ್ ನಾಯಕಿ. ತಮಿಳುನಾಡಿನಲ್ಲೂ ಪೈಲ್ವಾನ್ ಹವಾ ಶುರುವಾಗಿದ್ದು, ಅಭಿಮಾನಿಗಳೇ ಸ್ವತಃ ವಿಡಿಯೋ ಮಾಡಿ ಹಾಡು, ಟ್ರೇಲರ್ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಸೆಪ್ಟೆಂಬರ್ 12ರಿಂದ ಪೈಲ್ವಾನ್ ಹಬ್ಬ ಶುರುವಾಗಲಿದೆ.

 

Geetha Movie Gallery

Adhyaksha In America Audio Release Images