ಇತ್ತೀಚೆಗಷ್ಟೇ ಸೆನ್ಸಾರ್ ಮಂಡಳಿ ಅಧಿಕಾರಿ ಡಿ.ಎನ್. ಶ್ರೀನಿವಾಸಪ್ಪ, ವಿವಾದದಿಂದ ಸುದ್ದಿಯಾಗಿದ್ದರು. ಕಾನೂನು ಪುಸ್ತಕದಲ್ಲಿ ಇಲ್ಲದ ರೂಲ್ಸುಗಳನ್ನೆಲ್ಲ ಸೇರಿಸಿ, ನಿರ್ಮಾಪಕರಿಂದ ಪ್ರಮಾಣಪತ್ರಕ್ಕೆ ಸಹಿ ಹಾಕಿಸಿಕೊಳ್ಳುತ್ತಿರುವುದು ಸುದ್ದಿಯಾಗಿತ್ತು. ಈಗಿರುವಾಗಲೇ ಇನ್ನೊಂದು ಹೊಸ ವಿವಾದ ಬೆಳಕಿಗೆ ಬಂದಿದೆ.
ಇದೇ ಶ್ರೀನಿವಾಸಪ್ಪನವರ ವಿರುದ್ಧ ಸಿಎಟಿಯಲ್ಲಿ ದೂರು ದಾಖಲಾಗಿದ್ದು, ಅವರ ನೇಮಕಾತಿಯನ್ನೇ ಪ್ರಶ್ನಿಸಲಾಗಿದೆ. ಪ್ರಾದೇಶಿಕ ಸೆನ್ಸಾರ್ ಮಂಡಳಿ ಅಧಿಕಾರಿ ಶ್ರೀನಿವಾಸಪ್ಪನವರ ನೇಮಕಾತಿ ಪ್ರಶ್ನಿಸಿ ದೂರು ನೀಡಿರುವುದು, ಇದೇ ಪ್ರಾದೇಶಿಕ ಸೆನ್ಸಾರ್ ಮಂಡಳಿಯಲ್ಲಿ ಈ ಹಿಂದೆ ಕೆಲಸ ಮಾಡಿದ್ದ ನಾಗೇಂದ್ರ ಸ್ವಾಮಿ.
ಚಿತ್ರಲೋಕಕ್ಕೆ ಲಭ್ಯವಾದ ಮಾಹಿತಿಗಳ ಪ್ರಕಾರ, ನಾಗೇಂದ್ರ ಸ್ವಾಮಿ ನಂತರ ನತಾಶಾ ಅಧಿಕಾರಿಯಾಗಿ ಬಂದಿದ್ದರು. ಇವರ ನಂತರ, ನೇಮಕಾತಿಗೆ ಕೇಂದ್ರ ಸರ್ಕಾರ ಅರ್ಜಿ ಆಹ್ವಾನಿಸಿತ್ತು. ಅರ್ಹ ಹಾಗೂ ಅನುಭವೀ ಅಧಿಕಾರಿಗಳಿಂದ ಅರ್ಜಿ ಕರೆಯಲಾಗಿತ್ತು. ಆ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಅಧಿಕಾರಿಗಳು ಮೂವರು. ಒಬ್ಬರು ಈ ಶ್ರೀನಿವಾಸಪ್ಪ, ಮತ್ತೊಬ್ಬರು ಇವರ ವಿರುದ್ಧ ಈಗ ದೂರು ನೀಡಿರುವ ನಾಗೇಂದ್ರ ಸ್ವಾಮಿ. ಹಾಗೂ ಮೂರನೆಯ ವ್ಯಕ್ತಿ ಒಬ್ಬ ಮಹಿಳಾ ಅಧಿಕಾರಿ.
ಒಂದು ಹುದ್ದೆಗೆ ಮೂವರು ಅರ್ಜಿ ಹಾಕಿದಾಗ, ಮೂವರೂ ಅಭ್ಯರ್ಥಿಗಳ ಸಂದರ್ಶನ, ಮೌಖಿಕ ಪರೀಕ್ಷೆಗಳೆಲ್ಲ ನಡಯಬೇಕು ತಾನೇ.. ವಿವಾದ ಇರುವುದೇ ಇಲ್ಲಿ. ಸಂದರ್ಶನವೇ ನಡೆಯದೆ ಶ್ರೀನಿವಾಸಪ್ಪ ಆಯ್ಕೆಯಾಗಿರುವುದೇ ವಿವಾದದ ಮೂಲ. ಮೂಲಗಳ ಪ್ರಕಾರ, ಶ್ರೀನಿವಾಸಪ್ಪ ಅವರ ನೇಮಕದ ವೇಳೆ, ನಾಗೇಂದ್ರ ಸ್ವಾಮಿಯವರ ಸಂದರ್ಶನವೇ ನಡೆದಿಲ್ಲ. ಇದನ್ನೇ ಪ್ರಶ್ನಿಸಿ ನಾಗೇಂದ್ರ ಸ್ವಾಮಿ ಸಿಎಟಿ ಮೊರೆ ಹೋಗಿದ್ದಾರೆ.
ಸಿಎಟಿಯಲ್ಲಿ ಹಲವು ತಿಂಗಳುಗಳಿಂದ ವಿಚಾರಣೆ ನಡೆಯುತ್ತಿದೆ. ಯಾವುದೇ ದಿನ ತೀರ್ಪು ಹೊರಬೀಳಬಹುದು. ಸೆನ್ಸಾರ್ ಮಂಡಳಿಯಲ್ಲಿ ಏನೇನೆಲ್ಲ ನಡೆಯುತ್ತಿದೆ ಅನ್ನೋದಕ್ಕೆ ಇದೊಂದು ಸಣ್ಣ ಉದಾಹರಣೆ ಮಾತ್ರ.
Related Articles :-