Print 
kfcc, kfcc donations km veeresh siddaganga mutt,

User Rating: 0 / 5

Star inactiveStar inactiveStar inactiveStar inactiveStar inactive
 
kfcc donates 5 lakhs to siddaganga mutt
KFCC DOnates 5 Lakhs To Siddaganga Mutt

ಸಿದ್ಧಗಂಗೆಯ ಅನ್ನ ದಾಸೋಹದಲ್ಲಿ ಕೈ ಜೋಡಿಸಿದವರು ಲಕ್ಷ ಲಕ್ಷ ಭಕ್ತರು. ಚಿತ್ರರಂಗದಲ್ಲಿಯೂ ಅಂತಹ ನೂರಾರು ಜನರಿದ್ದಾರೆ. ಅಂತಹ ಭಕ್ತರಲ್ಲಿ ಫಿಲಂ ಚೇಂಬರ್ ಕೂಡಾ ಇದೆ. ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾದ ನಂತರ ಚೇಂಬರ್ ಸದಸ್ಯರು ಸಿದ್ಧಗಂಗೆಯ ಸ್ವಾಮಿಗಳ ಗದ್ದುಗೆಗೆ ಭೇಟಿ ಕೊಟ್ಟರು. ಶ್ರೀಗಳ ಗದ್ದುಗೆಗೆ ಪುಷ್ಪನಮನ ಸಲ್ಲಿಸಿ ಪ್ರಾರ್ಥಿಸಿದರು.

ಫಿಲಂ ಚೇಂಬರ್ ಅಧ್ಯಕ್ಷ ಚಿನ್ನೇಗೌಡರೊಂದಿಗೆ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಹಾಗೂ ಚೇಂಬರ್‍ನ ಪದಾಧಿಕಾರಿಗಳಾದ ಕೆ.ಎಂ.ವೀರೇಶ್, ಭಾಮಾ ಹರೀಶ್, ಕರಿಸುಬ್ಬು, ಕೆ.ವಿ.ಚಂದ್ರಶೇಖರ್, ಜಯರಾಜ್, ಎನ್.ಎಂ.ಸುರೇಶ್, ಗದ್ದುಗೆಯಲ್ಲಿ ಪೂಜೆ ಸಲ್ಲಿಸಿದರು.

ಸಿದ್ಧಗಂಗೆಯ ಶ್ರೀಗಳಾದ ಸಿದ್ಧಲಿಂಗ ಸ್ವಾಮಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಮಠದ ಅನ್ನದಾಸೋಹಕ್ಕೆ ಚೇಂಬರ್ ವತಿಯಿಂದ 5 ಲಕ್ಷ ರೂ. ದೇಣಿಗೆ ನೀಡಿದರು.