` Flash Back - chitraloka.com | Kannada Movie News, Reviews | Image
tamannah shakes leg with yash

User Rating: 5 / 5

Star activeStar activeStar activeStar activeStar active

ಕೆಜಿಎಫ್ ಚಿತ್ರಕ್ಕೆ ಐಟಂ ಸಾಂಗ್‍ಗೆ ತಮನ್ನಾ ಹೆಜ್ಜೆ ಹಾಕುತ್ತಿದ್ದಾರೆ. ಶೂಟಿಂಗ್ ನಡೆಯುತ್ತಿದೆ. ಅದೂ.. ಕನ್ನಡದ ಸೂಪರ್ ಹಿಟ್ ಸಾಂಗ್ ಜೋಕೆ.. ನಾನು ಬಳ್ಳಿಯ ಮಿಂಚು ಹಾಡಿನ ರೀಮಿಕ್ಸ್ ಸಾಂಗ್. ಬಳ್ಳಿಯ ಮಿಂಚಿನಂತೆಯೇ ಬಳುಕುವ ತಮನ್ನಾ, ಈ ಹಾಡಿನಲ್ಲಿ ಹೆಜ್ಜೆ ಹಾಕಿರುವುದು ರಾಕಿಂಗ್ ಸ್ಟಾರ್ ಯಶ್ ಜೊತೆ.

ತಮನ್ನಾ ನೃತ್ಯದ ಹೆಜ್ಜೆಗಳಿಗೆ ಕೆಜಿಎಫ್ ತಂಡ ಥ್ರಿಲ್ಲಾಗಿ ಹೋಗಿದೆ. ಯಶ್ ಕೂಡಾ ಒಳ್ಳೆಯ ಡ್ಯಾನ್ಸರ್. ಇಬ್ಬರೂ ಅದ್ಭುತವಾಗಿ ಸ್ಟೆಪ್ ಹಾಕುತ್ತಿದ್ದು, ಹಾಡು ಅದ್ಭುತವಾಗಿ ಮೂಡಿ ಬರುತ್ತಿದೆಯಂತೆ.

ಹೊಂಬಾಳೆ ಫಿಲಂಸ್‍ನಲ್ಲಿ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರ, ಹೆಚ್ಚೂ ಕಡಿಮೆ 2 ವರ್ಷಗಳಿಂದ ಶೂಟಿಂಗ್‍ನಲ್ಲಿದೆ. ಮಿನರ್ವ ಹಾಲ್‍ನಲ್ಲಿ ಹಳೇ ಕಾಲದ ಪಬ್ ಸೆಟ್ ಹಾಕಲಾಗಿದ್ದು, ಹಾಡಿಗೆ ಜಾನಿ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ.

ಜೋಕೆ ಸಾಂಗ್ ಚಿತ್ರೀಕರಣದಲ್ಲಿ ಯಶ್ ಜೊತೆ ಭಾಗಿಯಾಗಿದ್ದೇನೆ. ಚಿತ್ರತಂಡದ ಜೊತೆ ಮನೆಯವರ ಜೊತೆ ಇರುವಷ್ಟೇ ಖುಷಿಯಾಗಿದ್ದೇನೆ. ಕೆಲವೇ ದಿನಗಳಲ್ಲಿ ಕೆಜಿಎಫ್ ಚಿತ್ರವನ್ನು ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ನೋಡಿ ಎಂದು ಟ್ವೀಟ್ ಮಾಡಿದ್ದಾರೆ ತಮನ್ನಾ.

loud speaker to release tomorrow

User Rating: 0 / 5

Star inactiveStar inactiveStar inactiveStar inactiveStar inactive

ಒಂದ್ಸಲ ಲೌಡ್ ಸ್ಪೀಕರ್ ಆನ್ ಮಾಡಿ. ಹಾಗೆಯೇ ಮಾತಾಡ್ತಾ ಹೋಗಿ.. ಏನೇನೆಲ್ಲ ಆಗುತ್ತೆ ಅನ್ನೊದನ್ನ ಕಲ್ಪನೆ ಮಾಡಿಕೊಳ್ಳಿ... ಇದು ಚಿತ್ರದ ಒನ್‍ಲೈನ್ ಸ್ಟೋರಿ. ಉಳಿದಂತೆ ಚಿತ್ರದಲ್ಲಿ ಡಾರ್ಕ್ ಕಾಮಿಡಿ ಬ್ಯಾಕ್‍ಗ್ರೌಂಡ್‍ನಲ್ಲಿ ಬರುತ್ತಿರುವ ಸಿನಿಮಾ. ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಕಥೆಯನ್ನು ಸುಂದರವಾಗಿ ತೆರೆಗೆ ತಂದಿರೋದು ಶಿವ ತೇಜಸ್.

ಚಿತ್ರದ ನಾಯಕಿ ನಟಿ ಡಾ.ದಿಶಾ ದಿನಕರ್. ವಿಶೇಷ ಅಂದ್ರೆ, ಅವರು ವೃತ್ತಿಯಲ್ಲಿಯೂ ಡಾಕ್ಟರ್. ಚಿತ್ರದಲ್ಲಿಯೂ ಡಾಕ್ಟರ್. ಹಿಗಾಗಿ ಪಾತ್ರ ಮಾಡೋದು ಕಷ್ಟವಾಗಲಿಲ್ಲ ಅಂತಾರೆ ಡಾ. ದಿಶಾ.

ಮೂವರು ಹೀರೋಗಳು, ಮೂವರು ಹೀರೋಯಿನ್ ಇರುವ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿರೋದು ಸುಮಂತ್ ಭಟ್. ದತ್ತಣ್ಣ ಮತ್ತು ರಂಗಾಯಣ ರಘುರಂತಹ ಹಿರಿಯರೂ ಚಿತ್ರದಲ್ಲಿದ್ದಾರೆ.

ಪ್ರತಿಯೊಬ್ಬರ ಫೋನ್ ಪ್ರತಿಯೊಬ್ಬರ ಪರ್ಸನಲ್ ಖಜಾನೆ. ಆ ಖಜಾನೆ ಓಪನ್ ಆದರೆ, ನಮ್ಮ ರಹಸ್ಯಗಳು ಹೊರ ಜಗತ್ತಿಗೆ ಗೊತ್ತಾಗಿಬಿಟ್ಟರೆ.. ವಾಟ್ ನೆಕ್ಸ್ಟ್ ಅನ್ನೊದೇ ಚಿತ್ರದ ಕಥೆಯ ಥೀಮ್.

raghavendra rajkumar returns to screen

User Rating: 0 / 5

Star inactiveStar inactiveStar inactiveStar inactiveStar inactive

15 years after he last appeared in a movie Raghavendra Rajkumar is all set to act in a new film. The new film is directed by Nikhil Manju and will go on the floors on August 15 which is also Raghvendra Rajkumar's birthday.

The title of the film is Ammana Mane. The film is about a son's struggle to save his mother. The photoshoot for the film is scheduled today and tomorrow. The film will be shot in a single schedule and will be ready for release by the year end.

Manju, who has won national awards is also an accomplished actor who was last seen in Hasiru Ribbon last month.

radhika kumaraswamy to act as damayanti

User Rating: 0 / 5

Star inactiveStar inactiveStar inactiveStar inactiveStar inactive

ಚಿತ್ರನಟಿ ರಾಧಿಕಾ ಕುಮಾರಸ್ವಾಮಿ, ದಮಯಂತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಧಿಕಾ ಅವರನ್ನ ದಮಯಂತಿ ಮಾಡೋಕೆ ಹೊರಟಿರುವುದು ನಿರ್ದೇಶಕ ನವರಸನ್. ಈ ಹಿಂದೆ ರಾಕ್ಷಸಿ, ವೈರ ಚಿತ್ರಗಳನ್ನು ನಿರ್ದೇಶಿಸಿದ್ದವರು. ಇದು ತೆಲುಗಿನಲ್ಲಿ ಬಂದಿದ್ದ ಅರುಂಧತಿ, ಭಾಗ್‍ಮತಿ ಮಾದರಿಯ ಚಿತ್ರ. ಮೊದಲು ಕನ್ನಡದಲ್ಲಿ ಮಾಡಿ, ನಂತರ ತೆಲುಗು, ತಮಿಳಿನಲ್ಲಿಯೂ ಮಾಡುವ ಆಲೋಚನೆ ಇದೆ ಎಂದಿದ್ದಾರೆ ನವರಸನ್.

ಚಿತ್ರದಲ್ಲಿ ರಾಧಿಕಾ ಎರಡು ಶೇಡ್‍ಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ನಿರ್ಮಾಣದ ಹೊಣೆಯನ್ನೂ ಹೊತ್ತಿರುವ ನವರಸನ್, ಈ ಬಾರಿ ನಟನೆಗೆ ಮಂದಾಗಿಲ್ಲ. ಚಿತ್ರದ ಕಥೆ ಕೇಳಿ ರಾಧಿಕಾ ತಕ್ಷಣ ಒಪ್ಪಿಕೊಂಡಿದ್ದಾರಂತೆ. ಈಗಾಗಲೇ ಭೈರಾದೇವಿ ಚಿತ್ರದಲ್ಲಿ ರಮೇಶ್ ಅರವಿಂದ್ ಜೊತೆ, ಅರ್ಜುನ್ ಸರ್ಜಾ ಜೊತೆ ಕಾಂಟ್ರ್ಯಾಕ್ಟ್ ಚಿತ್ರದಲ್ಲಿ ನಟಿಸುತ್ತಿರುವ ರಾಧಿಕಾ, ಈಗ ದಮಯಂತಿಯಾಗುತ್ತಿದ್ದಾರೆ.

aa karala ratri is reviewd by sudeep

User Rating: 0 / 5

Star inactiveStar inactiveStar inactiveStar inactiveStar inactive

ಒಂದು ಅಚ್ಚುಕಟ್ಟಾದ ದೋಷಗಳೇ ಇಲ್ಲದ "ಆ ಕರಾಳ ರಾತ್ರಿ" ಎಂಬ ಚಿತ್ರವನ್ನು ನೋಡಿದೆ. ಈ ಚಿತ್ರ ನೊಡೋಕೆ ನಟ ಜೆ.ಕೆ. ಬಹಳ ದಿನಗಳಿಂದ ನನಗೆ ಒತ್ತಾಯ ಮಾಡ್ತಾ ಇದ್ದ. ಸಮಯದ ಅಭಾವ ನೋಡೋಕೆ ಆಗಿರ್ಲಿಲ್ಲಾ. ಆದರೆ ನಿಜ ಹೇಳ್ತೀನಿ ಸಮಯ ಮಾಡ್ಕೊಂಡು ಸಿನಿಮಾ ನೋಡಿದ್ದಕ್ಕೂ ಸಾರ್ಥಕವಾಯ್ತು. ಯಾಕೆ ಅಂದ್ರೇ ಒಂದು ಚಿಕ್ಕ ಕಥೆಯನ್ನು ಬಹಳ ಪರಿಣಾಮಕಾರಿಯಾಗಿ ತೆರೆಗೆ ತಂದಿರುವ ಚಿತ್ರ ಇದು. 

ಒಂದೇ ಜಾಗದಲ್ಲಿ ಕಥೆ ನಡೆದರೂ ಚಿತ್ರಕಥೆ ಮತ್ತು ಪಾತ್ರಗಳು ನಿಮ್ಮನ್ನು ಒಂದು ರೋಮಾಂಚಕಾರಿ ಪ್ರಯಾಣದ ಅನುಭವ ನೀಡುತ್ತದೆ. ಹೌದು ಆ ಪ್ರಯಾಣ ಕುರ್ಚಿಯ ಹಿಂದೆ ಕೂತಿರುವ ನಿಮ್ಮನ್ನು ಕುರ್ಚಿಯ ತುತ್ತ-ತುದಿಗೆ ತಂದು ಕೂರಿಸುವಷ್ಟು ಪರಿಣಾಮಕಾರಿಯಾಗಿದೆ. ಪ್ರತೀ ಕ್ಷಣ ನೀವು ಕಥೆಯ ಒಂದು ಭಾಗವಾಗಿ ನಿಮ್ಮ ಮುಂದೆಯೇ ಕಥೆ ನಡೆಯುತ್ತಿದೆ ಅನ್ನುವಷ್ಟರ ಮಟ್ಟಿಗೆ ನಿಮ್ಮನ್ನು ಒಳಗೆ ಸೆಳೆಯುತ್ತದೆ. ಇದು ಸಾಧ್ಯವಾಗಿದ್ದು ಚಿತ್ರಕಥೆ, ಸಂಭಾಷಣೆ, ಪಾತ್ರಗಳು, ಅಭಿನಯ ಮತ್ತು ತಂತ್ರಜ್ಞರ ಪರಿಪೂರ್ಣ ಶ್ರಮದಿಂದ.

ಪ್ರತಿಯೊಬ್ಬ ಕಲಾವಿದನೂ ಎಲ್ಲಿಯೂ ಅಭಿನಯಿಸಿಲ್ಲ... ಜೀವಿಸಿದ್ದಾರೆ! ತಾವೇ ಪಾತ್ರವಾಗಿ ವಿಜೃಂಭಿಸಿದ್ದಾರೆ. ಯಾವೊಬ್ಬ ಕಲಾವಿದನೂ ವಿನಾಕಾರಣ ತನ್ನ ಅಸ್ತಿತ್ವವನ್ನು ಹೇರಲು ಪ್ರಯತ್ನಿಸಿಲ್ಲ. 

ರಂಗಾಯಣ ರಘು... ಕನ್ನಡ ಚಿತ್ರರಂಗ ಕಂಡ ಅದ್ಭುತ ಕಲಾವಿದ ಹಾಗೂ ನನ್ನ ನೆಚ್ಚಿನ ಕ್ರಿಯಾಶೀಲ ಕಲಾವಿದ. ತಮ್ಮ ನೈಜ ಅಭಿನಯದಿಂದ ಮತ್ತೊಮ್ಮೆ ಅದನ್ನು ಸಾಬೀತುಪಡಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಇವರು ಅತಿದೊಡ್ಡ ಉಡುಗೊರೆ. 

ಎಂಥಹ ಪಾತ್ರಗಳೇ ಆದರೂ ಅದನ್ನು ಲೀಲಾಜಾಲವಾಗಿ ಅಭಿನಯಿಸುವ ಕಲಾವಿದೆ ವೀಣಾ ಸುಂದರ್. ಮಾಣಿಕ್ಯ ಚಿತ್ರದಲ್ಲೇ ಒಂದು ಸಣ್ಣ ಪಾತ್ರಕ್ಕೆ ಆಕೆ ಜೀವ ತುಂಬಿದ್ದು ನೋಡಿ ನಾನು ಬೆರಗಾಗಿದ್ದೆ. ನಿಜವಾಗಲೂ ಅತ್ಯುತ್ತಮ ಕಲಾವಿದೆ. 

ಅನುಪಮ ತಿಂದು ಬಿಸಾಕಿದ್ದಾರೆ....ಅಬ್ಬಾ....100 ಚಿತ್ರಗಳ ಅನುಭವ ಇರುವ ನಟಿಯಂತೆ ಅಮೋಘ ಅಭಿನಯ ನೀಡಿದ್ದಾರೆ ...ಒಂದು ಕಷ್ಟಕರವಾದ ಪಾತ್ರವನ್ನು ನಾಜೂಕಾಗಿ ನಿಭಾಯಿಸಿದ್ದಾರೆ...ಆಕೆಯ ಪ್ರತಿಭೆಗೆ ಇನ್ನಷ್ಟು ಪ್ರೋತ್ಸಾಹ ಖಂಡಿತವಾಗಲೂ ಸಿಗಲೆ ಬೇಕೂ...ಆಕೆಗೆ ನನ್ನ ಅಭಿನಂದನೆಗಳು

ಜೆ.ಕೆ. ...ನೋಡಿ ನಿಜವಾಗಲೂ ಆಶ್ಚರ್ಯವಾಯಿತು...ಆತ ಮಾಡಿರುವ ಸುಮಾರು ಪತ್ರಗಳನ್ನು ನಾನು ನೋಡಿದ್ದೇನೆ...ಆದರೆ ಇದು ತನ್ನ ವೃತ್ತಿ ಜೀವನದ ಬೆಸ್ಟ್....ಆತನ ನೋಟ ...ದೇಹ....ಪಾತ್ರಕ್ಕೆ ನ್ಯಾಯ ಒದಗಿಸಿದೆ....ಕನ್ನಡಕದಿಂದ ಹಿಡಿದು ಆತ ಹಾಕಿರುವ ಗೋಲ್ಡ್ ಚೆಯ್ನ್ ... ಆತನ ಉಡುಗೆ ....ನನಗೆ ನನ್ನ ನಿರ್ಮಾಪಕ ಮಿತ್ರರೊಬ್ಬರನ್ನು ನೆನಪಿಸಿತು....ಬಹುಷಹ ಈ ಚಿತ್ರಕ್ಕೆ ಅವರ "ಅರ್ಪಣೆ" ಪಾತ್ರಕ್ಕೂ "ಅರ್ಪಿತ" ವಾಗಿದೆ....ಹ ಹ ಹ....

ಆತನ ಪಾತ್ರವು ನಮಗೆ ಕುತೂಹಲ ಮೂಡಿಸಿರುವುದರ ಜೊತೆಗೆ ಥ್ರಿಲ್ ಅನ್ನು ನೀಡುತ್ತದೆ....ಕೊನೆಯ ಹಂತ ತಲುಪುವಷ್ಟರಲ್ಲೀ ಈ ಪಾತ್ರದ ಮೇಲೆ ನಿಮಗೆ ಲವ್ ಆಗಿರುತ್ತದೆ....ಕಮ್ಮರ್ಷಿಯಲ್ ಪಾತ್ರವಲ್ಲದಿದ್ದರೂ ಇಂಥ ಪಾತ್ರ ಒಪ್ಪಿ ನಿಭಯಿಸಿರುವುದಕ್ಕೆ ಜೆ.ಕೆ. ...ಅಭಿನಂದನಾರ್ಹ... ಇನ್ನೂ ಬೆಳೆಯುತ್ತೀರೀ ಜೆ.ಕೆ....

ಒಂದು ಮಾತು ದಯಾಳ್ ಬಗ್ಗೆ...... ಈ ಚಿತ್ರದಲ್ಲಿ ನನಗೆ ಅತಿದೊಡ್ಡ ಆಶ್ಚರ್ಯ ಎಂದರೆ ಅದು ದಯಾಳ್... ನಿರ್ದೇಶನದಲ್ಲಿ ಈ ಬಾರಿ ಈತ ಅತ್ಯುತ್ತಮ. ತಪ್ಪುಗಳು ಕಾಣಿಸುತ್ತೆ ಅಂತಾನೇ "ಮೈಕ್ರೋಸ್ಕೋಪ್ ಝೂಮ್" ಹಾಕಿ ಕುಳಿತೆ, ಆದರೆ ನನ್ನ "ಮೈಕ್ರೊಸ್ಕೋಪ್" ಕಾಣಿಸಲೇ ಇಲ್ಲಾ... ಅಷ್ಟು ಅಚ್ಚುಕಟ್ಟು.

ಶುಭಾಶಯಗಳು ದಯಾಳ್, ಒಬ್ಬ ತಂತ್ರಜ್ಞನಾಗಿ ನಿಮ್ಮ ತಾಂತ್ರಿಕತೆಯ ಮೇಲೆ ನನ್ನ ಗೌರವ ಅಪಾರವಾಗಿ ಇಮ್ಮಡಿಗೊಳಿಸಿದೆ.

ಸಂಗೀತ ನಿರ್ದೇಶಕ ನಾರಾಯಣ್ ಹಿನ್ನೆಲೆ ಸಂಗೀತದ ಮುಖಾಂತರ ಚಿತ್ರ ಮುಕ್ತಾಯಗೊಳ್ಳುವಷ್ಟರಲ್ಲಿ ತಾವೇ ಚಿತ್ರದ ನಾಯಕನಾಗಿ ವಿಜೃಂಭಿಸುತ್ತಾರೆ.

ಪಿ.ಕೆ.ಹೆಚ್. ದಾಸ್ ಅವರ ಬಗ್ಗೆ ನಾನೇನೂ ಹೇಳಬೇಕಿಲ್ಲಾ. ಆತ ಈ ಚಿತ್ರದ ಬಹು ದೊಡ್ಡ ಶಕ್ತಿ. ಚಿಕ್ಕ ಬಡ್ಜೆಟ್ ನಿರ್ಧಿಷ್ಟ ದಿನಗಳು ಒಂದೇ ಲೊಕೇಷನ್ ಆದರೂ ತೆರೆಯ ಮೇಲೆ ಅವರ ಕೈಚಳಕ ಅದ್ಭುತ.

ಸ್ವಲ್ಪವೂ ನಿರೀಕ್ಷೆಯಿಲ್ಲದೇ ಕುಳಿತುಕೊಂಡೆ ಚಿತ್ರ ಮುಗಿದ ಮೇಲೆ ಪರಿಪೂರ್ಣತೆಯ ಭಾವದಿಂದ ಹೊರಗೆ ಬಂದೆ. 

ಎಲ್ಲರೂ ಈ ಚಿತ್ರವನ್ನು ನೋಡಿ ನನ್ನ ಅನುಭವವನ್ನು ನಿಮ್ಮ ಅನುಭವವಾಗಿಸಿಕೊಳ್ಳಿ ಎಂದು ಕೇಳಿಕೊಳ್ಳುತ್ತೇನೆ.

ನಿಮಗೆ ಸಂತೃಪ್ತ ಅನುಭವ ಈ ಚಿತ್ರವು ನೀಡುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲಾ. 

"ಅಬ್ಭಾ ಎಂಥಹ ಅದ್ಭುತ ಚಿತ್ರ"

ನಿಮ್ಮ ಕಿಚ್ಚ ಸುದೀಪ್

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery