` Flash Back - chitraloka.com | Kannada Movie News, Reviews | Image
ayogya is sathish's biggest film

User Rating: 0 / 5

Star inactiveStar inactiveStar inactiveStar inactiveStar inactive

ನೀನಾಸಂ ಸತೀಶ್ ಅವರ ಈ ಹಿಂದಿನ ಎಲ್ಲ ಚಿತ್ರಗಳಿಗಿಂತ ಅಯೋಗ್ಯ ಸ್ಪೆಷಲ್. ಏಕೆ ಗೊತ್ತಾ..? ಇಷ್ಟು ದೊಡ್ಡ ಮಟ್ಟದಲ್ಲಿ ಸತೀಶ್ ಅವರ ಹಿಂದಿನ ಯಾವ ಸಿನಿಮಾಗಳೂ ತೆರೆ ಕಂಡಿರಲಿಲ್ಲ. 

ಕರ್ನಾಟಕದಲ್ಲೇ 300ಕ್ಕೂ ಹೆಚ್ಚು ಸ್ಕ್ರೀನ್‍ಗಳಲ್ಲಿ ಅಯೋಗ್ಯ ರಿಲೀಸ್ ಆಗುತ್ತಿದೆ. ದೇಶದ 16 ರಾಜ್ಯಗಳಲ್ಲಿ ಹಾಗೂ 66 ದೇಶಗಳಲ್ಲಿಏಕಕಾಲಕ್ಕೆ ರಿಲೀಸ್ ಆಗುತ್ತಿರುವುದು ಅಯೋಗ್ಯನ ದಾಖಲೆ.

ಸಿನಿಮಾ ಶುರುವಾಗಿ ಹೆಚ್ಚೂ ಕಡಿಮೆ 1 ವರ್ಷವಾಗಿದೆ. ಚಿತ್ರದ 4 ಹಾಡುಗಳೂ ಹಿಟ್ ಆಗಿವೆ. ಸಾಮಾನ್ಯವಾಗಿ ಸಿನಿಮಾದ ಒಂದು ಹಾಡು ಹಿಟ್ ಆದರೆ ಸಾಕು, ಚಿತ್ರತಂಡ ಹ್ಯಾಪಿಯಾಗಿಬಿಡುತ್ತೆ. ಆದರೆ, ಅಯೋಗ್ಯನ 4 ಹಾಡುಗಳೂ ಹಿಟ್ ಆಗಿರುವುದು ಚಿತ್ರತಂಡಕ್ಕೆ ಡಬಲ್ ಖುಷಿ. ಜೊತೆಗೆ ಚಿತ್ರದ ಮೂಲಕ ಸತೀಶ್, ಮತ್ತೊಮ್ಮೆ ಮಂಡ್ಯ ಸ್ಟೈಲ್‍ಗೆ ವಾಪಸ್ ಆಗಿದ್ದಾರೆ.

ಸಿನಿಮಾದಲ್ಲಿರೋದು ಹಳ್ಳಿಯ ಕಥೆ. ಬಚ್ಚೇಗೌಡ ಮತ್ತು ಸಿದ್ದೇಗೌಡ ಎಂಬ ಇಬ್ಬರ ಫೈಟಿಂಗ್ ಸ್ಟೋರಿ. ರವಿಶಂಕರ್ ಮತ್ತು ನೀನಾಸಂ ಸತೀಶ್... ಮುಖಾಮುಖಿಯಾಗಿರೋದು ಇದೇ ಮೊದಲು. ರಚಿತಾ ರಾಮ್ ಜೊತೆ ನೀನಾಸಂ ಸತೀಶ್ ಕೂಡಾ ಇದೇ ಮೊದಲು. ನಿರ್ದೇಶಕ ಮಹೇಶ್ ಕುಮಾರ್‍ಗೆ ಇದು ಫಸ್ಟ್ ಸಿನಿಮಾ. 

ನಿರ್ಮಾಪಕ ಟಿ.ಆರ್.ಚಂದ್ರಶೇಖರ್, ಅಯೋಗ್ಯ ಚಿತ್ರದ ಕಥೆಯನ್ನು ಇಷ್ಟಪಟ್ಟು, ಅದ್ಧೂರಿಯಾಗಿ ನಿರ್ಮಿಸಿರುವ ಜೊತೆಯಲ್ಲೇ ಅದ್ಧೂರಿಯಾಗಿ ತೆರೆಗೂ ತರುತ್ತಿದ್ದಾರೆ.

haripriya's reel character resembles real character

User Rating: 0 / 5

Star inactiveStar inactiveStar inactiveStar inactiveStar inactive

ಲೈಫ್ ಜೊತೆ ಒಂದು ಸೆಲ್ಫಿ ಚಿತ್ರದ ನಾಯಕಿ ಹರಿಪ್ರಿಯಾ. ಚಿತ್ರದಲ್ಲಿನ ಅವರ ಪಾತ್ರ, ಹರಿಪ್ರಿಯಾಗೆ ಖುಷಿ ಕೊಡೋಕೆ ಕಾರಣಗಳಿವೆ. ಏಕೆಂದರೆ, ರಿಯಲ್ ಹರಿಪ್ರಿಯಾಗೂ, ಸೆಲ್ಫಿ ಚಿತ್ರದ ರೀಲ್ ಹರಿಪ್ರಿಯಾಗೂ ಸಾಕಷ್ಟು ಹೋಲಿಕೆಗಳಿವೆ. ಹರಿಪ್ರಿಯಾಗೆ ಖುಷಿ ಕೊಟ್ಟಿರುವುದೇ ಅದು.

ಹರಿಪ್ರಿಯಾ ಸಿಕ್ಕಾಪಟ್ಟೆ ಮಾತಾಡ್ತಾರೆ. ಅಷ್ಟೇ ಫನ್ನಿ ಫನ್ನಿಯಾಗಿರ್ತಾರೆ. ತಮಾಷೆ ಮಾಡ್ಕೊಂಡ್ ಕಾಲ ಕಳೀತಾರೆ. ಅಷ್ಟೆಲ್ಲದರ ಮಧ್ಯೆ ಅಷ್ಟೇ ಸೀರಿಯಸ್ ಆಗಿ ಯೋಚನೆಯನ್ನೂ ಮಾಡ್ತಾರೆ. ರಿಯಲ್ ಹರಿಪ್ರಿಯಾಗೂ, ರೀಲ್ ರಶ್ಮಿ ಪಾತ್ರಕ್ಕೂ ಇರುವುದು ಇಂಥವೇ ಹೋಲಿಕೆ. ಹರಿಪ್ರಿಯಾಗೆ ಸುತ್ತೋದು, ಟ್ರಾವೆಲ್ ಮಾಡೋದು ಅಂದ್ರೆ ತುಂಬಾ ಇಷ್ಟ. ಚಿತ್ರದ ರಶ್ಮಿ ಪಾತ್ರವೂ ಹಾಗೆಯೇ.. ಟ್ರಾವೆಲ್ ಮಾಡ್ತಾನೆ ಇರುತ್ತೆ. ಸೆಲ್ಫಿ ಚಿತ್ರದ ಪಾತ್ರದಂತೆಯೇ ರಿಯಲ್ ಹರಿಪ್ರಿಯಾ ಕೂಡಾ ಮಾನಸಿಕವಾಗಿ ಧೈರ್ಯವಂತೆ.

ಒಟ್ಟಿನಲ್ಲಿ ಈ ಸಿನಿಮಾದಲ್ಲಿ ನಾನು, ನಾನಾಗಿಯೇ ಕಾಣಿಸಿಕೊಂಡಿದ್ದೇನೆ. ಮಾನಸ ತೂಗುದೀಪ್, ಚೆಂದದ ಕಥೆ ಮಾಡಿಕೊಂಡಿದ್ದರು. ಅದರ ಹಿನ್ನೆಲೆಯೇ ಸೊಗಸಾಗಿತ್ತು. ದಿನಕರ್ ಬಂದು ನನಗೆ ನನ್ನ ಪಾತ್ರದ ಬಗ್ಗೆ ಮಾತ್ರ ಹೇಳಿದ್ರು. ನನಗೂ ಅದು ನನ್ನ ಬದುಕಿಗೆ ಹತ್ತಿರ ಎನಿಸಿ ಒಪ್ಪಿಕೊಂಡೆ ಎಂದು ಹೇಳಿಕೊಂಡಿದ್ದಾರೆ ಹರಿಪ್ರಿಯಾ. ಹರಿಪ್ರಿಯಾಗೆ ಪ್ರಜ್ವಲ್ ಮತ್ತು ಪ್ರೇಮ್ ಜೋಡಿಯಾಗಿದ್ದಾರೆ. ಚಿತ್ರ ತೆರೆಗೆ ಬರೋಕೆ ಸಿದ್ಧವಾಗಿದೆ.

sruthi hariharn acts with her beau

User Rating: 0 / 5

Star inactiveStar inactiveStar inactiveStar inactiveStar inactive

ಶೃತಿ ಹರಿಹರನ್. ಈ ಕಲಾವಿದೆ ನಟನೆಯಲ್ಲಷ್ಟೇ ಅಲ್ಲ, ಪರ್ಸನಲ್ ಲೈಫ್‍ನಲ್ಲೂ ಬೋಲ್ಡ್ & ಬ್ಯೂಟಿಫುಲ್. ಅವರು ತಮ್ಮ ಲವ್ ಸ್ಟೋರಿಯನ್ನು ಕೂಡಾ ಮುಚ್ಚಿಟ್ಟವರಲ್ಲ. ಪರ್ಸನಲ್ ವಿಚಾರಗಳನ್ನು ಎಷ್ಟು ಬೇಕೋ ಅಷ್ಟು ಹೇಳಿ ಸುಮ್ಮನಿರುವ ಶೃತಿ ಹರಿಹರನ್, ಇದೇ ಮೊದಲ ಬಾರಿಗೆ ತಮ್ಮ ರಿಯಲ್ ಪ್ರಿಯತಮನ ಜೊತೆ ತೆರೆ ಹಂಚಿಕೊಂಡಿದ್ದಾರೆ. ಅಫ್‍ಕೋರ್ಸ್, ಸಿನಿಮಾದಲ್ಲಿ ಅಲ್ಲ, ಮ್ಯೂಸಿಕ್ ಆಲ್ಬಂನಲ್ಲಿ.

ರಾಮ್‍ಕುಮಾರ್ ಅವರ ಜೊತೆ ಸುಮಾರು 8 ವರ್ಷಗಳಿಂದ ಪ್ರೀತಿಯಲ್ಲಿರುವ ಶೃತಿ, ಪ್ರೇಮ ಅನ್ನೋ ವಿಡಿಯೋ ಆಲ್ಬಂನಲ್ಲಿ ಒಟ್ಟಿಗೇ ಕಾಣಿಸಿಕೊಂಡಿದ್ದಾರೆ. ಗೊಮ್ಮಟೇಶ್ ಉಪಾಧ್ಯ ನಿರ್ದೇಶನದ ಆಲ್ಬಂಗೆ ಫಣಿ ಕಲ್ಯಾಣ್ ಸಂಗೀತವಿದೆ.

ರಾಮ್ ಜೊತೆ ನಟಿಸೋಕೆ ಕಷ್ಟವೇನೂ ಆಗಲಿಲ್ಲ. ಅವರ ಜೊತೆ ಮ್ಯೂಸಿಕ್ ಕ್ಲಾಸ್‍ಗಳಲ್ಲಿ ಭಾಗಿಯಾಗಿದ್ದೆ. ಜೊತೆಗೆ 8 ವರ್ಷದ ಪ್ರೀತಿ. ಹೀಗಾಗಿ ಎಲ್ಲವೂ ಸುಲಭವಾಗಿತ್ತು ಎಂದು ಹೇಳಿದ್ದಾರೆ ಶೃತಿ ಹರಿಹರನ್

ayogya director reveals shocking story

User Rating: 0 / 5

Star inactiveStar inactiveStar inactiveStar inactiveStar inactive

ಅಯೋಗ್ಯ... ನಿರ್ದೇಶಕ ಮಹೇಶ್ ಕುಮಾರ್‍ಗೆ ಮೊದಲ ಸಿನಿಮಾ. ನೀನಾಸಂ ಸತೀಶ್, ರಚಿತಾ ರಾಮ್ ಕಾಂಬಿನೇಷನ್‍ನ ಮೊದಲ ಚಿತ್ರ. ಅದ್ಧೂರಿಯಾಗಿ ಬಿಡುಗಡೆಯಾಗುತ್ತಿರುವ ಚಿತ್ರದ ಹಿಂದಿನ ಕಥೆ ಯಾವ ಸಿನಿಮಾಗೂ ಕಮ್ಮಿಯಿಲ್ಲ. ಬೆಚ್ಚಿಬೀಳಿಸುವ ಹಾಗಿದೆ. ನಂಬಿಕೆ, ವಿಶ್ವಾಸ, ವಂಚನೆ, ದ್ರೋಹ, ಆತಂಕ.. ಎಲ್ಲವೂ ಮುಗಿದ ಮೇಲೆ ಸುಖಾಂತ್ಯ. ಅಷ್ಟೂ ಕತೆ ಚಿತ್ರದ ಹಿಂದಿದೆ.

ಅಯೋಗ್ಯ ಚಿತ್ರಕ್ಕೆ ಮೊದಲಿಗೆ ಚಿತ್ರದ ನಿರ್ಮಾಪಕರಾಗಿದ್ದವರು ಟಿ.ಆರ್. ಚಂದ್ರಶೇಖರ್ ಅಲ್ಲ. ಬೇರೊಬ್ಬರು. ಚಿತ್ರಕ್ಕೆ ಮುಹೂರ್ತವೂ ಆಗಿ, ಇನ್ನೇನು ಶೂಟಿಂಗ್ ಶುರುವಾಗಬೇಕು. ಅಷ್ಟು ಹೊತ್ತಿಗೆಆ ನಿರ್ಮಾಪಕರು ಫೋನ್ ಮಾಡಿ, ಶೂಟಿಂಗ್ ಮಾಡಕ್ಕೆ ದುಡ್ಡಿಲ್ಲ ಅಂದುಬಿಟ್ರಂತೆ. ಅದಕ್ಕೂ ಮೊದಲು, ಕಾಸ್ಟ್ಯೂಮ್ ಮಾಡೋಕೆ ನಮ್ಮೂರಿಂದ್ಲೇ ಜನ ಬರ್ತಾರೆ. ಲೈಟಿಂಗೂ ಅವರೇ ಮಾಡ್ತಾರೆ. ಊಟ ಬಡಿಸೋದು, ಸೆಟ್ ಕೆಲಸ ಮಾಡೋದು ಎಲ್ಲ ನಮ್ಮೂರ್ ಹುಡುಗ್ರೇ.. ಎಂದು ಷರತ್ತು ಹಾಕಿದ್ದ ನಿರ್ಮಾಪಕ ಆತ. 

ಚಿತ್ರದ ನಾಯಕ ನೀನಾಸಂ ಸತೀಶ್ ಹತ್ತಿರಾನೇ 50 ಲಕ್ಷ ರೂಪಾಯಿ ಸಾಲ ಕೇಳಿದ್ದ ಆ ನಿರ್ಮಾಪಕ ಕೈ ಎತ್ತಿಬಿಟ್ಟಾಗ ಆತ್ಮಹತ್ಯೆಗೂ ಯೋಚಿಸಿದ್ದರಂತೆ ಮಹೇಶ್. ಆಗ ಸಮಾಧಾನ ಹೇಳಿದ್ದು ಇದೇ ಸತೀಶ್. ಅವರು ಧೈರ್ಯ ಹೇಳಿ, ನಿರ್ಮಾಪಕ ಚಂದ್ರಶೇಖರ್ ಅವರನ್ನು ಪರಿಚಯ ಮಾಡಿಸಿ, ಅವರೂ ಕಥೆ, ತಾರಾಗಣ, ತಂತ್ರಜ್ಞರು.. ಎಲ್ಲದಕ್ಕೂ ಓಕೆ ಎಂದ ಮೇಲೆ, ಹಳೆಯ ನಿರ್ಮಾಪಕರು ಮತ್ತೊಮ್ಮೆ ಕಿರಿಕ್ ಶುರು ಹಚ್ಚಿಕೊಂಡರಂತೆ. ನಾನು ಖರ್ಚು ಮಾಡಿರುವ ಎಲ್ಲ ಹಣ ವಾಪಸ್ ಕೊಡಿ ಎಂದ. ನನಗೆ ಬೇರೆ ದಾರಿಯೇ ಇರಲಿಲ್ಲ. ಸತೀಶ್ ಟೇಬಲ್ ಮೇಲೆ ಆತ್ಮಹತ್ಯೆ ಪತ್ರ ಬರೆದಿಟ್ಟು ಹೋಗಿಬಿಟ್ಟೆ. ಅದು ಅಲ್ಲಿಗೇ ಮುಗಿಯಲಿಲ್ಲ. ಹಳೆಯ ನಿರ್ಮಾಪಕರ ಟೀಂನವರು ಬಂದು ಕಿಡ್ನಾಪ್ ಮಾಡಿ, ದುಡ್ಡಿಗೆ ಡಿಮ್ಯಾಂಡ್ ಇಟ್ರು. ಆಗ ಸತೀಶ್ ಅವರೇ ಬಂದು ಫಿಲಂ ಚೇಂಬರ್‍ಗೆ ಕರೆದುಕೊಂಡು ಹೋಗಿ ಪಂಚಾಯಿತಿ ಮಾಡಿಸಿ ಇತ್ಯರ್ಥ ಮಾಡಿಸಿದ್ರು. ಇದು ಮಹೇಶ್ ಹೇಳಿರುವ ಕಥೆ.

ಅಫ್‍ಕೋರ್ಸ್.. ಈಗ ವಿವಾದ ಮುಗಿದಿದೆ. ನಿರ್ಮಾಪಕ ಚಂದ್ರಶೇಖರ್ ಹೀರೋನಂತೆ ಎಂಟ್ರಿ ಕೊಟ್ಟು, ಸಿನಿಮಾದ ಕ್ಲೈಮಾಕ್ಸ್‍ನಲ್ಲಿ ಎಲ್ಲವೂ ಸುಖಾಂತ್ಯವಾಗಿ ಶುಭಂ ಎಂದು ಬರುವಂತೆಯೇ ಚಿತ್ರತಂಡಕ್ಕೂ ಆಗಿದೆ. ಇನ್ನೇನಿದ್ರೂ ಸಂಭ್ರಮದ ಸಮಯ. ಈ ವಾರ ಸಿನಿಮಾ ರಿಲೀಸ್.

bharathe heroine's surprise talents

User Rating: 0 / 5

Star inactiveStar inactiveStar inactiveStar inactiveStar inactive

ಭರಾಟೆ. ಶ್ರೀಮುರಳಿ-ಚೇತನ್ ಕುಮಾರ್ ಕಾಂಬಿನೇಷನ್ ಸಿನಿಮಾ. ಈ ಚಿತ್ರದ ನಾಯಕಿ ಶ್ರೀಲೀಲಾ. ಅವರಿಗೆ ಇದು 2ನೇ ಸಿನಿಮಾ. ಮೊದಲ ಸಿನಿಮಾ ಕಿಸ್. ಎ.ಪಿ. ಅರ್ಜುನ್ ನಿರ್ದೇಶನದ ಕಿಸ್ ಚಿತ್ರ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವಾಗಲೇ 2ನೇ ಚಿತ್ರ ಸಿಕ್ಕಿದೆ. ಅದೂ ಶ್ರೀಮುರಳಿ ಜೊತೆ ನಾಯಕಿಯಾಗಿ. ಅದಕ್ಕಿಂತ ಬೆರಗು ಹುಟ್ಟಿಸುವುದು ಶ್ರೀಲೀಲಾರ ಸಾಧನೆಗಳು. 

ಶ್ರೀಲೀಲಾ ಮೂರೂವರೆ ವರ್ಷದ ಹುಡುಗಿಯಾಗಿದ್ದಾಗಿನಿಂದ ಶಾಸ್ತ್ರೀಯ ಸಂಗೀತ, ನೃತ್ಯದ ತರಬೇತಿ ಪಡೆದಿದ್ದಾರೆ. ಬ್ಯಾಲೆ ನೃತ್ಯದ ತರಬೇತಿಯೂ ಆಗಿದೆ. 8ನೇ ವಯಸ್ಸಿಗೇ ರಂಗ ಪ್ರವೇಶ ಮಾಡಿರುವ ಶ್ರೀಲೀಲಾ, ಸತತ ಎರಡೂವರೆ ಗಂಟೆ ಶಾಸ್ತ್ರೀಯ ನೃತ್ಯ ಪ್ರದರ್ಶನ ನೀಡಿದ್ದಾರೆ.

ಶ್ರೀಲೀಲಾ ಕುದುರೆ ಸವಾರಿ ಚೆನ್ನಾಗಿ ಮಾಡ್ತಾರೆ. ಈಜಿಗೆ ಬಿದ್ದರೆ ಮೀನಿನಂತೆ ಈಜುತ್ತಾರೆ. ರನ್ನಿಂಗ್ ರೇಸ್‍ನಲ್ಲಿ ಕಾಲೇಜಿಗೆ ಹಲವು ಪದಕಗಳನ್ನು ಗೆದ್ದು ಕೊಟ್ಟಿರುವ ಕೀರ್ತಿ ಶ್ರೀಲೀಲಾಗೆ ಇದೆ. ಹಾಕಿ ಸ್ಟಿಕ್ ಆಡಿದರೆ, ಅಲ್ಲಿಯೂ ಸೈ ಎನ್ನಿಸಿಕೊಳ್ತಾರೆ ಶ್ರೀಲೀಲಾ.

ಇಷ್ಟೆಲ್ಲ ಆಡ್ತಾರೆ ಅಂದ್ರೆ, ಓದಿನಲ್ಲಿ ಡಲ್ ಇರಬೇಕು ಅಂದ್ಕೊಂಡ್ರಾ.. ನೋ ಚಾನ್ಸ್. ಶ್ರೀಲೀಲಾ ಅವರ ಮಾರ್ಕುಗಳಲ್ಲಿ ಅತೀ ಕಡಿಮೆ 100/85. ಶೇ.85ಕ್ಕಿಂತ ಕಡಿಮೆ ಮಾರ್ಕು ತೆಗೆದವರೇ ಅಲ್ಲ ಶ್ರೀಲೀಲಾ.

ನಿಮಗೆ ಎ.ಬಿ.ಡಿವಿಲಿಯರ್ಸ್ ನೆನಪಾದ್ರಾ..? ಅವರೂ ಹಾಗೇ.. ಕ್ರಿಕೆಟ್, ಆಥ್ಲೆಟ್, ಕುಸ್ತಿ ಪಟು, ರಗ್ಬಿ, ಈಜು, ಬೇಸ್‍ಬಾಲ್, ಸಿಂಗರ್, ಮ್ಯೂಸಿಕ್ ಡೈರೆಕ್ಟರ್ ಎಲ್ಲವೂ ಆಗಿರುವವರು. ಸ್ಸೋ.. ಶ್ರೀಲೀಲಾರನ್ನು ಚಿತ್ರಂಗದ ಎಬಿಡಿ ಅನ್ನಬಹುದೇನೋ..

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery