` Flash Back - chitraloka.com | Kannada Movie News, Reviews | Image
darshan fan revanth no more

User Rating: 0 / 5

Star inactiveStar inactiveStar inactiveStar inactiveStar inactive

ಮೂಳೆ ಕ್ಯಾನ್ಸರ್‍ನಿಂದ ಬಳಲುತ್ತಿದ್ದ, ಸಾವಿನ ಹೊಸ್ತಿಲಲ್ಲಿದ್ದುಕೊಂಡು ದರ್ಶನ್‍ರನ್ನು ನೋಡಬೇಕು, ಮಾತನಾಡಬೇಕು ಎಂದು ಹಂಬಲಿಸುತ್ತಿದ್ದ ದರ್ಶನ್ ಅವರ ಅಭಿಮಾನಿ ರೇವಂತ್ ಚಿರನಿದ್ರೆಗೆ ಜಾರಿದ್ದಾರೆ. ಶಿವಮೊಗ್ಗದ ರೇವಂತ್, ಸಾಯುವ ಮುನ್ನ ಒಮ್ಮೆ ದರ್ಶನ್‍ರನ್ನು ನೋಡಬೇಕು ಎಂದು ಬಯಸಿದ್ದರು. ಶಿವಮೊಗ್ಗಕ್ಕೆ ಬರಲು ಸಾಧ್ಯವಾಗುತ್ತಿಲ್ಲ, ತಪ್ಪದೇ ಬರುತ್ತೇನೆ ಎಂದು ಹೇಳಿದ್ದ ದರ್ಶನ್, ಅಭಿಮಾನಿಯ ಜೊತೆ ವಿಡಿಯೋ ಕಾಲ್‍ನಲ್ಲಿ ಮಾತನಾಡಿ ಸಾಂತ್ವನ ಹೇಳಿದ್ದರು. 

ಸಾರಿ ಅಣ್ಣಾ, ನಿಮಗೆ ತೊಂದರೆ ಕೊಟ್ಟೆ ಎಂದು ಹೇಳಿದ್ದ ರೇವಂತ್‍ಗೆ ಏನೂ ಆಗಿಲ್ಲ, ಸರಿಯಾಗಿ ಚಿಕಿತ್ಸೆ ತೆಗೆದುಕೊ ಎಂದು ಸಾಂತ್ವನ ಹೇಳಿದ್ದರು ದರ್ಶನ್. ರೇವಂತ್ ತಂದೆ, ತಾಯಿಗೂ ಸಮಾಧಾನ ಪಡಿಸಿದ್ದರು. ಈಗ ಫೆಬ್ರವರಿ 10ರಂದು ರೇವಂತ್ ನಿಧನರಾಗಿದ್ದಾರೆ. ತಮ್ಮ ಆಸೆಯಂತೆ ದರ್ಶನ್ ಜೊತೆ ಮಾತನಾಡಿದ ನಂತರ ರೇವಂತ್ ಚಿರನಿದ್ರೆಗೆ ಜಾರಿದ್ದಾರೆ.

Related Articles :-

ಅಭಿಮಾನಿಯ ಕೊನೆಯ ಆಸೆ ಈಡೇರಿಸಿದ ದರ್ಶನ್

ದರ್ಶನ್ ಅಭಿಮಾನಿಯ ಕೊನೆಯ ಆಸೆ

humble politician is happy

User Rating: 5 / 5

Star activeStar activeStar activeStar activeStar active

ಹಂಬಲ್ ನೊಗ್‍ರಾಜ್, ಪೊಲಿಟಿಕಲ್ ಕಾಮಿಡಿ ಚಿತ್ರದ ನಿರ್ಮಾಪಕರ ಮುಖದಲ್ಲೀಗ ನಗುವೋ ನಗು. ಚಿತ್ರಕ್ಕೆ ಹಾಕಿದ ಬಂಡವಾಳದ ಜೊತೆ ಲಾಭವೂ ಬಂದಿದೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ಈಗ ಸಂತಸದಲ್ಲಿದ್ದಾರೆ.

ಇದೀಗ ಚಿತ್ರ ಇನ್ನೂ ಒಂದು ದಾಖಲೆ ಬರೆದಿದೆ. ಚಿತ್ರ ಅಮೇಜಾನ್ ಪ್ರೈಮ್ ವಿಡಿಯೋಗೆ ಮಾರಾಟವಾಗಿದೆ. ಅಮೇಜಾನ್ ಪ್ರೈಮ್ ವಿಡಿಯೋ ಖರೀದಿಸಿರುವ ಮೊದಲ ಕನ್ನಡ ಚಿತ್ರ ಆಪರೇಷನ್ ನೊಗ್‍ರಾಜ್. 

ಥಿಯೇಟರಿನಿಂದಲೇ ಲಾಭ ಮಾಡಿದ್ದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ಈಗ ಅಮೇಜಾನ್‍ನಲ್ಲೂ ಲಾಭ ಪಡೆದಿದೆ. ಅಂದಹಾಗೆ ಚಿತ್ರದ ಸ್ಯಾಟಲೈಟ್ ರೈಟ್ಸ್ ಇನ್ನೂ ಪುಷ್ಕರ್ ಅವರ ಬಳಿಯೇ ಇದೆ. ಡಿಮ್ಯಾಂಡೂ ಇದೆ. 

 

 

mr llb releasing in 16th february

User Rating: 5 / 5

Star activeStar activeStar activeStar activeStar active

ಮುಂದಿನ ವಾರ ಮಿಸ್ಟರ್ ಎಲ್‍ಎಲ್‍ಬಿ ಸಿನಿಮಾ ಬರುತ್ತಿದೆ. ಈ ವಾರ.. ಮುಂದಿನ ವಾರ.. ಎಂದು ಚಿತ್ರ ಬಿಡುಗಡೆಗೆ ವಿಳಂಬ ಮಾಡಿದ್ದ ಚಿತ್ರದ ನಿರ್ಮಾಪಕರು, ಇನ್ನು ಕಾಯೋದ್ರಲ್ಲಿ ಅರ್ಥವಿಲ್ಲ ಅನ್ನೋ ತೀರ್ಮಾನಕ್ಕೆ ಬಂದು ಸಿನಿಮಾವನ್ನು ಥಿಯೇಟರಿಗೆ ತರುತ್ತಿದ್ದಾರೆ. 

ಇಷ್ಟಕ್ಕೂ ಚಿತ್ರದ ಕಥೆಯೇನು ಎಂದರೆ, ಕ್ವಾಟ್ಲೆ, ಕಿರಿಕ್ಕುಗಳು ಅನಾವರಣಗೊಳ್ಳುತ್ತವೆ. ಚಿತ್ರದ ನಾಯಕ ಊರಿಗೇ ಕ್ವಾಟ್ಲೆ ಕೊಟ್ರೆ, ಅವನಿಗೇ ಕ್ವಾಟ್ಲೆ ಕೊಡೋ ಪಾತ್ರ ನಾಯಕಿಯದ್ದು. ಹಳ್ಳಿಯಲ್ಲಿನ ರಾಜಕೀಯವನ್ನು ಹಾಸ್ಯಮಯವಾಗಿ ಹೇಳಲಾಗಿದೆಯಂತೆ. 

ಶಿಶಿರ್ ಶಾಸ್ತ್ರಿ ಮತ್ತು ಲೇಖ ಚಂದ್ರ ಅಭಿನಯದ ಈ ಚಿತ್ರಕ್ಕೆ ರಘುವರ್ಧನ್ ನಿರ್ದೇಶಕ. ಸುಮಾರು 50ರಿಂದ 60 ಚಿತ್ರಮಂದಿರಗಳಲ್ಲಿ ರಿಲೀಸ್ ಆಗೋಕೆ ರೆಡಿಯಾಗಿದೆ ಮಿಸ್ಟರ್ ಎಲ್‍ಎಲ್‍ಬಿ.

dandupalya 3

User Rating: 0 / 5

Star inactiveStar inactiveStar inactiveStar inactiveStar inactive

Srinivas Raju's new film '3' which is the continuation of 'Dandupalya' and '2' is all set to release on March 02nd. The film was supposed to release in the month of January. However, the film got delayed due to various reasons and is now ready for release.

'Dandupalya 2' is being produced by Venkat and Srinivas Raju himself has written the story and screenplay of the film. Venkat Prasad is the cameraman, while Arjun Janya has composed the music for the film. 

Pooja Gandhi, Ravi Kaale, Makrand Deshapande, Shruthi, Sanjana, Danny Kuttappa, Jaidev, Ravishankar and others have played prominent roles in the film. Arjun Janya is the cameraman. Ram Talluri is the producer.

aishwarya arjuna image from prema baraha

User Rating: 0 / 5

Star inactiveStar inactiveStar inactiveStar inactiveStar inactive

ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಸರ್ಜಾ ಅಭಿನಯದ ಮೊದಲ ಚಿತ್ರ ಪ್ರೇಮಬರಹವನ್ನು ಪ್ರೇಕ್ಷಕರಷ್ಟೇ ಅಲ್ಲ, ಇಡೀ ಚಿತ್ರರಂಗ ಆತ್ಮೀಯತೆಯಿಂದ ಬರಮಾಡಿಕೊಂಡಿದೆ. ಚಿತ್ರರಂಗದ ಗಣ್ಯಾತಿಗಣ್ಯರೆಲ್ಲ ಸರ್ಜಾ ಮಗಳಿಗೆ ಸ್ವಾಗತ ಕೋರಿದ್ದಾರೆ. ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ.

ಸಿನಿಮಾ ಬಿಡುಗಡೆಯ ಹಿಂದಿನ ದಿನ ಸರ್ಜಾ ದಂಪತಿಯ ವಿವಾಹ ವಾರ್ಷಿಕೋತ್ಸವವೂ ಇತ್ತು. ಅದೇ ದಿನ ಪ್ರೀಮಿಯರ್ ಶೋ ಹಮ್ಮಿಕೊಂಡಿದ್ದರು ಅರ್ಜುನ್ ಸರ್ಜಾ. ರೆಬಲ್‍ಸ್ಟಾರ್ ಅಂಬರೀಷ್, ಸುಮಲತಾ, ದರ್ಶನ್, ಚಿರಂಜೀವಿ ಸರ್ಜಾ, ಧ್ರುವ ಸರ್ಜಾ, ತಾರಾ, ಹರಿಪ್ರಿಯ, ಅಮೂಲ್ಯ, ಮೇಘನಾ ರಾಜ್ ಮೊದಲಾದವರು ಪ್ರೀಮಿಷರ್ ಶೋನಲ್ಲಿ ಭಾಗವಹಿಸಿದ್ದರು. ನಟ ಸುದೀಪ್ ಟ್ವಿಟರ್ ಮೂಲಕ ಐಶ್ವರ್ಯಾ ಅವರನ್ನು ಚಿತ್ರರಂಗಕ್ಕೆ ಸ್ವಾಗತಿಸಿದ್ದು ವಿಶೇಷ. 

ನಟ ದರ್ಶನ್, ಚಿತ್ರದಲ್ಲಿ ಕೇವಲ ಹಾಡಿನಲ್ಲಿ ನಟಿಸಿಲ್ಲ, ಚಿತ್ರದ ವಿತರಣೆಯನ್ನೂ ತಮ್ಮ ತೂಗುದೀಪ ಸಂಸ್ಥೆಯಿಂದಲೇ ಮಾಡುವ ಮೂಲಕ, ಅರ್ಜುನ್ ಸರ್ಜಾ ಪುತ್ರಿಯ ಮೊದಲ ಚಿತ್ರದ ವಿತರಣೆಯ ಜವಾಬ್ದಾರಿಯನ್ನೂ ನಿರ್ವಹಿಸಿದ್ದಾರೆ.

 

Ayushmanbhava Movie Gallery

Ellidhe Illitanaka Movie Gallery