` Flash Back - chitraloka.com | Kannada Movie News, Reviews | Image
b sarojadevi plays herself in natasarwabhowma

User Rating: 0 / 5

Star inactiveStar inactiveStar inactiveStar inactiveStar inactive

ನಟಸಾರ್ವಭೌಮ. ಇದು ಪುನೀತ್ ರಾಜ್‍ಕುಮಾರ್ ಅಭಿನಯದ ಸಿನಿಮಾ. ರಣವಿಕ್ರಮ ನಂತರ ಮತ್ತೆ ನಿರ್ದೇಶಕ ಪವನ್ ಒಡೆಯರ್ ಮತ್ತು ಪುನೀತ್ ಒಂದಾಗಿರುವ ಚಿತ್ರ. ಚಿತ್ರಕ್ಕೆ ರಾಕ್‍ಲೈನ್ ವೆಂಕಟೇಶ್ ನಿರ್ಮಾಪಕರಾದರೆ, ರಚಿತಾ ರಾಮ್ ನಾಯಕಿ. ಈ ಚಿತ್ರದಲ್ಲಿ ಬಿ.ಸರೋಜಾದೇವಿ, ಚಿತ್ರನಟಿಯಾಗಿಯೇ ನಟಿಸಿದ್ದಾರೆ ಅನ್ನೋದು ವಿಶೇಷ.

ಸಿನಿಮಾದಲ್ಲಿ ಪುನೀತ್ ಪತ್ರಕರ್ತರಾಗಿ ನಟಿಸಿದ್ದಾರೆ. ಪತ್ರಕರ್ತನಾಗಿ ಬಿ.ಸರೋಜಾದೇವಿಯವರನ್ನು ಪುನೀತ್ ಸಂದರ್ಶನ ಮಾಡುವ ದೃಶ್ಯ ಚಿತ್ರದಲ್ಲಿದೆ. ನನಗೆ ಇದೊಂದು ಹೆಮ್ಮೆಯ ಕ್ಷಣ. ಇಬ್ಬರು ಶ್ರೇಷ್ಟರನ್ನು ಒಟ್ಟಿಗೇ ನಿರ್ದೇಶಿಸುವ ಸೌಭಾಗ್ಯ ನನ್ನದು ಎಂದು ಬರೆದುಕೊಂಡಿದ್ದಾರೆ ಪವನ್ ಒಡೆಯರ್.

ಪುನೀತ್ ರಾಜ್‍ಕುಮಾರ್ ಮತ್ತು ಬಿ.ಸರೋಜಾದೇವಿ ಎಂದರೆ ತಕ್ಷಣ ನೆನಪಾಗೋದು ಯಾರಿವನು ಚಿತ್ರದ ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ ಹಾಡು.. ಆಗ ಪುನೀತ್ ಮಾಸ್ಟರ್ ಲೋಹಿತ್ ಆಗಿದ್ದರು. ಈಗ ಪವರ್‍ಸ್ಟಾರ್ ಆಗಿದ್ದಾರೆ. ಮತ್ತೊಮ್ಮೆ ಸರೋಜಾದೇವಿ ಎದುರು ನಟಿಸಿದ್ದಾರೆ. 

new music director in i love you

User Rating: 0 / 5

Star inactiveStar inactiveStar inactiveStar inactiveStar inactive

ಉಪೇಂದ್ರ ಮತ್ತು ಆರ್.ಚಂದ್ರು ಕಾಂಬಿನೇಷನ್‍ನ ಹೊಸ ಸಿನಿಮಾ `ಐ ಲವ್ ಯು'. ಈ ಚಿತ್ರಕ್ಕೆ ಇನ್ನೂ ನಾಯಕಿಯ ಹುಡುಕಾಟ ನಡೆಯುತ್ತಿದೆ. ತೆಲುಗು ಮತ್ತು ಕನ್ನಡ.. ಎರಡೂ ಭಾಷೆಗೆ ಓಕೆಯಾಗುವ ನಾಯಕಿಯರಿಗಾಗಿ ಚಂದ್ರು ಹುಡುಕುತ್ತಿದ್ದಾರೆ. ಈಗಾಗಲೇ ತೆಲುಗಿನ ಸ್ಟಾರ್ ನಟಿಯೊಬ್ಬರ ಜೊತೆ ಮಾತುಕತೆಯೂ ನಡೆದಿದೆಯಂತೆ. ಇದರ ಮಧ್ಯೆ ಒಬ್ಬ ಹೊಸ ಸಂಗೀತ ನಿರ್ದೇಶಕರಿಗೆ ಆರ್.ಚಂದ್ರು ಅವಕಾಶ ಕೊಟ್ಟಿದ್ದಾರೆ.

ಐ ಲವ್ ಯು ಸಿನಿಮಾದ ಮ್ಯೂಸಿಕ್ ಡೈರೆಕ್ಟರ್ ಡಾ. ಕಿರಣ್ ತೋಟಂಬೈಲು. ಯಾರಿವರು ಅಂತಾ ತಲೆ ಕೆಡಿಸಿಕೊಳ್ಳಬೇಡಿ. ನಟಿ ಪೂಜಾಗಾಂಧಿ ಜೊತೆ ವಿವಾದ ಮಾಡಿಕೊಂಡಿದ್ದ ಕಿರಣ್. ಅವರೇ ಇವರು. ಇವರೇ ಅವರು.

ಕಿರಣ್ ಅವರು ಮಾಡಿಕೊಂಡು ಬಂದಿದ್ದ ಟ್ಯೂನ್‍ಗಳು ಇಷ್ಟವಾಗಿ ಸಂಗೀತ ನಿರ್ದೇಶನಕ್ಕೆ ಅವಕಾಶ ಕೊಟ್ಟಿದ್ದಾರೆ ಚಂದ್ರು. ಅಂದಹಾಗೆ ಚಂದ್ರು ಸಿನಿಮಾದಲ್ಲಿ ಹಾಡುಗಳು ಚೆನ್ನಾಗಿರುತ್ತವೆ. ತಮಗೆ ಅನ್ನಿಸಿದಂತೆ ಟ್ಯೂನ್ ಬರುವವರೆಗೂ ಚಂದ್ರು ಬಿಡೋದಿಲ್ಲ. ಹೀಗಾಗಿ ಐ ಲವ್ ಯೂ ಸಿನಿಮಾದಲ್ಲೂ ಒಳ್ಳೆಯ ಹಾಡುಗಳಿರುತ್ತವೆ ಅನ್ನೋ ನಿರೀಕ್ಷೆ ಇಟ್ಟುಕೊಳ್ಳಬಹುದು.

rambo 2 all india jounery

User Rating: 0 / 5

Star inactiveStar inactiveStar inactiveStar inactiveStar inactive

Rambo- 2. ಇದು ಕಾಮಿಡಿ  ಥ್ರಿಲ್ಲರ್. ಜರ್ನಿಯಲ್ಲೇ ಸಾಗುವ ಕಥೆ. ಈ ಚಿತ್ರಕ್ಕಾಗಿ ಇಡೀ ಚಿತ್ರತಂಡ ಇಡೀ ಭಾರತವನ್ನು ರೌಂಡ್ ಹೊಡೆದಿದೆ. ಒಂಥರಾ ಲಾರಿ, ಕಾರುಗಳ ಮೇಲೆ ಆಲ್ ಇಂಡಿಯಾ ಪರ್ಮಿಟ್ ಅನ್ನೋ ಬೋರ್ಡ್ ಇರುತ್ತಲ್ಲಾ.. ಆ ಥರ.. ಹೀಗಾಗಿ ಸಿನಿಮಾ ಟೀಂ, ಕರ್ನಾಟಕ, ಜೋಧ್‍ಪುರ ಕಡೆಗೆಲ್ಲ ಹೋಗಿದೆ. ಆದರೆ, ಸಿನಿಮಾದಲ್ಲಿ ಕಥೆ ನಡೆಯೋದು ಉತ್ತರ ಕರ್ನಾಟಕ ಮತ್ತು ಗೋವಾ ಮಧ್ಯೆ ಜರ್ನಿಯಲ್ಲಿ. ಹಾಗಾದರೆ, ರಾಜಸ್ಥನಕ್ಕೆ ಹೋಗೋ ಅಗತ್ಯ ಏನಿತ್ತು ಅಂತೀರಾ..?

ಸಿನಿಮಾ ಶೂಟಿಂಗ್ ವೇಳೆ ಕರ್ನಾಟಕದಲ್ಲಿ ಮಳೆಯೋ ಮಳೆ.. ಹಸಿರು ತುಂಬಿತ್ತು. ಹೀಗಾಗಿ ಕರ್ನಾಟಕದ ವಾತಾವರಣ ಹೋಲುವ ರಾಜಸ್ಥಾನದ ಪ್ರದೇಶಗಳಲ್ಲಿ ಶೂಟಿಂಗ್ ಮಾಡಲಾಯ್ತು. ಇನ್ನು ಕಥೆಯಲ್ಲಿ ಬರುವ ರಸ್ತೆಯ ಫಲಕಗಳನ್ನು ಕನ್ನಡದಲ್ಲಿ ಕಾಣುವಂತೆ ಮಾಡಲು ಅದೇನೇನು ಸರ್ಕಸ್ ಮಾಡಿದ್ದಾರೋ.. ನಿರ್ದೇಶಕ ಅನಿಲ್ ಚಿತ್ರೀಕರಣದ ರಸಘಳಿಗೆಗಳನ್ನು ಹೇಳಿಕೊಳ್ತಾರೆ.

ನಾವು ಶೂಟಿಂಗ್‍ಗೆ ಪ್ಲಾನ್ ಮಾಡಿದ್ದು ಉತ್ತರ ಕರ್ನಾಟಕದಲ್ಲಿ. ಆದರೆ, ಶೂಟಿಂಗ್ ಶುರುವಾಗುವ ಹೊತ್ತಿಗೆ ಇಡೀ ಪ್ರದೇಶ ಹಸಿರೋ ಹಸಿರು. ಹೀಗಾಗಿ ರಾಜಸ್ಥಾನ ಹುಡುಕಿಕೊಂಡೆವು. ಗೋವಾದ ದೃಶ್ಯಗಳನ್ನೂ ಅಷ್ಟೆ.. ಕೆಲವು ಸೀನ್‍ಗಳನ್ನು ಗೋವಾ ಹೋಲುವ ರಾಮೇಶ್ವರಂನಲ್ಲಿ ಶೂಟ್ ಮಾಡಲಾಗಿದೆ. ಆದರೆ, ಇದು ಪ್ರೇಕ್ಷಕರಿಗೆ ಗೊತ್ತಾಗಲ್ಲ. ಎಷ್ಟರಮಟ್ಟಿಗೆ ಅಂದ್ರೆ, ರಸ್ತೆಯಲ್ಲಿ ಬರುವ ಫಲಕಗಳನ್ನೂ ಕೂಡಾ ನಾವು ಕನ್ನಡಮಯವಾಗಿಸಿದ್ದೇವೆ. ಹೀಗಾಗಿ ಯಾವುದು ಉತ್ತರ ಕರ್ನಾಟಕ.. ಯಾವುದು ರಾಜಸ್ಥಾನ.. ಎನ್ನುವುದು ಪ್ರೇಕ್ಷಕರಿಗೆ ಗೊತ್ತಾಗಲ್ಲ. ಜೋಧ್‍ಪುರ್, ಜೈಸಲ್ಮೇರ್, ಭಾರತ ಪಾಕಿಸ್ತಾನ ಗಡಿ ಪ್ರದೇಶದಲ್ಲೂ ಶೂಟಿಂಗ್ ಆಗಿದೆ ಎಂದು ಶೂಟಿಂಗ್ ಕಥೆ ಬಿಚ್ಚಿಟ್ಟಿದ್ದಾರೆ ನಿರ್ದೇಶಕ ಅನಿಲ್.

ಶರಣ್ ಜೊತೆ ಅಶಿಕಾ ರಂಗನಾಥ್ ಜೋಡಿಯಾಗಿದ್ದರೆ, ಚಿಕ್ಕಣ್ಣ ಕಾಂಬಿನೇಷನ್ ಕೂಡಾ ಸಿನಿಮಾದಲ್ಲಿದೆ. ನಾಳೆಯೇ ಸಿನಿಮಾ ರಿಲೀಸ್. ತರುಣ್ ಸುಧೀರ್ ಸಾರಥ್ಯದಲ್ಲಿ ತಂತ್ರಜ್ಞರು ಮತ್ತು ಕಲಾವಿದರು ಒಗ್ಗೂಡಿ ನಿರ್ಮಿಸಿರುವ ಸಿನಿಮಾ ಇದು. 

raja loves radhe release postponed

User Rating: 0 / 5

Star inactiveStar inactiveStar inactiveStar inactiveStar inactive

ರಾಜ ಲವ್ಸ್ ರಾಧೆ ಚಿತ್ರ ನಾಳೆ ರಿಲೀಸ್ ಆಗಬೇಕಿತ್ತು. ವಿಜಯ್ ರಾಘವೇಂದ್ರ ಮತ್ತು ರಾಧಿಕಾ ಅಭಿನಯದ ಸಿನಿಮಾ ಈಗ ಮುಂದಿನ ವಾರಕ್ಕೆ ಹೋಗಿದೆ. ಅದಕ್ಕೆ ಕಾರಣ, ಶರಣ್ ಅಭಿನಯದ ರ್ಯಾಂಬೋ2 ಸಿನಿಮಾ.

ಕನ್ನಡ ಚಿತ್ರವೊಂದಕ್ಕೆ ಕನ್ನಡ ಸಿನಿಮಾವೇ ಪೈಪೋಟಿ ನೀಡುವುದು ಸರಿಯಲ್ಲ ಮತ್ತು ಥಿಯೇಟರ್‍ಗಳ ಸಮಸ್ಯೆಯಿಂದಾಗಿ ಮುಂದಿನ ವಾರಕ್ಕೆ ಹೋಗಿದ್ದಾಗಿ ನಿರ್ದೇಶಕ ರಾಜಶೇಖರ್ ಹೇಳಿಕೊಂಡಿದ್ದಾರೆ. ರ್ಯಾಂಬೋ2 ಸಿನಿಮಾ 200+ ಥಿಯೇಟರುಗಳಲ್ಲಿ ಬರುತ್ತಿದೆ. ನಮಗೂ 100+ ಥಿಯೇಟರುಗಳು ಬೇಕು. ಹೀಗಾಗಿ ಒಳ್ಳೆಯ ಚಿತ್ರಮಂದಿರಗಳು ಸಿಗೋದಿಲ್ಲ. ಪೈಪೋಟಿಗೆ ಬಿದ್ದು ರಿಲೀಸ್ ಮಾಡಿದ್ರೆ ಯಾರಿಗೂ ಉಪಯೋಗವಿಲ್ಲ. ಹೀಗಾಗಿ ಮುಂದಿನ ವಾರ ಬರಲು ನಿರ್ಧರಿಸಿದ್ದೇವೆ ಎಂದಿದ್ದಾರೆ ರಾಜಶೇಖರ್.

ಹೆಚ್‍ಎಲ್‍ಎನ್ ರಾಜು ನಿರ್ಮಾಣದ ರಾಜ ಲವ್ಸ್ ರಾಧೆ ಸಿನಿಮಾದಲ್ಲಿ ಕಾಮಿಡಿ ಲವ್ ಸ್ಟೋರಿಯೇ ಹೈಲೈಟ್.

suman ranganath's double engine love story

User Rating: 0 / 5

Star inactiveStar inactiveStar inactiveStar inactiveStar inactive

ಸುಮನ್ ರಂಗನಾಥ್, ವಯಸ್ಸು 43. ಆದರೆ, 20+ ಎನ್ನಿಸುವಂತಾ ಚೆಲುವೆ. ಈ ಚೆಲುವೆಯ ಮೇಲೆ ಕಾಮಿಡಿ ಸ್ಟಾರ್ ಚಿಕ್ಕಣ್ಣಂಗೆ ಲವ್ವಾಗಿದೆ. ಅದು ಡಬಲ್ ಎಂಜಿನ್ ಚಿತ್ರದಲ್ಲಿ.

ವಾಸ್ತವದಲ್ಲಿ ಚಿಕ್ಕಣ್ಣ, ಸುಮನ್ ರಂಗನಾಥ್ ಅವರ ಅಭಿಮಾನಿ. ಅವರ ಸಿನಿಮಾ ನೋಡಿದ್ದೆ. ನೋಡೋಕೆ ಚೆನ್ನಾಗಿದ್ರು. ಹೀಗಾಗಿಯೇ ಚಿಕ್ಕಂದಿನಲ್ಲೇ ಅವರ ಮೇಲೆ ಒಂಥರಾ ಪ್ರೀತಿ ಬೆಳೆದಿತ್ತು. ನಾವೆಲ್ಲಿ..? ಅವರೆಲ್ಲಿ..? ಆದರೆ, ಈಗ ಕನಸೊಂದು ನಿಜವಾಗಿದೆ ಎಂದು ಹೇಳಿಕೊಂಡಿದ್ದಾರೆ ಚಿಕ್ಕಣ್ಣ.

ಆರಂಭದಲ್ಲಿ ಸುಮನ್ ಅವರ ಎದುರು ನಟಿಸೋದು ಕಷ್ಟವಾಯಿತಂತೆ. ನಂತರ ಸುಮನ್ ಅವರೇ ಚಿಕ್ಕಣ್ಣನವರಿಗೆ ಧೈರ್ಯ ಹೇಳಿದ್ರಂತೆ. ತಮ್ಮ ಮೆಚ್ಚಿನ ನಟಿಯೊಂದಿಗೆ ನಟಿಸೋದು ಒಂದು ಅದ್ಭುತ ಅನುಭವ ಎಂದು ಹೇಳಿಕೊಂಡಿದ್ದಾರೆ ಚಿಕ್ಕಣ್ಣ.

ಅರುಣ್ ಕುಮಾರ್, ಶ್ರೀಕಾಂತ್ ನಿರ್ಮಾಣದ ಡಬಲ್ ಎಂಜಿನ್ ಚಿತ್ರಕ್ಕೆ ಚಂದ್ರಮೋಹನ್ ನಿರ್ದೇಶನವಿದೆ.

Matthe Udbhava Trailer Launch Gallery

Maya Bazaar Pressmeet Gallery