` Flash Back - chitraloka.com | Kannada Movie News, Reviews | Image
neerdose combo back with thotapuri

User Rating: 0 / 5

Star inactiveStar inactiveStar inactiveStar inactiveStar inactive

ತೋತಾಪುರಿ.. ಇದು ಹೊಸ ಸಿನಿಮಾದ ಹೆಸರು. ತೊಟ್ ಕೀಳ್ಬೇಕಷ್ಟೆ ಅನ್ನೋದು ಚಿತ್ರದ ಟ್ಯಾಗ್‍ಲೈನ್. ಸಿದ್ಲಿಂಗು, ನೀರ್‍ದೋಸೆ ಖ್ಯಾತಿಯ ವಿಜಯ್ ಪ್ರಸಾದ್ ನಿರ್ದೇಶಕ. ನವರಸ ನಾಯಕ ಜಗ್ಗೇಶ್ ನಾಯಕ. ಶಿವಲಿಂಗ ಸುರೇಶ್ ನಿರ್ಮಾಣದ ಚಿತ್ರದಲ್ಲಿ ಜಗ್ಗೇಶ್ ಅಡುಗೆ ಭಟ್ಟನಾಗಿದ್ದಾರೆ.

ನೀರ್‍ದೋಸೆ ನಂತರ ಜಗ್ಗೇಶ್-ವಿಜಯ್ ಪ್ರಸಾದ್ ಜೋಡಿ ಮುಂದಿನ ಸಿನಿಮಾ ಹೇಗಿರುತ್ತೆ ಅನ್ನೋ ಕುತೂಹಲ ನನಗೂ ಇತ್ತು. ಚಿತ್ರದ ಟೈಟಲ್ ಮತ್ತು ಕಥೆ ಕೇಳಿದ ಮೇಲೆ ಖುಷಿಯಾಗಿ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದೆ ಅಂತಾರೆ ಸುರೇಶ್. ಚಿತ್ರಕ್ಕೆ ಅನೂಪ್ ಸೀಳೀನ್ ಸಂಗೀತವಿದೆ.

sandalwood stars extend support

User Rating: 5 / 5

Star activeStar activeStar activeStar activeStar active

ಕಣ್ಣೀರಿಡುತ್ತಿರುವ ಕೊಡಗಿನ ಜನರ ಸಂಕಷ್ಟಕ್ಕೆ ಸ್ಯಾಂಡಲ್‍ವುಡ್ ಮಿಡಿಯುತ್ತಿದೆ. ಸ್ಟಾರ್ ನಟರು ಅಭಿಮಾನಿ ಸಂಘಗಳ ಮೂಲಕ ಕೊಡಗಿನ ಜನರ ನೆರವಿಗೆ ಧಾವಿಸಿದ್ದಾರೆ. ನಟ ಶಿವರಾಜ್ ಕುಮಾರ್, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ನಟ ಪ್ರಕಾಶ್ ರೈ ಕೂಡಾ 5 ಲಕ್ಷ ರೂ. ದೇಣಿಗೆ ನೀಡಿದ್ದು, ತಮ್ಮ ಸಂಘದ ಸದಸ್ಯರ ಜೊತೆ ಕೊಡಗಿನಲ್ಲಿ ಪುನರ್‍ವಸತಿ ಕಾರ್ಯದಲ್ಲಿ ತೊಡಗಿಸಿಕೊಳ್ಳೋದಾಗಿ ತಿಳಿಸಿದ್ದಾರೆ. ರಾಜ್‍ಕುಮಾರ್ ಅಕಾಡೆಮಿ ಟ್ರಸ್ಟ್ ಮೂಲಕ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡಲಾಗುತ್ತಿದೆ. ಪುನೀತ್, ಸುದೀಪ್, ದರ್ಶನ್, ಯಶ್ ಅಭಿಮಾನಿ ಸಂಘಗಳೂ ನೆರವಿನ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಕೊಡಗಿನವರೇ ಆದ ಹರ್ಷಿಕಾ ಪೂಣಚ್ಚ, ಭುವನ್, ಚೇತನ್ ನೇರವಾಗಿ ಮಡಿಕೇರಿಗೇ ತೆರಳಿ ಸಂತ್ರಸ್ತರ ನೆರವಿಗೆ ನಿಂತಿದ್ದಾರೆ.

ಈ ನಡುವೆ ನಟ ರವಿಚಂದ್ರನ್, ಚಿತ್ರೋದ್ಯಮದವರು ಒಂದಿಡೀ ಊರಿನ ಜವಾಬ್ದಾರಿ ವಹಿಸಿಕೊಂಡು, ಆ ಊರನ್ನೇ ಸಂಪೂರ್ಣವಾಗಿ ಕಟ್ಟಿಕೊಡಬೇಕು. ಬೇರೆ ಬೇರೆ ಸಂಘ ಸಂಸ್ಥೆಗಳೂ ಹೀಗೆಯೇ ಮಾಡಿದರೆ, ಮಡಿಕೇರಿಯನ್ನು ಪುನರ್‍ನಿರ್ಮಿಸುವುದು ಕಷ್ಟವೇನಲ್ಲ. ನಾವೀಗ ನೀಡುತ್ತಿರುವ ಹಣ, ವಸ್ತು, ಪರಿಹಾರ ಸಾಮಗ್ರಿಗಳೆಲ್ಲ ತಾತ್ಕಾಲಿಕ. ಅವರಿಗೆ ಶಾಶ್ವತ ವ್ಯವಸ್ಥೆ ಮಾಡಬೇಕು. ಒಬ್ಬೊಬ್ಬರೇ ಮಾಡುವ ಟೆಂಪರರಿ ಪರಿಹಾರಕ್ಕಿಂತ, ಎಲ್ಲರೂ ಸೇರಿಕೊಂಡು ಶಾಶ್ವತ ಪರಿಹಾರ ಕಲ್ಪಿಸಿಕೊಡೋಣ ಎಂದಿದ್ದಾರೆ.

ರವಿಚಂದ್ರನ್ ಸಲಹೆಗೆ ಇಡೀ ಚಿತ್ರೋದ್ಯಮ ಯೆಸ್ ಎಂದಿದೆ. ಆಲೋಚನೆ ಕಾರ್ಯಗತಗೊಳ್ಳುವುದು ಅಷ್ಟು ಸುಲಭವಲ್ಲ. ಆದರೆ, ಮೊದಲ ಹೆಜ್ಜೆ ಇಡುವವರು ಯಾರು ಎಂಬುದೇ ಪ್ರಶ್ನೆ.

pavan wodeyar weds apeksha purohith

User Rating: 0 / 5

Star inactiveStar inactiveStar inactiveStar inactiveStar inactive

Actor Pavan Wodeyar who is currently busy directing Puneeth in 'Natasarvabhowma' married Apeksha Purohith on Monday.The marriage was held at a convention hall in Bagalkot. Actor Puneeth Rajakumar and others from film fraternity wished the newly wed couple.

Pavan has organised a reception ceremony in Bangalore later this month. Many artistes and technicians are expected to be a part of the reception.

ayogya running successfully

User Rating: 0 / 5

Star inactiveStar inactiveStar inactiveStar inactiveStar inactive

ನೀನಾಸಂ ಸತೀಶ್, ರಚಿತಾ ರಾಮ್, ರವಿಶಂಕರ್ ಅಭಿನಯದ ಅಯೋಗ್ಯ ಸಿನಿಮಾಗೆ ಅದ್ಭುತ ಓಪನಿಂಗ್ ಸಿಕ್ಕಿದೆ. ಇದೇ ಶುಕ್ರವಾರ ರಿಲೀಸ್ ಆಗಿರುವ ಸಿನಿಮಾ, ಮೂರೇ ದಿನಕ್ಕೆ 4 ಕೋಟಿ ಗಳಿಕೆ ಮಾಡಿದೆಯಂತೆ. ಹಳೇ ಮೈಸೂರು ಭಾಗದಲ್ಲಂತೂ ಚಿತ್ರ ಮಂದಿರಗಳು ತುಂಬಿ ತುಳುಕಿವೆ.

ರಾಜ್ಯಾದ್ಯಂತ 280 ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದ್ದ ಸಿನಿಮಾಗೆ ಎಲ್ಲೆಡೆ ಹೌಸ್‍ಫುಲ್ ಪ್ರದರ್ಶನದ ಭಾಗ್ಯ ಸಿಕ್ಕಿದೆ. ಮಂಡ್ಯ ಸೊಗಡಿನ ಚಿತ್ರಕ್ಕೆ ಉತ್ತರ ಕರ್ನಾಟಕ ಭಾಗದಲ್ಲೂ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಚಮಕ್ ಸಿನಿಮಾದಲ್ಲೂ ಗೆಲುವಿನ ಮ್ಯಾಜಿಕ್ ಮಾಡಿದ್ದ ನಿರ್ಮಾಪಕ ಚಂದ್ರಶೇಖರ್, ಅಯೋಗ್ಯ ಚಿತ್ರದಲ್ಲೂ ಯೋಗ ಕಂಡಿದ್ದಾರೆ.

ravi chandra launched

User Rating: 0 / 5

Star inactiveStar inactiveStar inactiveStar inactiveStar inactive

Ravichandran-Upendra's new film 'Ravi-Chandra' which is a remake of Telugu hit 'Balupu' was launched launched on Monday (August 20th).

The muhurath of the film was held at the Dodda Ganapathi Temple in Bull Temple Road and many politicians and film artistes were present during the occasion.

'Ravi-Chandra'  is being directed by Omprakash Rao and produced by Kankapura Srinivas. Arjun Janya is the music composer of this film.  Sanvi Srivatsav and Nimika Ratnakar are the heroines. Pradeep Rawat, Sadhu Kokila, Rangayana Raghu, Sudha Belawadi and others play prominent roles in the film.

 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery