` Flash Back - chitraloka.com | Kannada Movie News, Reviews | Image
shivarajkumar as don?

User Rating: 0 / 5

Star inactiveStar inactiveStar inactiveStar inactiveStar inactive

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಡಾನ್ ಜೈರಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಾ..? ಸದ್ಯಕ್ಕೆ ಗಾಂಧಿನಗರದಲ್ಲಿ ಇಂಥಾದ್ದೊಂದು ಸುದ್ದಿ ಹರಿದಾಡುತ್ತಿದೆ. ದಿ ವಿಲನ್ ಹಾಗೂ ಟಗರು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಶಿವರಾಜ್ ಕುಮಾರ್‍ಗೆ, 2010ರವರೆಗೆ ನಿರಂತರವಾಗಿ ನಟಿಸಿದರೂ ಮುಗಿಯದಷ್ಟು ಸಿನಿಮಾಗಳಿವೆ. ಹೀಗಿರುವಾಗಲೇ ಶಿವರಾಜ್ ಕುಮಾರ್ ಜೈರಾಜ್ ಚಿತ್ರದ ಕಥೆ ಕೇಳಿದ್ದಾರಂತೆ.

ಜೈರಾಜ್ ಚಿತ್ರಕ್ಕೆ ಕಥೆ ಬರೆಯುತ್ತಿರುವುದು ಅಗ್ನಿ ಶ್ರೀಧರ್. ಚಿತ್ರದ ಸ್ಕ್ರಿಪ್ಟ್ ವರ್ಕ್ ಶುರುವಾಗಿದ್ದು, ಒಂದು ಸುತ್ತಿನ ಮಾತುಕತೆಯೂ ಆಗಿದೆಯಂತೆ. ಚಿತ್ರವನ್ನು `ಮಮ್ಮಿ ಸೇವ್ ಮಿ' ಚಿತ್ರ ನಿರ್ದೇಶಿಸಿದ್ದ ಲೋಹಿತ್ ನಿರ್ದೇಶಿಸುವ ಸಾಧ್ಯತೆ ಇದೆ. 

ಕಥೆಯನ್ನು ಕೇಳಿ ಮೆಚ್ಚಿಕೊಂಡಿದ್ದರೂ, ಶಿವರಾಜ್ ಕುಮಾರ್ ಇನ್ನೂ ಅಧಿಕೃತ ಒಪ್ಪಿಗೆ ಕೊಟ್ಟಿಲ್ಲವಂತೆ. ಈ ಹಿಂದೆ ಓಂ, ನಂದಾ ಚಿತ್ರದಲ್ಲಿ ರಿಯಲ್ ರೌಡಿಯ ಪಾತ್ರದಲ್ಲಿ ನಟಿಸಿದ್ದ ಶಿವರಾಜ್ ಕುಮಾರ್, ಹಲವಾರು ಚಿತ್ರಗಳಲ್ಲಿ ಲಾಂಗು ಹಿಡಿದಿದ್ದಾರೆ. ಜೈರಾಜ್ ಒಂದಾನೊಂದು ಕಾಲದಲ್ಲಿ ಬೆಂಗಳೂರನ್ನೇ ಆಳಿದ ಡಾನ್. ಶಿವರಾಜ್ ಕುಮಾರ್ ನಟಿಸುತ್ತಾರಾ..? ಅಭಿಮಾನಿಗಳ ಪ್ರತಿಕ್ರಿಯೆ ಹೇಗಿರುತ್ತೆ..? 

fish politics

User Rating: 0 / 5

Star inactiveStar inactiveStar inactiveStar inactiveStar inactive

ಸಿಎಂ ಸಿದ್ದರಾಮಯ್ಯ ಧರ್ಮಸ್ಥಳಕ್ಕೆ ಭೇಟಿ ನೀಡಿದಾಗ, ಮೀನು ತಿಂದು ಹೋಗಿದ್ದು ವಿವಾದವಾಗಿ ಹೋಗಿದೆ. ಪರ ವಿರೋಧ ಚರ್ಚೆಗಳೆರಡೂ ಬಿರುಸಾಗಿ ನಡೆಯುತ್ತಿವೆ. ಸಿಎಂ ಸಿದ್ದರಾಮಯ್ಯ ಬೇಡರ ಕಣ್ಣಪ್ಪನ ಉದಾಹರಣೆ ನೀಡಿ ಸಮರ್ಥಿಸಿಕೊಂಡಿದ್ದಾರೆ. 

ಚಿತ್ರರಂಗದಲ್ಲಿಯೂ ಕೆಲವರು ಸಿಎಂ ಮೀನೂಟ ರಾಜಕೀಯದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಟ ಬುಲೆಟ್ ಪ್ರಕಾಶ್, ಬೇಡರ ಕಣ್ಣಪ್ಪ ಶಿವನಿಗೆ ಕಣ್ಣು ಕೊಟ್ಟಿದ್ದ. ನೀವೂ ಕೊಟ್ಟುಬಿಡಿ ಎಂದು ಸಿಎಂ ಸಿದ್ದರಾಮಯ್ಯನವರನ್ನು ಕೆಣಕಿದ್ದಾರೆ. 

ನಿರ್ದೇಶಕ ಎಂ.ಎಸ್. ರಮೇಶ್ ದೇವಸ್ಥಾನಕ್ಕೆ ಚಪ್ಪಲಿ ಹಾಕಿಕೊಂಡು ಬರಬೇಡಿ ಎಂದು ಕೂಡಾ ದೇವರು ಹೇಳಿಲ್ಲ. ಹಾಗಾಗಿ ನೀವೂ ಚಪ್ಪಲಿ ಹಾಕಿಕೊಂಡು ಹೋಗ್ತೀರಾ..? ಧರ್ಮಸ್ಥಳದಲ್ಲಿ ಪುರುಷರು ಮೈಮೇಲಿನ ಶರಟು ತೆಗೆದು ಹೋಗುತ್ತಾರೆ. ಅದನ್ನೇಕೆ ನೀವು ಪಾಲಿಸಿಲ್ಲ. ನೀವು ಗಂಡಸರಲ್ಲವೇ ಎಂದು ಕೆಣಕಿದ್ದಾರೆ.

rajkumar's photo in american resto

User Rating: 5 / 5

Star activeStar activeStar activeStar activeStar active

ಕನ್ನಡ ಕಂಠೀರವ ಎಂದೇ ಅಭಿಮಾನಿಗಳಿಂದ ಕರೆಸಿಕೊಂಡ ಡಾ. ರಾಜ್‍ಕುಮಾರ್ ಅಭಿಮಾನಿಗಳ ಸಂಖ್ಯೆ ದೊಡ್ಡದು. ಅದು ಕೇವಲ ಕರ್ನಾಟಕದಲ್ಲಷ್ಟೇ ಅಲ್ಲ, ವಿದೇಶಗಳಲ್ಲೂ ಹಬ್ಬಿದೆ. ಅಮೆರಿಕದ ಸ್ಯಾನ್‍ಫ್ರಾನ್ಸಿಸ್ಕೋದಲ್ಲಿರುವ ರೆಸ್ಟೊರೆಂಟ್ ಒಂದರಲ್ಲಿ ಅಣ್ಣಾವ್ರ ಫೋಟೋ ಹಾಕಲಾಗಿದೆ. 

ಈ ಫೋಟೋವನ್ನು ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಹಾಕಿಕೊಂಡಿರುವುದು ಧೀರನ್ ರಾಮ್‍ಕುಮಾರ್. ರಾಜ್ ಅವರ ಮೊಮ್ಮಗ. ರಾಮ್ ಕುಮಾರ್ ಅವರ ಪುತ್ರ. ಅವರಿಗೆ ಅವರ ಮಿತ್ರ ಹರೀಶ್ ಎಂಬುವವರು ಈ ಫೋಟೋ ಕಳಿಸಿದ್ದರಂತೆ. 

ಅಣ್ಣಾವ್ರ ಟ್ರೇಡ್‍ಮಾರ್ಕ್ ನಗು ಎಂದು ಬರೆದುಕೊಂಡು ತಾತನ ಈ ಫೋಟೋವನ್ನು ಖುಷಿಯಿಂದ ಷೇರ್ ಮಾಡಿಕೊಂಡಿದ್ದಾರೆ ಧೀರನ್ ರಾಮ್‍ಕುಮಾರ್.

rajanikanth built an ashram in himalaya

User Rating: 0 / 5

Star inactiveStar inactiveStar inactiveStar inactiveStar inactive

ದಕ್ಷಿಣ ಭಾರತದ ಸೂಪರ್ ಸ್ಟಾರ್ ಆಗಿರುವ ರಜಿನಿಕಾಂತ್ ಆಗಾಗ್ಗೆ ಹಿಮಾಲಯಕ್ಕೆ ಹೋಗುವುದು, ಅನಾಮಿಕರಂತೆ ಅಲೆದಾಡುವುದು, ಧ್ಯಾನ ಮಾಡುವುದರ ಬಗ್ಗೆ ಕಥೆಗಳಷ್ಟೇ ಏನು, ದಂತಕಥೆಗಳೇ ಇವೆ. ಈಗ ಅದೇ ರಜಿನಿಕಾಂತ್ ಹಿಮಾಲಯದಲ್ಲೊಂದು ಆಶ್ರಮವನ್ನೇ ಕಟ್ಟಿದ್ದಾರೆ.

ಉತ್ತರಾಖಂಡ್‍ನ ದ್ರೋಣಗಿರಿ ಪರ್ವತದಲ್ಲಿ ರಜಿನಿಕಾಂತ್, ಧ್ಯಾನಕೇಂದ್ರವೊಂದನ್ನು ತೆರೆದಿದ್ದಾರೆ. ರಜಿನಿಯ ಜೊತೆ ಅವರ ಗೆಳೆಯರಾದ ಬೆಂಗಳೂರಿನ ಹರಿ, ದೆಹಲಿಯ, ಶಶಿಧರ್ ರಾವ್, ಮೂರ್ತಿ, ಶ್ರೀಧರ್, ಚೆನ್ನೈನ ವಿ.ವಿಶ್ವನಾಥನ್ ಮೊದಲಾದವರು ಕೈ ಜೋಡಿಸಿದ್ದಾರೆ. ಈ ಧ್ಯಾನಕೇಂದ್ರ ನವೆಂಬರ್ 10ರಂದು ಉದ್ಘಾಟನೆಗೊಳ್ಳಲಿದೆ.

ರಜಿನಿಕಾಂತ್ ಪರಮಹಂಸ ಯೋಗಾನಂದ ಅವರ ಅನುಯಾಯಿ. `ದ ಆಟೋಬಯೋಗ್ರಫಿ ಆಫ್ ಯೋಗಿ' ಪುಸ್ತಕದ ಲೇಖಕ ಹಾಗೂ ಯೋಗೋದಾ ಸತ್ಸಂಗ ಸೊಸೈಟಿಯ ಸಂಸ್ಥಾಪಕ ಪರಮಹಂಸ ಯೋಗಾನಂದ. ರಜಿನಿಕಾಂತ್ ಈ ಧ್ಯಾನಕೇಂದ್ರವನ್ನು ಸುಮಾರು 1 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದು, ಭಕ್ತರು ಇಲ್ಲಿ ಉಚಿತವಾಗಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆಯಂತೆ.

bollywood writer for dhruva's next

User Rating: 5 / 5

Star activeStar activeStar activeStar activeStar active

ಒಂದರ ಹಿಂದೊಂದರಂತೆ ಮೂರು ಹಿಟ್ ನೀಡಿದ ಧ್ರುವ ಸರ್ಜಾ ಹೊಸ ಹೊಸ ಸಿನಿಮಾಗಳಿಗೆ ರೆಡಿಯಾಗುತ್ತಿದ್ದಾರೆ. ನಂದಕಿಶೋರ್ ನಿರ್ದೇಶನದಲ್ಲಿ ಪೊಗರು ಚಿತ್ರದಲ್ಲಿ ನಟಿಸುತ್ತಿರುವ ಧ್ರುವ ಮತ್ತೊಂದು ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ. 

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಹೊಸ ಚಿತ್ರಕ್ಕೆ ಕಥೆ ಬರೆಯುತ್ತಿರುವುದು ಶಿರಾಜ್ ಅಹ್ಮದ್. ಯಾರು ಈ ಶಿರಾಜ್ ಅಹ್ಮದ್ ಎನ್ನಬೇಡಿ. ಆಶಿಕಿ 2, ಹಮಾರಿ ಅಧೂರಿ ಕಹಾನಿ, ಮರ್ಡರ್ 2, ಜಿಸ್ಮ್ 2,  ರೇಸ್ 2, ಒಂದು ತೆಲುಗು ಸಿನಿಮಾ ಸೇರಿದಂತೆ ಹಲವು ಚಿತ್ರಗಳಿಗೆ ಕಥೇ ಬರೆದಿದ್ದವರು. ಈ ಹೊಸ ಚಿತ್ರಕ್ಕೆ ಜಗ್ಗುದಾದ ಚಿತ್ರ ನಿರ್ದೇಶಿಸಿದ್ದ ರಾಘವೇಂದ್ರ ಹೆಗ್ಡೆ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ.

ಆದರೆ, ಈ ಸುದ್ದಿಯನ್ನು ಧ್ರುವ ಸರ್ಜಾ ಇನ್ನೂ ಕನ್‍ಫರ್ಮ್ ಮಾಡಿಲ್ಲ.

I Love You Movie Gallery

Rightbanner02_butterfly_inside

Paddehuli Movie Gallery