` Flash Back - chitraloka.com | Kannada Movie News, Reviews | Image
pranam devaraj's telugu film starts

User Rating: 5 / 5

Star activeStar activeStar activeStar activeStar active

ಡೈನಮಿಕ್ ಸ್ಟಾರ್ ದೇವರಾಜ್ ಅವರ 2ನೇ ಪುತ್ರ ಪ್ರಣಾಮ್ ದೇವರಾಜ್, ಟಾಲಿವುಡ್‍ಗೆ ಹಾರಿದ್ದಾರೆ. ಇತ್ತೀಚೆಗಷ್ಟೇ ಕುಮಾರಿ 21ಎಫ್ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಪಾದಾರ್ಪಣೆ ಮಾಡಿದ್ದ ಪ್ರಣಾಮ್, ಗಮನ ಸೆಳೆದಿದ್ದರು. ಈಗ 2ನೇ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

ವೈರಂ, ಪ್ರಣಾಮ್ ದೇವರಾಜ್ ನಟಿಸುತ್ತಿರುವ ತೆಲುಗು ಚಿತ್ರದ ಹೆಸರು. ಸಾಯಿ ಶಿವಾನಿ ಎಂಬುವವರು ಚಿತ್ರದ ನಿರ್ದೇಶಕರು. ಈ ಸಿನಿಮಾ ಕನ್ನಡದಲ್ಲೂ ಬರಲಿದೆಯಂತೆ.

ದೇವರಾಜ್, ಕನ್ನಡದಲ್ಲಷ್ಟೇ ಅಲ್ಲ, ತೆಲುಗು ಚಿತ್ರರಂಗದಲ್ಲೂ ಹೆಸರು ಮಾಡಿರುವ ನಟ. ಆಂಧ್ರಪ್ರದೇಶದಲ್ಲಿ ಅತ್ಯುತ್ತಮ ನಟನೆಗಾಗಿ ನಂದಿ ಅವಾರ್ಡ್ ಪಡೆದಿರುವ ಕಲಾವಿದ. ಹೀಗಾಗಿ ಪ್ರಣಾಮ್ ದೇವರಾಜ್ ಮೇಲೆ ತೆಲುಗು ಚಿತ್ರರಂಗದಲ್ಲೂ ಭಾರಿ ನಿರೀಕ್ಷೆ ಇದೆ.

yash's new film is kirataka 2

User Rating: 5 / 5

Star activeStar activeStar activeStar activeStar active

2 ವರ್ಷಗಳ ಗಡ್ಡಕ್ಕೆ ಮುಕ್ತಿ ಹಾಡಿದ ರಾಕಿಂಗ್ ಸ್ಟಾರ್ ಯಶ್, ಆ ಮೂಲಕ ಕೆಜಿಎಫ್ ಚಿತ್ರದ ಶೂಟಿಂಗ್ ಮುಗೀತು ಅನ್ನೊದನ್ನೂ ಸಾರಿಬಿಟ್ಟಿದ್ದಾರೆ. ಹೊಂಬಾಳೆ ಪ್ರೊಡಕ್ಷನ್ಸ್‍ನ ಅದ್ಧೂರಿ ಚಿತ್ರದ ಶೂಟಿಂಗ್ ಮುಗಿಸಿರುವ ಯಶ್, ಬೆನ್ನಲ್ಲೇ ಹೊಸ ಚಿತ್ರ ಶುರು ಮಾಡಿದ್ದಾರೆ. ನಿರೀಕ್ಷೆಯಂತೆಯೇ ಅನಿಲ್ ಕುಮಾರ್ ನಿರ್ದೇಶನದ ಮೈ ನೇಮ್ ಈಸ್ ಕಿರಾತಕ ಚಿತ್ರ ಶುರುವಾಗಿದೆ.

ರಾಜಾಜಿನಗರದ ಗಣಪತಿ ದೇವಸ್ಥಾನದಲ್ಲಿ ಮೈ ನೇಮ್ ಈಸ್ ಕಿರಾತಕ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಜಯಣ್ಣ-ಭೋಗೇಂದ್ರ ನಿರ್ಮಾಣದ ಚಿತ್ರಕ್ಕೆ ನಂದ ಲವ್ಸ್ ನಂದಿತಾ ಖ್ಯಾತಿಯ ಶ್ವೇತಾ ನಾಯಕಿ. ರ್ಯಾಂಬೋ-2 ಯಶಸ್ಸಿನ ಗುಂಗಿನಲ್ಲಿರುವ ಅನಿಲ್, ಕಿರಾತಕ ಚಿತ್ರದ ನಗರ ಜೀವನದ ವರ್ಷನ್‍ನಲ್ಲಿ ಚಿತ್ರದ ಕಥೆ ಮಾಡಿದ್ದಾರಂತೆ.

rambo 2 completes 100 days

User Rating: 0 / 5

Star inactiveStar inactiveStar inactiveStar inactiveStar inactive

Rambo 2. ಶರಣ್ ಹೀರೋ ಆಗಿ ನಟಿಸಿದ್ದ ಸಿನಿಮಾ, ಅದ್ಧೂರಿಯಾಗಿ 100 ದಿನ ಪೂರೈಸಿದೆ. ಸ್ಯಾಂಡಲ್‍ವುಡ್‍ನಲ್ಲಿ ಈ ವರ್ಷ ಹಿಟ್ ಅಗಿರುವ ಕೆಲವೇ ಕೆಲವು ಚಿತ್ರಗಳಲ್ಲಿ  Rambo 2   ಕೂಡಾ ಒಂದು. ಶರಣ್, ಅಶಿಕಾ ರಂಗನಾಥ್, ಚಿಕ್ಕಣ್ಣ, ರವಿಶಂಕರ್ ಪ್ರಮುಖ ಪಾತ್ರದಲ್ಲಿದ್ದ ಚಿತ್ರಕ್ಕೆ ಅನಿಲ್ ಕುಮಾರ್ ನಿರ್ದೇಶಕ. ಶರಣ್, ಅಟ್ಲಾಂಟಾ ನಾಗೇಂದ್ರ ಹಾಗೂ ತಂತ್ರಜ್ಞರೇ ನಿರ್ಮಾಪಕರಾಗಿದ್ದ ಸಿನಿಮಾ Rambo 2.

ಮೈಸೂರಿನ ಗಾಯತ್ರಿ, ಶಿವಮೊಗ್ಗದ ಹೆಚ್‍ಪಿಸಿ, ಮೈಸೂರಿನ ಡಿಆರ್‍ಸಿ ಮಲ್ಟಿಪ್ಲೆಕ್ಸ್, ಬೆಂಗಳೂರಿನ ಪಿವಿಆರ್, ಕಾರ್ನಿವಾಲ್, ಗೋಪಾಲನ್, ಸಿನಿಪೊಲಿಸ್, ಐನಾಕ್ಸ್‍ಗಳಲ್ಲಿ ಶತದಿನೋತ್ಸವ ಆಚರಿಸಿದೆ. ವಿದೇಶಗಳಲ್ಲಿಯೂ ಅದ್ಧೂರಿ ಪ್ರದರ್ಶನ ಕಂಡಿದ್ದ ಚಿತ್ರ, ಪ್ರೇಕ್ಷಕರ ಮನ ಗೆದ್ದಿರುವುದಷ್ಟೇ ಅಲ್ಲ, ಚಿತ್ರದ ತಂತ್ರಜ್ಞರ ಖಜಾನೆಯನ್ನೂ ತುಂಬಿಸಿದೆ. ಈ ಸಿನಿಮಾಗೆ ತಂತ್ರಜ್ಞರೇ ನಿರ್ಮಾಪಕರು.

sharan's huli kunitha in russia

User Rating: 0 / 5

Star inactiveStar inactiveStar inactiveStar inactiveStar inactive

ಕನ್ನಡದ ಕಾಮಿಡಿ ಕಿಂಗ್ ಶರಣ್, ಈಗ ವಿಕ್ಟರಿ 2 ಚಿತ್ರದಲ್ಲಿ ಬ್ಯುಸಿ. ರ್ಯಾಂಬೋ2 ಸಕ್ಸಸ್ ಸಂಭ್ರಮದಲ್ಲಿರೋ ಶರಣ್ ಟೀಂ, ರಷ್ಯಾದಲ್ಲಿ ವಿಕ್ಟರಿ2 ಹಾಡನ್ನು ಅದ್ಧೂರಿಯಾಗಿ ಚಿತ್ರೀಕರಿಸಿದೆ. ರಷ್ಯಾದಲ್ಲಿ ಕನ್ನಡದ ಜನಪದ ಕಲೆಗಳಾದ ಹುಲಿ ಕುಣಿತ, ಯಕ್ಷಗಾನಗಳ ಹಿನ್ನೆಲೆಯಲ್ಲಿ ಹಾಡು ಚಿತ್ರೀಕರಿಸಿದೆ. ರಷ್ಯಾದ ಹಿನ್ನೆಲೆಯಲ್ಲಿ ಕನ್ನಡದ ಜಾನಪದ ಕಲೆಗಳ ಕುಣಿತ ವಿಶೇಷವಾಗಿ ಕಣ್ತುಂಬಿಕೊಳ್ಳಲಿದೆ.

ಪ್ಲೀಸ್ ಟ್ರಸ್ಟು.. ನಾನು ಚೀಪ್ & ಬೆಸ್ಟು.. ಎಂಬ ಹಾಡಿಗೆ ಶರಣ್ ಹಾಗೂ ಅಸ್ಮಿತಾ ಸೂದ್ ಕುಣಿದು ಕುಪ್ಪಳಿಸಿದ್ದಾರೆ. ನಮ್ಮ ನೆಲದ ಜನಪದ ಕಲೆಗಳನ್ನು ವಿದೇಶದಲ್ಲಿ ಚಿತ್ರೀಕರಿಸುವುದೇ ಒಂದು ಸೊಗಸು. ಹೀಗಾಗಿ ಇಲ್ಲಿಂದಲೇ ಕಾಸ್ಟ್ಯೂಮ್ ಹಾಗೂ ನಾಲ್ವರು ನೃತ್ಯಗಾರರರನ್ನು ಕರೆದುಕೊಂಡು ಹೋಗಿದ್ದೆವು. ಎಂದು ವಿವರ ಹಂಚಿಕೊಂಡಿದ್ಧಾರೆ ಕ್ರಿಯೇಟಿವ್ ಹೆಡ್ ತರುಣ್ ಸುಧೀರ್. ರಷ್ಯಾದ ಬಾಕು ಎಂಬಲ್ಲಿ ಈ ಹಾಡು ಚಿತ್ರೀಕರಿಸಲಾಗಿದೆ. ತರುಣ್ ಶಿವಪ್ಪ ನಿರ್ಮಾಣದ ಚಿತ್ರಕ್ಕೆ, ಸಂತು ನಿರ್ದೇಶನವಿದೆ.

uddishya movie

User Rating: 5 / 5

Star activeStar activeStar activeStar activeStar active

ಉದ್ದಿಶ್ಯ. ಹೆಸರೇ ಸ್ವಲ್ಪ ವಿಶೇಷ ಎನಿಸುತ್ತೆ. ಇದು ಈ ವಾರ ರಿಲೀಸ್ ಆಗುತ್ತಿರುವ ಕನ್ನಡ ಸಿನಿಮಾದ ಟೈಟಲ್. ಹಾಲಿವುಡ್ ಕಥೆಗಾರರು ಬರೆದಿರುವ ಕಥೆಗೆ, ಚಿತ್ರಕಥೆ ಹೆಣೆದು ಕನ್ನಡಕ್ಕೆ ತರುತ್ತಿದ್ದಾರೆ ಹೇಮಂತ್.

ಮೂಲತಃ ಕನ್ನಡಿಗರೇ ಆಗಿರುವ ಹೇಮಂತ್, ಏಳೆಂಟು ವರ್ಷಗಳಿಂದ ಅಮೆರಿಕದಲ್ಲೇ ನೆಲೆಸಿದ್ದವು. ಕಿರುಚಿತ್ರಗಳ ತಯಾರಿಯಲ್ಲಿ ತೊಡಗಿಸಿಕೊಂಡಿದ್ದ ಹೇಮಂತ್ ಕೃಷ್ಣಪ್ಪ, ಈ ಚಿತ್ರದ ಮೂಲಕ ನಟರಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಪಕ್ಕಾ ಪ್ರೊಫೆಷನಲ್ ಎನ್ನುವುದು ಅವರು ಚಿತ್ರವನ್ನು ಪ್ರಮೋಟ್ ಮಾಡುತ್ತಿರುವ ರೀತಿಯಲ್ಲಿಯೇ ಎದ್ದು ಕಾಣುತ್ತಿದೆ.

7 ಮಿನಿಟ್ಸ್ ಎಂಬ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದ ಕಿರುಚಿತ್ರ ನಿರ್ಮಿಸಿದ್ದ ತಂಡವೇ, ಉದ್ದಿಶ್ಯ ಚಿತ್ರಕ್ಕೂ ಕೆಲಸ ಮಾಡಿದೆ. ರಾಬರ್ಟ್ ಗ್ರಿಫಿನ್ ಕಥೆಗೆ ಚಿತ್ರಕಥೆಯ ರೂಪ ನೀಡಿ, ನಿರ್ದೇಶನ ಮಾಡಿದ್ದಾರೆ ಹೇಮಂತ್ ಕೃಷ್ಣಪ್ಪ. ಅರ್ಚನ ಗಾಯಕ್‍ವಾಡ್ ಚಿತ್ರದ ನಾಯಕಿ. ಕ್ಯಾಮೆರಾ, ನಿರ್ದೇಶನ ಹೊಸದಲ್ಲವಾದರೂ, ಕನ್ನಡ ಚಿತ್ರರಂಗಕ್ಕೆ ಇವರು ಹೊಸಬರು. ಹಾಲಿವುಡ್ ಶೈಲಿಯಲ್ಲಿಯೇ ನಿರ್ಮಾಣವಾಗಿರುವಂತೆ ಕಾಣುತ್ತಿರುವ ಚಿತ್ರ, ಥ್ರಿಲ್ಲರ್ ಕಥೆಗಳನ್ನು ಇಷ್ಟಪಡುವವರಿಗೆ ವಿಭಿನ್ನ ಅನುಭವ ನೀಡಲಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery