` Flash Back - chitraloka.com | Kannada Movie News, Reviews | Image
darshan's car stopped by cops

User Rating: 5 / 5

Star activeStar activeStar activeStar activeStar active

ದರ್ಶನ್ ಸಂಕ್ರಾಂತಿ ಹಬ್ಬದ ದಿನ ತಾನೇ ಲ್ಯಾಂಬೊರ್ಗಿನಿ ಕಾರು ಖರೀದಿಸಿ, ಪೂಜೆ ಮಾಡಿಸಿಕೊಂಡು, ಚಾಮುಂಡಿ ಬೆಟ್ಟಕ್ಕೆ ಹೋಗಿದ್ದರು. ಹೊಸ ಕಾರು ತೆಗೆದುಕೊಂಡ ನಂತರ ಚಾಮುಂಡಿ ಬೆಟ್ಟಕ್ಕೆ ಹೋಗಿ ಪೂಜೆ ಮಾಡಿಸುವುದು ದರ್ಶನ್ ನಂಬಿಕೆ ಮತ್ತು ಪದ್ಧತಿ. ಹಾಗೆಯೇ ಬೆಟ್ಟಕ್ಕೆ ಹೋಗಿ ವಾಪಸ್ ಬರುತ್ತಿದ್ದ ದರ್ಶನ್ ಅವರ ಕಾರ್‍ನ್ನ ಪೊಲೀಸರು ಅಡ್ಡಗಟ್ಟಿದ್ದಾರೆ. 

ಡಾಕ್ಯುಮೆಂಟ್ಸ್ ಚೆಕ್ ಮಾಡೋಕೆ ಅಂದ್ಕೋಬೇಡಿ. ಅವರು ಕೂಡಾ ದರ್ಶನ್ ಅಭಿಮಾನಿಗಳೇ. ಕಾರ್‍ನ್ನು ನಿಲ್ಲಿಸಿ, ದರ್ಶನ್‍ರನ್ನು ನಿಲ್ಲಿಸಿಕೊಂಡು ಸೆಲ್ಫಿ ತೆಗೆಸಿಕೊಂಡು ಖುಷಿ ಖುಷಿಯಾಗಿ ದರ್ಶನ್‍ರನ್ನು ಕಳಿಸಿಕೊಟ್ಟಿದ್ದಾರೆ.

p vasu's death hoax

User Rating: 0 / 5

Star inactiveStar inactiveStar inactiveStar inactiveStar inactive

ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಷ್ಟೇ ಅಲ್ಲ, ಎಲ್ಲ ರಂಗಗಳಲ್ಲೂ ಸಾವಿನ ವದಂತಿಗಳ ಕಾರುಬಾರು ಜೋರಾಗಿಬಿಟ್ಟಿದೆ. ಕನ್ನಡದ ಹಲವು ಹಿರಿಯ ನಟರು, ಗಾಯಕ, ಗಾಯಕಿಯರ ಸಾವಿನ ಸುದ್ದಿಯನ್ನು ಅದ್ಯಾರು ಹಬ್ಬಿಸ್ತಾರೋ ಗೊತ್ತಿಲ್ಲ, ಕನ್‍ಫರ್ಮೇಷನ್‍ಗಾಗಿ ಹುಡುಕಾಡಿದವರು ಬೇಸ್ತು ಬೀಳೋದು ಮಾತ್ರ ಖಚಿತ. ಇಂತಹ ಸಾವಿನ ಸುದ್ದಿಯ ವದಂತಿಗೆ ಸಿಕ್ಕಿದ್ದವರು ನಿರ್ದೇಶಕ ಪಿ.ವಾಸು.

ಆಪ್ತಮಿತ್ರ, ಆಪ್ತರಕ್ಷಕ, ಆರಕ್ಷಕ, ದೃಶ್ಯ, ಶಿವಲಿಂಗ.. ಮೊದಲಾದ ಹಿಟ್ ಚಿತ್ರಗಳನ್ನು ಕೊಟ್ಟಿರುವ ಪಿ.ವಾಸು ಅವರು ಮೊನ್ನೆ ಮೊನ್ನೆಯಷ್ಟೇ ಈ ಸಾವಿನ ವದಂತಿಗೆ ಸಿಕ್ಕು ನರಳಿದ್ದಾರೆ. ಆಗ ತಾನೇ ಜಿಮ್‍ನಲ್ಲಿ ಗಂಟೆಗಟ್ಟಲೆ ಬೆವರು ಸುರಿಸಿ ಉಸ್ಸಪ್ಪಾ ಎಂದು ಬಂದು ಕುಳಿತವರಿಗೆ ಮೊಬೈಲ್ ತುಂಬಾ ಮೆಸೇಜುಗಳು. ಏನಿದು ಅಂಥಾ ನೋಡಿದರೆ, ಅವರ ಸಾವಿನ ಸುದ್ದಿ.

ಸುದ್ದಿ ನೋಡಿ ನಗುವುದು ಬಿಟ್ಟು ಬೇರೇನೂ ಮಾಡೋಕೆ ಆಗಲಿಲ್ಲ. ನಾನು ಚೆನ್ನಾಗಿಯೇ ಇದ್ದೇನೆ. ಈ ವರ್ಷ 3 ಸಿನಿಮಾ ನಿರ್ದೆಶನ ಮಾಡಲಿದ್ದೇನೆ. ಕಾಳಜಿ ತೋರಿದವರಿಗೆಲ್ಲ ಧನ್ಯವಾದಗಳು ಎಂದಿದ್ದಾರೆ ಪಿ.ವಾಸು.

3 gante 30 minutes 30 seconds movie image

User Rating: 5 / 5

Star activeStar activeStar activeStar activeStar active

3 ಗಂಟೆ 30 ದಿನ 30 ಸೆಕೆಂಡು. ಟೈಟಲ್ಲೇ ವಿಚಿತ್ರ ಮತ್ತು ವಿಭಿನ್ನ. ಚಿತ್ರದ ಕಥೆಯೂ ಹಾಗೇ ವಿಭಿನ್ನವಾಗಿಯೇ ಇದೆ. ಸಿನಿಮಾದ ಟೈಟಲ್ ನೋಡಿದವರು, ಏನಿದರ ಮೀನಿಂಗು ಅಂತಾ ತಲೆಗೆ ಹುಳ ಬಿಟ್ಕೊಂಡಿರೋದಂತೂ ನಿಜ. ಲೆಕ್ಕದ ಪ್ರಕಾರ ಬಂದಿದ್ದರೆ, 30 ದಿನ ಮೊದಲು ಬರಬೇಕಿತ್ತು. ಆದರೆ, 3 ಗಂಟೆ ಬಂದು ಆಮೇಲೆ 30 ದಿನ ದಿ ಬರುತ್ತೆ. 30 ದಿನ ಆದ ಮೇಲೆ ಅರ್ಧ ನಿಮಿಷದ 30 ಸೆಕೆಂಡ್ ಯಾಕೆ ಬಂತು..? ಹೀಗೆ ಹತ್ತಾರು ಪ್ರಶ್ನೆಗಳು.

ಇವುಗಳಿಗೆ ಕಾರಣ ಹೇಳ್ತೀವಿ. ಚಿತ್ರದ ಹೀರೋ ಅರೂ ಗೌಡ ವಕೀಲ. ಎಂಥ ಕೇಸೇ ಇರಲಿ, ಇತ್ಯರ್ಥವಾಗದೆ ಒದ್ದಾಡುತ್ತಿರಲಿ, ಅದರಲ್ಲಿ ಎಂಥದ್ದೇ ಸಮಸ್ಯೆ ಇರಲಿ.. ಕೇವಲ 3 ಗಂಟೆಯಲ್ಲಿ.. ಅದೂ ಕೋರ್ಟ್‍ನ ಹೊರಗೇ ಪರಿಹಾರ ಹೇಳ್ತಾನೆ. ಅದು ಕೇವಲ 3 ಗಂಟೆಯಲ್ಲಿ.

ಹೀಗೆ 3 ಗಂಟೆಯಲ್ಲಿ ಪರಿಹಾರ ಹೇಳುವ ನಾಯಕ ಮತ್ತು ರಾಜ್ಯಕ್ಕೆಲ್ಲ ಬುದ್ದಿ ಹೇಳೋ ನಾಯಕಿ ಕಾವ್ಯಾಶೆಟ್ಟಿ ಮಧ್ಯೆ ಒಂದು ಚಾಲೆಂಜ್ ಉದ್ಭವವಾಗುತ್ತೆ. ಅದು 30 ದಿನಗಳ ರಿಯಾಲಿಟಿ ಶೋ. ಅದು ಮೇಲ್ನೋಟಕ್ಕೆ ಸರಳವಾಗಿ ಕಂಡರೂ, ಅಷ್ಟು ಸರಳವಲ್ಲ. ಅದು 30 ದಿನ.

ಆದರೆ, ಇಡೀ ಸಿನಿಮಾಗೆ 30 ಸೆಕೆಂಡ್‍ನಲ್ಲಿ ಪರಿಹಾರ, ತಿರುವು ಸಿಗ್ತಾ ಹೋಗುತ್ತೆ. ಅರ್ಧ ನಿಮಿಷದಲ್ಲಿ ಆಗುವ ಬದಲಾವಣೆಗಳೇ ಚಿತ್ರದ ಹೈಲೈಟ್ಸ್. ಅದು 30 ಸೆಕೆಂಡ್ಸ್.

ಜನವರಿ 19ಕ್ಕೆ 3 ಗಂಟೆ ಬಿಡುವು ಮಾಡಿಕೊಳ್ಳಿ. 30 ದಿನ, 30 ಸೆಕೆಂಡ್‍ನ ಲವ್ & ಥ್ರಿಲ್ ಅನುಭವಿಸಿ.

sudeep's panchavatara

User Rating: 5 / 5

Star activeStar activeStar activeStar activeStar active

ದಶಾವತಾರ ಎಂದರೆ ತಕ್ಷಣ ನೆನಪಾಗೋದು ಸಾಕ್ಷಾತ್ತು ಶ್ರೀಮನ್ನಾರಾಯಣ. ಅದು ದಶಾವತಾರ ಆಯ್ತು, ಇದೇನಿದು ಪಂಚಾವತಾರ..? ಕಿಚ್ಚ ಸುದೀಪ್ ಯಾಕೆ ಪಂಚಾವತಾರ ಎತ್ತುತ್ತಾರೆ..? ಇವುಗಳಿಗೆಲ್ಲ ಉತ್ತರ ಇರೋದು ರಾಜು ಕನ್ನಡ ಮೀಡಿಯಂನಲ್ಲಿ. ಚಿತ್ರದಲ್ಲಿ ಸುದೀಪ್ ಐದು ಅವತಾರಗಳಲ್ಲಿ ಕಾಣಿಸಿಕೊಳ್ತಾರಂತೆ.

ಅಂದಹಾಗೆ, ಚಿತ್ರದಲ್ಲಿ ಸುದೀಪ್ ಅತಿಥಿ ನಟರಲ್ಲ. ಇಡೀ ಚಿತ್ರದಲ್ಲಿ ಸುದೀಪ್ ಇರ್ತಾರೆ. ಸಖತ್ ಸ್ಟೈಲಿಷ್ ಆಗಿ ಕಾಣಿಸಿಕೊಂಡಿರೋ ಸುದೀಪ್, ಒಂದೊಂದು ದೃಶ್ಯದಲ್ಲಿ ಧರಿಸಿರುವ ಕಾಸ್ಟ್ಯೂಮ್ ಕೂಡಾ ಲಕ್ಷ ಲಕ್ಷ ಬಾಳುವಂತದ್ದು. ಮಹಾಶ್ರೀಮಂತನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸುದೀಪ್, ಚಿತ್ರದುದ್ದಕ್ಕೂ.. ಕ್ಲೈಮಾಕ್ಸ್‍ವರೆಗೂ ಇರ್ತಾರೆ. 

ಸುದೀಪ್‍ಗೆ ಚಿತ್ರದಲ್ಲಿ ಒಂದೇ ಒಂದು ಹಾಡಾಗಲೀ, ಫೈಟ್ ಆಗಲೀ ಇಲ್ಲ. ಆದರೆ, ಸುದೀಪ್ ಅಭಿಮಾನಿಗಳು ಇಷ್ಟಪಡುವಂತಾ ಡೈಲಾಗ್‍ಗಳಿವೆ. ಪ್ರತಿ ದೃಶ್ಯದಲ್ಲೂ ಸುದೀಪ್ ಇಷ್ಟವಾಗುತ್ತಾ ಹೋಗುತ್ತಾರೆ ಅನ್ನೋದು ನಿರ್ಮಾಪಕ ಸುರೇಶ್ ಭರವಸೆ.

ಇನ್ನು ಈ ಚಿತ್ರವನ್ನು ಒಪ್ಪಿಕೊಳ್ಳೋಕೆ ಇಂಥದ್ದೇ ಕಾರಣ ಅಂಥಾ ಹೇಳೋಕಾಗಲ್ಲ. ಇಡೀ ಚಿತ್ರತಂಡಕ್ಕೆ ಸಿನಿಮಾ ಬಗ್ಗೆ ಪ್ರೀತಿ, ಪ್ಯಾಷನ್ ಸಿನಿಮಾ ಒಪ್ಪಿಕೊಳ್ಳೋ ಹಾಗೆ ಮಾಡ್ತು ಅಂಥಾರೆ ಸುದೀಪ್.

ಸಿನಿಮಾವನ್ನೇ ಉಸಿರಾಗಿಸಿಕೊಂಡಿರುವ ನಿರ್ಮಾಪಕ, ನಿರ್ದೇಶಕ ಮತ್ತು ಸುದೀಪ್‍ರ ಸಮ್ಮಿಲನದ ರಾಜು ಕನ್ನಡ ಮೀಡಿಯಂ ಈ ವಾರ ತೆರೆಗೆ ಬರುತ್ತಿದೆ. 

hdk clarifies about his meet with sudeep

User Rating: 5 / 5

Star activeStar activeStar activeStar activeStar active

ಇತ್ತೀಚೆಗೆ ಕಿಚ್ಚ ಸುದೀಪ್ ರಾಜಕೀಯಕ್ಕೆ ಬರ್ತಾರೆ ಅನ್ನೋ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬುತ್ತಲೇ ಇದೆ. ನನಗೆ ರಾಜಕೀಯ ಇಷ್ಟವಿಲ್ಲ. ಸಮಾಜಸೇವೆಯಲ್ಲಿ ಆಸಕ್ತಿ ಇದೆ. ಅದನ್ನು ರಾಜಕೀಯದಿಂದ ದೂರವಿದ್ದುಕೊಂಡೇ ಮಾಡುತ್ತೇನೆ. ಮಾಡುತ್ತಿದ್ದೇನೆ. ನನಗೂ ರಾಜಕೀಯಕ್ಕೂ ಆಗಿಬರಲ್ಲ. ಇದು ಸುದೀಪ್ ಹಲವು ಬಾರಿ ನೀಡಿರುವ ಸ್ಪಷ್ಟನೆ.

ಆದರೂ, ಅವರು ಯಾವುದಾದರೂ ಕೆಲಸಕ್ಕೆ ಮುಖ್ಯಮಂತ್ರಿಗಳನ್ನೋ, ಬೇರೆ ಪಕ್ಷದ ರಾಜಕೀಯ ಮುಖಂಡರನ್ನೋ ಭೇಟಿಯಾದಾಗ.. ಮತ್ತೊಮ್ಮೆ ಇಂತಹ ಸುದ್ದಿ ಹಬ್ಬುತ್ತೆ. ಸುದೀಪ್ ಆದರೂ ಎಷ್ಟು ಬಾರಿ ಸ್ಪಷ್ಟನೆ ಕೊಡಬಹುದು. ಹೀಗಾಗಿ ಸುದೀಪ್ ಆ ಬಗ್ಗೆ ಮಾತನಾಡುವುದನ್ನೇ ಬಿಟ್ಟುಬಿಟ್ಟಿದ್ದಾರೆ.

ಆದರೆ, ಈ ಬಾರಿ ಸುದೀಪ್ ಅವರ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿರುವುದು ಸುದೀಪ್ ಅಲ್ಲ. ಸ್ವತಃ ಹೆಚ್.ಡಿ. ಕುಮಾರಸ್ವಾಮಿ. ಸುದೀಪ್ ಅವರ ಮನೆಗೆ ಹೋಗಿ, ಸುದೀಪ್ ಅವರಿಂದಲೇ ಆತಿಥ್ಯ ಸ್ವೀಕರಿಸಿದ್ದ ಕುಮಾರಸ್ವಾಮಿ ಈ ಕುರಿತು ಸ್ಪಷ್ಟನೆ ಕೊಟ್ಟಿದ್ದಾರೆ.

ಸುದೀಪ್ ಅವರಿಗೆ ಚಿತ್ರರಂಗದಲ್ಲಿ ಬಹಳಷ್ಟು ಸಾಧನೆ ಮಾಡುವ ಆಸೆಯಿದೆ. ಅವರೊಬ್ಬ ಅತ್ಯುತ್ತಮ ಕಲಾವಿದ. ಅವರನ್ನು ರಾಜಕೀಯಕ್ಕೆ ಎಳೆತಂದು ಅವರ ರಾಜಕೀಯ ಭವಿಷ್ಯವನ್ನು ಹಾಳು ಮಾಡುವ ಸಣ್ಣತನ ನನಗಿಲ್ಲ ಎಂದಿದ್ದಾರೆ ಕುಮಾರಸ್ವಾಮಿ.

ಆದರೆ, ರಾಜ್ಯದ ಹಲವಾರು ಸಮಸ್ಯೆಗಳ ಬಗ್ಗೆ ಧ್ವನಿಗೂಡಿಸುವಂತೆ ಅವರಿಗೆ ಮನವಿ ಮಾಡಿದ್ದೇನೆ. ಹಲವಾರು ವಿಚಾರಗಳ ಬಗ್ಗೆ ಮುಕ್ತವಾಗಿ ಚರ್ಚಿಸಿದ್ದೇನೆ ಎಂದಿದ್ದಾರೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ.

 

 

Geetha Movie Gallery

Adhyaksha In America Audio Release Images