` Flash Back - chitraloka.com | Kannada Movie News, Reviews | Image
puneeth with beard

User Rating: 5 / 5

Star activeStar activeStar activeStar activeStar active

ಪುನೀತ್ ರಾಜ್‍ಕುಮಾರ್ ಗಡ್ಡಧಾರಿಯಾಗಿರುವುದನ್ನು ನೋಡಿದವರೇ ಅಪರೂಪ. ಒಂದು ಕಾಲದ ವೀರಕನ್ನಡಗಿಗ, ರಾಜಕುಮಾರ ಚಿತ್ರದಲ್ಲಿ ಕೆಲವೊಂದು ದೃಶ್ಯಗಳನ್ನು ಹೊರತುಪಡಿಸಿದರೆ, ಪುನೀತ್ ಸಿನಿಮಾಗಳಲ್ಲಿ ಕ್ಲೀನ್ & ನೀಟ್ ಶೇವ್ ಆಗಿಯೇ ಕಾಣಿಸಿಕೊಳ್ತಾರೆ. ಇತ್ತೀಚೆಗೆ ಫ್ಯಾಮಿಲಿ ಪವರ್ ರಿಯಾಲಿಟಿ ಶೋನದಲ್ಲಿ ಗಡ್ಡಧಾರಿಯಾಗಿದ್ದಾರೆ.

ಇಂತಹ ಪುನೀತ್‍ಗೆ ತಾನೂ ಗಡ್ಡಧಾರಿಯಾಗಿ ಸಿನಿಮಾವೊಂದರಲ್ಲಿ ನಟಿಸಬೇಕು ಎನ್ನಿಸಿದೆ. ಹಾಗಂತ, ಈಗ ಗಡ್ಡ ಬಿಟ್ಟಿರೋದು ನೋಡಿ, ಅದು ಮುಂದಿನ ಚಿತ್ರದ ಗೆಟಪ್ ಎಂದುಕೊಳ್ಳಬೇಡಿ. ಅಂಜನೀಪುತ್ರದ ಶೂಟಿಂಗ್ ಮುಗಿದು, ಹೊಸ ಚಿತ್ರ ಶುರುವಾಗುವ ನಡುವಿನ ಗ್ಯಾಪ್‍ಗಷ್ಟೇ ಗಡ್ಡ. ಈಗಾಗಲೇ ಪುನೀತ್ ಒನ್ಸ್ ಎಗೇಯ್ನ್ ನೀಟ್ & ಕ್ಲೀನ್ ಶೇವ್.

ಈಗ ಪುನೀತ್‍ಗೆ ಗಡ್ಡಧಾರಿಯಾಗಿ ನಟಿಸುವಂತಹ ಕಥೆ ಹೇಳುವವರು ಯಾರು..? ಪುನೀತ್ ಹುಡುಕ್ತಾನೇ ಇರ್ತಾರೆ.

ಪುನೀತ್ ಗಡ್ಡ ಬಿಡೋಕೆ ಇವರೇ ಕಾರಣ..!

will kanaka release on jan 12th

User Rating: 0 / 5

Star inactiveStar inactiveStar inactiveStar inactiveStar inactive

ಕನಕ. ಆರ್.ಚಂದ್ರು-ದುನಿಯಾ ವಿಜಿ ಕಾಂಬಿನೇಷನ್‍ನ ಸಿನಿಮಾ. ದುನಿಯಾ ವಿಜಿ ಆಟೋ ಡ್ರೈವರ್ ಆಗಿ ನಟಿಸಿರುವ ಚಿತ್ರದ ಟ್ರೇಲರ್,ಹಾಡು ಭರ್ಜರಿ ಸದ್ದು ಮಾಡುತ್ತಿವೆ. ಚಿತ್ರದಲ್ಲಿ ಹರಿಪ್ರಿಯಾ ಹಾಗೂ ಮಾನ್ವಿತಾ ಹರೀಶ್ ನಾಯಕಿಯರು. 

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗೆ ಕನಕ ಚಿತ್ರ ಥಿಯೇಟರಿನಲ್ಲಿರುತ್ತಿತ್ತು. ಆದರೆ ಅಂಜನೀಪುತ್ರ ರಿಲೀಸ್‍ಗೆ ರೆಡಿಯಾದ ಕಾರಣ, ಸ್ಟಾರ್‍ವಾರ್‍ನಿಂದ ಹಿಂದೆ ಸರಿದರು ಆರ್.ಚಂದ್ರು. ಚಿತ್ರದ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳನ್ನು ಸ್ವಲ್ಪ ನಿಧಾನವಾಗಿಯೇ ಮುಗಿಸಿದರು. 

ಈಗ ಚಿತ್ರ ಸೆನ್ಸಾರ್ ಬೋರ್ಡ್‍ನಲ್ಲಿದೆ. ಬಹುಶಃ ಈ ವಾರ್ ಸೆನ್ಸಾರ್ ಮುಗಿಸಿ ಬರಬಹುದು. ಅದಾದ ನಂತರ ಚಿತ್ರದ ಪ್ರೊಮೋಷನ್ಸ್ ಶುರುವಾಗಲಿದೆ. ಜನವರಿ 12ಕ್ಕೆ ಚಿತ್ರವನ್ನು ತೆರೆಗೆ ತರಲು ಆರ್.ಚಂದ್ರು ಸಕಲ ತಯಾರಿಯನ್ನೂ ನಡೆಸಿದ್ದಾರಂತೆ. ಡಾ.ರಾಜ್ ಅಭಿಮಾನಿ ಕನಕನ ಕರಾಮತ್ತು ನೋಡಲು ತಯಾರಾಗಿ.

 

anjaniputra

User Rating: 5 / 5

Star activeStar activeStar activeStar activeStar active

ಪುನೀತ್ ರಾಜ್‍ಕುಮಾರ್ ಅಭಿನಯದ ಅಂಜನೀಪುತ್ರ ನಾಳೆಯಿಂದ ಆವರಿಸಿಕೊಳ್ಳಲಿದ್ದಾನೆ. ಹರ್ಷ-ಪುನೀತ್-ರಶ್ಮಿಕಾ-ರಮ್ಯಕೃಷ್ಣ ಕಾಂಬಿನೇಷನ್‍ನ ಚಿತ್ರವನ್ನು ಪುನೀತ್ ಒಪ್ಪಿಕೊಳ್ಳೋಕೆ ಕಾರಣ ಏನ್ ಗೊತ್ತಾ..? ಅದು ಅಮ್ಮ. ರಾಜಕುಮಾರ ಚಿತ್ರದ ನಂತರ ಪುನೀತ್ ನಟಿಸಿದ ಚಿತ್ರ ಅಂಜನೀಪುತ್ರ. ಅಷ್ಟು ದೊಡ್ಡ ಸ್ವಮೇಕ್ ಹಿಟ್ ಕೊಟ್ಟಿದ್ದ ಪುನೀತ್, ರೀಮೇಕ್ ಚಿತ್ರ ಒಪ್ಪಿಕೊಳ್ಳೋಕೆ ಕಾರಣ, ಅಮ್ಮ.

ತಮಿಳಿನ ಪೂಜೈ ಚಿತ್ರದ ರೀಮೇಕ್ ಅಂಜನೀಪುತ್ರ. ಆ ಚಿತ್ರದಲ್ಲಿನ ತಾಯಿ-ಮಗನ ಸೆಂಟಿಮೆಂಟ್ ಪುನೀತ್‍ಗೆ ತುಂಬಾ ಇಷ್ಟವಾಯ್ತಂತೆ. ಇನ್ನು ಸ್ವತಃ ಪುನೀತ್, ತಮ್ಮ ತಾಯಿಯಿಂದ ಬಹಳವಾಗಿ ಪ್ರೇರಿತರಾದವರು. ಆದರೆ, ನನ್ನ ತಾಯಿಯ ಪ್ರೀತಿಯನ್ನು ನಾನು ಯಾವುದರೊಂದಿಗೆ ಕನೆಕ್ಟ್ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ ಎನ್ನುತ್ತಾರೆ ಪುನೀತ್.

ಅಂಜನೀಪುತ್ರದಲ್ಲಿ ಪುನೀತ್ ತಾಯಿಯಾಗಿ ನಟಿಸಿರುವುದು ರಮ್ಯಕೃಷ್ಣ. ನಾಯಕನಷ್ಟೇ ತೂಕದ ಪಾತ್ರವದು. ಕಣ್ಣು ಮತ್ತು ಧ್ವನಿಯಲ್ಲೇ ಪ್ರೇಕ್ಷಕರ ಎದೆಗಿಳಿಯುವ ರಮ್ಯಕೃಷ್ಣ ಅಂಜನೀಪುತ್ರದಲ್ಲೂ ಆವರಿಸಿಕೊಳ್ಳುತ್ತಾರೆ ಅನ್ನೋದ್ರಲ್ಲಿ ಅನುಮಾನವಿಲ್ಲ.

tora tora travels through time

User Rating: 0 / 5

Star inactiveStar inactiveStar inactiveStar inactiveStar inactive

ನಾವೀಗ ಬದುಕುತ್ತಿರುವುದು ಸತ್ಯ. ಹಿಂದೆ.. ಯಾವಾಗಲೋ ಇದ್ದದ್ದೂ ಸತ್ಯ. ಆದರೆ, ನಮಗೆ ಅದು ನೆನಪಿಲ್ಲ. ಅದಕ್ಕೇನು ಮಾಡಬೇಕು. ಹಿಂದಕ್ಕೆ ಹೋಗಬೇಕು. ಹಿಂದೆ.. ಹಿಂದೆ.. ಹಿಂದೆ.. ತುಂಬಾ ಹಿಂದೆ.. 

ಹಾಗೆ ಹೋಗಬೇಕೆಂದರೆ, ಟೈಮ್ ಮೆಷಿನ್ ಬೇಕು.

ಇದು ಕಲ್ಪನೆಯೇ ಇರಬಹುದು. ಆದರೆ ಇಂಥಾದ್ದೊಂದು ಕಲ್ಪನೆಯ ಥ್ರಿಲರ್ ಸಿನಿಮಾ ಟೋರಾ ಟೋರಾ. ಇದೇ ವಾರ ತೆರೆಗೆ ಬರುತ್ತಿರುವ ಸಿನಿಮಾ ಇಂಥ ಟೈಮ್ ಟ್ರಾವೆಲ್‍ನ ಕಥೆ ಹೇಳಲಿದೆ. ಕೇವಲ ಭೂತಕಾಲಕ್ಕಷ್ಟೇ ಅಲ್ಲ, ವರ್ತಮಾನದಿಂದ ಭವಿಷ್ಯತ್ ಕಾಲಕ್ಕೂ ಹೋಗುವ ಕಥೆ ಸಿನಿಮಾದಲ್ಲಿದೆಯಂತೆ.

ಅಂದರೆ, ಮುಂದಾಗುವ ಅಪಾಯ ತಿಳಿದುಕೊಂಡು ಅದನ್ನು ತಪ್ಪಿಸಲು ನಡೆಯುವ ಹೋರಾಟ. ಆದರೂ ಅದು ನಡೆಯುತ್ತಾ..? ಇಲ್ಲವಾ..? ಕಥೆಯೇನೋ ಇಂಟ್ರೆಸ್ಟಿಂಗ್. ಹೆಸರು ಅಷ್ಟೇ ವಿಚಿತ್ರ.. ವಿಭಿನ್ನ. 

ಮಾಯಾವಿ ಪ್ರೊಡಕ್ಷನ್ಸ್‍ನ ಹರ್ಷಗೌಡ ನಿರ್ದೇಶನದ ಚಿತ್ರಕ್ಕೆ ಯು ಸರ್ಟಿಫಿಕೇಟ್ ಇದೆ. ಅದರರ್ಥ, ನೀವು ಕುಟುಂಬ ಸಮೇತರಾಗಿ ಹೋಗಿ ಸಿನಿಮಾ ನೋಡಿ ಬರಬಹುದು. ಯಾವುದಕ್ಕೂ ಜಾಗ್ರತೆ.. ಥಿಯೇಟರ್‍ಗೆ ಹೋಗುವ ಮುನ್ನ ಟೈಂ ಸರಿಯಾಗಿ ನೋಡಿಕೊಳ್ಳಿ. ಅಕಸ್ಮಾತ್, ನಿಮ್ಮ ವಾಚ್ ಟೈಂ ಮೆಷಿನ್ ಜೊತೆ ಸಿಂಕೋ..ಲಿಂಕೋ ಆಗಿಬಿಟ್ಟರೆ..

humble politician creates trend

User Rating: 5 / 5

Star activeStar activeStar activeStar activeStar active

ಹಂಬಲ್ ಪೊಲಿಟಿಷಿಯನ್ ನೊಗರಾಜ್. ಇದು ಚಿತ್ರದ ಹೆಸರು. ನೊಗರಾಜ್ ಅಥವಾ ನೋಗರಾಜ್ ಅಥವಾ ನಾಗರಾಜ್... ಹೀಗೆ ಮೂರೂ ಸ್ಟೈಲಲ್ಲಿ ಜನ ಚಿತ್ರದ ಹೆಸರು ಹೇಳುತ್ತಿದ್ದಾರೆ. ಚಿತ್ರವೊಂದು ಅಷ್ಟರಮಟ್ಟಿಗೆ ಕ್ರಿಯೇಟಿವಿಟಿ ಸೃಷ್ಟಿಸುವುದರಲ್ಲೇ ಚಿತ್ರದ ಯಶಸ್ಸು ಕೂಡಾ ಅಡಗಿದೆ. ಚಿತ್ರ ಬಿಡುಗಡೆಗೆ ಮುನ್ನವೇ ಪ್ರೇಕ್ಷಕರ ಮಧ್ಯೆ ಟಾಕಿಂಗ್ ಸೃಷ್ಟಿಸಿದೆ.

ಈ ಚಿತ್ರದಲ್ಲಿರೋದು ರಾಜಕಾರಣಿಯ ಪಾತ್ರ. ರಾಜಕಾರಣಕ್ಕಾಗಿ, ರಾಜಕಾರಣಿಯೊಬ್ಬ ಏನೇನೆಲ್ಲ ಗಿಮಿಕ್ ಮಾಡಬಹುದೋ.. ಎಲ್ಲವನ್ನೂ ಚಿತ್ರದಲ್ಲಿ ಹೇಳಲಾಗಿದೆ. ದಾನೀಶ್ ಇರೋದ್ರಿಂದ ವ್ಯಂಗ್ಯ, ವಿಡಂಬನೆ ಸ್ವಲ್ಪ ಹೆಚ್ಚೆಂದೇ ಹೇಳಬಹುದು. ನೋಡುವಾಗ ಮುಗುಳ್ನಕ್ಕವರು, ಮತ್ತೆ ಮತ್ತೆ ನೆನಪಾದಾಗ ಗಹಗಹಿಸಿ ನಗುವಂತಾ ದೃಶ್ಯಗಳಿವೆಯಂತೆ.

ಮಹಿಳೆಯರೇ.. ಮಹನೀಯರೇ.. ಪ್ರೇಕ್ಷಕರೇ.. ನೋಗರಾಜ್‍ಗೆ ಮತ ನೀಡಿ. ಡಿಸೆಂಬರ್ 29ಕ್ಕೆ ಬರ್ತಾರೆ. ಕರ್ನಾಟಕದ ಎಲೆಕ್ಷನ್‍ವರೆಗೂ ಕಾಯಿಸಲ್ಲ. ಸಿನಿಮಾ ನೋಡಿ, ನಮ್ಮ ರಾಜಕಾರಣಿಗಳು ಹೇಗೆಲ್ಲ ಗಿಮಿಕ್ ಮಾಡ್ತಾರೆ ಅನ್ನೊದನ್ನ ನೀವೇ ಅಂದಾಜು ಮಾಡಿ. ದಾನೀಶ್ ಜೊತೆ ಶೃತಿ ಹರಿಹರನ್ ಪ್ರಮುಖ ಪಾತ್ರದಲ್ಲಿದ್ದಾರೆ. ಸಿನಿಮಾದಲ್ಲಿಗುಜರಾತ್, ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಕಾಣಿಸಿಕೊಂಡ ಗಿಮಿಕ್‍ಗಳೂ ಇವೆ. 

Phailwaan Audio Release Gallery

Rightbanner02_gimmick_inside

Nanna Prakara Audio Release Images