` Flash Back - chitraloka.com | Kannada Movie News, Reviews | Image
sreenivasa kalyana

User Rating: 0 / 5

Star inactiveStar inactiveStar inactiveStar inactiveStar inactive

ಚಿತ್ರ ನಿರ್ಮಾಪಕ ಕೆ. ಮಂಜು, ಗೆಳೆಯರ ಬಳಗದ ಮೂಲಕ ತುರುವೇಕೆರೆಯಲ್ಲಿ ಶ್ರೀನಿವಾಸ ಕಲ್ಯಾಣ ನಡೆಸಲು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ನವೆಂಬರ್ 4ರಂದು ತುರುವೇಕೆರೆಯಲ್ಲಿ ಶ್ರೀನಿವಾಸ ಕಲ್ಯಾಣ ನಡೆಯಲಿದೆ. ಅಂದಹಾಗೆ ಮಂಜು ಅವರು ಈ ಕಾರ್ಯಕ್ರಮ ಆಯೋಜಿಸಲು ಕಾರಣ, ಈ ವರ್ಷ ಸುರಿದ ಭಾರಿ ಮಳೆ. 

ಉತ್ತಮ ಮಳೆಯಾಗಿದೆ. ಸುಭಿಕ್ಷತೆ ನೆಲೆಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ಅಲ್ಲದೆ ಎಷ್ಟೋ ಜನರಿಗೆ ತಿರುಪತಿಗೆ ಹೋಗಿ

ವೆಂಕಟೇಶ್ವರನ ದರ್ಶನ ಪಡೆಯಲು ಸಾಧ್ಯವಾಗುವುದಿಲ್ಲ. ಅಂಥವರು ಇಲ್ಲಿ ಶ್ರೀನಿವಾಸ ಕಲ್ಯಾಣದಲ್ಲಿ ಭಾಗವಹಿಸಿ ದರ್ಶನ ಪಡೆಯಬಹುದು ಎಂದಿದ್ದಾರೆ ಮಂಜು. ಹೀಗಾಗಿಯೇ ಸುಮಾರು 35 ಸಾವಿರ ಭಕ್ತರು ಏಕಕಾಲದಲ್ಲಿ ಭಾಗವಹಿಸಲು ಅನುವಾಗುವಂತೆ ತುರುವೇಕೆರೆಯ ಹಿರಣ್ಣಯ್ಯ ರಂಗಮಂದಿರದಲ್ಲಿ ಕಾರ್ಯಕ್ರಮ ಆಯೋಜಿಸಿದ್ದಾರೆ.

ಮಂಜು ಅವರಿಗೆ ಕಳೆದ ಬಾರಿ ಶ್ರೀನಿವಾಸ ಕಲ್ಯಾಣ ನಡೆಸಿದ್ದ ಕಹಿ ನೆನಪು ಕೂಡಾ ಇದೆ. ಕಳೆದ ಬಾರಿ ಶ್ರೀನಿವಾಸ ಕಲ್ಯಾಣ ನಡೆಸಿದ್ದು ಹಾಗೂ ಚುನಾವಣೆ ಒಟ್ಟಿಗೇ ಬಂದುಬಿಟ್ಟಿದ್ದವು. ರಾಜಕೀಯದಲ್ಲೂ ಸಕ್ರಿಯವಾಗಿರುವ ಕೆ.ಮಂಜು, ನೀತಿ ಸಂಹಿತೆ ಉಲ್ಲಂಘನೆಯ ಕೇಸ್ ಎದುರಿಸಿದ್ದರು. ನಂತರ ನಿರ್ದೋಷಿಯೆಂದು ಸಾಬೀತಾಗಿತ್ತು. 

ತುರುವೇಕೆರೆಯಲ್ಲಿಯೇ ಸುದ್ದಿಗೋಷ್ಟಿ ನಡೆಸಿದ ಕೆ.ಮಂಜು ಶ್ರೀನಿವಾಸ ಕಲ್ಯಾಣದ ವಿವರ ನೀಡಿದ್ದಾರೆ. ಕೆ.ಮಂಜು ಅವರೊಂದಿಗೆ ಪ್ರಸನ್ನ, ಬ್ಯಾಂಕ್ ಶ್ರೀನಿವಾಸ್, ರೈಲ್ವೆ ರಾಮಚಂದ್ರು, ಅರಳೀಕರೆ ಶಿವಯ್ಯ, ಅರಳೀಕರೆ ರವಿಕುಮಾರ್, ಕೋಳಿಘಟ್ಟ ಶಿವಾನಂದ್, ವೆಂಕಟೇಶ್, ಉಪ್ಪಿ ಮೊದಲಾದವರು ಭಾಗವಹಿಸಿದ್ದರು.

ಶ್ರೀನಿವಾಸ ಕಲ್ಯಾಣಕ್ಕೆ ಯಾರು ಬೇಕಾದರೂ ಹೋಗಬಹುದು. ತಿಮ್ಮಪ್ಪನ ದರ್ಶನವಷ್ಟೇ ಅಲ್ಲ, ಭಕ್ತರಿಗೆ ತಿರುಪತಿ ಲಡ್ಡು ಕೂಡಾ ಸಿಗಲಿದೆ.

raju kannada medium image

User Rating: 0 / 5

Star inactiveStar inactiveStar inactiveStar inactiveStar inactive

The Censor officials who watched Raju Kannada Medium on Thursday evening have given it an U/A certificate with conditions that in a few placed some shots will be cut. There was objections to only 2-3 shots which the film makers have agreed to cut.

This includes a short shot in which money is shown to be burning. The film starring First Rank Raju fame Gurunandan also has Sudeep in a special guest role.

onc more kaurava movie image

User Rating: 1 / 5

Star activeStar inactiveStar inactiveStar inactiveStar inactive

ತಿಮಿರಾ.. ಇಲ್ಲ ಪೊಗರಾ.. ಹಾಗೆ ಕೇಳೋದು ಬಿ.ಸಿ.ಪಾಟೀಲ್ ಅಲ್ಲ, ನರೇಶ್ ಗೌಡ. ಕುಕ್ಕುಕ್ಕೂ ಅನ್ನೋದು ಪ್ರೇಮಾ ಅಲ್ಲ, ಅನುಷಾ. ಏಕೆಂದರೆ, ಇವನು ಒನ್ಸ್ ಮೋರ್ ಕೌರವ. ನಿರ್ದೇಶಕ ಅದೇ ಎಸ್.ಮಹೇಂದರ್. ಚಿತ್ರವನ್ನು ನೋಡಿದರೆ, ಕೌರವ ಅನ್ನೋ ಟೈಟಲ್ಲೇ ಯಾಕೆ ಸೂಕ್ತ ಅನ್ನೋದು ನಿಮಗೇ ಗೊತ್ತಾಗುತ್ತೆ ಅಂತಾರೆ ಮಹೇಂದರ್.

ಓಲ್ಡ್ ಕೌರವ ಚಿತ್ರದ ಇನ್ನೊಬ್ಬ ಹೀರೋ ಹಂಸಲೇಖ, ಒನ್ಸ್ ಮೋರ್ ಕೌರವದಲ್ಲಿ ಇಲ್ಲ. ಸಂಗೀತ ಶ್ರೀಧರ್ ಸಂಭ್ರಮ್ ಅವರದ್ದು, ಸಾಹಿತ್ಯ ಕೆ.ಕಲ್ಯಾಣ್ ಅವರದ್ದು. ಚಿತ್ರದಲ್ಲಿ ನಾಯಕ ನರೇಶ್ ಗೌಡ, ಅದೇ ರಗಡ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. 

ಗ್ರಾಮೀಣ ಸೊಗಡಿನ ಪ್ರೇಮಕಥೆ, ಮಹೇಂದರ್ ಅವರ ಟ್ರಂಪ್ ಕಾರ್ಡ್. ಈ ಬಾರಿಯೂ ಅದನ್ನು ಮಹೇಂದರ್ ಬಿಟ್ಟಿಲ್ಲ. ಕೌರವದಲ್ಲಿ ನಾಯಕ ಪಟೇಲನಾದರೆ, ಇಲ್ಲಿ ಪೊಲೀಸ್. ಚಿತ್ರದ ಬಹುತೇಕ ಚಿತ್ರೀಕರಣ ಮಂಡ್ಯದ ಕರಿಘಟ್ಟ ಗ್ರಾಮದಲ್ಲಿ ಆಗಿದೆ. ಚಿತ್ರ ಅದ್ಭುತವಾಗಿ ಬಂದಿದೆ ಎನ್ನುವುದು ನನ್ನ ನಂಬಿಕೆ, ಉಳಿದದ್ದನ್ನು ನಿರ್ಧರಿಸುವುದು ಪ್ರೇಕ್ಷಕ ಅಂತಾರೆ ಮಹೇಂದರ್.

upendra to face first case in politics

User Rating: 0 / 5

Star inactiveStar inactiveStar inactiveStar inactiveStar inactive

ರಿಯಲ್ ಸ್ಟಾರ್, ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಅಧ್ಯಕ್ಷ ಉಪೇಂದ್ರ ವಿರುದ್ಧ ಮೊದಲ ದೂರು ದಾಖಲಾಗಿದೆ. ದೂರು ನೀಡಿರುವುದು ಉಪೇಂದ್ರ ವಿರುದ್ಧ ದೂರು ನೀಡುತ್ತೇನೆ ಎಂದಿದ್ದ ಶೋಭಾ ಕರಂದ್ಲಾಜೆ ಅಲ್ಲ. ಬೆಂಗಳೂರು ನಗರ ಜೆಡಿಯು ನಗರ ಪ್ರಧಾನ ಕಾರ್ಯದರ್ಶಿ ಎನ್. ನಾಗೇಶ್ ಎಂಬುವವರು.

ಉಪೇಂದ್ರ ಕೆಪಿಜೆಪಿ ಕುರಿತ ಸುದ್ದಿಗೋಷ್ಟಿಯಲ್ಲಿ ಮಾತನಾಡುವಾಗ ಬೇರೆಯವರು ನಿಮಗೆ ಹಣ ಕೊಟ್ಟರೆ ತೆಗೆದುಕೊಳ್ಳಿ, ಆದರೆ, ವೋಟನ್ನು ನಮಗೇ ಹಾಕಿ ಎಂದಿದ್ದರು. ಇದು ಮತದಾರರನ್ನು ಲಂಚ ತೆಗೆದುಕೊಳ್ಳಲು ಪ್ರೋತ್ಸಾಹ ನೀಡಿದಂತೆ ಎನ್ನುವುದು ನಾಗೇಶ್ ಅವರ ದೂರು. ಉಪೇಂದ್ರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ನಾಗೇಶ್, ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ಹಿಂದೆ ಅರವಿಂದ ಕೇಜ್ರಿವಾಲ್ ಇಂಥದ್ದೇ ಹೇಳಿಕೆ ನೀಡಿ, ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡಿದ್ದರು. ಉಪೇಂದ್ರ ಅವರಿಗೆ ಇಂತಹವುಗಳ ಬಗ್ಗೆ ಮಾಹಿತಿಯೂ ಇರಬೇಕು.

gr vishwanath

User Rating: 0 / 5

Star inactiveStar inactiveStar inactiveStar inactiveStar inactive

ಜಿ.ಆರ್.ವಿಶ್ವನಾಥ್, ಭಾರತ ಕ್ರಿಕೆಟ್ ಕಂಡ ಅದ್ಭುತ ಕ್ರಿಕೆಟರ್. ಅವರು ಬೌಂಡರಿಗಳನ್ನು ಹೊಡೆಯುತ್ತಿರಲಿಲ್ಲ. ಚೆಂಡನ್ನು ಮುದ್ದಿಸುತ್ತಿದ್ದರು. ಅಂಗಳದಲ್ಲಿ ಅವರು ಆಕರ್ಷಕ ಪೇಂಯ್ಟಿಂಗ್ ಬಿಡಿಸುತ್ತಿದ್ದರು ಎನ್ನುವುದು ಅವರ ಆಟದ ಶೈಲಿಗಿರುವ ಕಾಂಪ್ಲಿಮೆಂಟು. ಹೀಗೆ ಭಾರತೀಯ ಕ್ರಿಕೆಟ್‍ಗೆ ಕಲೆಯ ಸ್ಪರ್ಶ ನೀಡಿದ ವಿಶ್ವನಾಥ್, ಈಗ ಟಗರು ಚಿತ್ರದ ಟ್ರೇಲರ್ ಬಿಡುಗಡೆ ಮಾಡೋಕೆ ಒಪ್ಪಿದ್ದಾರೆ.

ಶಿವರಾಜ್ ಕುಮಾರ್ ಅಭಿಮಾನಿಗಳಿಂದ ಲಾಂಚ್ ಆಗಲಿರುವ ಟಗರು ಚಿತ್ರದ ಟ್ರೇಲರ್‍ನ್ನು ಖುದ್ದು ವಿಶ್ವನಾಥ್ ಬಿಡುಗಡೆ ಮಾಡಲಿದ್ದಾರೆ. ಅಷ್ಟೇ ಅಲ್ಲ, ನವೆಂಬರ್ 7ರಂದು ನಡೆಯುವ ಆ ಕಾರ್ಯಕ್ರಮಕ್ಕೆ ಡಿ.ಕೆ. ಶಿವಕುಮಾರ್, ರಕ್ಷಿತ್ ಶೆಟ್ಟಿ ಹಾಗೂ ರಾಜ್ ಬ್ರದರ್ಸ್ ಸಾಕ್ಷಿಯಾಗಲಿದ್ದಾರೆ.

ಇಡೀ ಕಾರ್ಯಕ್ರಮದ ಹಿಂದಿರುವುದು ಶಿವು ಅಡ್ಡಾ ಹಾಗೂ ರಾಜ್ ಡೈನಸ್ಟಿ. ಚಿತ್ರದ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಕೂಡಾ ಶಿವಣ್ಣ ಅಭಿಮಾನಿ ಸಂಘದವರೇ. ಚಿತ್ರದಲ್ಲಿ ಶಿವರಾಜ್ ಕುಮಾರ್ ಜೊತೆ ಧನಂಜಯ್, ವಸಿಷ್ಟ ಸಿಂಹ, ಜಾಕಿ ಭಾವನಾ, ಮಾನ್ವಿತಾ ಹರೀಶ್ ಮೊದಲಾದವರಿದ್ದಾರೆ. ಅಂದಹಾಗೆ ಕಡ್ಡಿಪುಡಿ ನಂತರ ದುನಿಯಾ ಸೂರಿ ಹಾಗೂ ಶಿವಣ್ಣ ಜೊತೆಯಾಗಿರುವ 2ನೇ ಚಿತ್ರ ಇದು.

Related Articles :-

GR Vishwanath To Launch Tagaru Teaser

I Love You Movie Gallery

Rightbanner02_butterfly_inside

Paddehuli Movie Gallery