` Flash Back - chitraloka.com | Kannada Movie News, Reviews | Image
sathish ninsam explains risk management before chambal release

User Rating: 0 / 5

Star inactiveStar inactiveStar inactiveStar inactiveStar inactive

ಇದೇ ವಾರ ರಿಲೀಸ್ ಆಗುತ್ತಿರುವ ಚಂಬಲ್ ಸಿನಿಮಾ, ನೀನಾಸಂ ಸತೀಶ್ ತೆಗೆದುಕೊಳ್ಳುತ್ತಿರುವ ಅತಿ ದೊಡ್ಡ ರಿಸ್ಕ್ ಹೌದಾ..? ಹೀಗೊಂದು ಪ್ರಶ್ನೆ, ಸತೀಶ್ ಅವರ ಮುಂದಿದೆ. ಅಫ್‍ಕೋರ್ಸ್.. ಈ ರೀತಿಯ ಸಬ್ಜೆಕ್ಟ್, ನೀನಾಸಂ ಸತೀಶ್ ಅವರಿಗೆ ಖಂಡಿತಾ ಹೊಸದು. ಅಷ್ಟೇ ಅಲ್ಲ, ಅವರು ಇದುವರೆಗೆ ಗೆದ್ದಿರುವುದು ಮಂಡ್ಯ ಸ್ಟೈಲ್ ಪಾತ್ರಗಳಿಂದ. ಹೀಗಾಗಿಯೇ ಇಂಥಾದ್ದೊಂದು ಪ್ರಶ್ನೆಯನ್ನ ಸತೀಶ್ ಮುಂದಿಟ್ಟರೆ, ಅವರು ಹೇಳೋದೇನು ಗೊತ್ತಾ..?

`ಬೆಂಗಳೂರಿನ ಜನರಿಗೆ ಟ್ರಾಫಿಕ್ ನಡುವೆಯೂ ಗಾಡಿ ಓಡಿಸೋದು, ರಸ್ತೆ ದಾಟೋದು ಅತಿ ದೊಡ್ಡ ರಿಸ್ಕ್. ಹಾಗೆಯೇ ಹೀರೋ ಆಗುವುದು ದೊಡ್ಡ ರಿಸ್ಕ್. ಗೆಲುವು ಸಿಕ್ಕಮೇಲೆ ಅದನ್ನು ಕಾಪಾಡಿಕೊಳ್ಳುವುದೂ ಅತಿ ದೊಡ್ಡ ರಿಸ್ಕ್. ಮನೆ ಕಟ್ಟೋದು, ಮದುವೆ, ಮಕ್ಕಳು.. ಪ್ರತಿಯೊಂದು ಕೂಡಾ ಜೀವನದಲ್ಲಿ ನಾವು ತೆಗೆದುಕೊಳ್ಳುವ ರಿಸ್ಕುಗಳೇ. ಪ್ರೇಕ್ಷಕರು ನನ್ನ ಈ ಚಿತ್ರವನ್ನು ಮೆಚ್ಚಿಕೊಂಡರೆ ಅಷ್ಟೇ ಸಾಕು' ಅಂತಾರೆ ಸತೀಶ್.

ಜೇಕಬ್ ವರ್ಗಿಸ್ ನಿರ್ದೇಶನದ ಚಂಬಲ್ ಸಿನಿಮಾದಲ್ಲಿ ಡಿ.ಕೆ.ರವಿ ಕಥೆಯಿದೆ ಎನ್ನುತ್ತಿದ್ದರೂ, ಅದನ್ನು ಸತೀಶ್ ಒಪ್ಪಿಕೊಳ್ಳಲ್ಲ. ಟ್ರೇಲರುಗಳಲ್ಲಿ ಅಂತಹ ಸುಳಿವು ಸಿಕ್ಕರೂ, ಇದು ಹಲವು ಸತ್ಯಕಥೆಗಳನ್ನಾಧರಿಸಿದ ಸಿನಿಮಾ ಎನ್ನುವ ಸತೀಶ್, ಇದು ಡಿ.ಕೆ. ರವಿ ಲೈಫ್‍ಸ್ಟೋರಿ ಅಲ್ಲ ಎಂದು ನಾನು ಹೇಳಲ್ಲ ಎನ್ನುವ ಮೂಲಕ ಅಡ್ಡಗೋಡೆಯ ಮೇಲೆ ದೀಪ ಇಡ್ತಾರೆ. 

its mult directors movie time in sandalwood

User Rating: 0 / 5

Star inactiveStar inactiveStar inactiveStar inactiveStar inactive

ಹಲವು ಸ್ಟಾರ್ ನಟರೂ ಒಂದೇ ಚಿತ್ರದಲ್ಲಿ ನಟಿಸಿದರೆ, ಅದು ಮಲ್ಟಿ ಸ್ಟಾರ್ ಸಿನಿಮಾ. ಹಲವು ನಿರ್ದೇಶಕರು ಒಂದೇ ಚಿತ್ರದಲ್ಲಿ ತೊಡಗಿಸಿಕೊಂಡರೆ.. ಅದನ್ನು ಮಲ್ಟಿ ಸ್ಟಾರ್ ಡೈರೆಕ್ಟರ್ ಸಿನಿಮಾ ಎನ್ನಬೇಕಾ..? ಕನ್ನಡ ಚಿತ್ರರಂಗದಲ್ಲಿ ಒಬ್ಬ ನಿರ್ದೇಶಕರ ಸಿನಿಮಾದಲ್ಲಿ, ಇನ್ನೊಬ್ಬ ನಿರ್ದೇಶಕರು ಹಾಡು ಬರೆಯೋದು, ಸಣ್ಣ ಪುಟ್ಟ ಪಾತ್ರದಲ್ಲಿ ನಟಿಸೋದು ಹೊಸದೇನಲ್ಲ. ಆದರೆ, ಇಬ್ಬರು ನಿರ್ದೇಶಕರು ಸೇರಿಕೊಂಡು, ಚಿತ್ರವನ್ನು ನಿರ್ಮಾಣ ಮಾಡಿ, ಆ ಚಿತ್ರದ ನಿರ್ದೇಶನದ ಹೊಣೆಯನ್ನು ಮತ್ತೊಬ್ಬ ಹೊಸ ಪ್ರತಿಭೆಗೆ ನೀಡೋದಿದ್ಯಲ್ಲ.. ಅದು ಹೊಸದು. ಅಂಥಾದ್ದೊಂದು ಸಾಹಸಕ್ಕೆ ಪ್ರೀತಿಯಿಂದ ಕೈ ಹಾಕಿರೋದು ಯೋಗರಾಜ ಭಟ್ ಮತ್ತು ಶಶಾಂಕ್.

shashank_yogaraj_bhatt_new_.jpgಯೋಗರಾಜ್ ಭಟ್ ಮತ್ತು ಶಶಾಂಕ್, ಇಬ್ಬರೂ ಕನ್ನಡದ ಸ್ಟಾರ್ ನಿರ್ದೇಶಕರು. ಈಗ ಈ ಇಬ್ಬರೂ ಒಟ್ಟಿಗೇ ಒಂದೇ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಕಥೆ, ಯೋಗರಾಜ್ ಭಟ್ಟರದ್ದು. ಅವರು ಕಥೆ ಹೇಳಿದ್ದು ನಟ ರಿಷಿಗೆ. ರಿಷಿ ಆ ಕಥೆಯನ್ನು ಶಶಾಂಕ್ ಅವರ ಬಳಿ ಹಂಚಿಕೊಂಡಿದ್ದಾರೆ. ಶಶಾಂಕ್, ನೇರವಾಗಿ ಭಟ್ಟರ ಬಳಿ ಬಂದು ಸಿನಿಮಾ ಮಾಡುವ ಪ್ಲಾನ್ ಇಟ್ಟಿದ್ದಾರೆ. ಅಲ್ಲಿಗೆ.. ಹೊಸದೊಂದು ಇತಿಹಾಸಕ್ಕೆ ಮುನ್ನುಡಿ ಬಿದ್ದಿದೆ.

ಶಶಾಂಕ್ ಮತ್ತು ಯೋಗರಾಜ್ ಭಟ್ ಜಂಟಿ ಬ್ಯಾನರ್‍ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ನಿರ್ದೇಶಕ, ಭಟ್ಟರ ಗರಡಿಯ ಹುಡುಗ ಮೋಹನ್ ಸಿಂಗ್. ನಾಯಕ ರಿಷಿ. 

ಚಿತ್ರಕಥೆಯ ಕೆಲಸ ಶುರುವಾಗಿದ್ದು, ಜೂನ್ ತಿಂಗಳಲ್ಲಿ ಸಿನಿಮಾದ ಶೂಟಿಂಗ್ ಶುರುವಾಗಲಿದೆ. ಹೊಸ ಇತಿಹಾಸ ನಿರ್ಮಾಣವಾಗುತ್ತಿದೆ.

chambal to release in movieland

User Rating: 0 / 5

Star inactiveStar inactiveStar inactiveStar inactiveStar inactive

Six years ago, sandalwood witnessed one of its first crowd funded film directed by the talented actor turned director Pawan Kumar. With no huge expectations, Lucia was released in Movieland theatre, which is known for its non-Kannada releases.

The film gave two promising stars for the industry - Sathish Ninasam and Sruthi Hariharan, who both went onto establish themselves as popular actors. Now, history repeats for Sathish. His most anticipated venture 'Chambal’ directed by Jacob Varghese, is set to release in Movieland theatre in Gandhinagar this Friday. Ironically, the music for Chambal is composed by Poornachandra Tejaswi, who scored for Lucia too.

Chambal will see Sathish in a white collar role as a IAS officer and it is alleged that it is inspired by IAS officer late D K Ravi. However, makers are tight lipped about the Ravi connection with the movie. Lucia ran for 70 days after it released, and with the kind of hype and anticipation around Chambal, Movieland is set to witness another century run.

majestic rammurthy gets darshan's d55

User Rating: 5 / 5

Star activeStar activeStar activeStar activeStar active

ದರ್ಶನ್ ಅಭಿನಯದ 55ನೇ ಸಿನಿಮಾದ ನಿರ್ಮಾಪಕರು ಯಾರು..? ಮೆಜೆಸ್ಟಿಕ್ ರಾಮಮೂರ್ತಿನಾ..? ತಾರಕ್ ಪ್ರಕಾಶ್ ಅವರಾ..? ಈ ಗೊಂದಲಕ್ಕೀಗ ತೆರೆ ಬಿದ್ದಿದೆ. ಡಿ 55 ಚಿತ್ರದ ನಿರ್ಮಾಪಕ ಮೆಜೆಸ್ಟಿಕ್ ರಾಮಮೂರ್ತಿ.

ದರ್ಶನ್ ಅವರನ್ನು ಕೇಳಿಕೊಂಡೇ ಡೇಟ್ ಫಿಕ್ಸ್ ಮಾಡಿದ್ದೇನೆ. ಸದ್ಯಕ್ಕೆ ಟೈಟಲ್ ಫಿಕ್ಸ್ ಆಗಿಲ್ಲ. ನಿರ್ದೇಶಕ, ತಾರಾಗಣ, ತಂತ್ರಜ್ಞರ ಆಯ್ಕೆಯೂ ಆಗಿಲ್ಲ. ಎರಡ್ಮೂರು ಕಥೆಗಳಿವೆ. ದರ್ಶನ್ ಮ್ಯಾನರಿಸಂ, ಇಮೇಜ್‍ಗೆ ಅನುಗುಣವಾದ ಕಥೆ ಸಿದ್ಧವಾಗುತ್ತಿದೆ ಎನ್ನುವುದು ರಾಮಮೂರ್ತಿ ಮಾತು.

ಇತ್ತ ದರ್ಶನ್‍ಗೆ ತಾರಕ್ ಸಿನಿಮಾ ಮಾಡಿದ್ದ ದುಶ್ಯಂತ್, ``ಐವತ್ತೈದೋ.. ಐವತ್ತಾರೋ.. ಯಾವುದೇ ಆಗಲಿ, ನಂಬರ್ ಮುಖ್ಯ ಅಲ್ಲ. ಸಿನಿಮಾ ಮಾಡೋದು ಮುಖ್ಯ. ದರ್ಶನ್ ಕಾಲ್‍ಶೀಟ್ ಕೊಟ್ಟಿದ್ದಾರೆ. ತಾರಕ್ ನಿರ್ದೇಶಿಸಿದ್ದ ಮಿಲನ ಪ್ರಕಾಶ್ ಅವರೇ ಡೈರೆಕ್ಷನ್ ಮಾಡ್ತಾರೆ. ಸೆಪ್ಟೆಂಬರ್ ಅಥವಾ ನವೆಂಬರ್‍ನಲ್ಲಿ ಸಿನಿಮಾ ಶುರುವಾಗಲಿದೆ'' ಅಂತಾರೆ.

once again no state film awards on rajkumar birthday

User Rating: 0 / 5

Star inactiveStar inactiveStar inactiveStar inactiveStar inactive

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ, ಡಾ.ರಾಜ್ ಕುಮಾರ್ ಜಯಂತಿ ದಿನವೇ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡೋದಾಗಿ ಘೋಷಿಸಿದ್ದರು. ಅದರಂತೆ, 2016ರಲ್ಲಿ ರಾಜ್ ಹುಟ್ಟುಹಬ್ಬದಂದೇ ಪ್ರಶಸ್ತಿ ಪ್ರದಾನವಾಗಿತ್ತು. ಆದರೆ, 2017ಕ್ಕೆ ಆ ಭಾಗ್ಯ ಇರಲಿಲ್ಲ. ಎಲೆಕ್ಷನ್ ಬಂತು. ನೀತಿ ಸಂಹಿತೆ ಅಡ್ಡಿಯಾಯ್ತು. ಮುಂದಕ್ಕೆ ಹೋಯ್ತು. ಅದೂ ಹೋಗಲಿ ಅಂದರೆ, ಅದಾದ ನಂತರ ನಿಗದಿಯಾದ ಕಾರ್ಯಕ್ರಮಕ್ಕೆ ಮಂಡ್ಯದ ದುರಂತದಿಂದಾಗಿ ಮತ್ತೆ ಮುಂದೂಡಲ್ಪಟ್ಟು, ಇದುವರೆಗೆ ಪ್ರಶಸ್ತಿ ಪ್ರದಾನ ಸಮಾರಂಭವೇ ನಡೆದಿಲ್ಲ. ಈ ಬಾರಿಯೂ ಹಾಗೆಯೇ ಆಗುವ ಎಲ್ಲ ಸಾಧ್ಯತೆಗಳೂ ಇವೆ.

ಪ್ರಶಸ್ತಿ ಆಯ್ಕೆ ಸಮಿತಿಗೆ ನಿರ್ದೇಶಕಿ ಸುಮನಾ ಕಿತ್ತೂರು ಅವರನ್ನು ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿತ್ತು. ಈಗ ಸುಮನಾ ಕಿತ್ತೂರು ಹಾಗೂ ಇನ್ನೊಬ್ಬ ಸದಸ್ಯ ಯಾಕೂಬ್ ಖಾದರ್ ಗುಲ್ವಾಡಿ ಸಮಿತಿಯಿಂದ ಹೊರಬಂದಿದ್ದಾರೆ. 

ಸುಮನಾ ಕಿತ್ತೂರು, ತಾವು ಸಿನಿಮಾ ಕೆಲಸದಲ್ಲಿ ಬ್ಯುಸಿ ಎನ್ನುತ್ತಿದ್ದರೆ, ಯಾಕೂಬ್ ಸಿನಿಮಾ ನಿರ್ದೇಶನ ಮಾಡ್ತಾರಂತೆ. ಹೀಗಾಗಿ ಸಮಿತಿ, ಸಿನಿಮಾಗಳನ್ನೇ ನೋಡೋಕೆ ಸಾಧ್ಯವಾಗ್ತಿಲ್ಲ. 

ಇಷ್ಟೆಲ್ಲ ಆಗಿ, ಹೊಸ ಸಮಿತಿ ರಚನೆಯಾಗಿ, ಆಯ್ಕೆಯಾಗಿ ಪ್ರಶಸ್ತಿ ಪ್ರದಾನ ನಡೆಯುವ ಹೊತ್ತಿಗೆ ಲೋಕಸಭೆ ಎಲೆಕ್ಷನ್ ಘೋಷಣೆಯಾಗಿರುತ್ತೆ. ಅಲ್ಲಿಗೆ.. ಮತ್ತೆ ನೀತಿ ಸಂಹಿತೆ. ಇದರ ತಾತ್ಪರ್ಯ ಇಷ್ಟೆ, 2018ರ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ, ಏಪ್ರಿಲ್ 24ಕ್ಕೆ ನಡೆಯುವುದು ಸಾಧ್ಯವೇ ಇಲ್ಲ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery