` Flash Back - chitraloka.com | Kannada Movie News, Reviews | Image
radhika chethan to perform stunts for chase

User Rating: 0 / 5

Star inactiveStar inactiveStar inactiveStar inactiveStar inactive

ರಂಗಿತರಂಗದ ಮುಗುಳ್ನಗೆಯ ಸುಂದರಿ ರಾಧಿಕಾ ಚೇತನ್. ಯುಟರ್ನ್, ಕಾಫಿತೋಟ, ಹೊಟ್ಟೆಗಾಗಿ ಗೇಣುಬಟ್ಟೆಗಾಗಿ.. ಹೀಗೆ ಪ್ರಯೋಗಾತ್ಮಕ ಚಿತ್ರಗಳಲ್ಲಿಯೇ ಹೆಚ್ಚಾಗಿ ನಟಿಸುತ್ತಿರುವ ರಾಧಿಕಾ ಚೇತನ್, ಈಗ ಚೇಸ್ ಚಿತ್ರಕ್ಕಾಗಿ ಸಾಹಸವನ್ನೂ ಮಾಡಿದ್ದಾರೆ. ಚಿತ್ರದಲ್ಲಿನ ಸಾಹಸ ದೃಶ್ಯಗಳಿಗಾಗಿ ರಾಧಿಕಾ, ಸಮರ ಕಲೆ ಕಲಿತಿದ್ದಾರಂತೆ. ಸಾಹಸ ನಿರ್ದೇಶಕರಾದ ಡೆಲ್ಸನ್ ಮತ್ತು ಚೇತನ್ ಡಿಸೋಜಾ ಅವರೇ ತರಬೇತಿಯನ್ನೂ ಕೊಟ್ಟಿದ್ದಾರಂತೆ.

ಒಂದು ವಾರ ತರಬೇತಿ ಪಡೆದು ನಟಿಸಿದ್ದೇನೆ. ಆ್ಯಕ್ಷನ್ ದೃಶ್ಯಗಳು ಹೆಚ್ಚೇನೂ ಇಲ್ಲ. ಆದರೆ, ಅದಕ್ಕಾಗಿ ಶ್ರಮ ಪಟ್ಟಿದ್ದೇನೆ. ಏಕೆಂದರೆ ಆ್ಯಕ್ಷನ್ ಸೀನ್‍ಗಳು ಬೇರೆಯದ್ದೇ ಬಾಡಿ ಲಾಂಗ್ವೇಜ್ ಕೇಳುತ್ತವೆ. ಅಷ್ಟೇ ಅಲ್ಲ, ಈ ಚಿತ್ರದೊಂದಿಗೆ ನನಗೆ ನಾಯಿಗಳ ಬಗ್ಗೆ ಇದ್ದ ಭಯವೂ ದೂರವಾಗಿದೆ ಎಂದು ಹೇಳಿಕೊಂಡಿದ್ದಾರೆ ರಾಧಿಕಾ ಚೇತನ್.

the villain 4th song on saturday

User Rating: 0 / 5

Star inactiveStar inactiveStar inactiveStar inactiveStar inactive

ಒಂದೊಂದೇ ಹಾಡಿನ ಮೂಲಕ ವಿಲನ್ ಹವಾ ಎಬ್ಬಿಸುತ್ತಿರುವ ಜೋಗಿ ಪ್ರೇಮ್, ಈಗ 3ನೇ ಹಾಡು ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ. 3ನೇ ಹಾಡು ಆಗಸ್ಟ್ 4ನೇ ತಾರೀಕು ಅಂದರೆ ಇದೇ ಶನಿವಾರ ಬಿಡುಗಡೆಯಾಗಲಿದೆ. ಮೊದಲ ಎರಡೂ ಹಾಡುಗಳು ಹೀರೋ ಇಮೇಜ್ ಸುತ್ತಮುತ್ತ ಇದ್ದಂಥವು. ಆದರೆ, 3ನೇ ಹಾಡು ಪಕ್ಕಾ ಲವ್ ಸಾಂಗ್ ಎನ್ನುವ ಸುಳಿವು ಸಿಕ್ಕಿದೆ.

ಲವ್ ಆಗೋಯ್ತು ನಿನ್ನ ಮ್ಯಾಲೆ.. ಅನ್ನೋ ಹಾಡದು. ಅಫ್‍ಕೋರ್ಸ್... ಹುಳ ಬಿಡುವ ಟೆಕ್ನಾಲಜಿಯನ್ನು ಪ್ರೇಮ್ ಇಲ್ಲೂ ಬಿಟ್ಟಿಲ್ಲ. ಹಾಡು ರಿಲೀಸ್ ಆಗಲಿದೆ ಎಂದು ಹೇಳಿ ಶಿವರಾಜ್ ಕುಮಾರ್ ಮತ್ತು ಸುದೀಪ್ ಇಬ್ಬರೂ ಆ್ಯಮಿ ಜಾಕ್ಸನ್ ಜೊತೆ ಇರುವ ಎರಡು ಪೋಸ್ಟರ್ ಬಿಟ್ಟಿದ್ದಾರೆ ಪ್ರೇಮ್. ಹಾಗಾದರೆ, ಹಾಡು ಯಾರ ಮೇಲೆ..? ಹೋಗಲಿ.. ಇದು ತ್ರಿಕೋನ ಪ್ರೇಮಕಥೆನಾ..?

ನಿಮ್ಮ ತಲೆಯಲ್ಲಿ ಪ್ರಶ್ನೆ ಹುಟ್ಟಿದವು ತಾನೇ. ಪ್ರೇಮ್‍ಗೆ ಬೇಕಾಗಿರುವುದೂ ಅದೇ.. ಹೋಗ್ಲಿಬಿಡಿ.. ಆಗಸ್ಟ್ 4ಕ್ಕೆ ಹೊಸ ಹಾಡು ಕೇಳೋಕೆ ರೆಡಿಯಾಗಿ.

kumari 21 f heroine talks about her film

User Rating: 0 / 5

Star inactiveStar inactiveStar inactiveStar inactiveStar inactive

ಕುಮಾರಿ 21 F ಟ್ರೇಲರ್  ನೋಡಿದವರ ಗಮನ ಸೆಳೆಯೋದು ಹೀರೋಯಿನ್. ಸ್ಮೋಕ್ ಮಾಡುವ, ಡ್ರಿಂಕ್ಸ್ ಮಾಡುವ ಹುಡುಗಿ. ಅರೆ, ಚಿತ್ರದಲ್ಲಿ ಹೀರೋಯಿನ್ ಇಷ್ಟೊಂದು ಬೋಲ್ಡಾ.. ಎನ್ನಿಸಿದ್ರೆ ಅಚ್ಚರಿಯೇನೂ ಇಲ್ಲ. ಆ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿರೋದು ನಿಧಿ ಕುಶಾಲಪ್ಪ. ಕೊಡಗಿನ ಚೆಲುವೆ.

ನೀವು ಟ್ರೇಲರ್‍ನಲ್ಲಿ ಏನು ನೋಡಿದ್ದೀರೋ.. ಆ ಬೋಲ್ಡ್‍ನೆಸ್ ಇಡೀ ಚಿತ್ರದಲ್ಲಿರೋದು ಅಷ್ಟೆ. ಉಳಿದಂತೆ ಅದು ಸ್ಟೋರಿ ಓರಿಯಂಟೆಡ್ ಸಿನಿಮಾ. ಇಡೀ ಸಿನಿಮಾ ಬೋಲ್ಡ್ ಅಲ್ಲ ಎನ್ನುತ್ತಾರೆ ನಿಧಿ ಕುಶಾಲಪ್ಪ. 

ಸುಮ್ಮನೆ ಜಡ್ಜ್‍ಮೆಂಟ್ ಕೊಡಬೇಡಿ. ಸಿನಿಮಾ ನೋಡಿ. ಖಂಡಿತಾ.. ಹೊರಗೆ ಬರುವಾಗ ನಿಮ್ಮ ಅಭಿಪ್ರಾಯ ಬೇರೆಯೇ ಆಗಿರುತ್ತೆ. ಅಷ್ಟೇ ಅಲ್ಲ, ಸಿನಿಮಾ ಮತ್ತು ಚಿತ್ರತಂಡದ ಬಗ್ಗೆ ಮೆಚ್ಚುಗೆ ಇಟ್ಟುಕೊಂಡು ಹೊರಬರುತ್ತೀರಿ ಎಂದು ವಿಶ್ವಾಸದಿಂದ ಹೇಳ್ತಾರೆ ನಿಧಿ.

ಕನ್ನಡಕ್ಕೆ ಇದು ಒಂದು ಡಿಫರೆಂಟ್ ಪ್ರಯತ್ನ. ನನಗೆ ಮೊದಲ ಚಿತ್ರದಲ್ಲೇ ಚಾಲೆಂಜಿಂಗ್ ರೋಲ್ ಸಿಕ್ಕಿದೆ. ಚಿತ್ರ ಒಳ್ಳೆಯ ಬ್ರೇಕ್ ಕೊಡುವ ನಿರೀಕ್ಷೆ ಇದೆ ಎಂದಿದ್ದಾರೆ ನಿಧಿ.ಪ್ರಣಮ್ ದೇವರಾಜ್ ಅಭಿಯನದ ಮೊದಲ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿರೋದು ಶ್ರೀಮಾನ್ ವೇಮುಲ.

ragini's terrorist first look

User Rating: 0 / 5

Star inactiveStar inactiveStar inactiveStar inactiveStar inactive

ಝುಂ ಝುಂ ಮಾಯಾ ಎನ್ನುತ್ತಾ ಬೆಳ್ಳಿತೆರೆಗೆ ಕಾಲಿಟ್ಟ ರಾಗಿಣಿ, ಈಗ ಭಯೋತ್ಪಾದಕಿಯಾಗಿದ್ದಾರೆ. ರಾಗಿಣಿ ಅಭಿನಯದ ಟೆರರಿಸ್ಟ್ ಸಿನಿಮಾ, ಈಗ ರಿಲೀಸ್‍ಗೆ ರೆಡಿ. ತಲೆ ತುಂಬಾ ಸ್ಕಾರ್ಫ್ ಸುತ್ತಿಕೊಂಡಿರುವ ರಾಗಿಣಿ ಪಾತ್ರದ ಹೆಸರು ರೇಷ್ಮಾ. ಮುಸ್ಲಿಂ ಕುಟುಂಬವೊಂದರ ಹಿರಿಯ ಮಗಳಾಗಿ ನಟಿಸಿದ್ದಾರೆ.

ಒಂದು ಬಾಂಬ್ ಬ್ಲಾಸ್ಟ್ ಹಾಗೂ ಅದರ ಸುತ್ತ ನಡೆಯುವ ಘಟನಾವಳಿಗಳೇ ಚಿತ್ರದ ಕಥಾವಸ್ತು. 

ಚಿತ್ರದಲ್ಲಿ ರಾಗಿಣಿಗೆ ಮಾತುಗಳೇ ಕಡಿಮೆಯಂತೆ. ಪಿ.ಸಿ.ಶೇಖರ್ ನಿರ್ದೇಶನದ ಚಿತ್ರದ ಬಗ್ಗೆ ರಾಗಿಣಿ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಿತ್ರದಲ್ಲೊಂದು ಮೆಸೇಜ್ ಇದೆ. ಶಾಂತಿಯೇ ಪ್ರದಾನ ಎಂಬುದು ಚಿತ್ರದ ಕಥೆಯ ತಿರುಳು.

seetharama kalyana teaser today

User Rating: 0 / 5

Star inactiveStar inactiveStar inactiveStar inactiveStar inactive

ಸೀತಾರಾಮ ಕಲ್ಯಾಣ. ನಿಖಿಲ್ ಕುಮಾರಸ್ವಾಮಿ ಹಾಗೂ ರಚಿತಾ ರಾಮ್ ಅಭಿನಯದ ಹರ್ಷ ನಿರ್ದೇಶನದ ಸಿನಿಮಾ. ಹರ್ಷ ಚಿತ್ರಗಳು ಸತತವಾಗಿ ಗೆದ್ದಿರೋ ಕಾರಣ, ಈ ಚಿತ್ರದ ಮೇಲೂ ಕುತೂಹಲ ಸಹಜ. ಜೊತೆಗೆ ಕುಮಾರಸ್ವಾಮಿ ಸಿಎಂ ಆದ ಮೇಲೆ ರಿಲೀಸ್ ಆಗುತ್ತಿರುವ ನಿಖಿಲ್ ಅಭಿಯನದ ಮೊದಲ ಸಿನಿಮಾ. ಇವತ್ತು, ಸೀತಾ ರಾಮ ಕಲ್ಯಾಣದ ಟೀಸರ್ ರಿಲೀಸ್ ಆಗುತ್ತಿದೆ.

ರಾಮನಗರದಲ್ಲಿಯೇ ಟೀಸರ್ ರಿಲೀಸ್ ಮಾಡೋಕೆ ರಾಜಕೀಯ ಕಾರಣವೂ ಇದೆ. ರಾಮನಗರ ಕುಮಾರಸ್ವಾಮಿಯವರ ರಾಜಕೀಯ ತವರು. ರಾಮನಗರದ ಜ್ಯೂ.ಕಾಲೇಜು ಮೈದಾನದಲ್ಲಿ ಸಂಜೆ 7 ಗಂಟೆಗೆ ಟೀಸರ್ ಬಿಡುಗಡೆಯಾಗುತ್ತಿದೆ. ಟೀಸರ್ ರಿಲೀಸ್ ಮಾಡುತ್ತಿರುವುದು ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ. 

ಅದೂ ಲಕ್ಷಾಂತರ ಜನರ ಸಮ್ಮುಖದಲ್ಲಿ ಟೀಸರ್ ಬಿಡುಗಡೆಯಾಗುತ್ತಿದೆ. ಇಡೀ ಚಿತ್ರತಂಡ ಹಾಜರ್ ಇರುತ್ತದೆ. ಜೊತೆಗೆ ಭರಪೂರ ಮನರಂಜನೆಯೂ ಇರುತ್ತೆ.

Adhyaksha In America Success Meet Gallery

Ellidhe Illitanaka Movie Gallery