` Flash Back - chitraloka.com | Kannada Movie News, Reviews | Image
kgf fame garuda buys new car

User Rating: 0 / 5

Star inactiveStar inactiveStar inactiveStar inactiveStar inactive

ಕೆಜಿಎಫ್ ಸಿನಿಮಾದ ಪ್ರಮುಖ ವಿಲನ್ ಗರುಡ. ಸಿನಿಮಾದಲ್ಲಿ ಗರಡು ಕೋಟ್ಯಧೀಶ್ವರ. ಆದರೆ, ರಿಯಲ್ ಲೈಫಲ್ಲಿ ಹಾಗೇನೂ ಇರಲಿಲ್ಲ. ಎಲ್ಲವನ್ನೂ ಬದಲು ಮಾಡಿದ್ದು ಕೆಜಿಎಫ್ ಸಿನಿಮಾ. ಗರುಡನ ಪಾತ್ರದಲ್ಲಿ ಯಶ್ ಎದುರು ಮಿಂಚಿದ್ದ ರಾಮಚಂದ್ರ ಈಗ ತಾನೇ ಫಾರ್ಚೂನರ್ ಕಾರ್‍ನ ಓನರ್ ಆಗಿದ್ದಾರೆ.

ಯಶ್ ಅವರ ಗೆಳೆಯನೂ ಆಗಿರುವ ರಾಮ್, ಹೊಸ ಕಾರು ಕೊಂಡ ತಕ್ಷಣ ಹೋಗಿದ್ದು ಯಶ್ ಹತ್ತಿರಕ್ಕೆ. ಯಶ್ ಮನೆಗೆ ಹೋಗಿ, ಕಾರು ತೋರಿಸಿ, ಜೊತೆಯಲ್ಲೊಂದು ಫೋಟೋ ತೆಗೆಸಿಕೊಂಡು ಖುಷಿ ಪಟ್ಟಿದ್ದಾರೆ. ಗೆಳೆಯರ ಸಾಧನೆಗಳನ್ನು ನೋಡಿ ನೋಡಿ ಖುಷಿಯಾಗೋ ಯಶ್, ರಾಮ್‍ಗ ಶುಭ ಕೋರಿದ್ದಾರೆ.

two sulathan's team up for dabaang 3

User Rating: 5 / 5

Star activeStar activeStar activeStar activeStar active

ಕಿಚ್ಚ ಸುದೀಪ್ ಮತ್ತೊಮ್ಮೆ ಬಾಲಿವುಡ್ ಅಂಗಳಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅಮಿತಾಬ್ ಬಚ್ಚನ್ ಜೊತೆ ರಣ್, ಪೂಂಕ್, ರಕ್ತ ಚರಿತ್ರ ಚಿತ್ರಗಳಲ್ಲಿ ನಟಿಸಿದ್ದ ಸುದೀಪ್, ಈಗ ಸಲ್ಮಾನ್ ಚಿತ್ರದಲ್ಲಿ ಖಳನಾಯಕ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಸಲ್ಮಾನ್‍ರ ಟೈಗರ್ ಜಿಂದಾ ಹೈ ಚಿತ್ರದಲ್ಲೇ ಕಿಚ್ಚನ ದರುಶನವಾಗಬೇಕಿತ್ತು. ಡೇಟ್ಸ್ ಸಮಸ್ಯೆಯಿಂದಾಗಿ ಮಿಸ್ ಆಗಿತ್ತು.

ಈಗ ದಬಾಂಗ್ 3ಯಲ್ಲಿ ಸಲ್ಮಾನ್ ಎದುರು ನಟಿಸುತ್ತಿದ್ದಾರೆ ಸುದೀಪ್. ಸಲ್ಮಾನ್‍ಗೆ ಹೀರೋಯಿನ್ ಸೋನಾಕ್ಷಿ ಸಿನ್ಹಾ. ಡೈರೆಕ್ಟರ್ ಪ್ರಭುದೇವ. ಸಲ್ಮಾನ್‍ರ ಸೋದರ ಅರ್ಬಾಜ್ ಖಾನ್ ಕೂಡಾ ನಟಿಸುತ್ತಿರುವ ಚಿತ್ರದ ಶೂಟಿಂಗ್ ಶುರುವಾಗಿದೆ.

vashishha simha's hatrick with shivarajkumar

User Rating: 0 / 5

Star inactiveStar inactiveStar inactiveStar inactiveStar inactive

ಕವಚ ಚಿತ್ರ ರಿಲೀಸ್‍ಗೆ ರೆಡಿ. ಇದೇ ವಾರ ತೆರೆಗೆ ಬರುತ್ತಿರುವ ಚಿತ್ರದಲ್ಲಿ ಶಿವಣ್ಣ ಇದೇ ಮೊದಲ ಬಾರಿಗೆ ಅಂಧನಾಗಿ ನಟಿಸಿದ್ದರೆ, ವಸಿಷ್ಠ ವಿಲನ್. 

ಚಿತ್ರದಲ್ಲಿ ನಂದೊಂಥರಾ ವಿಚಿತ್ರ ಕ್ಯಾರೆಕ್ಟರ್. ಯಾರೊಂದಿಗೂ ಮಾತನ್ನೇ ಆಡದ ಕ್ರೂರಿ. ಕಣ್ಣುಗಳಲ್ಲಿ ಸದಾ ಆಕ್ರೋಶವನ್ನೇ ಉಗುಳುವ ಪಾತ್ರ. ಹೀಗಾಗಿ ನಾನು ಸೆಟ್ಟಿನಲ್ಲಿ ಯಾರೊಂದಿಗೂ ಬೆರೆಯುತ್ತಿರಲಿಲ್ಲ. ಒಬ್ಬನೇ ಇರುತ್ತಿದೆ. ಹಾಗೆ ಎಲ್ಲರೊಂದಿಗೆ ಮುಕ್ತವಾಗಿ ಬೆರೆತುಬಿಟ್ಟರೆ, ಈ ಪಾತ್ರದೊಳಗೆ ಪ್ರವೇಶ ಸಾಧ್ಯವಾಗದು ಎಂದುಕೊಂಡು ಹಾಗೆ ಇದ್ದೆ ಎನ್ನುತ್ತಾರೆ ವಸಿಷ್ಠ. ಚಿತ್ರದಲ್ಲಿ ವಸಿಷ್ಠ ಲುಕ್ಕಿಗೆ ನಿರ್ದೇಶಕ ಜಿವಿಆರ್ ವಾಸು ಬಹಳ ಕೇರ್ ತೆಗೆದುಕೊಂಡಿದ್ದಾರಂತೆ. ಮೇಕಪ್ಪಿಗೆ ಒಂದು ಗಂಟೆ ಆಗುತ್ತಿತ್ತು ಎಂದಿರುವ ವಸಿಷ್ಠಗೆ ಇನ್ನೂ ಒಂದು ಖುಷಿ ಇದೆ. 

ಹ್ಯಾಟ್ರಿಕ್ ಹೀರೋ ಜೊತೆಗೆ ಅವರದ್ದೊಂದು ಹ್ಯಾಟ್ರಿಕ್ ಆಗಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ಶಿವಣ್ಣ ಜೊತೆ ಇದು ನನ್ನ 3ನೇ ಸಿನಿಮಾ. ಮಫ್ತಿ, ಟಗರು ನಂತರ ಈಗ ಕವಚ. ಅವರೊಂದು ರೀತಿ ನನಗೆ ಹಿರಿಯ ಅಣ್ಣನಿದ್ದಂತೆ ಎಂದಿದ್ದಾರೆ ವಸಿಷ್ಠ.

rachita ram to shake leg with srimurali in special song

User Rating: 0 / 5

Star inactiveStar inactiveStar inactiveStar inactiveStar inactive

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಭರಾಟೆ ಚಿತ್ರದಲ್ಲಿ ರಚಿತಾ ರಾಮ್ ಹಾಡಿ ಕುಣಿದು ಕುಪ್ಪಳಿಸೋಕೆ ರೆಡಿಯಾಗಿದ್ದಾರೆ. ಅರೆ.. ಆ ಚಿತ್ರದ ಹೀರೋಯಿನ್ ಶ್ರೀಲೀಲಾ ಅಲ್ವಾ ಅಂದ್ಕೋಬೇಡಿ. ಹೀರೋಯಿನ್ ಅವರೇ. ರಚಿತಾ ಹೆಜ್ಜೆ ಹಾಕೋದು ಹೀರೋ ಇಂಟ್ರೊಡಕ್ಷನ್ ಸಾಂಗ್‍ಗೆ.

ಭರಾಟೆ ಚಿತ್ರದ ಕಥೆ, ಹೀರೋನ ಫೋರ್ಸ್ ಎಲ್ಲವನ್ನೂ ಒಳಗೊಂಡಿರೋ ಹಾಡಿಗೆ ಒಬ್ಬರು ಜನಪ್ರಿಯ ನಾಯಕಿ ಬೇಕು ಎಂದು ಯೋಚಿಸಿದಾಗ ಹೊಳೆದಿದ್ದು ರಚಿತಾ ರಾಮ್ ಹೆಸರು. ಅವರ ಎಂಟ್ರಿ, ಚಿತ್ರದ ಎನರ್ಜಿ ಹೆಚ್ಚಿಸಿದೆ ಅಂದಿದ್ದಾರೆ ಭರ್ಜರಿ ಚೇತನ್.

ಶ್ರೀಮುರಳಿ ಜೊತೆ ರಥಾವರ ಚಿತ್ರದಲ್ಲಿ ಹೀರೋಯಿನ್ ಆಗಿ ನಟಿಸಿರುವ ರಚಿತಾ ರಾಮ್, ಇತ್ತೀಚೆಗೆ ವಿಲನ್ ಚಿತ್ರದಲ್ಲಿ ಶಿವಣ್ಣನ ಜೊತೆ ಪುಟ್ಟ ಹಾಡಿಗೆ ಸ್ಟೆಪ್ ಹಾಕಿದ್ದರು. ಅದು ಬಿಟ್ಟರೆ ಈಗ ಭರಾಟೆಯಲ್ಲಿ ಸ್ಪೆಷಲ್ ಡ್ಯಾನ್ಸ್‍ಗೆ ಎಂಟ್ರಿ ಕೊಟ್ಟಿದ್ದಾರೆ.

panchatantra gets demand in telugu and hindi

User Rating: 0 / 5

Star inactiveStar inactiveStar inactiveStar inactiveStar inactive

ಯೋಗರಾಜ್ ಭಟ್ಟರ ಪಂಚತಂತ್ರ ಚಿತ್ರ ಕಥೆ, ಪ್ರೀತಿ, ರೇಸ್‍ನಿಂದ ಮೋಡಿಯನ್ನೇ ಮಾಡಿದೆ. ಯುವ ಪ್ರೇಕ್ಷಕರನ್ನು ಸೆಳೆಯುತ್ತಿರುವ ಪಂಚತಂತ್ರ ಚಿತ್ರಕ್ಕೆ ಒಳ್ಳೆಯ ಓಪನಿಂಗೂ ಸಿಕ್ಕಿದೆ. ಪಂಚತಂತ್ರದ ಆಮೆ, ಮೊಲ ರೇಸ್ ಕಥೆಯನ್ನು ಇಷ್ಟು ಚೆಂದವಾಗಿ ಸಿನಿಮಾ ಮಾಡಬಹುದಾ ಎಂದು ಅಚ್ಚರಿ ಪಟ್ಟಿರುವುದು ಕನ್ನಡ ಪ್ರೇಕ್ಷಕರಷ್ಟೇ ಅಲ್ಲ, ತೆಲುಗು ಹಾಗೂ ಹಿಂದಿ ಚಿತ್ರರಂಗದವರೂ ಕೂಡಾ ಬೆರಗಾಗಿದ್ದಾರೆ.

ಹೀಗಾಗಿಯೇ ಪಂಚತಂತ್ರ ಚಿತ್ರದ ರೀಮೇಕ್‍ಗೆ ಡಿಮ್ಯಾಂಡ್ ಬರೋಕೆ ಶುರುವಾಗಿದೆ. ಭಟ್ಟರ ಚಿತ್ರಗಳು ಬೇರೆ ಭಾಷೆಗೆ ರೀಮೇಕ್ ಆಗುವುದು ಹೊಸದೇನಲ್ಲ. ಈ ಬಾರಿಯೂ ಅಷ್ಟೆ, ತೆಲುಗಿನಲ್ಲಿ ಆಗಲೇ ಆಂಧ್ರ ವರ್ಸಸ್ ತೆಲಂಗಾಣ ಅನ್ನೋ ಹೆಸರಲ್ಲಿ ಪಂಚತಂತ್ರ ರೀಮೇಕ್ ಆಗುತ್ತಿದೆ ಎಂಬ ಸುದ್ದಿಯಿದೆ.

ಒಟ್ಟಿನಲ್ಲಿ ಹೊಸಬರನ್ನೇ ಇಟ್ಟುಕೊಂಡು ಯೋಗರಾಜ್ ಭಟ್ಟರು ಮತ್ತೊಮ್ಮೆ ಗೆದ್ದಿದ್ದಾರೆ. ಶೃಂಗಾರದ ಹೊಂಗೇ ಮರ ಹೂ ಬಿಟ್ಟು, ಅರಳಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery