` Flash Back - chitraloka.com | Kannada Movie News, Reviews | Image
darshan's forst preference is kgf and not baahubali

User Rating: 5 / 5

Star activeStar activeStar activeStar activeStar active

ನಿಮಗೆ ಬಾಹುಬಲಿ ಇಷ್ಟವೋ.. ಕೆಜಿಎಫ್ ಚಿತ್ರ ಇಷ್ಟವೋ.. ಅರೆ.. ಎರಡೂ ಇಂಡಿಯನ್ ಸಿನಿಮಾಗಳೇ ಅಲ್ವಾ ಅಂತೀರೇನೋ.. ಆದರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗಲ್ಲ. ನೇರಾ ನೇರ.. 

ನನಗೆ ತೆಲುಗಿನ ಬಾಹುಬಲಿ ಚಿತ್ರಕ್ಕಿಂತ ಕೆಜಿಎಫ್ ಸಿನಿಮಾನೇ ಇಷ್ಟ. ಏಕೆಂದರೆ ಅದು ಕನ್ನಡದ ಸಿನಿಮಾ. ಕನ್ನಡ ಚಿತ್ರರಂಗವನ್ನು ಇಂಡಿಯಾ ಲೆವೆಲ್ಲಿಗೆ ತೋರಿಸಿದ ಸಿನಿಮಾ. ಐ ಲೈಕ್ ಕೆಜಿಎಫ್ ಅಂತಾರೆ ದರ್ಶನ್.

ಯಜಮಾನ ಚಿತ್ರದ ರಿಲೀಸ್ ವೇಳೆ ಮಾತನಾಡಿದ ದರ್ಶನ್, ಯಜಮಾನ ಚಿತ್ರದಲ್ಲಿ ಮನರಂಜನೆಯ ಜೊತೆಗೆ ಸಮಾಜಕ್ಕೆ ಒಂದೊಳ್ಳೆ ಸಂದೇಶವೂ ಇದೆ ಅನ್ನೋದನ್ನು ಮರೆಯೋದಿಲ್ಲ.

puneeth releases the trailer of trayamnakam

User Rating: 0 / 5

Star inactiveStar inactiveStar inactiveStar inactiveStar inactive

The trailer of Raghavendra Rajakumar's new film 'Trayambakam' was released by actor Puneeth Rajakumar in Bangalore. Actor-director Shivamani and others were present at the occasion.

'Trayambakam' which means Third Eye was launched last year. The film is being written and directed by Dayal Padmanabhan. Avinash Shetty is the co-producer of the film.

Apart from Raghavendra Rajakumar, RJ Rohith and Anupama Gowda have portrayed prominent roles in the film. Ganesh Narayan has composed the music.

agni sridhar to make a biopic on tippu sultan

User Rating: 5 / 5

Star activeStar activeStar activeStar activeStar active

ಟಿಪ್ಪು ಸುಲ್ತಾನ್ ಹಿಂದೂ ವಿರೋಧಿಯೋ.. ಮತಾಂಧ ದೊರೆಯೋ.. ಸರ್ವಧರ್ಮ ಸಹಿಷ್ಣುವೋ ಎಂಬ ಬಗ್ಗೆಯೇ ಸಾಕಷ್ಟು ಗೊಂದಲಗಳಿರುವಾಗ, ರಾಜ್ಯಾದ್ಯಂತ  ಟಿಪ್ಪು ವಿವಾದ ಸದಾ ಬೆಂಕಿ ಹಚ್ಚುತ್ತಿರುವಾಗ ಅಗ್ನಿ ಶ್ರೀಧರ್, ಅದೇ ಟಿಪ್ಪು ಸುಲ್ತಾನ್ ಮೇಲೆ ಸಿನಿಮಾ ಮಾಡಲು ಹೊರಟಿದ್ದಾರೆ. 

ಟಿಪ್ಪು ಸುಲ್ತಾನ್ ಕುರಿತ ಅಗ್ನಿ ಶ್ರೀಧರ್ ನಿಲುವುಗಳು ರಹಸ್ಯವೇನಲ್ಲ. ಟಿಪ್ಪುವನ್ನು ಸರ್ವಧರ್ಮ ಸಹಿಷ್ಣು ಎಂದೇ ವಾದಿಸುವ ಅಗ್ನಿ ಶ್ರೀಧರ್, ತಮ್ಮ ಸಿನಿಮಾದಲ್ಲಿ ಟಿಪ್ಪುವನ್ನು ಯಾವ ರೀತಿ ತೋರಿಸುತ್ತಾರೆ ಎಂಬುದು ನಿರೀಕ್ಷಿತವೇ.

ರೌಡಿಸಂ ಲೋಕದಿಂದ ಬಂದ ಅಗ್ನಿ ಶ್ರೀಧರ್, ಪತ್ರಕರ್ತನಾಗಿ, ಚಿತ್ರ ನಿರ್ಮಾಪಕ, ನಿರ್ದೇಶಕನಾಗಿ ಸಾಕಷ್ಟು ಹೆಸರು ಮಾಡಿದ್ದಾರೆ. ವಿವಾದಗಳು ಅವರಿಗೆ ಹೊಸದೇನಲ್ಲ. ಈ ಬಾರಿ ಅವರು ಮತ್ತೊಂದು ವಿವಾದದ ಹುತ್ತಕ್ಕೆ ಕೈ ಹಾಕಿದ್ದಾರೆ.

ಟಿಪ್ಪು ಸುಲ್ತಾನ್ ಕುರಿತಂತೆ ಕನ್ನಡದಲ್ಲಿ ಇದುವರೆಗೆ ಯಾವುದೇ ಸಿನಿಮಾ ಬಂದಿಲ್ಲ. ಹಿಂದಿಯಲ್ಲಿ ದಿ ಸ್ವೋರ್ಡ್ ಆಫ್ ಟಿಪ್ಪು ಸುಲ್ತಾನ್ ಧಾರಾವಾಹಿ ಬಂದಿದ್ದು ಬಿಟ್ಟರೆ, ಬೇರೆ ಚಿತ್ರರಂಗಗಳೂ ಟಿಪ್ಪುವನ್ನು ಅಷ್ಟಾಗಿ ಪರಿಗಣಿಸಿಲ್ಲ. ಈಗ ಅಗ್ನಿ ಶ್ರೀಧರ್ ಟಿಪ್ಪು ಕುರಿತ ಕಥೆ, ಚಿತ್ರಕಥೆ ಸಿದ್ಧ ಪಡಿಸುತ್ತಿದ್ದಾರಂತೆ.

darshan releases the song of premiere padmini

User Rating: 5 / 5

Star activeStar activeStar activeStar activeStar active

'Challenging Star' Darshan on Monday night released the songs of Jaggesh's new film 'Premier Padmini' being directed by Ramesh Indira.

The audio release of 'Premier Padmini' was organised at the Sheraton Hotel in Bangalore and Darshan came over as the chief guest and released the songs of the film composed by Arjun Janya.

'Premier Padmini' stars Jaggesh, Madhoo, Pramod, Hita Chandrashekhar, Sudharani and others in prominent roles. 'Premier Padmini' marks the debut of Shruthi Naidu as producer to film industry. Advaitha Gurumurthy is the cameraman.

 

darshan;s name is krishna in yajamana

User Rating: 5 / 5

Star activeStar activeStar activeStar activeStar active

ಸಾರಥಿ ಚಿತ್ರದಲ್ಲಿ ದರ್ಶನ್ ಪಾತ್ರದ ಹೆಸರೇನು..? ರಾಜ ಮತ್ತು ಕೃಷ್ಣ. ಆ ಎರಡೂ ಹೆಸರಲ್ಲಿ ಕಾಣಿಸಿಕೊಳ್ತಾರೆ ದರ್ಶನ್. ಈಗ ಯಜಮಾನ ಚಿತ್ರದಲ್ಲೂ ಅದೇ ಹೆಸರು. ಕೃಷ್ಣ. 

ಯಜಮಾನ ಚಿತ್ರದಲ್ಲಿ ದರ್ಶನ್ ಒಬ್ಬ ಗೌಳಿಗ. ಹೆಸರು ಕೃಷ್ಣ. ಕೊಳಲನೂದುವಷ್ಟೇ ಸಹಜವಾಗಿ ರೌಡಿಗಳನ್ನೂ ಮಟ್ಟ ಹಾಕಬಲ್ಲ ವೀರನಂದಿ.

ಹಾಗಾದರೆ ಯಜಮಾನ ಯಾರಿರಬಹುದು..? ದೇವರಾಜ್ ಇರಬಹುದಾ..? 

ಮಾರ್ಚ್ 1ರ ನಂತರ ಯಾವುದೂ ಸೀಕ್ರೆಟ್ ಆಗಿರಲ್ಲ. ಮೊದಲ ಶೋ ಮುಗಿಯುವ ಹೊತ್ತಿಗೆ ಎಲ್ಲವೂ ಗೊತ್ತಾಗಿರುತ್ತೆ. ನಮ್ಮ ಹಣೆಬರಹವೂ ಗೊತ್ತಾಗಿರುತ್ತೆ ಅನ್ನೋ ದರ್ಶನ್, ಯಜಮಾನ ಒಂದು ಪಕ್ಕಾ ಕಮರ್ಷಿಯಲ್ ಮೂವಿ ಅಂತಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery