` Flash Back - chitraloka.com | Kannada Movie News, Reviews | Image
darshan's conditions for his movie producers

User Rating: 5 / 5

Star activeStar activeStar activeStar activeStar active

ಸಾಮಾನ್ಯವಾಗಿ ಸ್ಟಾರ್ ನಟರ ಚಿತ್ರ ಮಾಡುವವರಿಗೆ ಕೆಲವೊಂದು ಷರತ್ತುಗಳಿರುತ್ತವೆ. ಅದು ಹೀರೋ ಮತ್ತು ನಿರ್ಮಾಪಕರಿಗಷ್ಟೇ ಗೊತ್ತಿರುತ್ತವೆ. ಆದರೆ ದರ್ಶನ್ ಹಾಗಲ್ಲ. ಓಪನ್. ಓಪನ್ ಸೀಕ್ರೆಟ್.

ಸಾಮಾನ್ಯವಾಗಿ ಕಥೆಗೆ ಓಕೆ ಹೇಳಿ, ಕಾಲ್‍ಶೀಟ್ ಕೊಟ್ಟು, ಅಡ್ವಾನ್ಸ್ ಪಡೆದ ಮೇಲೆ ದರ್ಶನ್ ಮತ್ತೆ ಮತ್ತೆ ನಿರ್ದೇಶಕರ ಕೆಲಸದಲ್ಲಿ ಮೂಗು ತೂರಿಸೋದಿಲ್ಲ. ಅಲ್ಲಿಯವರಗೆ ತಮ್ಮ ಎಲ್ಲ ಅನುಮಾನಗಳನ್ನೂ, ಪ್ರಶ್ನೆಗಳನ್ನೂ ಎತ್ತಿ ಉತ್ತರ ಪಡೆದುಕೊಂಡುಬಿಟ್ಟಿರುತ್ತಾರೆ. ಅದಾದ ನಂತರ ದರ್ಶನ್, ನಿದೇಶಕರ ಪಾಲಿಗೆ ಮಣ್ಣಿನ ಗೊಂಬೆ. ಹೇಗೆ ಬೇಕಾದರೂ ಮಾಡಬಹುದು. 

ಹೀಗಿರುವ ದರ್ಶನ್, ತಮ್ಮ ನಿರ್ಮಾಪಕರಿಗೆ ಹಾಕುವ ಕಂಡೀಷನ್ಸ್ ಇಷ್ಟೆ. ಸಿನಿಮಾದ ತಂತ್ರಜ್ಞರು, ಕಲಾವಿದರು ಕನ್ನಡದವರೇ ಇರಲಿ ಅನ್ನೋದು. ಬೇರೆ ಭಾಷೆಯಿಂದ ಟೆಕ್ನಿಷಿಯನ್ಸ್ ಕರೆದುಕೊಂಡು ಬರ್ತೀವಿ. ಅವರಿಗೆ ಇದು ಟೈಂಪಾಸ್ ಅಷ್ಟೆ. ಬದ್ಧತೆ ಇರಲ್ಲ. ಅದೇ ಚಾನ್ಸ್ ನಮ್ಮವರಿಗೆ ಕೊಟ್ರೆ, ಪ್ರೀತಿಯಿಂದ ಹೆಚ್ಚು ಜವಾಬ್ದಾರಿಯಿಂದ ಮಾಡ್ತಾರೆ. ಅವರಿಗೆ ಈ ಮಣ್ಣಿನ ಸೊಗಡೂ ಕೂಡಾ ಗೊತ್ತಿರುತ್ತೆ. ಇದು ನಾನು ಹಾಕುವ ಕಂಡೀಷನ್ಸ್.

ಹೀಗಾಗಿ ನಾನು ನನ್ನ ಚಿತ್ರದಲ್ಲಿ ಕನ್ನಡದ ಸಂಗೀತ ನಿರ್ದೇಶಕ, ಫೈಟ್ ಮಾಸ್ಟರ್, ಕ್ಯಾಮೆರಾ, ನೃತ್ಯ ನಿರ್ದೇಶಕ ಕನ್ನಡದವರೇ ಆಗಿರಬೇಕು ಎಂದು ಬಯಸುತ್ತೇನೆ. ಹಠ ಮಾಡುತ್ತೇನೆ. ಜಗಳ ಆಡುತ್ತೇನೆ ಎಂದು ಹೇಳಿಕೊಂಡಿದ್ದಾರೆ ದರ್ಶನ್.

ಹೀಗಾಗಿಯೇ.. ಯಜಮಾನನ ಅಭಿಮಾನಿ ಬಳಗವೂ ದೊಡ್ಡದು. ಸ್ನೇಹಲೋಕವೂ ದೊಡ್ಡದು. 

rakshit shetty joins paddehuli team

User Rating: 0 / 5

Star inactiveStar inactiveStar inactiveStar inactiveStar inactive

ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಅಭಿನಯದ ಮೊದಲ ಸಿನಿಮಾ ಪಡ್ಡೆಹುಲಿ. ಅಪ್ಪಟ ವಿಷ್ಣು ಅಭಿಮಾನಿಯಾಗಿರುವ ಕೆ.ಮಂಜು, ತಮ್ಮ ಮೊದಲ ಚಿತ್ರದಲ್ಲಿ ವಿಷ್ಣು ಆರಾಧನೆಯನ್ನೇ ಮಾಡಿಬಿಟ್ಟಿದ್ದಾರೆ. ಪುತ್ರನಿಗೆ ನಾಗರಹಾವು ರಾಮಾಚಾರಿ ವೇಷ ಹಾಕಿಸಿ ಸಂಭ್ರಮಿಸಿದ್ದಾರೆ. ಚಿತ್ರದಲ್ಲಿ ಚಾಮಯ್ಯ ಮೇಷ್ಟರಂತೆ ಇರೋದು ರವಿಚಂದ್ರನ್. ಇವರೆಲ್ಲರ ಜೊತೆಗೆ ಈಗ ಸಿಂಪಲ್ ಸ್ಟಾರ್ ಆಗಮನವಾಗಿದೆ.

ರಕ್ಷಿತ್ ಶೆಟ್ಟಿ, ಪಡ್ಡೆಹುಲಿ ಚಿತ್ರದಲ್ಲೊಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಅದು ಅತಿಥಿ ನಟನ ಪಾತ್ರವೇನಲ್ಲ. ಹೀಗೆ ಕಾಣಿಸಿಕೊಂಡು ಮರೆಯಾಗುವ ರೋಲ್ ಅಲ್ಲ. ಮಧ್ಯಂತರದ ನಂತರ ಹೆಚ್ಚೂ ಕಡಿಮೆ ಚಿತ್ರದುದ್ದಕ್ಕೂ ರಕ್ಷಿತ್ ಶೆಟ್ಟಿ ಇರ್ತಾರೆ.

`ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಕ್ರೀಡಾಪಟುವಾಗಿ ಕಾಣಿಸಿಕೊಳ್ತಾರೆ. ಸ್ನೇಹಪೂರ್ವಕವಾಗಿ ನಟಿಸುತ್ತಿದ್ದಾರೆ. ಹೀರೋ ಶ್ರೇಯಸ್‍ಗೆ ಸ್ಫೂರ್ತಿ ತುಂಬುವ ಪಾತ್ರವದು. ಪಾತ್ರವೂ ಪವರ್‍ಫುಲ್ಲಾಗಿದೆ'' ಎಂದಿದ್ದಾರೆ ನಿರ್ದೇಶಕ ಗುರು ದೇಶಪಾಂಡೆ.

love stroy between krishna and kauveri in yajamana

User Rating: 5 / 5

Star activeStar activeStar activeStar activeStar active

ದರ್ಶನ್ ಚಿತ್ರಗಳಲ್ಲಿ ಕಾವೇರಿ ಅನ್ನೋ ಹೀರೋಯಿನ್ ಹೆಚ್ಚು. ಯಜಮಾನನಲ್ಲೂ ಅಷ್ಟೆ, ದರ್ಶನ್ ಕೃಷ್ಣನಾದರೆ, ರಶ್ಮಿಕಾ ಕಾವೇರಿ. ಇಬ್ಬರೂ ಪ್ರೀತಿಗೆ ಬೀಳ್ತಾರೆ. ಹೋಲ್ಡಾನ್..

ಅವರಿಬ್ಬರಿಗೂ ಆಗೋದು ಲವ್ ಅಟ್ ಫಸ್ಟ್ ಸೈಟ್ ಅಲ್ಲ. ಅವರಿಬ್ಬರದ್ದೂ ಬಾಲ ಪ್ರೇಮ ಕಥೆ. ಬಾಲಮಿತ್ರ, ಚಂದಮಾಮ ಓದೋ ವಯಸ್ಸಲ್ಲೇ ಇಬ್ರಿಗೂ ಲವ್ವಾಗುತ್ತಂತೆ. ದೊಡ್ಡವರಾದ್ ಮೇಲೆ ಮರ ಸುತ್ತುತ್ತಾರೆ.. ಅಷ್ಟೆ..

ಇಷ್ಟೆಲ್ಲ ಹೇಳಿರೋದು ಕಾವೇರಿ ರಶ್ಮಿಕಾ ಮಂದಣ್ಣ. ಮುಂದಿನದ್ದೆಲ್ಲ ಹೇಳೋಕೆ ಶೈಲಜಾ ನಾಗ್, ಹರಿಕೃಷ್ಣ ಬಿಟ್ಟಿಲ್ವಂತಣ್ಣ.

tanya hope learns kananda dring yajamana shooting

User Rating: 5 / 5

Star activeStar activeStar activeStar activeStar active

ತಾನ್ಯಾ ಹೋಪ್ ಅಂದ್ರೆ ಯಾರು ಎನ್ನುವವರಿಗೆ ಬಸಣ್ಣಿ ಎಂದರೆ.. ಬಸಣ್ಣಿ ಬಾ.. ಬಾ.. ಎನ್ನುತ್ತಾರೆ.. ಅಷ್ಟರಮಟ್ಟಿಗೆ ಸಾಂಗ್ ಹಿಟ್ ಆಗಿದೆ. ಯಜಮಾನ ಚಿತ್ರದಲ್ಲಿ ಇಬ್ಬರು ನಾಯಕಿಯರು. ಒಬ್ಬರು ರಶ್ಮಿಕಾ ಮಂದಣ್ಣ, ಮತ್ತೊಬ್ಬರು ತಾನ್ಯಾ ಹೋಪ್. ಮೂಲತಃ ಮುಂಬೈನವರು. 

ವೃತ್ತಿಯಲ್ಲಿ ಮಾಡೆಲ್ ಆಗಿದ್ದ ತಾನ್ಯಾ ಹೋಪ್, ತೆಲುಗು, ಹಿಂದಿಯಲ್ಲೂ ನಟಿಸಿದ್ದಾರೆ. ಕನ್ನಡದಲ್ಲಿ ಯಜಮಾನನ ಜೊತೆಗೆ ಯಜಮಾನನ ತಮ್ಮ ಅಮರ್ ಚಿತ್ರಕ್ಕೂ ಅವರೇ ನಾಯಕಿ. ಸುನಿಲ್ ಕುಮಾರ್ ದೇಸಾಯಿಯವರ ಉದ್ಘರ್ಷ ಚಿತ್ರದಲ್ಲೂ ತಾನ್ಯಾ ಇದ್ದಾರೆ. ಹೀಗಾಗಿಯೇ.. ಅವರು ಕನ್ನಡ ಕಲಿತೂಬಿಟ್ಟಿದ್ದಾರೆ.

`ಮೊದ ಮೊದಲು ತುಂಬಾ ಕಷ್ಟವಾಗುತ್ತಿತ್ತು. ಆದರೆ, ಸುತ್ತಲಿನ ವಾತಾವರಣ ಎಲ್ಲ ಕನ್ನಡಮಯ. ಎಲ್ಲರೂ ಕನ್ನಡದಲ್ಲಿಯೇ ಮಾತನಾಡುತ್ತಿದ್ದರು. ನಾನೂ ಪ್ರಯತ್ನ ಪಟ್ಟು ಪಟ್ಟೂ.. ಕನ್ನಡ ಕಲಿತೇಬಿಟ್ಟೆ. ಈಗ ಕನ್ನಡವನ್ನು ಆರಾಮ್ ಆಗಿ ಮಾತಾಡ್ತೀನಿ. ಅಷ್ಟೇ ಏಕೆ, ಕನ್ನಡದಲ್ಲೇ ಮೆಸೇಜ್ ಮಾಡ್ತೀನಿ' ಅಂತಾರೆ ತಾನ್ಯಾ ಹೋಪ್. 

ಯಜಮಾನ ರಿಲೀಸ್ ದಿನ ಅವರಿಗೆ ತ್ರಿಪಲ್ ಧಮಾಕಾ ಇದೆ. ಅದೇ ದಿನ ಅವರ ತಮಿಳು ಚಿತ್ರವೊಂದು ರಿಲೀಸ್ ಆಗುತ್ತಿದೆ. ಜೊತೆಯಲ್ಲೇ ಅವರೇ ನಾಯಕಿಯಾಗಿರುವ ಅಮರ್ ಚಿತ್ರದ ಟ್ರೇಲರ್, ಯಜಮಾನ ಚಿತ್ರದ ಜೊತೆಯಲ್ಲೇ ಬರುತ್ತಿದೆ.

chemistry of kariyappa makes profit in second week

User Rating: 0 / 5

Star inactiveStar inactiveStar inactiveStar inactiveStar inactive

ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರ ಬಾಕ್ಸಾಫೀಸ್‍ನಲ್ಲಿ ಗೆದ್ದಿದೆ. 2ನೇ ವಾರದ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರ, ಬಿಡುಗಡೆಯಾದ ಎಲ್ಲ ಕಡೆ ಅತ್ಯುತ್ತಮ ಪ್ರದರ್ಶನ ಕಾಣ್ತಿದೆ. ಗಲ್ಲಾಪೆಟ್ಟಿಗೆಯೂ ತುಂಬುತ್ತಿದೆ.

ಮೊದಲ ವಾರ ಕರಿಯಪ್ಪ 80 ಲಕ್ಷ ಬ್ಯುಸಿನೆಸ್ ಮಾಡಿದ್ದಾನೆ. ಇನ್ನು ಚಿತ್ರದ ಆಡಿಯೋ, ಸ್ಯಾಟಲೈಟ್ ರೈಟ್ಸ್‍ಗಳೂ ಸೇರಿದಂತೆ ಚಿತ್ರ ಒಟ್ಟಾರೆ ಲಾಭದಲ್ಲಿದೆ. ಮುಂದೆ ಬರೋದೆಲ್ಲ ಬೋನಸ್ಸು.

ತಬಲಾ ನಾಣಿ ಕರಿಯಪ್ಪನಾಗಿ ನಟಿಸಿರುವ ಚಿತ್ರದಲ್ಲಿ ಶಿಲ್ಪಾ ಮಂಜುನಾಥ್ ನಾಯಕಿ. ಮಂಜುನಾಥ್ ನಿರ್ಮಾಪಕ. ಕುಮಾರ್ ನಿರ್ದೇಶನದ ಸಿನಿಮಾದಿಂದಾಗಿ ಅತೀ ಹೆಚ್ಚು ಗುರುತಿಸಿಕೊಂಡಿರೋದು ತಬಲಾ ನಾಣಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery