` Flash Back - chitraloka.com | Kannada Movie News, Reviews | Image
sudeep in dabang 3 sets

User Rating: 5 / 5

Star activeStar activeStar activeStar activeStar active

Actor Sudeep who is playing a prominent role in Salman Khan's new film 'Dabangg 3', participated in the shooting of the film from Saturday in Mumbai.

Sudeep has said though the heat was unbearable, he has wrapped the first day of the shoot with smile. He has also thanked Salman Khan for making him feel at home. Here is what Sudeep has said in his tweet.

'Heat was unbearable. Yet couldn't dominate the energy on set ... it was a thrilling day .. fabulous unit .. fantabulous people .... a humongous gym set up on location is an added bonus. 1st day of Dabangg 3 wrapped with smiles. Thanks Salman Sir for makingg me feel at home' tweeted Sudeep.

yogaraj bhat waiting for monsoon season

User Rating: 0 / 5

Star inactiveStar inactiveStar inactiveStar inactiveStar inactive

ಯೋಗರಾಜ್ ಭಟ್ಟರು ಮಳೆಗಾಲಕ್ಕಾಗಿ ಕಾಯುತ್ತಿದ್ದಾರೆ. ಅವರಿಗೆ ಈಗ ಮಳೆ ಬರಬೇಕು, ಕರುನಾಡು ಹಸಿರಾಗಬೇಕು, ತುಂತುರು ಮಳೆ ಹನಿಹನಿಯಾಗಿ ಸುರಿಯುತ್ತಿರಬೇಕು. ಮುಂಗಾರು ಮಳೆಯ ಲೀಲೆ ಶುರುವಾದರೆ, ಭಟ್ಟರ ಕ್ಯಾಮೆರಾ ಆನ್ ಆಗಲಿದೆ. ಅದು ಗಾಳಿಪಟ-2 ಚಿತ್ರಕ್ಕಾಗಿ.

ಗಾಳಿಪಟ-2 ಚಿತ್ರದ ಕಥೆ, ಸನ್ನಿವೇಶಗಳಿಗೆ ಮಳೆಯ ಅಗತ್ಯವಿದೆ. ಹಚ್ಚ ಹಸಿರಿನ ಪರಿಸರ ಬೇಕಿದೆ. ಸದ್ಯಕ್ಕೆ ಸೂರ್ಯ ಸುಡುಸುಡು ಕೆಂಡವಾಗಿದ್ದಾನೆ. ಹೀಗಾಗಿ ಭಟ್ಟರು ಗಾಳಿಪಟ-2 ಚಿತ್ರವನ್ನು ಶುರು ಮಾಡಲು ಮಳೆಗಾಲಕ್ಕೆ ಕಾಯುತ್ತಿದ್ದಾರೆ.

ಶರಣ್, ರಿಷಿ, ಪವನ್ ಕುಮಾರ್ ನಟಿಸುತ್ತಿರುವ ಚಿತ್ರದಲ್ಲಿ, ಸೋನಾಲ್ ಮಂಥೆರೋ(ಪಂಚತಂತ್ರ ಖ್ಯಾತಿ), ಶರ್ಮಿಳಾ ಮಾಂಡ್ರೆ ನಾಯಕಿಯರು. ಭಟ್ಟರ ಚಿತ್ರಕ್ಕೆ ಈ ಬಾರಿ ಅರ್ಜುನ್ ಜನ್ಯ ಸಂಗೀತವಿದ್ದು, ಮಹೇಶ್ ಚಿತ್ರದ ನಿರ್ಮಾಪಕರು.

kurukshetra hinid television rights sold

User Rating: 5 / 5

Star activeStar activeStar activeStar activeStar active

ದರ್ಶನ್ ಅಭಿನಯದ ಮುನಿರತ್ನ ಕುರುಕ್ಷೇತ್ರ ರಿಲೀಸ್‍ಗೆ ರೆಡಿಯಾಗುತ್ತಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಸಿದ್ಧವಾಗುತ್ತಿದೆ. ನಾಲ್ಕು ಭಾಷೆಯಲ್ಲಿ ಕುರುಕ್ಷೇತ್ರ 3ಡಿ ವರ್ಷನ್ ಸಂಪೂರ್ಣ ಸಿದ್ಧಗೊಂಡಿದೆ. ಕನ್ನಡ ವರ್ಷನ್ ಸೆನ್ಸಾರ್ ಕೂಡಾ ಆಗಿದೆ. ಇನ್ನುಳಿದ ಮೂರು ಭಾಷೆಯ ಚಿತ್ರಗಳು ಮುಂದಿನ ವಾರ ಸೆನ್ಸಾರ್‍ಗೆ ಹೋಗುತ್ತಿವೆ. ಇನ್ನು 15 ದಿನಗಳಲ್ಲಿ ಹಿಂದಿ ವರ್ಷನ್ ಕೂಡಾ ಮುಕ್ತಾಯಗೊಳ್ಳಲಿದೆ. ಹೀಗೆ ರಿಲೀಸ್‍ಗೆ ರೆಡಿಯಾಗುತ್ತಿರುವಾಗಲೇ ಹಿಂದಿ ಕುರುಕ್ಷೇತ್ರ ಚಿತ್ರದ ಟಿವಿ ರೈಟ್ಸ್ ಒಂಭತ್ತೂವರೆ ಕೋಟಿಗೆ ಮಾರಾಟವಾಗಿದೆ.

ಇದು ಕೇವಲ ಟಿವಿ ರೈಟ್ಸ್, ಡಿಸ್ಟ್ರಿಬ್ಯೂಷನ್ ರೈಟ್ಸ್ ಅಲ್ಲ. ಯಾವುದೇ ಭಾಷೆಯ ಡಿಸ್ಟ್ರಿಬ್ಯೂಷನ್‍ನ್ನು ಇನ್ನೂ ಮಾರಾಟ ಮಾಡಿಲ್ಲ. ಐದಕ್ಕೆ ಐದೂ ಭಾಷೆಯಲ್ಲಿ ಕುರುಕ್ಷೇತ್ರ ಚಿತ್ರವನ್ನು ಏಕಕಾಲಕ್ಕೆ ರಿಲೀಸ್ ಮಾಡುವ ಪ್ಲಾನ್ ಮಾಡುತ್ತಿದ್ದಾರೆ ನಿರ್ಮಾಪಕ ಮುನಿರತ್ನ.

ದರ್ಶನ್ ದುರ್ಯೋಧನನಾಗಿ ನಟಿಸಿದ್ದು, ದುರ್ಯೋಧನನ ಆ್ಯಂಗಲ್‍ನಲ್ಲಿಯೇ ಇಡೀ ಚಿತ್ರವನ್ನು ಕಟ್ಟಿಕೊಡಲಾಗಿದೆ. ರವಿಚಂದ್ರನ್, ಅರ್ಜುನ್ ಸರ್ಜಾ, ಶ್ರೀನಾಥ್, ನಿಖಿಲ್ ಕುಮಾರಸ್ವಾಮಿ, ಮೇಘನಾ ರಾಜ್, ಹರಿಪ್ರಿಯಾ, ಸ್ನೇಹ, ಸೃಜನ್ ಲೋಕೇಶ್ ಮೊದಲಾದವರು ನಟಿಸಿರುವ ಬಹುತಾರಾಗಣದ ಸಿನಿಮಾ ಕುರುಕ್ಷೇತ್ರ.

ರೆಬಲ್‍ಸ್ಟಾರ್ ಅಂಬರೀಷ್ ಅಭಿನಯದ ಕೊನೆಯ ಚಿತ್ರವೂ ಇದಾಗಿದ್ದು, ನಾಗಣ್ಣ ಮತ್ತು ನಾಗೇಂದ್ರ ಪ್ರಸಾದ್ ಚಿತ್ರವನ್ನು ನಿರ್ದೇಶಿಸಿದ್ದಾರೆ.

sudeep to be a part of mmc cricket tournament once again

User Rating: 0 / 5

Star inactiveStar inactiveStar inactiveStar inactiveStar inactive

ಹಿಂದೂಗಳಿಗೆ ಕಾಶಿ ಹೇಗೋ.. ಹಾಗೆಯೇ ಕ್ರಿಕೆಟಿಗರಿಗೆ ಇಂಗ್ಲೆಂಡ್‍ನ ಲಾಡ್ರ್ಸ್ ಕ್ರೀಡಾಂಗಣ. ಅಲ್ಲಿ ಕ್ರಿಕೆಟ್ ಆಡಬೇಕು ಎನ್ನುವುದು ಪ್ರತಿಯೊಬ್ಬ ಕ್ರಿಕೆಟ್ ಆಟಗಾರನ ಕನಸು. ಅಂತಹ ಕ್ರಿಕೆಟ್ ಕಾಶಿಗೆ ಕಿಚ್ಚ ಸುದೀಪ್ ಕ್ರಿಕೆಟ್ ಆಡಲು ಹೋಗುತ್ತಿದ್ದಾರೆ. 

ಸುದೀಪ್‍ಗೆ ಲಾಡ್ರ್ಸ್ ಕ್ರೀಡಾಂಗಣ ಹೊಸದೇನಲ್ಲ. ಈ ಹಿಂದೆ ಎಂಎಂಸಿ ಕ್ರಿಕೆಟ್ ಟೂರ್ನಮೆಂಟ್‍ನಲ್ಲಿ ಆಡಿದ್ದ ಸುದೀಪ್, ಪ್ರಶಸ್ತಿಯನ್ನೂ ಗೆದ್ದಿದ್ದರು. ವಿಸೈನರ್ ತಂಡದ ನಾಯಕರಾಗಿ ಕಪ್ ಗೆದ್ದಿದ್ದ ಸುದೀಪ್, ಈಗ ಮತ್ತೊಮ್ಮೆ ಲಾಡ್ರ್ಸ್‍ನತ್ತ ಪ್ರಯಾಣ ಬೆಳೆಸುತ್ತಿದ್ದಾರೆ. ಜೂನ್ 12ರಿಂದ ಲಾಡ್ರ್ಸ್‍ನಲ್ಲಿ ಎಂಎಂಸಿ ಕಾರ್ಪೊರೇಟ್ ಕ್ರಿಕೆಟ್ ಟೂರ್ನಿ ಶುರುವಾಗಲಿದ್ದು, ಮತ್ತೊಮ್ಮೆ ವಿಸೈನರ್ ತಂಡವನ್ನು ಸುದೀಪ್ ಮುನ್ನಡೆಸಲಿದ್ದಾರೆ.

bicchugatthi baramanna nayaka shooting complete

User Rating: 0 / 5

Star inactiveStar inactiveStar inactiveStar inactiveStar inactive

ಬಿಚ್ಚುಗತ್ತಿ ಭರಮಣ್ಣ ನಾಯಕ, ದುರ್ಗದ ಹುಲಿಗಳಲ್ಲಿ ಒಂದು. ಮದಕರಿ ನಾಯಕನ ಬಲಗೈ ಭಂಟನಾಗಿದ್ದ ಭರಮಣ್ಣ ನಾಯಕನ ಕಥಾ ಚಿತ್ರವಿದು. ಬಿ.ಎಲ್.ವೇಣು ಅವರ ಕಾದಂಬರಿ ಆಧರಿಸಿ ನಿರ್ಮಾಣವಾಗಿರುವ ಚಿತ್ರದ ಶೂಟಿಂಗ್ ಮುಗಿದಿದೆ. ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ಭರಮಣ್ಣ ನಾಯಕನಾಗಿ ನಟಿಸಿದ್ದು, ಹರಿಪ್ರಿಯಾ ನಾಯಕಿ. ಕಾಲೇಜ್ ಕುಮಾರ್, ವಿಕ್ಟರಿ-2 ಚಿತ್ರಗಳ ಖ್ಯಾತಿಯ ಸಂತೋಷ್ ಕುಮಾರ್ ನಿರ್ದೇಶಕ.

ಕೆಜಿಎಫ್, ಬಾಹುಬಲಿ ಮಾದರಿಯಲ್ಲಿಯೇ ಇದೂ ಕೂಡಾ ಎರಡು ಭಾಗಗಳಲ್ಲಿ ತೆರೆ ಕಾಣಲಿದೆ. ಮೊದಲ ಭಾಗದಲ್ಲಿ ದಳವಾಯಿಗಳ ದಂಗೆಯ ಕಥಾವಸ್ತು ಇಟ್ಟುಕೊಳ್ಳಲಾಗಿದೆ. ಐತಿಹಾಸಿಕ ಚಿತ್ರವೊಂದನ್ನು ಸೀಕ್ವೆಲ್ ರೂಪದಲ್ಲಿ ತೆರೆಗೆ ತರುತ್ತಿರುವುದು ಇದೇ ಮೊದಲು.

ಶ್ರೀಕೃಷ್ಣ ಪ್ರೊಡಕ್ಷನ್ಸ್ ಬ್ಯಾನರ್‍ನ ಚಿತ್ರಕ್ಕೆ ಹಂಸಲೇಖ ಸಂಗೀತ ನಿರ್ದೇಶನವಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery