` Flash Back - chitraloka.com | Kannada Movie News, Reviews | Image
meghana raj chiu sarja on may 2nd

User Rating: 0 / 5

Star inactiveStar inactiveStar inactiveStar inactiveStar inactive

ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಅವರ ವಿವಾಹಕ್ಕೆ ಮೇ2ನೇ ತಾರೀಕು ಮುಹೂರ್ತ ಫಿಕ್ಸ್ ಆಗಿದೆ. ಆ ದಿನ ಬೆಳಗ್ಗೆ 10.30ಕ್ಕೆ ಬೆಂಗಳೂರಿನ ಮೈದಾನದಲ್ಲಿ ಚಿರು-ಮೇಘನಾ ಸತಿಪತಿಗಳಾಗುತ್ತಿದ್ದಾರೆ.

ಅರಮನೆ ಮೈದಾನದ ವೈಟ್ ಪೆಟಲ್ಸ್ ಸಭಾಂಗಣದಲ್ಲಿ ಮದುವೆಗೆ ವೇದಿಕೆ ಸಿದ್ಧಗೊಳ್ಳಲಿದೆ. ಅದೇ ದಿನ ಸಂಜೆ 7 ಗಂಟೆಗೆ ಆರತಕ್ಷತೆ.

ಈಗಾಗಲೇ ಎರಡೂ ಕುಟುಂಬಗಳು ಆಮಂತ್ರಣ ಪತ್ರಿಕೆ ಹಂಚುವಲ್ಲಿ ಬ್ಯುಸಿ. ಸರ್ಜಾ ಕುಟುಂಬ ಹಾಗೂ ಸುಂದರ್‍ರಾಜ್.. ಎರಡೂ ಕುಟುಂಬಗಳು ಬಣ್ಣದಲೋಕದ ನಂಟು ಹೊಂದಿವೆ. ಹೀಗಾಗಿ ಮೇ 2ನೇ ತಾರೀಕು, ಅರಮನೆ ಮೈದಾನದಲ್ಲಿ ಚಿತ್ರರಂಗದ ನಕ್ಷತ್ರಗಳೆಲ್ಲ ಹೊಳೆಯಲಿವೆ.

Related Articles :-

Chiru And Meghana Raj's Wedding On May 2nd

seizer director prpducer upset on heroine parul

User Rating: 0 / 5

Star inactiveStar inactiveStar inactiveStar inactiveStar inactive

ಬಿಡುಗಡೆಯ ಹೊಸ್ತಿಲಲ್ಲಿ ನಿಂತಿರುವ ಚಿತ್ರ ಸೀಜರ್. ಆದರೆ, ಚಿತ್ರದ ಪ್ರಚಾರಕ್ಕೆ ಚಿತ್ರದ ಕಲಾವಿದರೇ ಸಹಕರಿಸುತ್ತಿಲ್ಲವಾ..? ಸೀಜರ್ ಚಿತ್ರದ ನಿರ್ಮಾಪಕ, ನಿರ್ದೇಶಕರ ಮಾತು ಕೇಳಿದರೆ ಹಾಗನ್ನಿಸೋದು ಸಹಜ.

ಚಿತ್ರದ ನಾಯಕಿ ಪಾರುಲ್ ಯಾದವ್. ಆದರೆ, ನಿರ್ಮಾಪಕರಿಗೆ, ನಿರ್ದೇಶಕರಿಗೆ ಸಿಗುತ್ತಿಲ್ಲ. ಫೋನ್ ಸ್ವಿಚ್‍ಆಫ್. ಅವರು ಉಳಿದುಕೊಂಡಿರುವ ಹೋಟೆಲ್‍ಗೆ ಹೋಗಿ ಗಂಟೆಗಟ್ಟಲೆ ಕಾದರೂ ಸಿಕ್ಕಲ್ಲ. ತಾವು ನಟಿಸಿರುವ ಸಿನಿಮಾ ಬಗ್ಗೆ ಒಂದೇ ಒಂದು ಮಾತೂ ಆಡಲ್ಲ. ನಾವು ಪಾರುಲ್ ಅವರಿಗೆ ಯಾವುದೇ ಸಂಭಾವನೆ ಬಾಕಿ ಉಳಿಸಿಕೊಂಡಿಲ್ಲ ಎನ್ನುತ್ತಾರೆ ಚಿತ್ರದ ನಿರ್ದೇಶಕ ವಿನಯ್ ಕೃಷ್ಣ.

ನಿರ್ಮಾಪಕ ತ್ರಿವಿಕ್ರಮ್ ಅವರದ್ದೂ ಇದೇ ಆರೋಪ. ಚಿತ್ರ 4 ವರ್ಷಗಳ ಹಿಂದೆ ಶುರುವಾಯ್ತು. ಆರಂಭದಲ್ಲಿ ಕನ್ನಡದಲ್ಲಷ್ಟೇ ಎಂದುಕೊಂಡಿದ್ದೆವು, ನಂತರ 4 ಭಾಷೆಯಲ್ಲೂ ನಿರ್ಮಿಸಿದೆವು. 15 ಕೋಟಿ ವೆಚ್ಚದ ಸಿನಿಮಾ. ಬಿಡುಗಡೆ ವಿಳಂಬವಾಗಿದ್ದಕ್ಕೆ ಬೇರೆ ಬೇರೆ ಕಾರಣಗಳಿವೆ. ಕಲಾವಿದರು ನಿರ್ಮಾಪಕರಿಗೆ ಈ ರೀತಿ ಅವಮಾನ ಮಾಡಬಾರದು ಎಂದು ಆಕ್ರೋಶ ಹೊರಹಾಕಿದ್ದಾರೆ ತ್ರಿವಿಕ್ರಮ್.

ಚಿತ್ರತಂಡದ ಮುನಿಸು, ಆಕ್ರೋಶವೇನೇ ಇರಲಿ, ಸೀಜರ್ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಉಳಿದದ್ದು ಪ್ರೇಕ್ಷಕರಿಗೆ ಬಿಟ್ಟಿದ್ದು.

ashika ranganath speaks about chutu chutu song

User Rating: 0 / 5

Star inactiveStar inactiveStar inactiveStar inactiveStar inactive

ಚುಟು ಚುಟು.. ಹಾಡು ನೋಡಿದ್ದೀರಾ..? ರ್ಯಾಂಬೋ 2 ಚಿತ್ರದ ಆ ಹಾಡಿನಲ್ಲಿ ಗಮನ ಸೆಳೆದಿದ್ದು ಆಶಿಕಾ ರಂಗನಾಥ್ ಅವರ ಗ್ಲಾಮರ್. ಇದುವರೆಗೆ ಹೋಮ್ಲಿ ಪಾತ್ರಗಳಲ್ಲಿಯೇ ಕಾಣಿಸಿಕೊಂಡಿದ್ದ ಆಶಿಕಾ, ಚುಟು ಚುಟು ಹಾಡಿನಲ್ಲಿ ಕಣ್ಣು ಕುಕ್ಕುವಂತಿದ್ದರು. 

ಆ ಹಾಡು, ಆ ಡ್ರೆಸ್ ಬಗ್ಗೆ ನನಗೆ ಗೊತ್ತಿತ್ತು. ಗೊತ್ತಿಲ್ಲದೆ ಒಪ್ಪಿಕೊಂಡಿದ್ದೇನೂ ಅಲ್ಲ. ಅದು ಗ್ಲಾಮರಸ್ ಆಗಿದೆ. ವಲ್ಗರ್ ಆಗಿಲ್ಲ. ಚಿತ್ರದಲ್ಲಿ ನನ್ನದು ಗೋವಾದ ಮಿಡ್ಲ್ ಕ್ಲಾಸ್ ಮನೆಯ ಹುಡುಗಿಯ ಪಾತ್ರ. ಪಾತ್ರದ ಹೆಸರು ಮಯೂರಿ. ಬೋಲ್ಡ್ ಹುಡುಗಿ. ಹೀಗಾಗಿ ಹಾಡಿನಲ್ಲೂ ಹಾಗೆಯೇ ಇದೆ ಅಷ್ಟೆ ಎಂದಿದ್ದಾರೆ ಆಶಿಕಾ ರಂಗನಾಥ್.

ಆಫರ್‍ಗೋಸ್ಕರ ವಲ್ಗರ್ ಆಗಲ್ಲ. ಅವಕಾಶ ಸಿಗದೇ ಹೋದರೂ ವಲ್ಗರ್ ಪಾತ್ರಗಳಲ್ಲಿ ನಟಿಸಲ್ಲ. ಗ್ಲಾಮರ್ ಡ್ರೆಸ್ ತೊಟ್ಟರೆ ಆಫರ್ ಸಿಗುತ್ತೆ ಅನ್ನೋದೇ ಸುಳ್ಳು. ಇನ್ನು ಚುಟು ಚುಟು ಹಾಡನ್ನು ತುಂಬಾ ಜನ ಮೆಚ್ಚಿಕೊಂಡಿದ್ದಾರೆ. ತೆರೆಗೆ ಬಂದ ಮೇಲೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರುತ್ತೆ ಅನ್ನೋ ಕುತೂಹಲ ನನಗೂ ಇದೆ ಎಂದಿದ್ದಾರೆ ಆಶಿಕಾ.

duniya viji kusthi practice with his son

User Rating: 0 / 5

Star inactiveStar inactiveStar inactiveStar inactiveStar inactive

ದುನಿಯಾ ವಿಜಿ ಅವರ ಮುಂದಿನ ಸಿನಿಮಾ ಕುಸ್ತಿಯ ಕುರಿತಾದದ್ದು. ಆ ಚಿತ್ರದಲ್ಲಿ ದುನಿಯಾ ವಿಜಿ ಕುಸ್ತಿಪಟುವಾಗಿ ನಟಿಸುತ್ತಿದ್ದಾರೆ, ಬಾಲಕನ ಪಾತ್ರದಲ್ಲಿ ದುನಿಯಾ ವಿಜಯ್ ಅವರ ಪುತ್ರ ಸಾಮ್ರಾಟ್ ನಟಿಸುತ್ತಿದ್ದಾರೆ. ಚಿತ್ರಕ್ಕೆ ತಯಾರಿ ಆರಂಭವಾಗಿದ್ದು, ದುನಿಯಾ ವಿಜಯ್ ಈಗ ಕುಸ್ತಿಯ ಪಟ್ಟುಗಳನ್ನು ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಕಾರ್ತಿಕ್ ಕಾಟೆ, ಅಪ್ಪಾಸಿ ತೇರದಾಳ ಹಾಗೂ ಬೀರೇಶ್ ಎಂಬ ರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳು ದುನಿಯಾ ವಿಜಯ್‍ಗೆ ತರಬೇತಿ ಕೊಡುತ್ತಿದ್ದಾರೆ.

ಬಾಲ್ಯದಿಂದಲೂ ಗರಡಿ ಮನೆಯಲ್ಲಿಯೇ ಬೆಳೆದ ನನಗೆ ಕುಸ್ತಿ ಬಗ್ಗೆ ಸಿನಿಮಾ ಮಾಡಬೇಕು ಎಂಬ ಕನಸಿತ್ತು. ಇದು ಕನ್ನಡದ ಮಣ್ಣಿನ ಸೊಗಡಿನ ಸಿನಿಮಾ ಆಗಲಿದೆ ಎಂಬ ವಿಶ್ವಾಸ ವಿಜಿಯವರದ್ದು. ದುನಿಯಾ ವಿಜಿ ಜೊತೆ ಅವರ ಮಗ ಸಾಮ್ರಾಟ್ ಕೂಡಾ ಪ್ರಾಕ್ಟೀಸ್ ಮಾಡುತ್ತಿರುವುದು ವಿಶೇಷ. ಅಂದಹಾಗೆ ಚಿತ್ರದ ಕಥೆಗಾರ ಸ್ವತಃ ದುನಿಯಾ ವಿಜಯ್.

ananth nag speaks for cauvery water

User Rating: 0 / 5

Star inactiveStar inactiveStar inactiveStar inactiveStar inactive

ನಟ ಅನಂತ್‍ನಾಗ್, ತಮಿಳುನಾಡಿನಲ್ಲಿ ನಡೆಯುತ್ತಿರುವ ಕಾವೇರಿ ಜಲಮಂಡಳಿ ರಚನೆ ಹೋರಾಟದ ವಿರುದ್ಧ ಧ್ವನಿಯೆತ್ತಿದ್ದಾರೆ. ತಮಿಳುನಾಡಿನ ಈ ಒತ್ತಡ ತಂತ್ರ ಇದೇ ಮೊದಲೇನೂ ಅಲ್ಲ. ಕೇಂದ್ರ ಸರ್ಕಾರವಿರಲಿ, ಸುಪ್ರೀಂಕೋರ್ಟ್ ಇರಲಿ.. ಈ ರೀತಿ ಒತ್ತಡ ಹೇರುವ ಕೆಲಸವನ್ನು ತಮಿಳುನಾಡು ಮಾಡಿಕೊಂಡೇ ಬಂದಿದೆ ಎಂದಿದ್ದಾರೆ ಅನಂತ್‍ನಾಗ್.

ತಮಿಳುನಾಡಿನ ಇಬ್ಬರು ನಟರು, ತಮ್ಮ ರಾಜಕೀಯ ಪ್ರವೇಶಕ್ಕಾಗಿ ಕಾವೇರಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಈ ವಿಚಾರದಲ್ಲಿ ಕನ್ನಡದ ನೆಲಜಲದ ರಕ್ಷಣೆ ವಿಚಾರದಲ್ಲಿ ನಾನು ಸಮಸ್ತ ಕನ್ನಡಿಗರ ಜೊತೆ ಇರುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ ಅನಂತ್‍ನಾಗ್.

I Love You Movie Gallery

Rightbanner02_butterfly_inside

Paddehuli Movie Gallery