` Flash Back - chitraloka.com | Kannada Movie News, Reviews | Image
dinakar is lucky for haripriya

User Rating: 0 / 5

Star inactiveStar inactiveStar inactiveStar inactiveStar inactive

ದಿನಕರ್ ತೂಗುದೀಪ ನಿರ್ದೇಶನದ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರ ರಿಲೀಸ್‍ಗೆ ರೆಡಿಯಾಗಿದೆ. ಪ್ರಜ್ವಲ್ ದೇವರಾಜ್, ಪ್ರೇಮ್ ಮತ್ತು ಹರಿಪ್ರಿಯಾ ಕಾಂಬಿನೇಷನ್‍ನ ಸಿನಿಮಾ, ಬಿಡುಗಡೆಗೆ ಮೊದಲೇ ಕ್ರೇಜ್ ಹುಟ್ಟಿಸಿರುವ ಚಿತ್ರ. ಸತತ ಹಿಟ್ ಕೊಟ್ಟಿರುವ ದಿನಕರ್, 7 ವರ್ಷದ ನಂತರ ನಿರ್ದೇಶನ ಮಾಡಿರುವ ಚಿತ್ರ ಲೈಫ್ ಜೊತೆ ಒಂದ್ ಸೆಲ್ಫಿ. ಚೌಕ ನಂತರ, ಪ್ರೇಮ್ ಮತ್ತು ಪ್ರಜ್ವಲ್ ಒಟ್ಟಿಗೇ ನಟಿಸಿರುವ ಚಿತ್ರ ಲೈಫ್ ಜೊತೆ ಒಂದ್ ಸೆಲ್ಫಿ. ಪ್ರಜ್ವಲ್ ಜೊತೆ ನಟಿಸಿರುವ 3ನೇ ಸಿನಿಮಾ. ಇಷ್ಟೆಲ್ಲ ಇದ್ದರೂ, ಹರಿಪ್ರಿಯಾಗೆ ದಿನಕರ್ ಲಕ್ಕಿ ಅನ್ನಿಸೋಕೆ ಇನ್ನೂ ಒಂದು ಕಾರಣ ಇದೆ.

ಹರಿಪ್ರಿಯಾಗೆ ದೊಡ್ಡ ಬ್ರೇಕ್ ಕೊಟ್ಟ ಚಿತ್ರ ಉಗ್ರಂ. ದೊಡ್ಡ ಹೆಸರನ್ನೂ ಕೊಟ್ಟ ಚಿತ್ರ ನೀರ್‍ದೋಸೆ. ಆ ಎರಡೂ ಚಿತ್ರಗಳ ವಿತರಣೆಗೆ ದಿನಕರ್ ಸಾಥ್ ಕೊಟ್ಟಿದ್ದರಂತೆ. ಈಗ.. ಅವರದ್ದೇ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಈ ಸಿನಿಮಾ ಕೂಡಾ ಹಿಟ್ ಆಗುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದಾರೆ ಹರಿಪ್ರಿಯಾ.

ಚಿತ್ರದಲ್ಲಿನ ನನ್ನ ಪಾತ್ರ ರಿಯಲ್ ಲೈಫ್‍ಗೆ ಹತ್ತಿರವಾಗಿದೆ.  ಹೀಗಾಗಿ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಇದೆ ಎಂದು ಹೇಳಿಕೊಂಡಿದ್ದಾರೆ ಹರಿಪ್ರಿಯಾ. ದಿನಕರ್ ಅವರ ಪತ್ನಿ ಮಾನಸ ಅವರು ಬರೆದಿರುವ ಕಥೆಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ ದಿನಕರ್.

rashmika writes an heartfelt letter about kogadu floods

User Rating: 5 / 5

Star activeStar activeStar activeStar activeStar active

ಕೊಡಗು ಜನರ ಸಂಕಷ್ಟ ಕನ್ನಡದ ಕೋಟ್ಯಂತರ ಹೃದಯಗಳಲ್ಲಿ ಕರುಣೆಯನ್ನು ಬಡಿದೆಬ್ಬಿಸಿದೆ. ಮಾನವೀಯತೆಯ ಪ್ರವಾಹವೂ ಹರಿದಿದೆ. ಸ್ವತಃ ಕೊಡಗಿನವರೇ ಆದ ರಶ್ಮಿಕಾ ಮಂದಣ್ಣ ಕೂಡಾ ಹೊರತಲ್ಲ. ಕೊಡಗಿನ ಸಂಕಷ್ಟ ಕಂಡು ಪತ್ರವೊಂದನ್ನು ಬರೆದಿರುವ ರಶ್ಮಿಕಾ, ಕೊಡಗಿನ ಜೊತೆಗಿನ ತಮ್ಮ ಭಾವನಾತ್ಮಕ ಸಂಬಂಧವನ್ನು ಬಿಚ್ಚಿಟ್ಟಿದ್ದಾರೆ.

ನಮಗೆ ನೋವಾದಾಗ ಅಮ್ಮ ಎಂದು ಕೂಗುತ್ತೇವೆ. ಅಮ್ಮನೇ ಮುನಿಸಿಕೊಂಡಾಗ ಯಾರನ್ನು ಏನೆಂದು ಕೂಗುವುದು. ನಾ ಹುಟ್ಟಿದ, ಬೆಳೆದ, ಆಡಿದ್ದ, ಓದಿದ್ದ ಕೊಡಗು ಇಂದು ಮುಳುಗಿದ ಹಡಗಾಗಿದೆ. ಯಾರಿಗೂ ನೋವು ಮಾಡದ ನಮ್ಮವರು ಇಂದು ನೋವಿನಲ್ಲಿದ್ದಾರೆ. ನಾನು, ನೀನು, ನಂದು, ನಿಂದು, ಮೇಲು, ಕೀಳು, ಶ್ರೀಮಂತಿಕೆ ಎಲ್ಲ ನೀರಿನಲ್ಲಿಕೊಚ್ಚಿ ಹೋಗಿವೆ. ಮನುಷ್ಯತ್ವವೇ ಕಣ್ತುಂಬಿಕೊಂಡಿದೆ.  ಮಳೆಯ ಶಬ್ಧ, ನೀರಿನ ಆರ್ಭಟ ಕೇಳಿದರೆ ಜೀವ ನಡುಗುವಂತಾಗಿದೆ. ನೀರು.ನೀರು..ನೀರು... ಬಿಟ್ಟರೆ ಕಣ್ಣೀರು. 

ಧೈರ್ಯವಾಗಿ. ನಾವಿದ್ದೇವೆ ಎಂಬ ನಿಮ್ಮಗಳ ಮಾತು ನಮ್ಮನ್ನು ಜೀವಂತವಾಗಿರಿಸಿದೆ. ಕೋಟ್ಯಾನುಕೋಟಿ ಮಂದಿ ಕೈ ಮೀರಿ ಸಹಾಯ ಮಾಡಿದ್ದೀರಿ. ನಿಮಗೆಲ್ಲರಿಗೂ ಮನಃಪೂರ್ವಕವಾಗಿ ಒದ್ದೆ ಕಣ್ಣಿನಿಂದಲೇ ವಂದಿಸುತ್ತಿದ್ದೇನೆ. ನೊಂದು ಬೆಂಬ ಬದುಕನ್ನು ಪುನಃ ನಿರ್ಮಿಸಬೇಕಾಗಿದೆ. ಕೈ ಜೋಡಿ. ನಾನೂ ನಿಮ್ಮೊಂದಿಗೆ ಇರುತ್ತೇನೆ.

ಇದು ರಶ್ಮಿಕಾ ಬರೆದಿರುವ ಪತ್ರ. ಕೊಡಗಿನವರೇ ಆಗಿರುವ ರಶ್ಮಿಕಾ, ಕೊಡಗು ಪ್ರವಾಹ ಸಂತ್ರಸ್ತರಿಗೆ ಸಹಾಯವನ್ನೂ ಮಾಡಿದ್ದಾರೆ.

priyanka upendra in dual role

User Rating: 0 / 5

Star inactiveStar inactiveStar inactiveStar inactiveStar inactive

ಪ್ರಿಯಾಂಕಾ ಉಪೇಂದ್ರ ದ್ವಿಪಾತ್ರದಲ್ಲಿ ನಟಿಸುತ್ತಿದ್ಧಾರೆ. ಇನ್ನೂ ಹೆಸರಿಡದ ಚಿತ್ರವೊಂದರಲ್ಲಿ ಪ್ರಿಯಾಂಕಾ ನಟಿಸಲು ಒಪ್ಪಿದ್ದಾರೆ. ಎರಡುಪಾತ್ರಗಳಲ್ಲಿ ಒಂದು ಪ್ರಿಯಾಂಕಾ ಪಾತ್ರ ಆತ್ಮಹತ್ಯೆ ಮಾಡಿಕೊಳ್ಳುತ್ತೆ. ಇನ್ನೊಂದು ಪ್ರಿಯಾಂಕಾ ಪಾತ್ರ, ಆ ಸಾವಿನ ಬೆನ್ನು ಹತ್ತುತ್ತೆ. ಇದು ಕಥೆ.

ಗಮ್ಯ ಚಿತ್ರ ನಿರ್ದೇಶಿಸುತ್ತಿರುವ ಭುವನ್, ಪ್ರಿಯಾಂಕಾ ಉಪೇಂದ್ರ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದ ಕಥೆ ಸಿದ್ಧಪಡಿಸಿದ್ದಾರೆ. ಗಮ್ಯ ಚಿತ್ರದ ಶೂಟಿಂಗ್ ಬಿಡುವಿನಲ್ಲೇ ಈ ಚಿತ್ರದ ಸ್ಕ್ರಿಪ್ಟ್ ಕೆಲಸಗಳನ್ನೂ ಮಾಡುತ್ತಿದ್ದಾರೆ.

ಪ್ರಿಯಾಂಕಾ ಉಪೇಂದ್ರ ಜೊತೆ ನಟಿ ಶರ್ಮಿಳಾ ಮಾಂಡ್ರೆ ಹಾಗೂ ಭಾವನಾ ರಾವ್ ನಟಿಸುತ್ತಿದ್ದು, ಪ್ರಿಯಾಂಕಾ ಗೆಳತಿಯರಾಗಿ ಕಾಣಿಸಿಕೊಳ್ಳಲಿದ್ದಾರೆ. ಒಟ್ಟಿನಲ್ಲಿ ಇದು ಮಹಿಳಾ ಪ್ರದಾನ ಚಿತ್ರವಾಗುವುದರಲ್ಲಿ ಸಂದೇಹವಿಲ್ಲ.

aparna makes a come back after 30 years

User Rating: 0 / 5

Star inactiveStar inactiveStar inactiveStar inactiveStar inactive

ಅಪರ್ಣ ಎಂದರೆ ನೆನಪಾಗುವುದು ಅವರ ಮುದ್ದುಮುಖ ಹಾಗೂ ಸುಸ್ಪಷ್ಟ ಕನ್ನಡ ಉಚ್ಚಾರಣೆ. ಈಗ.. ಒನ್ & ಓನ್ಲಿ ವರಲಕ್ಷ್ಮಿಯೂ ನೆನಪಾಗ್ತಾರೆ. ನಿರೂಪಣೆ ಹಾಗೂ ಕಿರುತೆಯಲ್ಲಿ ಬ್ಯುಸಿಯಾಗಿದ್ದುಕೊಂಡು ಚಿತ್ರರಂಗದಿಂದ ದೂರವೇ ಇದ್ದ ಅಪರ್ಣಾ, ಈಗ 30 ವರ್ಷಗಳ ನಂತರ ಮತ್ತೊಮ್ಮೆ ಬಣ್ಣ ಹಚ್ಚಿದ್ದಾರೆ.

ವಿನಯ್ ರಾಜ್‍ಕುಮಾರ್ ನಾಯಕರಾಗಿ ನಟಿಸುತ್ತಿರುವ ಗ್ರಾಮಾಯಣ ಚಿತ್ರದಲ್ಲಿ ಅಪರ್ಣಾ, ವಿನಯ್ ಅವರಿಗೆ ತಾಯಿಯಾಗಿ ನಟಿಸುತ್ತಿದ್ದಾರೆ. ಎಸ್‍ಎಲ್‍ಎನ್ ಮೂರ್ತಿ ನಿರ್ಮಾಣದ ಚಿತ್ರದಲ್ಲಿ ಅಪರ್ಣಾ ಅವರ ಪಾತ್ರಕ್ಕೂ ತುಂಬಾ ಪ್ರಾಮುಖ್ಯತೆ ಇದೆ.

ನಿರ್ದೇಶಕ ಚಂದ್ರು ಬಂದು ಕಥೆ ಹೇಳಿದರು. ಕಥೆ ಹಾಗೂ ನನ್ನ ಪಾತ್ರ ತುಂಬಾ ಇಷ್ಟವಾಯ್ತು. ಕಡೂರು ಸುತ್ತಮುತ್ತಲ ಭಾಷೆಯನ್ನೇ ಇಟ್ಟುಕೊಂಡಿರುವ ದೇಸೀ ಭಾಷೆಯ ಸೊಗಡು ಚಿತ್ರದಲ್ಲಿದೆ. ಮಗನ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿರುವ ಅಮ್ಮನ ಪಾತ್ರ. ರೋಮಾಂಚನವನ್ನೇ ಸೃಷ್ಟಿಸ್ತು. ಹೀಗಾಗಿ ಒಪ್ಪಿಕೊಂಡಿದ್ದೇನೆ ಎಂದಿದ್ದಾರೆ ಅಪರ್ಣಾ.

ಅಪರ್ಣಾ, ಪುಟ್ಟಣ್ಣ ಕಣಗಾಲ್ ಅವರಿಂದ ಬೆಳಕಿಗೆ ಬಂದ ಪ್ರತಿಭೆ. ಮಸಣದ ಹೂವು ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದಿದ್ದ ಅಪರ್ಣಾ, ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.

jayapradha image

User Rating: 0 / 5

Star inactiveStar inactiveStar inactiveStar inactiveStar inactive

ಜಯಪ್ರದಾ. ಹಾಗೆಂದರೆ ಕನ್ನಡಿಗರಿಗೆ ಸನಾದಿ ಅಪ್ಪಣ್ಣ, ಕವಿರತ್ನ ಕಾಳಿದಾಸ, ಶಬ್ಧವೇದಿ, ಹಿಮಪಾತ ಚಿತ್ರಗಳು ನೆನಪಾಗುತ್ತವೆ. ಕನ್ನಡ ಚಿತ್ರರಂಗದಲ್ಲಿ ಜಯಪ್ರದಾ ನಟಿಸಿದ್ದ ಕಡೆಯ ಸಿನಿಮಾ, ಸಂಗೊಳ್ಳಿ ರಾಯಣ್ಣ. ಆ ಚಿತ್ರದಲ್ಲಿ ಚೆನ್ನಮ್ಮನಾಗಿ ಮಿಂಚಿದ್ದ ಜಯಪ್ರದಾ, ಈಗ ಮತ್ತೊಮ್ಮೆ ಬರುತ್ತಿದ್ದಾರೆ. ಸುವರ್ಣ ಸುಂದರಿಯಾಗಿ.

ಸುವರ್ಣ ಸುಂದರಿ ಎಂಬ ಚಿತ್ರದಲ್ಲಿ ವಿಜಯನಗರ ಸಾಮ್ರಾಜ್ಯದಲ್ಲಿನ ರಾಣಿಯಾಗಿ ನಟಿಸುತ್ತಿದ್ದಾರೆ ಜಯಪ್ರದಾ. ಎಂಎಸ್‍ಎನ್ ಸೂರ್ಯ ಎಂಬುವರು ನಿರ್ದೇಶಿಸುತ್ತಿರುವ ಚಿತ್ರದಲ್ಲಿ ಪುನರ್ಜನ್ಮದ ಕಥೆಯೂ ಇದೆ. ಎಂಎಲ್ ಲಕ್ಷ್ಮಿ ಎಂಬುವರು ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದ ಮೋಷನ್ ಪೋಸ್ಟರ್‍ನ್ನು ಶಿವರಾಜ್ ಬಿಡುಗಡೆ ಮಾಡಿರುವುದು ವಿಶೇಷ.

Ayushmanbhava Movie Gallery

Ellidhe Illitanaka Movie Gallery