` Flash Back - chitraloka.com | Kannada Movie News, Reviews | Image
meet shivvanna's die hard fan phakirappa

User Rating: 0 / 5

Star inactiveStar inactiveStar inactiveStar inactiveStar inactive

ಇಲ್ಲೊಬ್ಬ ಅಭಿಮಾನಿ ಇದ್ದಾನೆ. ಹೆಸರು ಫಕೀರಪ್ಪ. ಶಿವರಾಜ್‍ಕುಮಾರ್ ಅಪ್ಪಟ ಅಭಿಮಾನಿ. ನಿನ್ನೆ ನಡೆದ ಶಿವರಾಜ್‍ಕುಮಾರ್ ಹುಟ್ಟುಹಬ್ಬಕ್ಕೆ ಈತ ಬೆಳಗಾವಿಯಿಂದ ಸೈಕಲ್‍ನಲ್ಲೇ ಬಂದಿದ್ದಾನೆ. 500 ಕಿ.ಮೀ.ಗೂ ಹೆಚ್ಚು ಸೈಕಲ್ ತುಳಿದುಕೊಂಡೇ ಬಂದು ಶಿವರಾಜ್ ಕುಮಾರ್‍ಗೆ ಶುಭ ಕೋರಿದ್ದಾನೆ.

ಈತನಿಗೆ ತಂದೆ ತಾಯಿ ಇಲ್ಲ. ಚಿಕ್ಕವನಿದ್ದಾಗ ಆನಂದ್ ಸಿನಿಮಾ ನೋಡಿ, ಇಷ್ಟಪಟ್ಟ. ಅಂದಿನಿಂದ ಇಂದಿನವರೆಗೆ ಶಿವರಾಜ್‍ಕುಮಾರ್‍ರ ಯಾವುದೇ ಸಿನಿಮಾ ಬಿಟ್ಟಿಲ್ಲ. ಹೀಗೆ 500+ ಕಿ.ಮೀ. ಸೈಕಲ್ ತುಳಿದುಕೊಂಡು ಬರುತ್ತಿರುವುದು ಇದು ಮೊದಲ ಬಾರಿಯೇನೂ ಅಲ್ಲ. ಈ ಹಿಂದೆಯೂ ಹಲವು ಬಾರಿ ಬಂದಿದ್ದಾನೆ.

ಎದೆಯ ಶಿವರಾಜ್‍ಕುಮಾರ್ ಹಚ್ಚೆ ಹಾಕಿಸಿಕೊಂಡಿರೋ ಈತ, ಸೈಕಲ್ ತುಂಬೆಲ್ಲ ಶಿವರಾಜ್‍ಕುಮಾರ್ ಚಿತ್ರಗಳ ಹೆಸರು ಬರೆಸಿದ್ದಾನೆ. ವೃತ್ತಿಯಲ್ಲಿ ಗಾರೆ ಕೆಲಸಗಾರ. ಬರುವಾಗ ಹುಬ್ಬಳ್ಳಿಯ ಮಠ ಹಾಗೂ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಪೂಜೆ ಮಾಡಿಸಿಕೊಂಡು ಬರುವ ಈತ, ಶಿವಣ್ಣನಿಗೆ ಪ್ರಸಾದ ಕೊಟ್ಟು ಶುಭಾಶಯ ಹೇಳಿ ಊರಿಗೆ ವಾಪಸ್ ಹೋಗುತ್ತಾನೆ. 

aa karala ratri

User Rating: 0 / 5

Star inactiveStar inactiveStar inactiveStar inactiveStar inactive

ಆ ಕರಾಳ ರಾತ್ರಿ. ದಯಾಳ್ ಪದ್ಮನಾಭನ್ ನಿರ್ದೇಶನದ ಚಿತ್ರ. ಚಿತ್ರವನ್ನು ಪ್ರೀಮಿಯರ್ ಶೋನಲ್ಲಿ ನೋಡಿದವರು ಚಿತ್ರದ ಬಗ್ಗೆ ಒಳ್ಳೆಯ ಮಾತನಾಡುತ್ತಿದ್ದಾರೆ. ದಯಾಳ್ ನಿರ್ದೇಶನದಲ್ಲಿ ಇದು ಅತ್ಯುತ್ತಮ ಸಿನಿಮಾ ಎನ್ನುತ್ತಿದ್ದಾರೆ. ಆ್ಯಕ್ಟರ್, ಹಗ್ಗದ ಕೊನೆ ಮೊದಲಾದ ಚಿತ್ರಗಳ ಮೂಲಕ ಅರ್ಟ್ ಮತ್ತು ಕಮರ್ಷಿಯಲ್ ಚಿತ್ರಗಳ ನಡುವೆ ಬ್ರಿಡ್ಜ್ ಕಟ್ಟುವ ಪ್ರಯತ್ನ ಮಾಡಿದ್ದ ದಯಾಳ್, ಈ ಚಿತ್ರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಕ್ರೈಂ ಥ್ರಿಲ್ಲರ್ ಕಥೆಯನ್ನು ಭಾವನೆಗಳೊಂದಿಗೆ ಹೆಣೆದಿದ್ದಾರೆ.

ಸಿನಿಮಾ ದೊಡ್ಡದಲ್ಲ. 101 ನಿಮಿಷದ ಸಿನಿಮಾ. ಒಂದೇ ರಾತ್ರಿಯಲ್ಲಿ ನಡೆಯುವ ಕಥೆ. ಚಿತ್ರ ನೋಡುತ್ತಿರುವಷ್ಟೂ ನಿಮ್ಮ ಎದೆಬಡಿತದ ಸದ್ದು ನಿಮಗೆ ಕೇಳಿಸುತ್ತೆ ಅನ್ನೊದು ಚಿತ್ರದ ಥ್ರಿಲ್ಲರ್ ಕಸುಬುದಾರಿಕೆಗೆ ಸಾಕ್ಷಿ. ಚಿತ್ರವನ್ನ ಕಿಚ್ಚ ಸುದೀಪ್ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಮೆಚ್ಚಿಕೊಂಡಿದ್ದಾರೆ.

ದಯಾಳ್ ನಿರ್ದೇಶನ, ಜೆಕೆ, ಅನುಪಮಾ ಗೌಡ, ರಂಗಾಯಣ ರಘು, ವೀಣಾ ಸುಂದರ್ ಅಭಿನಯ, ಬಿಗಿಯಾದ ಚಿತ್ರಕಥೆ.. ಎಲ್ಲವೂ ಇಷ್ಟವಾಗಿದೆ. ಪ್ರೇಕ್ಷಕರಿಗೂ ಅದು ಮೆಚ್ಚುಗೆಯಾದರೆ, ದಯಾಳ್ ಗೆದ್ದಂತೆ. ಗೆಲ್ಲಲಿ.

 

who is double engine real hero

User Rating: 0 / 5

Star inactiveStar inactiveStar inactiveStar inactiveStar inactive

ಡಬಲ್ ಎಂಜಿನ್ ಚಿತ್ರದ ನಾಯಕ ಯಾರು..? ಚಿಕ್ಕಣ್ಣ. ಆದರೆ, ಚಿಕ್ಕಣ್ಣ ಹೀರೋ ಅಲ್ವಂತೆ. ಚಿತ್ರದಲ್ಲಿ ಚಿಕ್ಕಣ್ಣ ಜೊತೆ ಇನ್ನೂ ಇಬ್ಬರಿದ್ದಾರೆ ಪ್ರಭು ಮತ್ತು ಅಶೋಕ್. ಚಿಕ್ಕಣ್ಣಂಗೆ ಹೀರೋಯಿನ್ ಆಗಿರೋದು ಅವರ ಅಂದಕಾಲತ್ತಿಲ್ ಕನಸಿನ ರಾಣಿ ಸುಮನ್ ರಂಗನಾಥ್. ಆದರೆ, ಅವರು ಚಿಕ್ಕಣ್ಣಂಗೆ ಹೀರೋಯಿನ್ ಅಲ್ಲ. ಕನ್‍ಫ್ಯೂಸ್ ಆಗಬೇಡಿ. ಸಿನಿಮಾ ರಿಲೀಸ್ ಆಗೋಕೂ ಮುಂಚೆ ಸಿನಿಮಾ ಕಥೆ ಹೇಳೊಕಾಗುತ್ತಾ..?

ಹಳ್ಳಿಯ ರೈತರ ಮಕ್ಕಳು ದುಡ್ಡು ಮಾಡೋಕೆ ಅಂತಾ ಹೊರಟಾಗ, ಅವರಿಗೇ ಗೊತ್ತಿಲ್ಲದೆ ಆಗುವ ಅವಾಂತರಗಳು, ಸೃಷ್ಟಿಯಾಗುವ ಸಮಸ್ಯೆಗಳು ಚಿತ್ರದ ಕಥೆ. ಹಳ್ಳಿಯಲ್ಲಿ ಲೈಟಾಗಿ ಶುರುವಾಗುವ ಕಥೆ, ಹೋಗ್ತಾ ಹೋಗ್ತಾ ಸೀರಿಯಸ್ ಆಗುತ್ತೆ. ಚಿತ್ರದ ಡಬಲ್ ಮೀನಿಂಗ್ ಡೈಲಾಗುಗಳ ಟ್ರೇಲರ್ರು, ಸುಮನ್ ರಂಗನಾಥ್ ಗ್ಲ್ಯಾಮರ್ರು.. ಎಲ್ಲವೂ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರೋಕೆ. ಚಿತ್ರದ ಕಥೆ, ಪ್ರತಿಯೊಬ್ಬರಿಗೂ ಇಷ್ಟವಾಗುವಂತಿದೆ ಎನ್ನುವ ಭರವಸೆ ಕೊಟ್ಟಿರೋದು ಚಿಕ್ಕಣ್ಣ.

ಚಿಕ್ಕಣ್ಣ ಸ್ಟಾರ್ ವ್ಯಾಲ್ಯೂ ಜಾಸ್ತಿ ಆಗಿದೆ. ನಿಜ. ಆದರೆ, ಅವರು ಹೀರೋ ಆಗೋಕೆ ರೆಡಿ ಇಲ್ಲ. ಹೀರೋ ಆಗೋದು ಅಂದ್ರೆ, ಅದೊಂದು ದೊಡ್ಡ ಜವಾಬ್ದಾರಿ. ನನಗೆ ಆ ಶಕ್ತಿ ಇಲ್ಲ. ನನ್ನ ಕೆಲಸ ನಗಿಸೋದು. ನಗಿಸ್ತೀನಿ. ಅದೇ ನನ್ನ ಶಕ್ತಿ ಅಂತಾರೆ ಚಿಕ್ಕಣ್ಣ.

ಬಾಂಬೆ ಮಿಠಾಯಿ ನಿರ್ದೇಶಕರ 2ನೇ ಪ್ರಯತ್ನವಾಗಿರೋ ಡಬಲ್ ಎಂಜಿನ್ ಚಿತ್ರದಲ್ಲಿ, ಮನರಂಜನೆಯನ್ನೂ ಮೀರಿದ ಸಂದೇಶವೂ ಇದೆಯಂತೆ.

mmch dialogues creates curiosity

User Rating: 0 / 5

Star inactiveStar inactiveStar inactiveStar inactiveStar inactive

ತಾನು ಮದುವೆ ಆಗೋ ಹುಡುಗಿ ಶೀಲವಂತೆ ಆಗಿರ್ಲಿ ಅಂತಾನೇ ಎಲ್ಲರೂ ಬಯಸೋದು. ಯಾಕ್ ಗೊತ್ತಾ..? ತಾನು ಶೀಲ ಕಳ್ಕೊಂಡಿರೋರೋದು ಯಾವ ಸ್ಟೆತಾಸ್ಕೋಪ್‍ಗೂ ಗೊತ್ತಾಗಲ್ಲ ಅಂತಾ...

ಒಂಭತ್ತು ತಿಂಗಳಿಗೆ ಒಬ್ಬ ಮನುಷ್ಯ ಹುಟ್ತಾನೆ. ಆದರೆ, ಮನುಷ್ಯತ್ವ ಇರೋವ್ರು ಹುಟ್ಟಲ್ಲ...

ಈ 65 ದಾಟಿರೋವ್ರನ್ನ, ಯೌವ್ವನದಲ್ಲಿರೋವ್ರನ್ನ ಕೇಳಿ, ನೀವು ಮೊದ್ಲು ಯಾವ ದೇವಸ್ಥಾನಕ್ಕೆ ಹೋಗಿದ್ರಿ ಅಂತಾ..ನೆನಪೇ ಇರಲ್ಲ. ಆದರೆ ಸೆಕ್ಸ್ ಸಿನಿಮಾ ನೆನಪಿರುತ್ತೆ. ಅದಕ್ಕೇ ಅದನ್ನ ದೇವ್ರ ಸಿನಿಮಾ ಅನ್ನೋದು...

ಅಪ್ಪ ಅಮ್ಮನ್ ವೆಡ್ಡಿಂಗ್ ಆನಿವರ್ಸರಿ ಕೇಳ್ನೋಡಿ.. ನೆನಪಿರಲ್ಲ.. ಆದರೆ, ಮೊದಲನೇ ಸರಿ ಯಾವಳ್ ಜೊತೆ ಅಂತಾ ಕೇಳ್ನೋಡಿ..

ಅತ್ತೆ ಸೊಸೆಯರು ದಿನ ಕಚ್ಚಾಡೋ ಮನೆ ಮುಂದೆ ನಾಯಿಗಳಿವೆ ಎಚ್ಚರಿಕೆ ಅನ್ನೋ ಬೋರ್ಡ್ ಇರಬೇಕು..

ಒಂದಾ.. ಎರಡಾ.. ಎಂಎಂಸಿಹೆಚ್ ಡೈಲಾಗ್‍ಗಳು ಇರೋದೇ ಹಾಗೆ.. ಡಬ್ಬಲ್ ಮೀನಿಂಗ್, ಸಿಂಗಲ್ ಮೀನಿಂಗ್ ಇಲ್ಲ. ಎಲ್ಲ ಸ್ಟ್ರೈಟ್ ಫಾರ್ವರ್ಡ್. ಇಂಥಾ ಡೈಲಾಗ್‍ಗಳೇ ಎಂಎಂಸಿಹೆಚ್ ಬಗ್ಗೆ ಕ್ರೇಜ್ ಹೆಚ್ಚಿಸಿದೆ. ಇಷ್ಟೆಲ್ಲ ಆಗಿ ಈ ಎಲ್ಲ ಡೈಲಾಗ್ ಹೇಳಿರೋದು ಹುಡುಗೀರೇ ಅನ್ನೋದು ವಿಶೇಷ. ಮೇಘನಾರಾಜ್, ಸಂಯುಕ್ತ ಹೊರನಾಡು, ನಕ್ಷತ್ರ, ದೀಪ್ತಿ, ರಾಗಿಣಿ ದ್ವಿವೇದಿ.. ಹೀರೋ ಯಾರು ಅಂತಾ ಕೇಳಿದ್ರೆ, ಕಥೆ ಅಂತಾರೆ ಮುಸ್ಸಂಜೆ ಮಹೇಶ್.

ಹಾಗಂತ ಇದು ಹುಡುಗರನ್ನ ಟಾರ್ಗೆಟ್ ಮಾಡಿರೋ ಸಿನಿಮಾ ಅಲ್ವಂತೆ. ಆದರೆ, ಟ್ಯಾಗ್‍ಲೈನ್ ಇರೋದೇ ಹುಡುಗಿಯರಿದ್ದಾರೆ ಎಚ್ಚರಿಕೆ ಅಂತಾ. ಕುತೂಹಲ ತಣಿಯೋಕೆ ತುಂಬಾ ಕಾಯಬೇಕಿಲ್ಲ. ಇನ್ನೊಂದ್ ದಿನ. ಅಷ್ಟೆ..

five heroines.. panchavatara

User Rating: 0 / 5

Star inactiveStar inactiveStar inactiveStar inactiveStar inactive

ಎಂಎಂಸಿಹೆಚ್ ಗಮನ ಸೆಳೆಯೋಕೆ ಮೊದಲ ಕಾರಣವೇ ಅದು. ಚಿತ್ರದಲ್ಲಿ ಐವರು ಹೀರೋಯಿನ್ಸ್ ಅನ್ನೋದು. ಮುಸ್ಸಂಜೆ ಮಹೇಶ್ ಐವರು ಹೀರೋಯಿನ್‍ಗಳನ್ನಿಟ್ಟುಕೊಂಡು ಎಂತಹ ಕಥೆ ಮಾಡಿರಬಹುದು ಅನ್ನೋ ಕುತೂಹಲಿಗಳಿಗೆ ಇಲ್ಲಿ ಸಣ್ಣದೊಂದು ಇಂಟ್ರೊಡಕ್ಷನ್ ಇದೆ. 

ಮೇಘನಾ ರಾಜ್ : ಕಾಲೇಜು ಹುಡುಗಿ. ಒಳ್ಳೆಯ ಹುಡುಗಿ. ತನಗೆ ಕೇಡಾದರೂ ಪರವಾಗಿಲ್ಲ..ಬೇರೆಯವರಿಗೆ ತೊಂದರೆ ಆಗಬಾರದು ಎಂದು ಬಯಸುವ ಹೆಣ್ಣು ಮಗಳು. ಪ್ರಬುದ್ಧತೆಯ ಜೊತೆಗೆ ರೆಬಲ್ ಅಂಶಗಳೂ ಇವೆ.

ಸಂಯುಕ್ತ ಹೊರನಾಡು : ಲೋಕಜ್ಞಾನ ಕಡಿಮೆ. ಮಾತು ಜಾಸ್ತಿ. ಸೌಮ್ಯ ಸ್ವಭಾವ. ಇಡೀ ಗುಂಪಿನಲ್ಲಿ ಸಿಕ್ಕಾಪಟ್ಟೆ ಸೈಲೆಂಟ್ ಆಗಿರುವ ಹುಡುಗಿ ಆಮೇಲೆ ವಯೊಲೆಂಟ್ ಆಗ್ತಾಳೆ. ಯಾಕೆ..? ಸಿನಿಮಾ ನೋಡಿ.

ದೀಪ್ತಿ : ರೌಡಿ ಛಾಯಾ. ಹುಡುಗರನ್ನೇ ಚುಡಾಯಿಸುವ ಎದೆಗಾರಿಕೆಯ ಹುಡುಗಿ. ಕಿಕ್‍ಬಾಕ್ಸಿಂಗ್ ಕೂಡಾ ಗೊತ್ತಿರುವ ಸಂಯುಕ್ತಾರದ್ದು ಡೋಂಟ್‍ಕೇರ್ ಪಾತ್ರ.

ನಕ್ಷತ್ರ : ಟಾಮ್‍ಬಾಯ್ ಕ್ಯಾರೆಕ್ಟರ್. ಪಾತ್ರಕ್ಕಾಗಿ ಕಲರಿಯಪಯಟ್ಟು ಕಲಿತಿದ್ದಾರಂತೆ. 

ರಾಗಿಣಿ ದ್ವಿವೇದಿ : ಈ ನಾಲ್ವರ ಗುಣವನ್ನೂ ಹೊಂದಿರುವ ಪೊಲೀಸ್ ಅಧಿಕಾರಿಯ ಪಾತ್ರ. ಫುಲ್ ಆಕ್ಷನ್ ಇರುವ ಝಾನ್ಸಿರಾಣಿಯ ಪಾತ್ರ ರಾಗಿಣಿಯದ್ದು.

ಈ ಐವರನ್ನೂ ಒಟ್ಟುಗೂಡಿಸಿ, ಪ್ರತಿ ಪಾತ್ರವನ್ನು ಸುಂದರವಾಗಿ ಚಿತ್ರಿಸಿರುವ ಮಹೇಶ್ ಹಾಗೂ ನಿರ್ಮಾಪಕ ಪುರುಷೋತ್ತಮ್ ಪ್ರಕಾರ, ಚಿತ್ರದ ಹೀರೋ ಕಥೆ. 

Geetha Movie Gallery

Upendra Birthday Celebration Gallery