` Flash Back - chitraloka.com | Kannada Movie News, Reviews | Image
cow slaughter dialogue removied from seizer

User Rating: 0 / 5

Star inactiveStar inactiveStar inactiveStar inactiveStar inactive

ಸೀಜರ್ ಚಿತ್ರ ನಾಳೆ ತೆರೆಕಾಣುತ್ತಿದೆ. ಚಿತ್ರದಲ್ಲಿ ಒಂದು ಕಡೆ ಗೋಹತ್ಯೆ ಕುರಿತ ಡೈಲಾಗ್ ಇದೆ. ಪಾತ್ರಧಾರಿ ರವಿಚಂದ್ರನ್, ಹಸುವಿನ ತಲೆ ಕಡಿಯುವುದು ಹಾಗೂ ಹೆತ್ತ ತಾಯಿಯ ತಲೆ ಹಿಡಿಯುವುದು ಎರಡೂ ಒಂದೇ ಎಂದು ಹೇಳುವ ಡೈಲಾಗ್ ಅದು. ಆ ಸಂಭಾಷಣೆಗೆ ವಿರೋಧ ವ್ಯಕ್ತವಾಗಿತ್ತು. ಗೋಹತ್ಯೆ ಪರ ಇರುವ ಸಂಘಟನೆಗಳು ಹಾಗೂ ಚಿತ್ರತಂಡದ ಭಾಗವಾಗಿರುವ ಪ್ರಕಾಶ್ ರೈ, ನಿರ್ದೇಶಕ ವಿನಯ್ ಕೃಷ್ಣ ವಿರುದ್ಧ ಕೆಂಡಕಾರಿದ್ದರು. ಫೋನ್ ಮಾಡಿ ಬೈದಿದ್ದೇನೆ ಎಂದು ಹೇಳಿದ್ದರು ಪ್ರಕಾಶ್ ರೈ.

ಸಂಭಾಷಣೆಗೂ ರೈಗೂ ಸಂಬಂಧ ಇಲ್ಲ. ಅವರು ನನಗೆ ಫೋನ್ ಮಾಡಿಲ್ಲ ಎಂದಿದ್ದ ವಿನಯ್ ಕೃಷ್ಣ, ಈಗ ಚಿತ್ರದಲ್ಲಿ ಡೈಲಾಗ್‍ಗೆ ಮ್ಯೂಟ್ ಹಾಕಿಸಿದ್ದಾರೆ. ಅಂದರೆ, ಚಿತ್ರಮಂದಿರದಲ್ಲಿ ಈ ಸಿನಿಮಾ ನೋಡುವಾಗ ಆ ಸಂಭಾಷಣೆ ಬರುವ ವೇಳೆ ಬೀಪ್ ಸೌಂಡ್ ಮಾತ್ರ ಕೇಳುತ್ತೆ. 

ನಟ ರವಿಚಂದ್ರನ್ ಕೂಡಾ ವಿವಾದ ಏಕೆ, ಡೈಲಾಗ್ ಬಿಡಿ ಎಂದು ಸೂಚಿಸಿದ ಹಿನ್ನೆಲೆಯಲ್ಲಿ ನಿರ್ದೇಶಕ ವಿನಯ್ ಹಾಗೂ ನಿರ್ಮಾಪಕ ತ್ರಿವಿಕ್ರಮ್ ಡೈಲಾಗ್‍ಗೆ ಕತ್ತರಿ ಆಡಿಸಿದ್ದಾರೆ. ಗೋಹತ್ಯೆ ಡೈಲಾಗ್ ಇಲ್ಲದ ಸೀಜರ್ ಸಿನಿಮಾ ನಾಳೆ ತೆರೆ ಕಾಣಲಿದೆ.

prabhudeva talks about mercury

User Rating: 0 / 5

Star inactiveStar inactiveStar inactiveStar inactiveStar inactive

ಮಕ್ರ್ಯುರಿ.. ಮೂಕಿ ಸಿನಿಮಾ. ಸೈಲೆಂಟ್ ಥ್ರಿಲ್ಲರ್. ಇಡೀ ಚಿತ್ರದಲ್ಲಿ ಒಂದೇ ಒಂದು ಸಂಭಾಷಣೆ ಇಲ್ಲ. ಡ್ಯಾನ್ಸ್ ಕೂಡಾ ಇಲ್ಲ. ಕಾಮಿಡಿಯೂ ಇಲ್ಲ. ಆದರೆ, ಈ ಚಿತ್ರದ ಹೀರೋ ಪ್ರಭುದೇವ. ಪ್ರಭುದೇವ ಇದ್ದೂ, ಇವ್ಯಾವುದೂ ಇಲ್ಲ ಎಂದರೆ ಹೇಗೆ..? ಪ್ರಭುದೇವ ಅವರಿಗೆ ಇದು ರಿಸ್ಕ್ ಎನಿಸಲಿಲ್ಲವಾ..? ಇಂಥಾದ್ದೊಂದು ಪ್ರಶ್ನೆಯನ್ನು ಪ್ರಭುದೇವ ಮುಂದಿಟ್ಟಾಗ ಅವರು ಹೇಳಿದ್ದು ನಮಗೆ ಅಚ್ಚರಿ ತರಬಹುದು.

`ನಾನು ಮೂಲತಃ ಡ್ಯಾನ್ಸರ್. ಡ್ಯಾನ್ಸ್ ಮಾಡುವವರು ಮಾತನಾಡದೆಯೇ ಸಂಭಾಷಣೆ ನಡೆಸೋದು ಅತ್ಯಂತ ಸಹಜವಾಗಿ ನಡೆದು ಹೋಗುತ್ತೆ. ಕಣ್ಣು, ಕೈಬಾಯಿ ಸನ್ನೆಗಳಲ್ಲೇ ಕಮ್ಯುನಿಕೇಷನ್ ಆಗಿರುತ್ತೆ. ಹೀಗಾಗಿ ಈ ಸಿನಿಮಾದಲ್ಲಿ ನಟಿಸುವುದು ನನಗೆ ಚಾಲೆಂಜ್ ಎನಿಸಲಿಲ್ಲ'

ಇದು ಪ್ರಭುದೇವ ಉತ್ತರ. ಮಕ್ರ್ಯುರಿ ಚಿತ್ರದ ಕಥೆ ಕೇಳಿದಾಗ ಥ್ರಿಲ್ ಆಗಿದ್ದರಂತೆ ಪ್ರಭುದೇವ. ನನ್ನೊಳಗೆ ಡ್ಯಾನ್ಸರ್ ಅಷ್ಟೇ ಅಲ್ಲ, ನಟನೂ ಇದ್ದಾನೆ. ಒಳ್ಳೆಯ ಪಾತ್ರಕ್ಕಾಗಿ ಮನಸ್ಸು ಹುಡುಕುತ್ತಿರುತ್ತೆ. ಹೀಗಿರುವಾಗಲೇ ಈ ಸಿನಿಮಾದ ಆಫರ್ ಬಂತು. ಥ್ರಿಲ್ಲಾಗಿಬಿಟ್ಟೆ ಅಂತಾರೆ ಪ್ರಭುದೇವ. 

ಸಿನಿಮಾ ಇದೇ ವಾರ ರಿಲೀಸ್. ರಕ್ಷಿತ್ ಶೆಟ್ಟಿ, ಪುಷ್ಕರ್ ಮಲ್ಲಿಕಾರ್ಜುನಯ್ಯ ಬ್ಯಾನರ್‍ನ ಪರಂವಾ ಸ್ಟುಡಿಯೋಸ್ ಸಿನಿಮಾವನ್ನು ರಾಜ್ಯದಾದ್ಯಂತ ಬಿಡುಗಡೆ ಮಾಡುತ್ತಿದೆ.ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ಈ ಚಿತ್ರ, ಕಾರ್ತಿಕ್-ಪ್ರಭುದೇವ ಕಾಂಬಿನೇಷನ್ ಹಾಗೂ ಸೈಲೆಂಟ್ ಮೂವಿ ಎಂಬ ಕಾರಣಕ್ಕೇ ನಿರೀಕ್ಷೆ ಹುಟ್ಟಿಸಿದೆ.

godi banna to be remake in hindi

User Rating: 5 / 5

Star activeStar activeStar activeStar activeStar active

ಗೋಧಿ ಬಣ್ಣ ಸಾಧಾರಣ ಮೈಕಟ್ಟು.. ತನ್ನ ವಿಭಿನ್ನ ಟೈಟಲ್‍ನಿಂದಾಗಿಯೇ ಗಮನ ಸೆಳೆದಿದ್ದ ಚಿತ್ರ, ವಿಶಿಷ್ಟ ಕಥೆ, ಅನಂತ್‍ನಾಗ್, ರಕ್ಷಿತ್ ಶೆಟ್ಟಿ, ಶ್ರುತಿ ಹರಿಹರನ್ ಅವರ ಅಭಿನಯ, ಹೇಮಂತ್ ರಾವ್ ಅವರ ಅಚ್ಚುಕಟ್ಟಾದ ನಿರ್ದೇಶನದಿಂದ ಕನ್ನಡಿಗರ ಮನ ಗೆದ್ದಿತ್ತು. ಹೀಗೆ ಕನ್ನಡಿಗರ ಮನಗೆದ್ದಿದ್ದ ಚಿತ್ರ, ಈಗ ಬಾಲಿವುಡ್‍ಗೆ ಹೊರಟಿದೆ.

ಸುಮಾರು ದಿನಗಳಿಂದ ಮಾತುಕತೆ ನಡೆಯುತ್ತಿತ್ತು. ಈಗ ಫೈನಲ್ ಆಗಿದೆ. ಕನ್ನಡದ ಚಿತ್ರವೊಂದು ಹಿಂದಿಗೆ ರೀಮೇಕ್ ಆಗಲಿದೆ. ನನ್ನ ಚಿತ್ರವೇ ರೀಮೇಕ್ ಆಗಲಿದೆ ಎನ್ನುವುದು ಹೆಮ್ಮೆಯ ವಿಚಾರ ಎಂದು ಖುಷಿ ಹಂಚಿಕೊಂಡಿದ್ದಾರೆ ಹೇಮಂತ್ ರಾವ್.

ಗೋಧಿಬಣ್ಣದ ನಿರ್ಮಾಪಕರಾದ ಪುಷ್ಕರ್, ರಕ್ಷಿತ್ ಶೆಟ್ಟಿ ಎಲ್ಲರೂ ಗೋಧಿ ಬಣ್ಣಕ್ಕೆ ಸಿಕ್ಕ ಮನ್ನಣೆ ನೋಡಿ ಖುಷಿಗೊಂಡಿದ್ದಾರೆ. ಹಿಂದಿಯಲ್ಲಿ ತಯಾರಾಗುತ್ತಿರುವ ಗೋಧಿ ಬಣ್ಣದ ತಾರಾಬಳಗ, ತಂತ್ರಜ್ಞರ ಬಗ್ಗೆ ಇನ್ನೂ ಮಾಹಿತಿ ಹೊರಬಿದ್ದಿಲ್ಲ.

nenapirali prem is awaiting for a historical role

User Rating: 0 / 5

Star inactiveStar inactiveStar inactiveStar inactiveStar inactive

ನೆನಪಿರಲಿ ಪ್ರೇಮ್, 25ನೇ ಸಿನಿಮಾದ ಹೊಸ್ತಿಲಲ್ಲಿ ನಿಂತಿದ್ದಾರೆ. ನಾಳೆ ಬಿಡುಗಡೆಯಾಗುತ್ತಿರುವ ದಳಪತಿ, ಅವರ 23ನೇ ಸಿನಿಮಾ. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಲೈಫ್ ಜೊತೆ ಒಂದ್ ಸೆಲ್ಫಿ, 24ನೇ ಚಿತ್ರ. ಅದಾದ ನಂತರದ್ದು ಇನ್ನೂ ಫೈನಲ್ ಆಗಿಲ್ಲ.

ಹೇಗಿರಬೇಕು ನಿಮ್ಮ 25ನೇ ಸಿನಿಮಾ ಎಂದರೆ, ಪ್ರೇಮ್ ಕಣ್ಣೆದುರು ನಲಿದಾಡುವುದು ಅಣ್ಣಾವ್ರ ಮಯೂರ. ಅಂಥಾದ್ದೊಂದು ಐತಿಹಾಸಿಕ ಪಾತ್ರವನ್ನು ನಾನು ಮಾಡಬೇಕು. ಕನ್ನಡದಲ್ಲಿ ಎಷ್ಟೆಲ್ಲ ಐತಿಹಾಸಿಕ ನಾಯಕರಿದ್ದಾರೆ. ಎಚ್ಚಮನಾಯಕ, ಮದಕರಿ ನಾಯಕ, ನೃಪತುಂಗ.. ಇಂತಹವರ ಕಥೆಗಳನ್ನು ಸಿನಿಮಾ ಮಾಡಬೇಕು ಎನ್ನುತ್ತಾರೆ ಪ್ರೇಮ್.

ಇಂತಹ ಕಥೆಗಳನ್ನು ಸಿನಿಮಾ ಮಾಡುತ್ತೇನೆ ಎಂದರೆ, ಎಷ್ಟು ಡೇಟ್ಸ್ ಬೇಕಾದರೂ ಅಡ್ಜಸ್ಟ್ ಮಾಡಿಕೊಳ್ಳುತ್ತೇನೆ ಎನ್ನುವ ಪ್ರೇಮ್‍ಗೆ ತಮ್ಮ 25ನೇ ಸಿನಿಮಾ ಐತಿಹಾಸಿಕ ಚಿತ್ರವಾಗಬೇಕು ಎಂಬ ಕನಸು ಹೊತ್ತಿದ್ದಾರೆ. ಆ ಕನಸಿಗೆ ನೀರೆರೆಯುವ ನಿರ್ಮಾಪಕ, ನಿರ್ದೇಶಕರು ಸಿಗಬೇಕಷ್ಟೆ. ಸದ್ಯಕ್ಕೆ ದಳಪತಿ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡು ಕಾಯುತ್ತಿದ್ದಾರೆ ಪ್ರೇಮ್.

 

nagathihalla turns teacher again

User Rating: 0 / 5

Star inactiveStar inactiveStar inactiveStar inactiveStar inactive

ನಾಗತಿಹಳ್ಳಿ ಚಂದ್ರಶೇಖರ್, ತಾವು ಮೂಲತಃ ಮೇಷ್ಟ್ರು ಅನ್ನೋದನ್ನ ಮತ್ತೊಮ್ಮೆ ಸಾಬೀತು ಮಾಡಿಬಿಟ್ಟಿದ್ದಾರೆ. ಸದ್ಯಕ್ಕೆ ಜಪಾನ್ ಪ್ರವಾದಲ್ಲಿರುವ ನಾಗತಿಹಳ್ಳಿ, ತಮ್ಮ ಕ್ಯಾಬ್ ಚಾಲಕನಿಗೆ ಅಣ್ಣಾವ್ರ ಹಾಡು ಕಲಿಸುತ್ತಿದ್ದಾರೆ. ಜಪಾನ್‍ನಲ್ಲಿರುವ ಮಂಗೋಲಿಯ ಮೂಲದ ಕ್ಯಾಬ್ ಚಾಲಕನಿಗೆ ಪ್ರೇಮದ ಕಾಣಿಕೆ ಚಿತ್ರದ ಬಾನಿಗೊಂದು ಎಲ್ಲೆ ಎಲ್ಲಿದೆ ಹಾಡು ಕಲಿಸುತ್ತಿದ್ದಾರೆ ನಾಗತಿಹಳ್ಳಿ.

ನಾನೀಗ ಒಂದು ಹಾಡು ಹಾಡುತ್ತೇನೆ, ಈ ಹಾಡು ಹಾಡಿದ್ದು ಕನ್ನಡದ ಲೆಜೆಂಡ್ ಡಾ.ರಾಜ್‍ಕುಮಾರ್ ಎಂದು ಆ ಚಾಲಕನಿಗೆ ಹೇಳಿ, ತಾವು ಹಾಡು ಹಾಡುತ್ತಾರೆ. ಆ ಹಾಡನ್ನು ಚಾಲಕನಿಂದ ಹೇಳಿಸುವ ಪ್ರಯತ್ನ ಮಾಡ್ತಾರೆ ನಾಗತಿ. ಆ ವಿಡಿಯೋ ಈಗ ವೈರಲ್.

I Love You Movie Gallery

Rightbanner02_butterfly_inside

Paddehuli Movie Gallery