` Flash Back - chitraloka.com | Kannada Movie News, Reviews | Image
ambareesh gets election ticket

User Rating: 0 / 5

Star inactiveStar inactiveStar inactiveStar inactiveStar inactive

ರೆಬಲ್‍ಸ್ಟಾರ್ ಅಂಬರೀಷ್, ಈ ಬಾರಿ ಎಲೆಕ್ಷನ್‍ಗೆ ನಿಲ್ತಾರೋ ಇಲ್ಲವೋ.. ಎಂಬುದು ಕಟ್ಟಕಡೆಯ ಕ್ಷಣದವರೆಗೆ ಗೊಂದಲದಲ್ಲೇ ಇತ್ತು. ಅದರಲ್ಲೂ ಅಂಬರೀಷ್, ಕಾಂಗ್ರೆಸ್ ಟಿಕೆಟ್‍ಗಾಗಿ ಅರ್ಜಿಯನ್ನೇ ಹಾಕಿರಲಿಲ್ಲ. ನಾನ್ಯಾಕ್ರೀ ಅರ್ಜಿ ಹಾಕಬೇಕು, ನಾನೇನು ಅಂತಾ ಗೊತ್ತಿದ್ರೆ ಅವರೇ ಟಿಕೆಟ್ ಕೊಡ್ತಾರೆ ಎಂದಿದ್ದರು ಅಂಬರೀಷ್. ಟಿಕೆಟ್‍ಗಾಗಿ ಯಾರನ್ನೂ ಬೇಡುವುದಿಲ್ಲ ಎಂದಿದ್ದರು. ಅಷ್ಟೇ ಅಲ್ಲ, ಟಿಕೆಟ್ ಸಿಕ್ಕ ಮೇಲೆ ಮಾತ್ರ ಮಾತನಾಡುತ್ತೇನೆ ಎಂದಿದ್ದ ಅಂಬರೀಷ್‍ಗೆ ಕೊನೆಗೂ ಮಂಡ್ಯದಿಂದ ಟಿಕೆಟ್ ಸಿಕ್ಕಿದೆ.

ಅಂಬರೀಷ್‍ಗೆ ಟಿಕೆಟ್ ತಪ್ಪಿಸುವ ಪ್ರಯತ್ನಗಳು ಯಶಸ್ವಿಯಾಗಿಲ್ಲ. ಇನ್ನು ಉಮಾಶ್ರೀ ತೇರದಾಳದಿಂದ ಹಾಗೂ ಬಿ.ಸಿ.ಪಾಟೀಲ್ ಹಿರೇಕರೂರು ಕ್ಷೇತ್ರದಿಂದ ಟಿಕೆಟ್ ಪಡೆದಿದ್ದಾರೆ. ಇನ್ನು ಟಿಕೆಟ್ ಆಕಾಂಕ್ಷಿಗಳಾಗಿದ್ದ ಶಶಿಕುಮಾರ್ ಹಾಗೂ ಭಾವನಾಗೆ ಟಿಕೆಟ್ ಕೈ ತಪ್ಪಿದೆ. ಚಿತ್ರರಂಗದಿಂದ ಹೋದವರಲ್ಲಿ ಕಾಂಗ್ರೆಸ್‍ನಿಂದ ಟಿಕೆಟ್ ಪಡೆದಿರುವ ಕಲಾವಿದರು ಈ ಮೂವರು ಮಾತ್ರ.

katheyondhu shuruvagidhe

User Rating: 0 / 5

Star inactiveStar inactiveStar inactiveStar inactiveStar inactive

ದೂದ್‍ಪೇಡ ದಿಗಂತ್ ಅಭಿನಯದ ಕಥೆಯೊಂದು ಶುರುವಾಗಿದೆ ಚಿತ್ರ ಚಿತ್ರೀಕರಣ ಹಂತದಲ್ಲಿದೆ. ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವುದು ಪೂಜಾ ದೇವಾರಿಯಾ. ಕನ್ನಡದವರಲ್ಲ. ತಮಿಳಿನಲ್ಲಿ ಈಗಾಗಲೇ 4 ಸಿನಿಮಾ ಮಾಡಿರುವ ಪೂಜಾ ಅವರ ನಾಲ್ಕಕ್ಕೆ ನಾಲ್ಕೂ ಚಿತ್ರಗಳಿಗೆ ಪ್ರಶಸ್ತಿ ಬಂದಿರುವುದು ವಿಶೇಷ. ತಾಯಿ ಕನ್ನಡದವರಾದರೂ ಕನ್ನಡ ಗೊತ್ತಿಲ್ಲದೆ ಬೆಳೆದಿದ್ದ ಪೂಜಾಗೆ ಈಗ ದಿಗಂತ್ ಕನ್ನಡ ಕಲಿಸಿದ್ದಾರೆ.

ಚಿತ್ರದಲ್ಲಿ ನಾಯಕ & ನಾಯಕಿ ಮಧ್ಯೆ ಉದ್ದುದ್ದ ಡೈಲಾಗ್‍ಗಳಿವೆ. ಅವುಗಳನ್ನು ಹೇಳಬೇಕು ಎಂದರೆ, ಕನ್ನಡ ಕಲಿಯುವುದು ಅನಿವಾರ್ಯ. ಹೀಗಾಗಿ ಕನ್ನಡ ಕಲಿತೆ ಎಂದು ಹೇಳಿಕೊಂಡಿದ್ದಾರೆ ಪೂಜಾ ದೇವರಿಯಾ. ಸೆನ್ನಾ ಹೆಗ್ಡೆ ನಿರ್ದೇಶನದ ಚಿತ್ರ ತಂಡದಲ್ಲಿ ತಂತ್ರಜ್ಞರ ವಿಭಾಗದಲ್ಲಿ ಹೆಚ್ಚು ಹೆಚ್ಚು ಮಹಿಳೆಯರೇ ಇರುವುದು ವಿಶೇಷ.

movie on noteban soon

User Rating: 0 / 5

Star inactiveStar inactiveStar inactiveStar inactiveStar inactive

ನವೆಂಬರ್ 8, 2016. ಆ ದಿನ ರಾತ್ರಿ ಪ್ರಧಾನಿ ನರೇಂದ್ರ ಮೋದಿ.. ಮೇರೆ ಪ್ಯಾರ್ ದೇಶ್‍ವಾಸಿಯೋ.. ಎಂದು ಆರಂಭಿಸಿ, 500ರೂ, 1000 ರೂ. ನೋಟುಗಳನ್ನು ಬ್ಯಾನ್ ಮಾಡಿಬಿಟ್ಟಿದ್ದರು. ಅದಾದ ನಂತರ ಇಡೀದೇಶ ಎದುರಿಸಿದ ಸವಾಲುಗಳು ಒಂದೆರಡಲ್ಲ. ರಾಜಕೀಯವಾಗಿ ಏನೇ ಪ್ರತಿಭಟನೆಗಳು ನಡೆದರೂ, ದೇಶದ ಜನ ಮೋದಿಯ ಜೊತೆಗಿದ್ದರು ಎನ್ನುವುದು ಗಮನಾರ್ಹ. ಈ ಎಲ್ಲದರ ಮಧ್ಯೆ ಬ್ಲಾಕ್ & ವೈಟ್ ದಂಧೆಗಳೂ ಬಿರುಸಾಗಿಯೇನಡೆದವು. 

ಬ್ಲಾಕ್‍ಮನಿ ಇದ್ದವರು, ತಮ್ಮ ಬಳಿಯಿದ್ದ ಹಳೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸಿದ್ದು ಹೇಗೆ ಎಂಬುದು ಒಂದು ಕಥೆಯಾದರೆ, ಆ ಸಂದರ್ಭದಲ್ಲಿ ಹುಟ್ಟಿದ್ದ ದಂಧೆಕೋರರದ್ದೇ ಇನ್ನೊಂದು ಕಥೆ. ಇಷ್ಟೆಲ್ಲ ಹೇಳುತ್ತಿರುವುದಕ್ಕೆ ಕಾರಣ ಸ್ಟೇಟ್‍ಮೆಂಟ್.

ಅಪ್ಪಿ ಪ್ರಸಾದ್ ನಿರ್ದೇಶನದ ಈ ಚಿತ್ರಕ್ಕೆ ಕೆ.ವೇಣು ನಿರ್ಮಾಪಕರು. 

 

paddehuli gets another herone

User Rating: 0 / 5

Star inactiveStar inactiveStar inactiveStar inactiveStar inactive

ಪಡ್ಡೆಹುಲಿ, ಕೆ.ಮಂಜು ಪುತ್ರ ಶ್ರೇಯಸ್ ಅಭಿನಯದ ಮೊದಲ ಚಿತ್ರ. ಗುರುದೇಶಪಾಂಡೆ ನಿರ್ದೇಶನದ ಈ ಚಿತ್ರಕ್ಕೆ ಈಗಾಗಲೇ ನಿಶ್ವಿಕಾ ನಾಯ್ಡು ನಾಯಕಿ. ಈಗ 2ನೇ ನಾಯಕಿ ಪಾತ್ರಕ್ಕೆ ಐಶ್ವರ್ಯಾ ಪ್ರಸಾದ್ ಆಯ್ಕೆಯಾಗಿದ್ದಾರೆ.

ಮೈಸೂರಿನ ಈ ಹುಡುಗಿ, ಮಾಡೆಲಿಂಗ್‍ನಲ್ಲಿ ಅನುಭವವಿರುವ ಹುಡುಗಿ. ನೀನಾಸಂ ಜೋಸೆಫ್ ಅವರ ಬಳಿ ನಟನೆಯ ತರಬೇತಿಯನ್ನೂ ಪಡೆದಿದ್ದಾರೆ. ಅರವಿಂದ್ ಕೌಶಿಕ್‍ರ ಶಾರ್ದೂಲ ಚಿತ್ರಕ್ಕೆ ನಾಯಕಿಯಾಗಿರುವ ಐಶ್ವರ್ಯಾಗೆ ಇದು 2ನೇ ಸಿನಿಮಾ.

ಚಿತ್ರಕ್ಕೆ ನಾನು 2ನೇ ಹೀರೋಯಿನ್ ಎಂಬ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಪಾತ್ರ ಚೆನ್ನಾಗಿದೆ. ಪಾತ್ರ ಚೆನ್ನಾಗಿದ್ದರೆ, ಒಂದೇ ಚಿತ್ರದಲ್ಲಿ ಎಷ್ಟು ಮಂದಿ ನಾಯಕಿಯರಿದ್ದರೂ ಓಕೆ ಎಂದಿದ್ದಾರೆ ಐಶ್ವರ್ಯಾ ಪ್ರಸಾದ್.

ರಮೇಶ್ ರೆಡ್ಡಿ ನಂಗ್ಲಿ ನಿರ್ಮಾಣದ ಚಿತ್ರ ಪಡ್ಡೆಹುಲಿ. ಕೆ.ಮಂಜು ಪುತ್ರನ ಆರಂಗ್ರೇಟಂ ಸಿನಿಮಾ ಎಂಬ ಕಾರಣಕ್ಕಾಗಿಯೇ ನಿರೀಕ್ಷೆ ಹುಟ್ಟಿಸಿರುವ ಚಿತ್ರ.

saguva dariyalli on april 20th

User Rating: 0 / 5

Star inactiveStar inactiveStar inactiveStar inactiveStar inactive

ತಾಯಿಯಿಲ್ಲದ ಮಗ..ಆತನನ್ನು ಶಿಸ್ತಿನಿಂದ ಬೆಳೆಸಿರುವ ಅಪ್ಪ.. ಮಗನಿಗೆ ತಾಯಿಗೆ ಕೊಟ್ಟ ಮಾತೇ ಮುಖ್ಯ.. ಇದು ಸಾಗುವ ದಾರಿಯಲಿ ಚಿತ್ರದ ಥೀಮ್. ಇಲ್ಲಿ ಹೀರೋ ಅನೂಪ್ ಸಾ.ರಾ.ಗೋವಿಂದು. ಮಿಲಿಟರಿ ಆಫೀಸರ್ ಆಗಿ ನಟಿಸಿರುವ ದೇವರಾಜ್, ಅನೂಪ್‍ರ ತಂದೆಯ ಪಾತ್ರದಲ್ಲಿದ್ದಾರೆ. ನಾಯಕ ಅನೂಪ್ ಸಾಗುವ ದಾರಿಯಲ್ಲಿ ಆಗುವ ಅನುಭವಗಳೇ ಚಿತ್ರದ ಕಥೆ.

2001ರಲ್ಲಿ ನಡೆದಿದ್ದ ನೈಜ ಘಟನೆಯೇ ಚಿತ್ರದ ಕಥೆಗೆ ಆಧಾರ ಎಂದಿದ್ದಾರೆ ನಿರ್ದೇಶಕ ಶಿವಕುಮಾರ್ ಎಸ್.ಗೌಡ. ಹಲವು ಡಾಕ್ಯುಮೆಂಟರಿ, ಕಿರುಚಿತ್ರ ನಿರ್ದೇಶಿಸಿರುವ ಶಿವಕುಮಾರ್‍ಗೆ ಇದು ಚೊಚ್ಚಲ ಸಿನಿಮಾ. ಪವಿತ್ರಾ ಗೌಡ ನಾಯಕಿಯಾಗಿರುವ ಚಿತ್ರದಲ್ಲಿ ರಂಗಾಯಣ ರಘು, ಪ್ರಕಾಶ್ ರೈ, ಬುಲೆಟ್ ಪ್ರಕಾಶ್, ಶರತ್ ಲೋಹಿತಾಶ್ವ ಮೊದಲಾದವರಿದ್ದಾರೆ. ಚಿತ್ರ ಇದೇ ವಾರ ರಿಲೀಸ್.

I Love You Movie Gallery

Rightbanner02_butterfly_inside

Paddehuli Movie Gallery