` Flash Back - chitraloka.com | Kannada Movie News, Reviews | Image
youth vs old age generation in panchatantra

User Rating: 0 / 5

Star inactiveStar inactiveStar inactiveStar inactiveStar inactive

ಯೋಗರಾಜ್ ಭಟ್ಟರ ಚಿತ್ರಗಳಲ್ಲಿ ಅದೇನೇ ಡೈಲಾಗುಗಳ ಸುರಿಮಳೆಯಾದರೂ, ಅಲ್ಲೊಂದು ಜೀವನ ಪ್ರೀತಿಯ ಸಂದೇಶ ಇದ್ದೇ ಇರುತ್ತೆ. ಮಣಿ ಚಿತ್ರದಿಂದಲೂ ಭಟ್ಟರನ್ನು ಭಟ್ಟರ ಸಿನಿಮಾಗಳನ್ನು ನೋಡುತ್ತಾ ಬಂದವರಿಗೆ ಅದು ಕಣ್ಣಿಗೆ ಬಿದ್ದಿರುತ್ತೆ. ತಾವು ಹೇಳಬೇಕಾದ್ದನ್ನು ವಿಡಂಬನೆ, ವ್ಯಂಗ್ಯ, ಹಾಸ್ಯ ಹಾಗೂ ಭಾವುಕತೆಯಲ್ಲಿ ಹೇಳುವುದು ಭಟ್ಟರ ಶೈಲಿ. ಭಟ್ಟರ ನಿರ್ದೇಶನದ ಹೊಸ ಸಿನಿಮಾ ಪಂಚತಂತ್ರ. ಈಗಾಗಲೇ ಶೇ.70ರಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರದಲ್ಲಿರುವುದು ಯುವಕರು ಮತ್ತು ಮುದುಕರ ನಡುವಿನ ಹೋರಾಟದ ಕಥೆ.

ಕಥೆಯಲ್ಲಿ ಗ್ಯಾರೇಜ್ ಮತ್ತು ಒಂದು ಕಾಂಪ್ಲೆಕ್ಸ್ ಪ್ರಮುಖ ಪಾತ್ರ ವಹಿಸುತ್ತೆ. ಯುವಕನ ಪ್ರೇಮ, ಕಾಮ, ಜೋಷ್ ಹಾಲಿವುಡ್ ಶೈಲಿಯಲ್ಲಿದ್ದರೆ, ಮುದುಕರ ಜೀವನ ಹಳೆ ಅಂಬಾಸಿಡರ್ ಕಾರ್ ಥರ ಇರುತ್ತೆ. ಇವರಿಬ್ಬರ ನಡುವಿನ ಜನರೇಷನ್ ಗ್ಯಾಪ್‍ನ್ನು ತೆಳು ಹಾಸ್ಯದ ಮೂಲಕ ಹೇಳುತ್ತಿದ್ದೇವೆ ಎಂದು ಹೇಳಿದ್ದಾರೆ ಭಟ್ಟರು.

ಚಿತ್ರದ ಕಥೆಗೆ ಹೊಸಬರೇ ಬೇಕು ಎನಿಸಿತು. ಹೀಗಾಗಿ ವಿಹಾನ್ ಗೌಡ, ಅಕ್ಷರ ಗೌಡ, ಸೋನಾಲ್ ಮಾಂಥೆರೋ ಮೊದಲಾದವರಿದ್ದಾರೆ. ರಂಗಾಯಣ ರಘು, ಕರಿಸುಬ್ಬು ಮೊದಲಾದ ಸೀನಿಯರ್ಸ್ ಕೂಡಾ ಇದ್ದಾರೆ. ಯೋಗರಾಜ್ ಭಟ್ ಸಿನಿಮಾಸ್ ಬ್ಯಾನರ್‍ನಲ್ಲಿ ಸಿನಿಮಾ ತಯಾರಾಗುತ್ತಿದೆ. ಹರಿಪ್ರಸಾದ್ ಜಯಣ್ಣ ಹಾಗೂ ಸನತ್ ಕುಮಾರ್ ಚಿತ್ರದ ನಿರ್ಮಾಪಕರು.

who is buckaasura

User Rating: 0 / 5

Star inactiveStar inactiveStar inactiveStar inactiveStar inactive

ಬಕಾಸುರ.. ಮಹಾಭಾರತದಲ್ಲಿ ಭೀಮನಿಂದ ಕೊಲ್ಲಲ್ಪಡುವ ರಾಕ್ಷಸನ ಹೆಸರು. ಅಂತಾದ್ದೊಂದು ಹೆಸರಿನ ಸಿನಿಮಾದಲ್ಲಿ ರವಿಚಂದ್ರನ್ ಇದ್ದಾರೆ. ನೆಗೆಟಿವ್ ಶೇಡ್ ಅಂತೆ. ಇನ್ನು ರೋಹಿತ್ ಕೂಡಾ ಇದ್ದಾರೆ. ಅವರು ಕೂಡಾ ಹೀರೋ. ಈ ಇಬ್ಬರಲ್ಲಿ ಬಕಾಸುರ ಯಾರು..? ಈ ಪ್ರಶ್ನೆಯನ್ನು ಚಿತ್ರತಂಡದ ಯಾರಿಗೇ ಕೇಳಿದರೂ ಅವರು ಕೊಡೋ ಉತ್ತರ ಒಂದೇ. ಸಿನಿಮಾ ನೋಡಿ ಅನ್ನೋದು.

ಚಿತ್ರದ ನಾಯಕಿ ಕಾವ್ಯ ಗೌಡ ಇದಕ್ಕೆ ಹೊರತಲ್ಲ. ಚಿತ್ರದಲ್ಲಿ ಕಾವ್ಯ ಅವರದ್ದೂ ಲಾಯರ್ ಪಾತ್ರ. ರೋಹಿತ್‍ಗೆ ಅಸಿಸ್ಟೆಂಟ್. ವಾದ ಮಾಡುವ ದೃಶ್ಯಗಳು ಕಡಿಮೆ. ಆದರೆ, ನನ್ನ ಪಾತ್ರಕ್ಕೊಂದು ಹೈಲೈಟ್ ಇದೆ. ನನ್ನನ್ನು ಈಗ ಎಲ್ಲರೂ ದೃಷ್ಟಿ, ದೀಪ್ತಿ (ಕಾವ್ಯ ಅಭಿನಯಿಸಿರುವ ಧಾರಾವಾಹಿ ಪಾತ್ರಗಳು) ಅಂತಾ ಕರೀತಾರೆ. ಆದರೆ, ಸಿನಿಮಾ ರಿಲೀಸ್ ಆದ ಮೇಲೆ ಎಲ್ಲರೂ ನನ್ನನ್ನು ಬಕಾಸುರ ಕಾವ್ಯ ಅಂತಾರೆ. ಅಷ್ಟು ಕಾನ್ಫಿಡೆನ್ಸ್ ನನಗಿದೆ ಅಂತಾರೆ ಕಾವ್ಯ.

ananthnag is backbone in hottegagi genu battegagi

User Rating: 5 / 5

Star activeStar activeStar activeStar activeStar active

ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್‍ನಾಗ್, ತಾವು ನಟಿಸುವ ಚಿತ್ರಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಹೊಸದೇನಲ್ಲ. ಅಂತಹ ವಿಶೇಷ ಕಾಳಜಿಯನ್ನು ಅನಂತ್‍ನಾಗ್, ಹೊಟ್ಟೆಗಾಗಿ ಗೇಣುಬಟ್ಟೆಗಾಗಿ ಚಿತ್ರಕ್ಕೆ ತೋರಿಸಿದ್ದಾರೆ. ಹೊಸಬರ ಅದರಲ್ಲೂ ಪ್ರಯೋಗಾತ್ಮಕ ಚಿತ್ರಗಳ ಬಿಡುಗಡೆ ಸುಲಭವಲ್ಲ. ವಿತರಕರು ಸಿಗುವುದೇ ಕಷ್ಟ. ಹೀಗಿರುವಾಗ ಅನಂತ್‍ನಾಗ್, ಸ್ವತಃ ವಿತರಕ ಜಯಣ್ಣ ಅವರ ಜೊತೆ ಮಾತನಾಡಿ, ಚಿತ್ರವನ್ನೊಮ್ಮೆ ನೋಡುವಂತೆ ಕೇಳಿಕೊಂಡಿದ್ದಾರೆ. ಅನಂತ್‍ನಾಗ್ ಹೇಳಿದ್ದಕ್ಕೆ ಚಿತ್ರವನ್ನು ನೋಡಿದ ಜಯಣ್ಣ, ಚಿತ್ರವನ್ನು ಮೆಚ್ಚಿಕೊಂಡಿರುವುದಷ್ಟೇ ಅಲ್ಲ, ವಿತರಣೆಯ ಜವಾಬ್ದಾರಿಯನ್ನೂ ತೆಗೆದುಕೊಂಡಿದ್ದಾರೆ.

ಚಿತ್ರದ ಆರಂಭದಿಂದಲೂ ಅನಂತ್ ಸರ್, ಇದೇ ರೀತಿ ಸಪೋರ್ಟ್ ಮಾಡಿದ್ದಾರೆ. ಈಗ ನಮ್ಮ ಚಿತ್ರದ ಬಿಡುಗಡೆ ಜವಾಬ್ದಾರಿಯನ್ನು ಜಯಣ್ಣ ತೆಗೆದುಕೊಳ್ಳುವ ಮೂಲಕ, ನಮ್ಮ ಸಿನಿಮಾ ಬಿಡುಗಡೆಯನ್ನು ಸುಲಭ ಮಾಡಿಕೊಟ್ಟಿದ್ದಾರೆ ಎಂದಿದ್ದಾರೆ ನಿರ್ದೇಶಕ ನರೇಂದ್ರ ಬಾಬು.

ಅನಂತ್‍ನಾಗ್, ರಾಧಿಕಾ ಚೇತನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಸಿನಿಮಾ ಹೊಟ್ಟೆಗಾಗಿ ಗೇಣುಬಟ್ಟೆಗಾಗಿ. ಮುಂದಿನ ತಿಂಗಳು ರಿಲೀಸ್ ಆಗುವ ಸಾಧ್ಯತೆ ಇದೆ.

 

amulya joins jds

User Rating: 0 / 5

Star inactiveStar inactiveStar inactiveStar inactiveStar inactive

ಚಿತ್ರನಟಿ ಅಮೂಲ್ಯಾ, ರಾಜಕಾರಣದಲ್ಲಿ ಪ್ರಥಮ ಪಾದ ಊರಿದ್ದಾರೆ. ಚೆಲುವಿನ ಚಿತ್ತಾರ ಚಿತ್ರದ ಮೂಲಕ ಬೆಳ್ಳಿತೆರೆಗೆ ಬಂದ ಅಮೂಲ್ಯ, ಈಗ ಅಮೂಲ್ಯ ಜಗದೀಶ್ ಆಗಿದ್ದಾರೆ. ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಅಮೂಲ್ಯ ಅವರ ಮಾವ ಜಿ.ಹೆಚ್. ರಾಮಚಮದ್ರ, ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದಾರೆ. ಮಾವನ ಜೊತೆ ಅಮೂಲ್ಯ ಕೂಡಾ ಜೆಡಿಎಸ್ ಸೇರಿದ್ದಾರೆ. ಅಮೂಲ್ಯ ಅವರನ್ನು ದೇವೇಗೌಡರೇ ಆಶೀರ್ವಾದ ಮಾಡಿ ಬರಮಾಡಿಕೊಂಡಿದ್ದು ವಿಶೇಷ.

ನನಗೆ ರಾಜಕೀಯ ಅಷ್ಟಾಗಿ ಗೊತ್ತಿಲ್ಲ. ಮಾವನವರಿಗೆ ಬೆಂಬಲವಾಗಿ ನಿಲ್ಲುತ್ತೇನೆ. ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಕೊಟ್ಟರೆ, ಅವರ ಪರವಾಗಿ ಪ್ರಚಾರ ಮಾಡುತ್ತೇನೆ. ರಾಜ್ಯಾದ್ಯಂತ ಪ್ರಚಾರ ಮಾಡುವ ಯೋಚನೆ ಇಲ್ಲ ಎಂದಿದ್ದಾರೆ ಅಮೂಲ್ಯ.

sharan is ladies tailor

User Rating: 0 / 5

Star inactiveStar inactiveStar inactiveStar inactiveStar inactive

ನಟ ಶರಣ್ ಲೇಡಿಸ್ ಟೈಲರ್ ಆಗುತ್ತಿದ್ದಾರೆ. ಸಿದ್ಲಿಂಗು,  ನೀರ್‍ದೋಸೆ ಖ್ಯಾತಿಯ ವಿಜಯ್ ಪ್ರಸಾದ್ ನಿರ್ದೇಶನದ ಸಿನಿಮಾ ಲೇಡಿಸ್ ಟೈಲರ್. ಆರಂಭದಲ್ಲಿ ಚಿತ್ರಕ್ಕೆ ರವಿಶಂಕರ್ ಗೌಡ ಹೀರೋ ಆಗಿದ್ದರು. ನಂತರ ಬದಲಾಗಿ ಜಗ್ಗೇಶ್ ಹೆಸರು ಕೇಳಿಬಂದಿತ್ತು. ಮತ್ತೊಮ್ಮೆ ನೀನಾಸಂ ಸತೀಶ್ ಹೆಸರು ಕೇಳಿಬಂತು. ಮಗದೊಮ್ಮೆ.. ರವಿಶಂಕರ್ ಗೌಡ ಹೆಸರೇ ಬಂತು. ಈಗ ಶರಣ್ ಹೆಸರು ಪ್ರಸ್ತಾಪವಾಗಿದೆ.

ಚಿತ್ರದ ಬಜೆಟ್ ಹೆಚ್ಚಾಗಿರುವ ಕಾರಣ, ಸ್ಟಾರ್‍ನಟರೇ ಇರಲಿ ಎಂಬ ಕಾರಣಕ್ಕೆ ಶರಣ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎನ್ನುತ್ತಿದೆ ಚಿತ್ರತಂಡ. ಸಿನಿಮಾ ಶೀಘ್ರದಲ್ಲೇ ಸೆಟ್ಟೇರಲಿದೆ.

Related Articles :-

Sharan Is The New 'Ladies Tailor'

I Love You Movie Gallery

Rightbanner02_butterfly_inside

Paddehuli Movie Gallery